For Quick Alerts
ALLOW NOTIFICATIONS  
For Daily Alerts

ತುಂಬಾ ಸ್ಟ್ರೆಸ್ ನಲ್ಲಿದ್ದಾಗ ಈ ಆಹಾರ ತಿನ್ನಿ

By Super
|

ನೀವು ಆರಾಮದಿಂದ ಮತ್ತು ಖುಷಿಯಿಂದ ಜೀವನ ನಡೆಸುವಾಗ ಆಗಾಗ್ಗೆ ನಿಮ್ಮ ಮೇಲೆ ಬರುವ ಒತ್ತಡದ ಪ್ರಭಾವದಿಂದ ಭಾರಿ ಪ್ರಮಾಣದ ನಷ್ಟವುಂಟಾಗಿದೆಯೇ? ಹೀಗೆ ಬರುವ ಒತ್ತಡವನ್ನು ಕಡಿಮೆಮಾಡಿಕೊಳ್ಳಲು ಅಥವ ಪೂರ್ತಿ ನೀಗಿಸಿಕೊಳ್ಳಲು ನೀವು ಈಗ ಮಾಡುತ್ತಿರುವ ಬಹಳಷ್ಟು ವಿವಿಧ ಸಮಯತೆಗೆದುಕೊಳ್ಳುವ ಚಟುವಟಿಕೆಗಳಿಂದ ದಣಿದಿದ್ದೀರ ಅಥವಾ ಬೇಸತ್ತಿದ್ದೀರಾ? ಚಿಂತಿಸಬೇಡಿ. ನೀವು ಸೂಕ್ತವಾದ ಆಹಾರವನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ಒತ್ತಡವನ್ನು ಧೈರ್ಯವಾಗಿ ಎದುರಿಸಿ ಹೋಗಲಾಡಿಸಬಹುದು.

ಧ್ಯಾನ ಮತ್ತು ಯೋಗಾಭ್ಯಾಸಗಳಿಂದ ಮಾತ್ರವೇ ಒತ್ತಡ ಮುಕ್ತರಾಗಿರಲು ಸಾಧ್ಯವಿಲ್ಲ. ಸಂಪೂರ್ಣವಾಗಿ ಒತ್ತಡ ಮುಕ್ತರಾಗಲು ನೀವು ಮಾಡಾಬೇಕಾಗಿರುವುದು ಇಷ್ಟೇ: ಧ್ಯಾನ ಮತ್ತು ವ್ಯಾಯಾಮದ ಜೊತೆ ಕೊಟ್ಟಿರುವ 10 ಶ್ರೇಷ್ಠ ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಂಡರೆ ಒತ್ತಡವನ್ನು ಹೊರಹಾಕಬಹುದು

1. ಹಸಿರು ತರಕಾರಿಗಳು

1. ಹಸಿರು ತರಕಾರಿಗಳು

ಕೋಸುಗಡ್ಡೆ, ಬ್ರೊಕೋಲಿ, ಪಾಲಕ್, ಇಂತಹ ತರಕಾರಿಗಳು ಒತ್ತಡ ಬಂದಿರುವಾಗ ನಿಮ್ಮ ದೇಹಕ್ಕೆ ಅಗತ್ಯವಾದ್ದನ್ನು ಪುನಃ ಭರ್ತಿಮಾಡುತ್ತವೆ. ಬ್ರೊಕೋಲಿಯಲ್ಲಿ ವಿಟಮಿನ್ ಬಿ ಸಮೃದ್ಧಿಯಾಗಿದೆ. ವಿಟಮಿನ್ ಬಿ ಸೇವನೆಯಿಂದ ಆತಂಕಭಾವನೆ ಮತ್ತು ಬೇಗುದಿಯನ್ನು ಶಮನಗೊಳಿಸಿ ಶಾಂತತೆಯ ಪರಿಣಾಮವುಂಟಾಗುತ್ತದೆ. ಪಾಲಕ್ಕಿನ್ನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಪೊಟಾಸಿಯುಮ್ ಮತ್ತು ಕಬ್ಬಿಣಾಂಶಗಳು ಅಧಿಕವಾಗಿರುತ್ತದೆ. ಇವುಗಳು ತೀವ್ರವಾದ ತಲೆಶೂಲೆ ಮತ್ತು ಆಯಾಸವನ್ನು ಕಡಿಮೆಮಾಡುತ್ತವೆ.

