For Quick Alerts
ALLOW NOTIFICATIONS  
For Daily Alerts

ಅಸಿಡಿಟಿ ನಿವಾರಿಸಲು 10 ಅತ್ಯುತ್ತಮ ಮನೆಮದ್ದುಗಳು

By ಲೇಖಕ
|

ಅಸಿಡಿಟಿ ಅಥವಾ ಹೊಟ್ಟೆಯಲ್ಲಿ ಹುಳಿ ಹುಳಿಯಾದಂತಾಗುವ ಅನುಭವವು ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ಬಾರಿ ಕಾಟ ನೀಡಿರುತ್ತದೆ. ಸಾಮಾನ್ಯವಾಗಿ ಮಿತಿ ಮೀರಿ ತಿಂದಾಗ ಈ ಸಮಸ್ಯೆ ಕಾಡುವುದು ಸಹಜ. ಯಾವಾಗಲಾದರು ಒಮ್ಮೆ ನಿಮ್ಮ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಒಂದು ಗುಲಾಬ್ ಜಾಮೂನ್ ಹೆಚ್ಚಿಗೆ ತಿಂದಾಗ ಅಥವಾ ಚಹಾ ವಿರಾಮದ ವೇಳೆಯಲ್ಲಿ ಆ ಖಾರದ ಸಮೋಸವನ್ನು ಸೇವಿಸಿದಾಗ ಈ ಸಮಸ್ಯೆ ನಿಮ್ಮನ್ನು ಕಾಡಿರಬಹುದು. ಆಗ ನಿಮ್ಮ ಕಣ್ಣು ಬೇಕು ಎನ್ನುತ್ತದೆ, ಆದರೆ ಹೊಟ್ಟೆ ಬೇಡವೆನ್ನುತ್ತದೆ.

ಯಾವುದು ಹೇಗೆ ಇರಲಿ ಅಸಿಡಿಟಿ ನಿಜಕ್ಕು ಒಂದು ಅಸೌಕರ್ಯಕರವಾದ ಅನುಭವ. ಕೆಲವೊಮ್ಮೆ ಇದಕ್ಕೆ ಪರಿಹಾರವಿಲ್ಲದೆ ನಾವು ಒದ್ದಾಡಿ ಹೋಗುತ್ತೇವೆ. ಆದರೆ ಕೆಲವೊಮ್ಮೆ ಅಂಟಾಸಿಡ್ ಬಾಟಲಿಯತ್ತ ನಮ್ಮ ಕೈ ಯಾಂತ್ರಿಕವಾಗಿ ಹೋಗುತ್ತದೆ. ಆದರೆ ಅದನ್ನು ಕುಡಿಯುವ ಮೊದಲು ನಿಮಗೆ ತಿಳಿದಿರಲಿ ಅದಕ್ಕಾಗಿ ಕೆಲವೊಂದು ಪ್ರಾಕೃತಿಕ ಪರಿಹಾರೋಪಾಯಗಳು ಸಹ ಇವೆಯೆಂದು. ಇವುಗಳು ಸಹ ಅಸಿಡಿಟಿಗೆ ಪರಿಹಾರವನ್ನು ನೀಡುತ್ತವೆ. ಆದರೆ ಇವುಗಳ ಒಂದು ಹೆಚ್ಚುಗಾರಿಕೆಯೆಂದರೆ ಇವುಗಳು ನಿಮ್ಮ ದೇಹದಲ್ಲಿ ಔಷಧಿಗಳಂತೆ ಅಡ್ಡ ಪರಿಣಾಮವನ್ನುಂಟು ಮಾಡುವುದಿಲ್ಲ.

ಇಲ್ಲಿ ನಿಮಗಾಗಿ ಅಸಿಡಿಟಿ ನಿವಾರಿಸುವ 10 ಅತ್ಯುತ್ತಮ ಮನೆಮದ್ದುಗಳ ಪಟ್ಟಿಯನ್ನು ನೀಡಿದ್ದೇವೆ ನೋಡಿ:

