For Quick Alerts
ALLOW NOTIFICATIONS  
For Daily Alerts

ಔಷಧೀಯ ಗುಣವಿರುವ ಈ ಎಣ್ಣೆಗಳ ಬಗ್ಗೆ ಗೊತ್ತಿದೆಯೇ?

By Super
|

ಎಣ್ಣೆಯು ಕೇವಲ ಮನೆಯಲ್ಲಿ ಅಡುಗೆಗೆ ಮಾತ್ರ ಕೆಲಸಕ್ಕೆ ಬರುವುದಿಲ್ಲ. ಇದರ ಜೊತೆಗೆ ನಮ್ಮ ಆರೋಗ್ಯಕರ ಜೀವನಕ್ಕೆ ಬೇಕಾದ ಔಷಧೀಯ ಗುಣಗಳನ್ನು ಸಹ ಇವು ಒಳಗೊಂಡಿದೆ. ಇವೆಲ್ಲವು ನಿಮ್ಮ ಕೈಗೆಟುಕುವಷ್ಟು ದೂರದಲ್ಲಿವೆ. ಆದರೆ ಅವುಗಳನ್ನು ದಕ್ಕಿಸಿಕೊಳ್ಳಲು ನಿಮಗೆ ಅದರ ಕುರಿತು ಮಾಹಿತಿ ಇರಬೇಕಾದುದು ಅತ್ಯಾವಶ್ಯಕ.

ಮೊದಲು ನಿಮ್ಮ ಮನೆಯ ಅಡುಗೆ ಮನೆಯಲ್ಲಿರುವ ಅಂಶಗಳ ಉಪಯೋಗಗಳನ್ನು ನಿಮ್ಮದಾಗಿಸಿಕೊಳ್ಳಿ. ಇಲ್ಲಿ ನಿಮಗಾಗಿ, ನಿಮ್ಮ ಆರೋಗ್ಯದ ವೃದ್ಧಿಗಾಗಿ ನಾವು ಸುಲಭವಾದ ಮತ್ತು ಅಗ್ಗವಾದ 10 ಅದ್ಭುತವಾದ ಎಣ್ಣೆಗಳ ಪಟ್ಟಿಯನ್ನು ನೀಡುತ್ತಿದ್ದೇವೆ:

ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆಯನ್ನು ಅದರಲ್ಲಿರುವ ಚಿಕಿತ್ಸಾತ್ಮಕ ಗುಣಗಳ ಕಾರಣವಾಗಿ ಹಲವಾರು ವರ್ಷಗಳಿಂದ ಬಳಸುತ್ತಿದ್ದಾರೆ. ಆರೋಮಾಥೆರಪಿಯಲ್ಲಿ ಇದನ್ನು ಅತ್ಯಗತ್ಯವಾದ ಎಣ್ಣೆಯಾಗಿ ಬಳಸುತ್ತಾರೆ. ಪ್ರಮುಖವಾಗಿ ಇದನ್ನು ಸ್ವಾಭಾವಿಕ ನೆಮ್ಮದಿಯ ಪರಿಣಾಮವನ್ನು ಒದಗಿಸಿ ವಿಶ್ರಾಂತಿಯನ್ನು ನೀಡುವ ಸಾಧನವಾಗಿ ಬಳಸುತ್ತಾರೆ. ಇದನ್ನು ಸಾಧಾರಣ ಸುಟ್ಟಗಾಯಗಳಿಗೆ, ಕೀಟಗಳ ಕಡಿತಕ್ಕೆ ಮತ್ತು ಮುಳ್ಳು ಚುಚ್ಚಿದ್ದಕ್ಕೆ ಸಹ ಬಳಸಬಹುದು.

