For Quick Alerts
ALLOW NOTIFICATIONS  
For Daily Alerts

ಅತ್ಯಂತ ಅಪಾಯಕರ ಮಳೆಗಾಲದ 10 ಕಾಯಿಲೆಗಳು

By Staff
|

ಸಾಮಾನ್ಯವಾಗಿ ನಮಗೆ ಮಳೆಗಾಲ ಬಂತೆಂದರೆ ಬರುವ ಯೋಚನೆಗಳೆಂದರೆ ಬಿಸಿ ಬಿಸಿ ಟೀ ಮತ್ತು ಕುರುಕುಲು ತಿಂಡಿಗಳು, ಹಿನ್ನೆಲೆಯಲ್ಲಿ ಹಳೆಯಕಾಲ ಹಾಡುಗಳ ಧ್ವನಿ, ಮತ್ತು ಕಿಟಕಿಯ ಗಾಜಿನ ಮೇಲೆ ಬೀಳುವ ಮಳೆಹನಿಗಳ ಟಪ್-ಟಪ್ ಸಪ್ಪಳ.

ಆದರೆ ಇಂತಹ ಸನ್ನಿವೇಶವನ್ನು ಬಿಟ್ಟು ಹೊರಗೆ ಹೆಜ್ಜೆ ಇಟ್ಟರೆ ಸಾಕು, ಈ ಎಲ್ಲ ಮಜಾ ಹೋಗಿ, ಹೊರಗಿನ ಮಳೆ ಮತ್ತು ಚಳಿಯನ್ನು ಎದುರಿಸಬೇಕಾಗುತ್ತದೆ. ಹೀಗೆ ಹೊರಗೆ ಬಂದಾಗ, ಮಳೆಗಾಲದ 10 ಕಾಯಿಲೆಗಳ ಬಗ್ಗೆ ತಿಳಿದಿರಬೇಕು. ಕೆಲವು ಕಾಯಿಲೆಗಳನ್ನು ಸುಲಭವಾಗಿ ಗುಣಪಡಿಸಬಹುದಾದರೂ, ಮಿಕ್ಕ ಕೆಲವು ಪ್ರಾಣಕ್ಕೆ ಅಪಾಯಕಾರಿಯಾಗಬಹುದು.

1. ಮಲೇರಿಯಾ

1. ಮಲೇರಿಯಾ

ಮಳೆಗಾಲದ ಎಲ್ಲಾ ಕಾಯಿಲೆಗಳ ಪಟ್ಟಿಯಲ್ಲಿ ಮಲೇರಿಯಾ ಮೊದಲನೇ ಸ್ಥಾನದಲ್ಲಿದೆ. ಹೆಣ್ಣು ಸೊಳ್ಳೆ (Anopheles) ಮಲೇರಿಯಾಕ್ಕೆ ಮುಖ್ಯ ಕಾರಣ. ಈ ಸೊಳ್ಳೆಯು ಸಾಧಾರಣವಾಗಿ ನೀರಿನ ತೊಟ್ಟಿಗಳಲ್ಲಿ, ನೀರುನಿಂತಿರುವ ತಗ್ಗು ಪ್ರದೇಶಗಳಲ್ಲಿ, ಚರಂಡಿಗಳಲ್ಲಿ ಉತ್ಪತ್ತಿಯಾಗುತ್ತವೆ. ಆದ್ದರಿಂದ ನಿಮ್ಮ ನೀರಿನ ತೊಟ್ಟಿಗಳನ್ನು ಸೊಳ್ಳೆಗಳು ಉತ್ಪತ್ತಿಯಾಗವುದನ್ನು ತಡೆಯಲು ಮತ್ತು ಮಲೇರಿಯಾ ಬರದಂತೆ ನೋಡಿಕೊಳ್ಳಲು ಅಗಿಂದಾಗ್ಗೆ ಸ್ವಚ್ಚಗೊಳಿಸುತ್ತಿರಿ. ಮಲೇರಿಯಾ ಕಾಯಿಲೆಯ ಸಾಧಾರಣ ಲಕ್ಷಣಗಳು ಯಾವುದೆಂದರೆ ಜ್ವರ, ನಡುಗುವುದು, ಸ್ನಾಯು ನೋವು ಮತ್ತು ಬಲಹೀನತೆ.