ಬಾಳೆಹಣ್ಣು

ಬಾಳೆಹಣ್ಣು

ಇದರಲ್ಲಿ ಹೆಚ್ಚಿನ ಪ್ರಮಾಣದ ಪೊಟಾಷ್ಯಿಯಂ ಇದೆ. ಇದೊಂದು ಅಲ್ಕಲೈಜಿಂಗ್ ಮಿನರಲ್ ಆಗಿದ್ದು, ಯಥೇಚ್ಛವಾಗಿ pH ಮೌಲ್ಯವನ್ನು ಹೊಂದಿದೆ. ಎಷ್ಟು pH ಇದ್ದರೆ, ಅಷ್ಟು ಕಡಿಮೆ ಅಸಿಡಿಟಿ ಇದ್ದಂತೆ ಲೆಕ್ಕ. ಇವುಗಳಲಿರುವ ಅಂಶಗಳು ಜಠರದಲ್ಲಿ ಅಧಿಕ ಪ್ರಮಾಣದ ಲೋಳೆಯನ್ನು ಬಿಡುಗಡೆ ಮಾಡಲು ಸಹಕರಿಸುತ್ತವೆ. ಈ ಲೋಳೆಯು ಅಸಿಡಿಟಿಯಿಂದ ಜಠರದ ಮೇಲೆ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ನಾರಿನಂಶವು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆಯಲ್ಲದೆ, ಅಸಿಡಿಟಿಯಿಂದ ದೇಹದ ಮೇಲೆ ಉಂಟಾಗುವ ಪ್ರಭಾವವನ್ನು ತಗ್ಗಿಸುತ್ತದೆ. ಈ ಎಲ್ಲಾ ಪ್ರಯೋಜನಗಳು ನಿಮಗೆ ಬಾಳೆಹಣ್ಣಿನಿಂದ ದೊರೆಯಬೇಕಾದರೆ, ಪೂರ್ತಿ ಹಣ್ಣಾಗಿರುವ ಹಣ್ಣನ್ನೆ ತಿನ್ನಿ.ಏಕೆಂದರೆ ಪೂರ್ತಿ ಹಣ್ಣಾದವುಗಳಲ್ಲಿ ಪೊಟಾಷ್ಯಿಯಂ ಪ್ರಮಾಣ ಹೆಚ್ಚಾಗಿರುತ್ತದೆ.

ತುಳಸಿ

ತುಳಸಿ

ಇದರಲ್ಲಿರುವ ರಾಸಾಯನಿಕ ವಸ್ತುಗಳು ನಿಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತವೆ. ಇದು ಜಠರದಲ್ಲಿ ಹೆಚ್ಚಿನ ಪ್ರಮಾಣದ ಲೋಳೆಯನ್ನು ಉತ್ಪತಿ ಮಾಡುವಂತೆ ಪ್ರೇರೇಪಿಸುತ್ತದೆ. ಜೊತೆಗೆ ತುಳಸಿಯು ಅಲ್ಸರ್ ನಿರೋಧಕ ಅಂಶಗಳನ್ನು ಸ್ವಾಭಾವಿಕವಾಗಿ ಹೆಚ್ಚಿಸುತ್ತದೆ. ಅಲ್ಲದೆ ತುಳಸಿಯು ಪೆಪ್ಟಿಕ್ ಆಸಿಡ್‍ನ ಪರಿಣಾಮಗಳನ್ನು ಕಡಿಮೆ ಮಾಡಿ ಅಸಿಡಿಟಿಯನ್ನು ನಿಯಂತ್ರಿಸುತ್ತದೆ. ಹೊಟ್ಟೆಯಲ್ಲಿ ವಾಯು ( ಗ್ಯಾಸ್) ಸಂಚಯವಾಗದಂತೆ ತಡೆಯುವಲ್ಲಿ ತುಳಸಿಯು ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಅದಕ್ಕಾಗಿ ಊಟವಾದ ನಂತರ ಐದರಿಂದ ಆರು ತುಳಸಿ ಎಲೆಗಳನ್ನು ಸೇವಿಸುವುದರಿಂದ ಅಸಿಡಿಟಿ ಸಮಸ್ಯೆಯಿಂದ ದೂರವಿರಬಹುದು.