ನಿಂಬೆ ಹಣ್ಣಿನ ಎಣ್ಣೆ

ನಿಂಬೆ ಹಣ್ಣಿನ ಎಣ್ಣೆ

ನಿಂಬೆಹಣ್ಣಿನ ಎಣ್ಣೆಯು ಪ್ರಕೃತಿಯ ಅತ್ಯಂತ ಶ್ರೇಷ್ಠ ಲಸಿಕೆಯಾಗಿದೆ. ನಿಂಬೆಯು ತನ್ನ ಸ್ವಾದವನ್ನು ನೀಡುವ ಗುಣದ ಹೊರತಾಗಿ ತನ್ನಲ್ಲಿರುವ ರೋಗ ನಿರೋಧಕ ವಿಟಮಿನ್ ಮತ್ತು ಮಿನರಲ್‍ಗಳಿಂದ ಎಲ್ಲೆಡೆ ಆದರಣೆಗೆ ಪಾತ್ರವಾಗಿದೆ. ಇದರ ಜೊತೆಗೆ ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದು ಹಾಕಿ, ನಮ್ಮ ಮನಸ್ಸು ಮತ್ತು ದೇಹವನ್ನು ನೆಮ್ಮದಿಯಾಗಿಡುತ್ತದೆ. ಇದರ ಮತ್ತೊಂದು ವಿಶೇಷತೆಯೇನೆಂದರೆ ಇದು ಇನ್ನಿತರ ಎಲ್ಲಾ ಎಣ್ಣೆಗಳು ಮಾಡುವ ಕಾರ್ಯವನ್ನು ಮಾಡುತ್ತದೆ.

ಪುದೀನಾ ಎಣ್ಣೆ

ಪುದೀನಾ ಎಣ್ಣೆ

ಪುದೀನಾ ಎಣ್ಣೆಯನ್ನು ಸಾಂಪ್ರದಾಯಿಕ ಪೂರಕ ಪಥ್ಯ ಆಹಾರವಾಗಿ ಬಳಸಲಾಗುತ್ತದೆ. ಏಕೆಂದರೆ ಇದರಲ್ಲಿ ಜೀರ್ಣಶಕ್ತಿಯನ್ನು ಉತ್ತೇಜಿಸುವ ಅಂಶಗಳು ಇವೆ. ಇದು ಹೊಟ್ಟೆ ಉಬ್ಬುವುದು, ವಾಯು ತುಂಬಿದ ಮತ್ತು ಇನ್ನಿತರ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಪುದಿನಾವು ಸ್ತ್ರೀಯರ ಮಾಸಿಕ ಚಕ್ರದ ಸಮಯದಲ್ಲಿ ಬರುವ ನೋವು ಮತ್ತು ತಲೆನೋವುಗಳನ್ನು ಸಹ ಕಡಿಮೆ ಮಾಡುತ್ತದೆ. ಇದನ್ನು ತುರಿಕೆಯಾಗುವ ಜಾಗದಲ್ಲಿ ಹಚ್ಚಿದರೆ, ಅದರಿಂದಲು ಸಹ ಆರಾಮವನ್ನೊದಗಿಸುತ್ತದೆ.

ಲವಂಗದ ಎಣ್ಣೆ

ಲವಂಗದ ಎಣ್ಣೆ

ಲವಂಗದ ಎಣ್ಣೆಯು ಪ್ರಕೃತಿಯ ಒಂದು ಅದ್ಭುತವಾಗಿದೆ. ಇದೊಂದು ಅರಿವಳಿಕೆಕಾರಿ ಮತ್ತು ನಂಜುನಿವಾರಕ ಔಷಧಿಯಾಗಿ ದಂತ ಚಿಕಿತ್ಸೆಯಲ್ಲಿ ಉಪಯೋಗಿಸಲ್ಪಡುತ್ತದೆ. ಹಲ್ಲುನೋವಿಗೆ ಮತ್ತು ಹಲ್ಲಿನ ಸವಕಳಿಗೆ ಇದೊಂದು ಉತ್ತಮ ಮನೆ ಔಷಧಿಯಾಗಿ ಬಳಸಲ್ಪಡುತ್ತದೆ. ಇದರಲ್ಲಿ ಕಬ್ಬಿಣ, ವಿಟಮಿನ್ ಎ ಮತ್ತು ಸಿ ಯಥೇಚ್ಛವಾಗಿದ್ದು, ಇವುಗಳು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತವೆ.

