For Quick Alerts
ALLOW NOTIFICATIONS  
For Daily Alerts

ತತ್‍ಕ್ಷಣಕ್ಕೆ ಸುಸ್ತು ಹೋಗಲಾಡಿಸಲು10 ಮಾರ್ಗಗಳು

By Super
|

ಪ್ರತಿಯೊಬ್ಬರಿಗೂ ತಮ್ಮ ಆರೋಗ್ಯವನ್ನು ಸದಾ ಉತ್ತಮವಾಗಿ ಕಾಪಾಡಿಕೊಳ್ಳಬೇಕೆಂಬ ಹಂಬಲವಿರುತ್ತದೆ. ಆದರೆ ಅದು ಎಲ್ಲಾರಿಗೂ ಸಾಧ್ಯವಾಗುವುದಿಲ್ಲ. ನಮ್ಮ ಜೀವನ ಶೈಲಿ, ಮಾನಸಿಕ ಒತ್ತಡ ಮತ್ತು ಕೆಲಸದ ಒತ್ತಡ ಇವೆಲ್ಲಾ ನೇರವಾಗಿ ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವುದು.

ಆದ್ದರಿಂದ ಆರೋಗ್ಯವಾಗಿರಲು ಹಂತ ಹಂತವಾಗಿ,ಆರೋಗ್ಯವನ್ನು ಗಳಿಸಿಕೊಳ್ಳುವ ಹಾದಿಗಳು ಸಾಕಷ್ಟು ಇವೆ. ತತ್‍ಕ್ಷಣಕ್ಕೆ ನಿಮ್ಮ ಆರೋಗ್ಯವನ್ನು ಉತ್ತೇಜಿಸಲು ಇರುವ ಹತ್ತು ಮಾರ್ಗಗಳನ್ನು ನಾವು ನಿಮಗಾಗಿ ಇಲ್ಲಿ ನೀಡಿದ್ದೇವೆ ಓದಿ.

 ಉದ್ವೇಗ ಹೊರಹಾಕಿ

ಉದ್ವೇಗ ಹೊರಹಾಕಿ

ಉದ್ವೇಗಕ್ಕೆ ಒಳಗಾಗಿದ್ದೀರಾ? ಹಾಗಿದ್ದರೆ ನಿಮ್ಮ ಉದ್ವೇಗವನ್ನು ಹತೋಟಿಗೆ ತರಲು ಯಾವುದೇ ಮಾರ್ಗಗಳು ಇಲ್ಲ. ಮೊದಲು ಧೀರ್ಘವಾಗಿ ಉಸಿರಾಡಿ. ವಿಶ್ರಾಂತಿ ನೀಡುವ ತಂತ್ರಗಳಿಗೆ ಮೊರೆ ಹೋಗಿ. ಧ್ಯಾನ, ನಡಿಗೆ , ಪ್ರಾಣಾಯಾಮದಂತಹ ವಿಶ್ರಾಂತಿ ನೀಡುವ ತಂತ್ರಗಳು ನಿಮ್ಮ ಹೃದಯವನ್ನು ಆರೋಗ್ಯವಾಗಿಡುತ್ತವೆ ಮತ್ತು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತವೆ.

ಕುಣಿದಾಡಿ

ಕುಣಿದಾಡಿ

ರೇಡಿಯೋ ಅಥವಾ ಸಂಗೀತ ಕೇಳುತ್ತ ಕುಣಿದಾಡಿ. ಶಾಸ್ತ್ರೋಕ್ತವಾಗಿಯೇ ನೃತ್ಯಮಾಡಬೇಕೆಂದೇನು ಇಲ್ಲ. ಸುಮ್ಮನೆ ನಿಮ್ಮ ಕಾಲುಗಳ ಮೇಲೆ ಸ್ವಲ್ಪ ಭಾರ ಹಾಕಿ, ನಾಲ್ಕು ಹೆಜ್ಜೆ ಹಾಕಿ ಸಾಕು. ಹೀಗೆ ಮಾಡುವುದರಿಂದ ನಿಮ್ಮ ದೇಹದಲ್ಲಿರುವ ಕ್ಯಾಲ್ಸಿಯಂ ಬಿಡುಗಡೆ ಹೊಂದುತ್ತದೆ. ಇದರಿಂದಾಗಿ ಮುಂದೆ ಒಸ್ಟಿಯೊಪೊರೊಸಿಸ್ ಸಮಸ್ಯೆ ಬರುವುದಿಲ್ಲ. ಅಲ್ಲದೇ ಕುಣಿದಾಡುವುದರಿಂದ ನಿಮ್ಮ ದೇಹದಲ್ಲಿರುವ ಕ್ಯಾಲೋರಿಗಳು ಸಾಕಷ್ಟು ಪ್ರಮಾಣದಲ್ಲಿ ಕರಗುತ್ತವೆ ಹಾಗು ನೀವು ಅತ್ಯಂತ ಉಲ್ಲಾಸಿತರಾಗುವಿರಿ.