ತಣ್ಣಗಿನ ಹಾಲು

ತಣ್ಣಗಿನ ಹಾಲು

ಹಾಲಿನಲ್ಲಿ ಕ್ಯಾಲ್ಸಿಯಂ ಯಥೇಚ್ಛವಾಗಿರುತ್ತದೆ. ಈ ಕ್ಯಾಲ್ಸಿಯಂ ನಮ್ಮ ಉದರದಲ್ಲಿ ಅಸಿಡ್ ಸಂಚಯಗೊಳ್ಳುವುದನ್ನು ತಡೆಯುತ್ತದೆ. ಒಂದು ಲೋಟ ಹಾಲನ್ನು ಸೇವಿಸುವುದರಿಂದಾಗಿ ಅಸಿಡಿಟಿಯನ್ನು ದೂರವಿಡಬಹುದು. ತಣ್ಣಗಿನ ಹಾಲು ಹೊಟ್ಟೆ ಉರಿಯಿಂದ ತಕ್ಷಣ ಉಪಶಮನ ನೀಡುತ್ತದೆ. ಇದನ್ನು ತಣ್ಣಗಿನ ಹಾಲನ್ನು ಸೇವಿಸುವಾಗ ನೀವು ಸಹ ಗಮನಿಸಬಹುದು. ಸಕ್ಕರೆ ಇಲ್ಲದ, ಕೆನೆ ತೆಗೆದ ಹಾಲು ಅಸಿಡಿಟಿಯ ಮೇಲೆ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಸೋಂಪು

ಸೋಂಪು

ಆಂಗ್ಲ ಭಾಷೆಯಲ್ಲಿ ಫೆನ್ನೆಲ್ ಎಂದು ಕರೆಯಲ್ಪಡುವ ಇದು ಅತ್ಯುತ್ತಮವಾದ ಬಾಯಿ ದುರ್ವಾಸನೆ ನಿರೋಧಕವಾಗಿದೆ. ಸೌಂಫ್‍ನಲ್ಲಿ ಹಲವಾರು ಪ್ರಯೋಜನಗಳು ಅಡಗಿವೆ. ಅವುಗಳು ಹೀಗಿವೆ- ಇದು ಅತ್ಯುತ್ತಮವಾದ ಜೀರ್ಣಶಕ್ತಿ ಪ್ರಚೋದಕ, ಮಲಬದ್ದತೆಯನ್ನು ನಿವಾರಿಸುತ್ತದೆ. ಇದರಲ್ಲಿ ಫ್ಲೇವನೋಯ್ಡ್ಸ್ ಇದ್ದು, ಯಥೇಚ್ಛವಾದ ವೊಲಟೈಲ್ ಹೊಂದಿದೆ. ಇದರಲ್ಲಿ ಪ್ಲಮಿಟಿ ಆಸಿಡ್ ಹಾಗು ಇನ್ನಿತರ ಅಂಶಗಳು ಇವೆ. ಇದು ಅಲ್ಸರ್ ರೋಗ ಬರದಂತೆ ತಡೆಯುವ ಅಂಶಗಳನ್ನು ತನ್ನಲ್ಲಿ ಹೊಂದಿದೆ. ಇವುಗಳೆಲ್ಲದರ ಜೊತೆಗೆ ಇದನ್ನು ಸೇವಿಸಿದ ತಕ್ಷಣ ಹೊಟ್ಟೆ ತಣ್ಣಗೆ ಹಾಗುತ್ತದೆ. ಹಾಗಾಗಿ ಇದು ಅಸಿಡಿಟಿಯಿಂದ ತಕ್ಷಣ ಉಪಶಮನವನ್ನು ನೀಡುತ್ತದೆ. ಅದಕ್ಕಾಗಿಯೇ ಹೋಟೆಲ್‍ಗಳಲ್ಲಿ ಊಟವಾದ ನಂತರ ಸೌಂಫನ್ನು ನೀಡುತ್ತಾರೆ. ಒಂದು ವೇಳೆ ನಿಮಗೆ ಅಸಿಡಿಟಿಯಿಂದ ಸಮಸ್ಯೆ ಉಂಟಾದಲ್ಲಿ ಕೆಲವು ಕಾಳು ಸೌಂಫನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ, ರಾತ್ರಿಯಿಡಿ ಅವುಗಳನ್ನು ಹಾಗೆಯೇ ಬಿಡಿ. ಯಾವಾಗ ನಿಮಗೆ ಅಸಿಡಿಟಿಯಿಂದ ಭಾದೆಯುಂಟಾಗುತ್ತದೊ, ಆಗ ಈ ನೀರನ್ನು ಸೇವಿಸಿ.