ಗುಲಾಬಿ ಎಣ್ಣೆ

ಗುಲಾಬಿ ಎಣ್ಣೆ

ಗುಲಾಬಿ ಎಣ್ಣೆಯು ತನ್ನ ಕಾಮೋತ್ತೇಜಕ ಗುಣದ ಹೊರತಾಗಿಯು ಮಾನವನ ದೇಹಕ್ಕೆ ಅತ್ಯಂತ ಅವಶ್ಯಕವಾಗಿದೆ. ಈ ಅತ್ಯಾವಶ್ಯಕ ಎಣ್ಣೆಯು ನಮ್ಮ ದೇಹವನ್ನು ಹಲವಾರು ರೋಗಗಳಿಂದ ರಕ್ಷಿಸುತ್ತವೆ. ಅಲ್ಲದೆ ಇದು ಉದ್ವೇಗ, ಒತ್ತಡ ಮತ್ತು ಭೀತಿಗಳನ್ನು ನಿವಾರಿಸಿ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿಯನ್ನು ಒದಗಿಸುತ್ತದೆ.

ವೆನಿಲ್ಲಾ ಎಣ್ಣೆ

ವೆನಿಲ್ಲಾ ಎಣ್ಣೆ

ವೆನಿಲ್ಲಾ ಎಣ್ಣೆಯು ಮತ್ತೊಂದು ಶ್ರೇಷ್ಠ ಅಂಟಿ ಆಕ್ಸಿಡೆಂಟ್ ಆಗಿದೆ. ಇದು ಉದ್ವೇಗ ಮತ್ತು ನಿದ್ರಾಹೀನತೆಯಂತಹ ಮಾನಸಿಕ ತೊಂದರೆ ಮತ್ತು ಕ್ಯಾನ್ಸರ್ ರೋಗಗಳ ಚಿಕಿತ್ಸೆಯಲ್ಲಿ ಬಳಕೆಯಾಗುತ್ತದೆ. ಅಲ್ಲದೆ ಇದು ವಿಶ್ವದ ಅತ್ಯಂತ ನೆಚ್ಚಿನ ಸ್ವಾದವಾಗಿ ಖ್ಯಾತಿ ಪಡೆದಿದೆ. ಇದು ಸಿಹಿ,ರುಚಿ ಮತ್ತು ಆರೋಗ್ಯವನ್ನು ಹೊಂದಿದೆ.

ಕ್ಲಾರಿ ಸೇಜ್ ಎಣ್ಣೆ

ಕ್ಲಾರಿ ಸೇಜ್ ಎಣ್ಣೆ

ಕ್ಲಾರಿ ಸೇಜ್ ಎಣ್ಣೆಯು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಅತ್ಯಂತ ಉಪಯೋಗಕಾರಿ.ಇದು ಜೀರ್ಣ ವ್ಯವಸ್ಥೆಯಲ್ಲಿ ಊಟಮಾಡಲು ತಡೆಯೊಡ್ಡುವ ವಾಯು ಸಂಗ್ರಹಗೊಳ್ಳುವುದನ್ನು ಕಡಿಮೆಗೊಳಿಸುತ್ತದೆ. ಇದನ್ನು ಆರೋಮ ಥೆರಪಿಯಲ್ಲಿ ಸಹ ಬಳಸಲಾಗುತ್ತದೆ. ಮಹಿಳೆಯರು ಇದರಿಂದ ಹೆಚ್ಚಿನ ಅನುಕೂಲವನ್ನು ಪಡೆಯಬಹುದು. ಏಕೆಂದರೆ ಇದು ಮಹಿಳೆಯ ಋತು ಚಕ್ರದ ಅವಧಿಯಲ್ಲಿ ಉಂಟಾಗುವ ಸೆಳೆತಗಳನ್ನು ನಿವಾರಿಸುತ್ತದೆ.