ಒಮೆಗಾ- 3 ಸೇವಿಸಿ

ಒಮೆಗಾ- 3 ಸೇವಿಸಿ

ಒಮೆಗಾ- 3 ಎಂಬ ಕೊಬ್ಬಿನ ಆಮ್ಲಗಳು ಮೀನುಗಳಲ್ಲಿ ಯಥೇಚ್ಚವಾಗಿ ದೊರೆಯುತ್ತವೆ. ಇವು ಉರಿಯೂತವನ್ನು ಕಡಿಮೆ ಮಾಡುತ್ತವೆ, ಹೃದಯಾಘಾತವನ್ನು ತಡೆಯುತ್ತವೆ ಮತ್ತು ಕೆಲವು ಬಗೆಯ ಕ್ಯಾನ್ಸರನ್ನು ನಿಯಂತ್ರಿಸುತ್ತವೆ. ಇದಕ್ಕಾಗಿ ನಿಮ್ಮ ಆಹಾರದಲ್ಲಿ ಸ್ವಲ್ಪ ಪ್ರಮಾಣದ ಮೀನು ಸೇವಿಸಿ, ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.

 ನಿಮಗಾಗಿ ಒಂದು ಕೋಕಾ ಕುಡಿಯಿರಿ

ನಿಮಗಾಗಿ ಒಂದು ಕೋಕಾ ಕುಡಿಯಿರಿ

ನೀವು ಸೇವಿಸುವ ಪ್ರತಿಯೊಂದು ರುಚಿಕರ ಅಂಶವು ನಿಮಗೆ ಹಾನಿಯನ್ನುಂಟು ಮಾಡುವುದಿಲ್ಲ! ಕೃಷಿ ಮತ್ತು ಆಹಾರ ರಸಾಯನಶಾಸ್ತ್ರದ ಕುರಿತಾದ ಒಂದು ನಿಯತಕಾಲಿಕೆಯಲ್ಲಿ ಪ್ರಕಟವಾದ ಒಂದು ಸಂಶೋಧನಾ ಲೇಖನದ ಪ್ರಕಾರ ನೀವು ಒಂದು ಮಗ್ ಬೆಚ್ಚಗಿನ ಕೋಕಾ ಸೇವಿಸುವುದರಿಂದ ನಿಮ್ಮ ಹೃದಯದ ಆರೋಗ್ಯ, ಮೆದುಳಿನ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿಯು ದ್ವಿಗುಣಗೊಳ್ಳುತ್ತದೆಯಂತೆ.

ತಣ್ಣೀರಿನ ಸ್ನಾನ

ತಣ್ಣೀರಿನ ಸ್ನಾನ

ನಾವೆಲ್ಲರು ಒಂದು ಕೆಟ್ಟ ದಿನ ತಣ್ಣೀರಿನ ಸ್ನಾನವನ್ನು ನಡು ನಡುಗುತ್ತ ಮಾಡಿ ಮುಗಿಸಿರುತ್ತೇವೆ. ಆದರೆ ನೆನಪಿರಲಿ ತಣ್ಣೀರಿನ ಸ್ನಾನವು ನಮ್ಮ ಮೆದುಳಿನಲ್ಲಿರುವ ಒತ್ತಡವನ್ನು ಹೊರ ಹಾಕುವ ಹಾರ್ಮೋನುಗಳನ್ನು ಬಿಡುಗಡೆಗೊಳಿಸಿ, ನಮ್ಮನ್ನು ಉಲ್ಲಾಸಿತರನ್ನಾಗಿ ಇಡುತ್ತದೆ. ಕಡಿಮೆ ಒತ್ತಡವು ಹೃದಯಾಘಾತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಹಾಗು ಕಡಿಮೆ ರಕ್ತದ ಒತ್ತಡವನ್ನು ಕಡಿಮೆ ಮಾಡಲು ರಹದಾರಿಯಾಗುತ್ತದೆ. ಹಾಗೆಂದು ನಡುಗವಷ್ಟು ತಣ್ಣೀರಿನಲ್ಲಿ ಸ್ನಾನ ಮಾಡಬೇಡಿ. ಎರಡು ಮೂರು ನಿಮಿಷಗಳ ಕಾಲ ಜುಮ್ ಜುಮ್ ಎಂದು ಸ್ನಾನ ಮಾಡಿದರು ಸಾಕು.

ಮುತ್ತು

ಮುತ್ತು

ಸಂಶೋಧನೆಯ ಪ್ರಕಾರ ಮುತ್ತು ನೀಡುವುದರಿಂದ ಅಲರ್ಜಿಗಳಿಂದ ದೂರವಿರಬಹುದಂತೆ. ಆದರೆ ಅದಕ್ಕಾಗಿ ನೀವು 30 ನಿಮಿಷ ಮುದ್ದಾಡಬೇಕು ಅಷ್ಟೇ. ಇದರಿಂದ ನಿಮಗೆ ತತ್‍ಕ್ಷಣಕ್ಕೆ ಆರೋಗ್ಯ ದೊರೆಯುವುದಿಲ್ಲ. ಆದರೆ ಇದರ ಪ್ರಭಾವ ಮುಂದಿನ ನಿಮ್ಮ ಆರೋಗ್ಯದ ಭವಿಷ್ಯದ ಮೇಲೆ ಆಗುತ್ತದೆ. ಇನ್ನೇಕೆ ತಡ ಮುತ್ತು ನೀಡಲು ಒಂದು ನೆಪ ಸಿಕ್ಕಿತಲ್ಲ ಜಮಾಯಿಸಿ!!.