ಜೀರಿಗೆ

ಜೀರಿಗೆ

ಇದು ಲಾಲಾರಸವನ್ನು ಹೆಚ್ಚಿಸುವ ಅಂಶಗಳನ್ನು ತನ್ನಲ್ಲಿ ಹೊಂದಿರುವುದರಿಂದಾಗಿ ಜೀರ್ಣಶಕ್ತಿಯನ್ನು ಪ್ರಚೋದಿಸುತ್ತದೆ. ಇದು ನಮ್ಮ ಚೈತನ್ಯವನ್ನು ಹೆಚ್ಚಿಸಿ, ಗ್ಯಾಸನ್ನು ಹೊಡೆದೋಡಿಸುತ್ತದೆ ಹಾಗು ಗ್ಯಾಸ್ ಟ್ರಬಲ್ ಬರದಂತೆ ಕಾಪಾಡುತ್ತದೆ. ಆಯುರ್ವೇದಿಕ್ ಪದ್ಧತಿಯಲ್ಲಿ ಇದನ್ನು ಅಲ್ಸರ್ ನಿರೋಧಕವಾಗಿ ಬಳಸುತ್ತಿದ್ದರು. ಇದರಲ್ಲಿರುವ ಉಪಶಮನಕಾರಿ ಗುಣಗಳು ಹೊಟ್ಟೆ ತೊಳೆಸುವ ಸಮಸ್ಯೆಯಿಂದ ಮುಕ್ತಿ ಕೊಡುತ್ತಿದ್ದವು. ಇದರ ಪ್ರಯೋಜನವನ್ನು ಪಡೆಯಬೇಕಾದರೆ ಆಗಾಗ ಇದನ್ನು ಸೇವಿಸಿ ಅಸಿಡಿಟಿಯಿಂದ ಮುಕ್ತರಾಗಿ ಅಥವಾ ಇದನ್ನು ಬಿಸಿ ನೀರಿನಲ್ಲಿ ಕುದಿಸಿ, ಆರಿಸಿ. ಸಮಸ್ಯೆ ಉದ್ಬವಿಸಿದಾಗಲೆಲ್ಲ ಇದನ್ನು ಸೇವಿಸಿ.

ಲವಂಗ

ಲವಂಗ

ಇದರಲ್ಲಿ ಸ್ವಾಭಾವಿಕವಾದ ಕಾರ್ಮಿಟಿವ್‍ಗಳಿದ್ದು, ಇದು ಪೆರಿಸ್ಟಲಿಸಿಸ್ ( ಅನ್ನನಾಳದ ಮುಖಾಂತರ ಆಹಾರವು ಜಠರ ಸೇರುವ ಪ್ರಕಿಯೆ) ಅನ್ನು ಇದು ಹೆಚ್ಚಿಸುತ್ತದೆ. ಇದಲ್ಲದೆ ಇದು ಲಾಲಾರಸವನ್ನು ಸಹ ಹೆಚ್ಚು ಮಾಡುತ್ತದೆ. ಇದು ಸ್ವಲ್ಪ ಕಟುವಾದ ಘಾಟು ರೀತಿಯ ರುಚಿಯನ್ನು ಹೊಂದಿದೆ. ಇದರ ರುಚಿಯನ್ನು ನೊಡುವುದರಿಂದ ನಮ್ಮ ರುಚಿಗ್ರಂಥಿಗಳು ಸಕ್ರಿಯಗೊಂಡು, ಲಾಲಾರಸವನ್ನು ಹೆಚ್ಚಿಗೆ ಉತ್ಪಾದಿಸುತ್ತವೆ. ಈ ಲಾಲಾರಸವು ಜೀರ್ಣಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಹಾಗಾಗಿ ನೀವೇನಾದರು ಅಸಿಡಿಟಿಯಿಂದ ಬಾಧೆಪಡುತ್ತಿದ್ದರೆ, ಒಂದು ಲವಂಗವನ್ನು ಕಚ್ಚಿ ತಿನ್ನಿ. ಆಗ ನಿಮ್ಮ ಬಾಯಿಯಲ್ಲಿ ಉತ್ಪತಿಯಾಗುವ ಲಾಲಾರಸವು ಅಸಿಡಿಟಿಯನ್ನು ಶಮನ ಮಾಡುವ ಸಲುವಾಗಿ ಹೊಟ್ಟೆಗೆ ದೌಡಾಯಿಸುತ್ತದೆ.