2. ಅತಿಸಾರ ಬೇಧಿ (Diarrhoea)

2. ಅತಿಸಾರ ಬೇಧಿ (Diarrhoea)

ಇದು ಮಳೆಗಾಲದಲ್ಲಿ ಬರುವ ಮತ್ತೊಂದು ಸಾಮಾನ್ಯ ಕಾಯಿಲೆ. ಇದು ಅನಾರೋಗ್ಯಕರ ಕೊಳಕು ಆಹಾರ ಇಲ್ಲವೇ ಅಶುದ್ಧಿ ಆಹಾರ ಮತ್ತು ನೀರಿನಿಂದ ಬರುವ ಕಾಯಿಲೆ. ಆತಿಸಾರದಲ್ಲಿ ಎರಡು ವಿಧಗಳಿವೆ ತೀಕ್ಷ್ಣ ಡಯಾರಿಯ ಮತ್ತು ದೀರ್ಘಕಾಲಿಕ ಡಯಾರಿಯ. ಈ ಎರಡು ಕಾಯಿಲೆಗಳನ್ನು ಬಹಳವಾಗಿ ತಡೆಗಟ್ಟಬಹುದು ಮತ್ತು ಚಿಕಿತ್ಸೆ ನೀಡಬಹುದು. ಈ ಕಾಯಿಲೆಯು ಬರದೇ ಇರಬೇ ಇರಲು ಸೂಕ್ತ ಆರೋಗ್ಯದಕಡೆ ಗಮನಕೊಡಿ, ಆಹಾರ ತಿನ್ನುವ ಮುನ್ನ ಚೆನ್ನಾಗೆ ಕೈ ತೊಳೆದುಕೊಳ್ಳಿ ಮತ್ತು ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ.

3. ಡೆಂಗ್ಯೂ

3. ಡೆಂಗ್ಯೂ

ಇದು ಮಳೆಗಾಲದಲ್ಲಿ ಸೊಳ್ಳೆಯಿಂದ ಕಡಿತದಿಂದ ಬರುವ ಕಾಯಿಲೆ. ಡೆಂಗ್ಯೂ ಸಾಮಾನ್ಯ ಲಕ್ಷಣಗಳು ಜ್ವರ, ದೇಹದ ನೋವು, ಕೀಲು ನೋವು ಮತ್ತು ದದ್ದು ಅಥವ ಗುಳ್ಳೆ. ಟೈಗರ್ ಸೊಳ್ಳೆ ಈ ಮಳೆಗಾಲದ ಈ ಕಾಯಿಲೆಗೆ ಕಾರಣ. ಟೈಗರ್ ಸೊಳ್ಳೆಗೆ ಬಲಿಯಾಗದಿರಲು, ಕೀಟನಿವಾರಕ (Insect Repellent) ಬಳಸಿ ಮತ್ತು ನಿಮ್ಮ ಮೈತುಂಬ ಸ್ವಥಃ ನೀವೇ ಬಟ್ಟೆಗಳನ್ನು ಹಾಕಿಕೊಳ್ಳಿರಿ.

4. ಚಿಕನ್ಗುನ್ಯ

4. ಚಿಕನ್ಗುನ್ಯ

ಚಿಕನ್ಗುನ್ಯ ಏಡಿಸ್ (ಅಲ್ಬೊಪಿಚ್ತುಸ್) ಸೋಂಕಿತ ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಈ ಸೊಳ್ಳೆಗಳು ಪ್ರಕಾಶಮಾನ ದಿನದ ಸಮಯದಲ್ಲಿ ಹಳ್ಳಗಳಲ್ಲಿ ನಿಂತಿರುವ ನೀರಿನಲ್ಲಿ ವೃದ್ಧಿಯಾಗುತ್ತವೆ. ಚಿಕನ್ಗುನ್ಯದ ಸಾಮಾನ್ಯ ರೋಗ ಲಕ್ಷಣಗಳೆಂದರೆ ಹಠಾತ್ತನೆ ಬರುವ ಜ್ವರ ಮತ್ತು ಅದರ ಜೊತೆಗೆ ಬರುವ ಕೀಲುನೋವಿನ ಬೇನೆ. ಚಿಕನ್ಗುನ್ಯ ರೋಗವನ್ನು ತಡೆಯಲು ಅಗಾಗ್ಗೆ ನಿಯಮಿತವಾಗಿ ನೀರಿಡುವ ಸಾಧಕ ಮತ್ತು ಪಾತ್ರೆಗಳನ್ನು ತೊಳೆದು ಉಪಯೋಗಿಸಿ. ಮತ್ತು ಕ್ರಿಮಿ ನಿವಾರಕ ಕ್ರೀಮ್(Repellent) ಉಪಯೋಗಿಸಿ.