ನಕ್ಕು ಬಿಡಿ

ನಕ್ಕು ಬಿಡಿ

ನಗು ನಿಮ್ಮ ಮೆದುಳಿನಲ್ಲಿರುವ ಸಂತೋಷದ ಹಾರ್ಮೋನುಗಳು ಬಿಡುಗಡೆಯಾಗುವಂತೆ ಮಾಡಿ, ಒತ್ತಡವನ್ನು ದೂರ ಮಾಡುತ್ತವೆ. ಒಂದು ಹಾಸ್ಯ ಚಲನಚಿತ್ರವನ್ನು ನೋಡಿ ಅಥವಾ ನಿಮ್ಮ ಸ್ನೇಹಿತರ ಜೊತೆ ಕಾಲ ಕಳೆಯಲು ಹೋಗಿ. ನಿಮ್ಮಲ್ಲಿರುವ ಸಂತೋಷದ ಹಾರ್ಮೋನುಗಳನ್ನು ಬಿಡುಗಡೆಗೊಳಿಸಿ.

ಹೆಚ್ಚಾಗಿ ನೀರು ಕುಡಿಯಿರಿ.

ಹೆಚ್ಚಾಗಿ ನೀರು ಕುಡಿಯಿರಿ.

ನಿಜಕ್ಕು ಇದು ನಿಮಗೆ ತತ್‍ಕ್ಷಣಕ್ಕೆ ಉತ್ತೇಜನವನ್ನು ನೀಡುತ್ತದೆ. ನೀರು ಆರೋಗ್ಯವನ್ನು ಸುಸ್ಥಿರದಲ್ಲಿಡುವ ಅತ್ಯಂತ ಮಿತವ್ಯಯಕರವಾದ ಅಂಶವಾಗಿದೆ. ಹೆಚ್ಚಾಗಿ ನೀರು ಕುಡಿಯುವುದರಿಂದ ಮೂತ್ರ ಕೋಶವು ಸರಾಗವಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೇ ಇವು ನಿಮ್ಮ ತ್ವಚೆಯ ಸ್ಥಿತಿಯನ್ನು ಸುಧಾರಿಸುತ್ತದೆ. ಅದಕ್ಕಾಗಿ ನೀರು ಹೆಚ್ಚು ಕುಡಿಯಿರಿ. ಆ ನೀರನ್ನು ಮೂತ್ರಾಶಯದಿಂದ ಹೊರಹಾಕಿ.

ನೆಟ್ಟಗೆ ಕುಳಿತುಕೊಳ್ಳಿ

ನೆಟ್ಟಗೆ ಕುಳಿತುಕೊಳ್ಳಿ

ದುರ್ಬಲವಾದ ಕೂರುವ ಭಂಗಿಯು ಬಾಗಿದ ಬೆನ್ನು ಮೂಳೆಯುಂಟಾಗಲು ಕಾರಣವಾಗುತ್ತದೆ. ಅಲ್ಲದೆ ಇದು ಬೆನ್ನು ನೋವು ಮತ್ತು ಶ್ವಾಸಕೋಶದ ಅಸಮರ್ಪಕ ಕಾರ್ಯ ವೈಖರಿಗೆ ಕಾರಣವಾಗುತ್ತದೆ. ಇದನ್ನು ಸರಿಪಡಿಸಲು ತುಂಬಾ ಕಾಲಾವಕಾಶವಾಗುವುದಿಲ್ಲ. ಎದ್ದೇಳಿ ಮೊದಲು ನೆಟ್ಟಗೆ ಕುಳಿತುಕೊಳ್ಳಿ ನಿಮ್ಮ ಸಮಸ್ಯೆ ತಾನೇ ತಾನಾಗಿ ಬಗೆಹರಿಯುತ್ತದೆ.

ಮುದ ನೀಡುವ ಸಂಗೀತ

ಮುದ ನೀಡುವ ಸಂಗೀತ

ಮನಸ್ಸಿಗೆ ಮುದ ನೀಡುವ ಸಂಗೀತ ಕೇಳಿದರೂ ಸುಸ್ತು ಮಾಯವಾಗಿ ಹೊಸ ಉತ್ಸಾಹ ತುಂಬುವುದು.

English summary

10 Instant Health Booster

All too often we set ourselves health challenges that are so big that we rarely achieve them. Why not try some smaller, instant ways to boost your health while you work towards your long term goal? Here are 10 instant health boosters to help you out.
 
X
Desktop Bottom Promotion