ತುಳಸಿ ಎಣ್ಣೆ

ತುಳಸಿ ಎಣ್ಣೆ

ತುಳಸಿ ಎಣ್ಣೆಯು ಶೀತ ಮತ್ತು ಕೆಮ್ಮಿಗೆ ಅತ್ಯುತ್ತಮ ಬದಲಿ ಔಷಧವಾಗಿದೆ. ತುಳಸಿ ಎಣ್ಣೆಯ ಒಂದು ಸಣ್ಣ ಹನಿಯು ನಿಮಗೆ ಬಂದಿರುವ ಕೆಟ್ಟ ಶೀತ ಮತ್ತು ಒಣ ಕೆಮ್ಮನ್ನು ಹೊರದೋಡಿಸುತ್ತವೆ. ಈ ಎಣ್ಣೆಯಲ್ಲಿ ಸಹ ಅಂಟಿ ಆಕ್ಸಿಡೆಂಟ್, ವೈರಸ್ ಮತ್ತು ಸೂಕ್ಷಣು ನಿರೋಧಕ ಗುಣಗಳು ಇವೆ.

ದ್ರಾಕ್ಷಿ ಹಣ್ಣಿನ ಎಣ್ಣೆ

ದ್ರಾಕ್ಷಿ ಹಣ್ಣಿನ ಎಣ್ಣೆ

ದ್ರಾಕ್ಷಿ ಹಣ್ಣಿನ ಎಣ್ಣೆಯು ನಮಗೆ ದೊರೆಯುವ ಅತ್ಯಂತ ಉತ್ತಮ ಸ್ವಾಭಾವಿಕ ಅಂಟಿ ಆಕ್ಸಿಡೆಂಟ್‍ಗಳನ್ನು ಒಳಗೊಂಡಿದೆ. ಇದೊಂದು ಮೂತ್ರವರ್ಧಕವಾಗಿದ್ದು, ಮೂತ್ರ ಉತ್ಪಾದನೆಗೆ ಸಹಕರಿಸುತ್ತದೆ. ಈ ಒಂದು ಅನುಪಮವಾದ ಗುಣದಿಂದಾಗಿ ಇದು ಮೂತ್ರಪಿಂಡಗಳಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ಮೂತ್ರಪಿಂಡಗಳನ್ನು ಶಕ್ತಿ ಮತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತವೆ. ಅಧ್ಯಯನಗಳ ಪ್ರಕಾರ ದ್ರಾಕ್ಷಿ ಹಣ್ಣಿನ ಎಣ್ಣೆಯು ಬ್ಯಾಕ್ಟೀರಿಯಾ, ವೈರಸ್ ಮತ್ತು ಬೂಷ್ಟು ನಿರೋಧಕ ಅಂಶಗಳನ್ನು ಒಳಗೊಂಡಿದೆ ಎಂದು ಸಹ ಧೃಡಪಟ್ಟಿದೆ.

ರೋಸ್ ಮೆರಿ ಎಣ್ಣೆ

ರೋಸ್ ಮೆರಿ ಎಣ್ಣೆ

ರೋಸ್ ಮೆರಿ ಎಣ್ಣೆಯು ಒಂದು ಶಕ್ತಿವರ್ಧಕ ಎಣ್ಣೆಯಾಗಿದೆ. ಈ ಎಣ್ಣೆಯು ಮೆದುಳಿನ ಕಾರ್ಯಕ್ಷಮತೆಯನ್ನು ಮತ್ತು ಏಕಾಗ್ರತೆಯನ್ನು ಅಧಿಕಗೊಳಿಸುತ್ತದೆ. ಇದೊಂದು ಮೆದುಳಿನ ಕಾರ್ಯವನ್ನು ದ್ವಿಗುಣಗೊಳಿಸುವಲ್ಲಿ ಒಂದು ಶಕ್ತಿವರ್ಧಕ ಪಾನೀಯವಾಗಿ ಸಹ ಉಪಯೋಗವಾಗುತ್ತದೆ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ6 ಗಳು ಹೆಚ್ಚಾಗಿವೆ.

English summary

10 Oils Needed to Stay Healthy | ನಮ್ಮ ಆರೋಗ್ಯಕ್ಕೆ ಅತ್ಯಾವಶ್ಯಕವಾಗಿರುವ 10 ಎಣ್ಣೆಗಳು

Take advantage of the things that you use in your kitchen, and who would have thought that staying healthy can now be easy and cheap through these 10 amazing essential oils:
X
Desktop Bottom Promotion