5. ಟೈಫಾಯಿಡ್

5. ಟೈಫಾಯಿಡ್

ಟೈಫಾಯಿಡ್ ಕಾಯಿಲೆ ನೀರಿನ ಮೂಲದ ಕಾಯಿಲೆ ಮತ್ತು ಮಳೆಗಾಲದ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸಲ್ಮೊನೆಲ್ಲ ಟೈಫಿ (Salmonella Typhi) ಬ್ಯಾಕ್ಟೀರಿಯಾ ಸೇರಿರುವ ನೀರು ಅಥವಾ ಆಹಾರವನ್ನು ಸೇವಿಸುವ ಮೂಲಕ ಟೈಫಾಯಿಡ್ ಕಾಯಿಲೆ ಬರುತ್ತದೆ. ಟೈಫಾಯಿಡ್ ರೋಗದ ಸಾಧಾರಣ ಲಕ್ಷಣಗಳೆಂದರೆ ಜ್ವರ, ತಲೆನೋವು, ನಿಶ್ಶಕ್ತಿ, ಮೈಕೈನೋವು ಮತ್ತು ಗಂಟಲು ಕಿರಿ ಕಿರಿ. ಈ ರೋಗ ಬರುವುದನ್ನು ತಡೆಯಲು ನಿಮ್ಮ ಕೈಗಳನ್ನು ಚೆನ್ನಾಗಿ ನಿಯತವಾಗಿ ತೊಳೆದುಕೊಳ್ಳಿ, ರಸ್ತೆಬದಿಯಲ್ಲಿ ಮಾರಾಟವಾಗುವ ಆಹಾರಗಳನ್ನು ನಿಷೇಧಿಸಿ ಮತ್ತು ಆರೋಗ್ಯಕರ ದ್ರವವನ್ನು ಹೆಚ್ಚು ಕುಡಿಯಿರಿ.

6. ವೈರಲ್ ಜ್ವರ

6. ವೈರಲ್ ಜ್ವರ

ಸಾಮಾನ್ಯವಾಗಿ ವೈರಲ್ ಜ್ವರವು ಎಲ್ಲಾ ಕಾಲದಲ್ಲಿ ಬಂದರೂ ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವೈರಲ್ ಜ್ವರದ ಸಾಮಾನ್ಯ ಲಕ್ಷಣಗಳು 3 ರಿಂದ 7 ದಿನಗಳವರೆಗೆ ಶೀತ ಮತ್ತು ಕೆಮ್ಮಿನ ಜೊತೆ ಶುರುವಾಗಿ ಗಂಭೀರ ಜ್ವರ ಬರುವುದು.

7. ಕಾಲರಾ

7. ಕಾಲರಾ

ಕಾಲರಾ ಮಳೆಗಾಲದ ಮಾರಣಾಂತಿಕ ಕಾಯಿಲೆಯಾಗಿದೆ. ಕಲುಷಿತ ಆಹಾರ ಮತ್ತು ನೀರು ಸೇವನೆಯಿಂದ ಕಾಲರ ಬರುತ್ತದೆ. ಇದು ಕಳಪೆ ಮತ್ತು ಅನಾರೋಗ್ಯಕರ ವಾತಾವರಣದಿಂದಲೂ ಬರುತ್ತದೆ. ತೀವ್ರ ದಯಾರಿಯ ಮತ್ತು ಅತಿಸಾರ ಭೇದಿ ಇವುಗಳು ಅತ್ಯಂತ ಸಾಮಾನ್ಯ ಲಕ್ಷಣಗಳಾಗಿವೆ. ಕಾಲರಾವನ್ನು ತಪ್ಪಿಸಲು ಶುಚಿಯಾದ ನೀರು ಕುಡಿಯಬೇಕು ಮತ್ತು ಸರಿಯಾದ ನೈರ್ಮಲ್ಯವನ್ನು ಪಾಲಿಸಬೇಕು.