2. ಕೆಲವು ಬೀಜಗಳು

2. ಕೆಲವು ಬೀಜಗಳು

ಬಾದಾಮಿಯು ಕೇವಲ ಮೆದುಳಿಗೆ ಮಾತ್ರ ಒಳ್ಳೆಯದಾದರೂ ಅದು ಒತ್ತಡದ ವಿರುದ್ಧ ಹೋರಾಡಲು ಸಹಾಯಮಾಡುತ್ತದೆ. ಬಾದಾಮಿಯಲ್ಲಿ ವಿಟಮಿನ್ ಬಿ 6, ವಿಟಮಿನ್ ಇ, ಮೆಗ್ನೀಸಿಯುಮ್ ಮತ್ತು ಸತು(ಜಿನ್ಕ್) ಸಮೃದ್ಧಿಯಾಗಿವೆ. ಇವುಗಳು ಒತ್ತಡವನ್ನು ನಿಯಂತ್ರಿಸಲು ಮತ್ತು ಎದುರಿಸಲು ಸಹಾಯಮಾಡುತ್ತವೆ. ವಾಲ್‍ನಟ್ಸ್ ಮತ್ತು ಪಿಸ್ಟಾ ರಕ್ತದೊತ್ತಡವನ್ನು ಕಡಿಮೆಮಾಡಿ ಒತ್ತಡವನ್ನು ದೂರವಿಡುತ್ತವೆ.

3.ಚಿಕನ್

3.ಚಿಕನ್

ಕೋಳಿಯಲ್ಲಿ ಅಮೈನೋ ಆಸಿಡ್ ಇರುತ್ತದೆ. ಇದು ರಕ್ತದಲ್ಲಿ ಸೆರೋಟಿನಿನ್ ಮಟ್ಟವನ್ನು ಹೆಚ್ಚಿಸಿ ಒತ್ತಡದ ಉಪಶಮನಕ್ಕೆ ಸಹಾಯಮಾಡುತ್ತದೆ.

4. ಏಪ್ರಿಕಾಟ್(ಜರದಾಳು ಹಣ್ಣು)

4. ಏಪ್ರಿಕಾಟ್(ಜರದಾಳು ಹಣ್ಣು)

ಸ್ವಾಭಾವಿಕ ಸ್ನಾಯು ಶಾಮಕ ಮತ್ತು ಒತ್ತಡವನ್ನು ಪಳಗಿಸುವ ಅಂಶಗಳು ಏಪ್ರಿಕಾಟಿನಲ್ಲಿ ಸಮೃದ್ಧಿಯಾಗಿರುತ್ತವೆ. ಇದರಲ್ಲಿ ವಿಟಮಿನ್ ಸಿ ಇರುವುದರಿಂದ ನಿಮ್ಮ ಭಾವನೆಗಳನ್ನು ವರ್ಧಿಸಲು ಸಹಾಯಮಾಡುತ್ತದೆ.

5. ಡಾರ್ಕ್ ಚಾಕಲೇಟ್

5. ಡಾರ್ಕ್ ಚಾಕಲೇಟ್

ವೈಜ್ಜಾನಿಕವಾಗಿ ಕಪ್ಪು ಚಾಕಲೇಟ್ ಒತ್ತಡವನ್ನು ಕಡಿಮೆಮಾಡುತ್ತದೆಯೆಂದು ಸಾಬೀತಾಗಿದೆ. ಇದರಲ್ಲಿ ಸಕ್ಕರೆಯ ಅಂಶವಿದ್ದು ರಕ್ತದಲ್ಲಿ ಸೆರೋಟಿನಿನ್ ಮಟ್ಟವನ್ನು ಸುಧಾರಿಸುವುದರಿಂದ ಮನಸ್ಥಿತಿಯನ್ನು ಸರಿಪಡಿಸಿ ಒತ್ತಡವನ್ನು ಬಿಡುಗಡೆಮಾಡುತ್ತದೆ.

6. ಕಿತ್ತಳೆ ಹಣ್ಣು

6. ಕಿತ್ತಳೆ ಹಣ್ಣು

ಕಿತ್ತಳೆಹಣ್ಣು ವಿಟಮಿನ್ ಸಿ ನ ಒಳ್ಳೆಯ ಮೂಲವಾಗಿದ್ದು ಪ್ರತಿರಕ್ಷಣಾ(ಇಮ್ಯೂನ್) ವ್ಯವಸ್ತೆಯನ್ನು ಸುಧಾರಿಸಿ ಒತ್ತಡವನ್ನು ಕಡಿಮೆಮಾಡುತ್ತದೆ. ಇದು ಒತ್ತಡದ ಹಾರ್ಮೋನ್ ಮತ್ತು ಕಾರ್ಟಿಸೋಲ್ ಮಟ್ಟವನ್ನು ಕಡಿಮೆಮಾಡಿ ರಕ್ತದೊಟ್ಟಡದ ಪೂರ್ಣ ಪರಿಸ್ಥಿತಿಯನ್ನು ಪುನಃ ಸರಿಪಡಿಸಲು ಸಹಾಯಮಾಡುತ್ತದೆ.