8. ಲೆಪ್ಟೊಸ್ಪಿರೊಸಿಸ್

8. ಲೆಪ್ಟೊಸ್ಪಿರೊಸಿಸ್

ಲೆಪ್ಟೊಸ್ಪಿರೊಸಿಸ್ಸನ್ನು ವೈಲ್ಸ್ ಸಿಂಡ್ರೋಮ್(Weil's syndrome) ಎಂದೂ ಕರೆಯುತ್ತಾರೆ. ಇದು ಕೊಳಕು ನೀರು ಅಥವಾ ಕೊಚ್ಚೆ ಸಂಪರ್ಕದಿಂದ ಬರುತ್ತದೆ. ಲೆಪ್ತೊಸ್ಪಿರೊಸಿಸ್ ರೋಗದ ಸಾಮಾನ್ಯ ಲಕ್ಷಣಗಳು ತಲೆನೋವು, ಸ್ನಾಯು ನೋವು, ಜ್ವರ, ನಡುಕ ಮತ್ತು ಸೋಂಕಿನಿಂದ ಊದಿರುವುದು. ಈ ಮಳೆಗಾಲದ ರೋಗವನ್ನು ತಡೆಯಲು ನೀವು ಹೊರಗಡೆ ಹೋದಾಗ ನಿಮ್ಮ ಪಾದಗಳನ್ನು ಪೂರ್ತಿಯಾಗಿ ಮುಚ್ಚಿಕೊಳ್ಳಿ ಮತ್ತು ಎಲ್ಲಾ ತರಹದ ತೆರೆದ ಗಾಯ ಮತ್ತು ಮೂಗೇಟುಗಳಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡೆಯಿರಿ

 9. ಕಾಮಾಲೆ

9. ಕಾಮಾಲೆ

ಕಾಮಾಲೆ ರೋಗವು ಸಾಮಾನ್ಯವಾಗಿ ಕಳುಷಿತ ನೀರು ಮತ್ತು ಆಹಾರ ಸೇವನೆಯಿಂದ ಬರುತ್ತದೆ. ಕಾಮಾಲೆ ರೋಗದ ಸಾಮಾನ್ಯ ಲಕ್ಷಣಗಳು ನಿಶ್ಶಕ್ತಿ, ಹಳದಿ ಮೂತ್ರ, ವಾಂತಿ ಮತ್ತು ಪಿತ್ತಜನಕಾಂಗದ ನಿಷ್ಕ್ರಿಯತೆ. ಮಳೆಗಾಲದಲ್ಲಿ ಕಾಮಾಲೆ ರೋಗವನ್ನು ದೂರವಿಡಲು ಕುದಿಸಿದ ನೀರು ಸೇವಿಸಿ ಮತ್ತು ರಸ್ತೆ ಬದಿ ಆಹಾರಗಳನ್ನು ನಿಷೇಧಿಸಿ.

10. ಹೊಟ್ಟೆ ಸೋಂಕು

10. ಹೊಟ್ಟೆ ಸೋಂಕು

ಮಳೆಗಾಲದ ಸಮಯದಲ್ಲಿ ಜಠರ ಮತ್ತು ಕರುಳಿನ ಉರಿಯೂತದಿಂದ ಬರುವ ತೀವ್ರ ಹೊಟ್ಟೆಸೋಂಕುಗಳಿಂದ ತೀವ್ರವಾಗಿ ವಾಂತಿಯಾಗುವುದು, ಡಯಾರಿಯ ಮತ್ತು ಹೊಟ್ಟೆ ನೋವು ಕಾಣ ಬರುತ್ತವೆ. ಈ ಹೊಟ್ಟೆ ಸಮಸ್ಯೆಗಳನ್ನು ತಡೆಯಲು ರಸ್ತೆ ಬದಿ ಆಹಾರವನ್ನು ನಿಷೇಧಿಸಿ ಕುದಿಸಿದ ನೀರನ್ನೇ ಕುಡಿಯಿರಿ ಮತ್ತು ಹೆಚ್ಚು ಹೆಚ್ಚು ದ್ರವಗಳನ್ನು ತೆಗೆದುಕೊಳ್ಳಿರಿ.

English summary

10 most common monsoon diseases

But this picture perfect situation goes out of the window as soon as you step out. You need to know about 10 monsoon diseases that you need to look out this monsoon. While some are easily treatable a few can be life threatening
X
Desktop Bottom Promotion