7. ಮೀನು

7. ಮೀನು

ಟ್ಯೂನ, ಸಾಲ್ಮನ್ ಮತ್ತು ಸಾರ್ಡೀನ್ಸ್‌ಗಳು ಕೇವಲ ರುಚಿಯಾಗಿರುವುದೊಂದೇ ಅಲ್ಲದೆ ಉದ್ವೇಗಕಾರಕ ಹಾರ್ಮೋನಿನ ಮಟ್ಟವನ್ನು ಕಾಪಾಡಿಕೊಳ್ಳುವುದರಿಂದ ನಿಮ್ಮ ಮನಸ್ಸಿನ ಪರಿಸ್ಥಿತಿಯನ್ನು ಶಾಂತವಾಗಿರಿಸಲು ಸಹಾಯಮಾಡುತ್ತದೆ. ಈ ಮೀನುಗಳು ಪ್ರೋಟೀನ್ ಅಂಶವನ್ನು ದೊಡ್ಡಪ್ರಮಾಣದಲ್ಲಿ ಒದಗಿಸುತ್ತದೆ. ಮೀನು ಒಮೆಗಾ-3 ಕೊಬ್ಬಿನ ಮೂಲವಾಗಿದ್ದು ಸೆರೋಟಿನಿನ್ ಮಟ್ಟವನ್ನು ಹೆಚ್ಚಿಸಿ ನಿಮ್ಮ ಖಿನ್ನತೆಯನ್ನು ಶಮನಗೊಳಿಸಲು ಸಹಾಯಮಾಡುತ್ತದೆ.

8. ಶತಾವರಿ (ಆಸ್ಪಾರಾಗಸ್)

8. ಶತಾವರಿ (ಆಸ್ಪಾರಾಗಸ್)

ಆಸ್‍ಪೈರಾಗಸ್ ಫೊಲೇಟ್ ಮತ್ತು ವಿಟಮಿನ್ ಬಿ ಗಳ ಉತ್ತಮ ಮೂಲವಾಗಿದೆ. ಇದರಿಂದ ನಿಮ್ಮ ಖಿನ್ನತೆಯನ್ನು ದೂರಮಾಡಿ ಮನಸ್ಥಿತಿಯನ್ನು ಪ್ರೇರೇಪಿಸಲು ಸಹಾಯಮಾಡುತ್ತದೆ. ಫೊಲೇಟಿನಲ್ಲಿರುವ ಡೊಪಾಮಿನ್, ಸೆರೋಟಿನ್ ಮತ್ತು ನೊರ್‌ಪೈನ್‌ಫ್ರೈನ್‌ಗಳು ನರಪ್ರೇಕ್ಷಕಗಳ ((ನ್ಯೂರೋಟ್ರಾನ್ಸ್‌ಮಿಟ್ಟರ್ಸ್) ಸಂಶ್ಲೇಷಣೆಗೆ ಬಹಳ ಮುಖ್ಯವೆಂದು ಆಹಾರತಜ್ಜರ ಅಭಿಪ್ರಾಯವಾಗಿದೆ ಮತ್ತು ಇದರ ಸಹಾಯದಿಂದ ಒತ್ತಡದ ಮಟ್ಟವನ್ನು ಕಡಿಮೆ ಇಡಲು ಸಹಾಯಮಾಡುತ್ತದೆ.

9. ಅವಕಾಡೊ ಮತ್ತು ಬಾಳೆಹಣ್ಣು

9. ಅವಕಾಡೊ ಮತ್ತು ಬಾಳೆಹಣ್ಣು

ಅವಕಾಡೊ ಮತ್ತು ಬಾಳೆಹಣ್ಣಿನಲ್ಲಿ ಪೊಟಾಸಿಯಮ್ ಹೆಚ್ಚಾಗಿರುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯಮಾಡುತ್ತದೆ. ಈ ಹಣ್ಣುಗಳು ನಿಮ್ಮ ಹುರುಪಿನ ಮಟ್ಟವನ್ನು ವರ್ಧಿಸಿ ನೀವು ಸಕ್ರಿಯ ಮತ್ತು ಶಕ್ತಿಯುತವಾಗಿರಲು ಸಹಾಯಮಾಡುತ್ತದೆ.

10. ಸಂಸ್ಕರಿಸದ ಧಾನ್ಯ

10. ಸಂಸ್ಕರಿಸದ ಧಾನ್ಯ

ಸಂಸ್ಕರಿಸದ ಧಾನ್ಯಗಳು ಸಂಕೀರ್ಣ ಶರ್ಕರಪಿಷ್ಟ(ಕಾರ್ಬ್) ವಾಗಿದೆ ಮತ್ತು ಅದರಿಂದ ನಿಧಾನವಾಗಿ ಜೀರ್ಣವಾಗಿ ನಿಮ್ಮ ದೇಹಕ್ಕೆ ಶಕ್ತಿ ನೀಡುತ್ತಿರುತ್ತದೆ. ಇವು ಸೆರೋಟಿನ್ ಉತ್ಪಾದನೆಯನ್ನು ಹೆಚ್ಚಿಸಿ ರಕ್ತದೊತ್ತಡವನ್ನು ಸ್ಥಿರಗೊಳಿಸುವುದರಿಂದ ನೀವು ಶಾಂತಿಯುತವಾಗಿ ಆರಾಮವಾಗಿರಲು ಸಹಾಯಮಾಡುತ್ತದೆ.

English summary

10 Superfoods To Knock Stress Out

Meditation and yoga are not the only methods to keep you stress-free. You can ensure a happy and stress-free life by including these 10 superfoods in your diet which will help you to knock out stress from your life without putting any efforts.
 
X
Desktop Bottom Promotion