ಏಲಕ್ಕಿ

ಏಲಕ್ಕಿ

ಆಯುವೇದದಲ್ಲಿ ಏಲಕ್ಕಿಯನ್ನು ಮೂರು ದೋಷಗಳನ್ನು ಸಮತೋಲನದಲ್ಲಿಡುವ ಔಷಧಿಯಾಗಿ ಬಳಸಲಾಗುತ್ತದೆ. ಅವುಗಳೆಂದರೆ- ಕಫಾ, ಪಿತ್ತ ಮತ್ತು ವಾತ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ ಹಾಗು ಜಠರದಲ್ಲಿನ ಸೆಳೆತಗಳನ್ನು ನಿವಾರಿಸುತ್ತದೆ. ಇದು ಜಠರದಲ್ಲಿನ ಮ್ಯುಕಸ್ ಪೊರೆಗೆ ಅಸಿಡಿಟಿಯಿಂದ ಉಂಟಾದ ನೋವಿಗೆ ಆರಾಮವನ್ನು ನೀಡುತ್ತದೆ. ಇದರಲ್ಲಿರುವ ಸಿಹಿ ರುಚಿಯು ಹೊಟ್ಟೆಗೆ ತಂಪನ್ನು ನೀಡಿ ಉರಿಯನ್ನು ಕಡಿಮೆ ಮಾಡುತ್ತದೆ. ಅಸಿಡಿಟಿಯಿಂದ ತಕ್ಷಣ ಉಪಶಮನ ಪಡೆಯಲು ಎರಡು ಏಲಕ್ಕಿಯನ್ನು ಪುಡಿ ಮಾಡಿ ಬಿಸಿನೀರಿನಲ್ಲಿ ಹಾಕಿ ಕಾಯಿಸಿ. ಇದು ಆರಿದ ನಂತರ ಅದನ್ನು ಕುಡಿಯಿರಿ ಸಾಕು ಅಸಿಡಿಟಿ ಮಂಗಮಾಯವಾಗಿರುತ್ತದೆ.

ಪುದೀನಾ

ಪುದೀನಾ

ಇದನ್ನು ಬಹು ಹಿಂದಿನ ಕಾಲದಿಂದಲು ಬಾಯಿ ದುರ್ವಾಸನೆಯನ್ನು ತೊಲಗಿಸಲು ಬಳಸುತ್ತಿದ್ದಾರೆ. ಇದರ ಜೊತೆಗೆ ಹಲವಾರು ಆಹಾರಗಳ ತಯಾರಿಕೆಯಲ್ಲಿ ಸಹ ಇದು ಅತ್ಯಾವಶ್ಯಕ. ಇದೊಂದು ಅದ್ಭುತ ಗುಣಗಳನ್ನು ಹೊಂದಿರುವ ಎಲೆಯಾಗಿದೆ. ಅಸಿಡಿಟಿಯಿಂದ ವಿಮುಕ್ತಿ ಹೊಂದಲು ಇದು ನೆರವಾಗುತ್ತದೆ. ಹೊಟ್ಟೆಯಲ್ಲಿ ಅಸಿಡನ್ನು ಕಡಿಮೆ ಮಾಡಿ ಜೀರ್ಣಶಕ್ತಿಯನ್ನು ಹೆಚ್ಚಿಸಲು ಇದು ಸಹಕರಿಸುತ್ತದೆ. ಇದರಲ್ಲಿನ ತಂಪುಕಾರಿ ಗುಣಗಳು ಹೊಟ್ಟೆಯಲ್ಲಿನ ಉರಿಯನ್ನು ನಿವಾರಿಸುತ್ತವೆ. ಪುದೀನಾ ಎಲೆಯನ್ನು ಬಿಸಿನೀರಿನಲ್ಲಿ ಹಾಕಿ ಕುದಿಸಿ, ಅದು ಆರಿದ ನಂತರ ಕುಡಿಯುವುದರಿಂದ ಅಸಿಡಿಟಿಯಿಂದ ಮುಕ್ತರಾಗಬಹುದು.

ಶುಂಠಿ

ಶುಂಠಿ

ಭಾರತೀಯ ಆಹಾರ ತಯಾರಿಕೆಯಲ್ಲಿ ಅತಿ ಹೆಚ್ಚಾಗಿ ಬಳಸುವ ಪದಾರ್ಥಗಳಲ್ಲಿ ಒಂದಾಗಿರುವ ಶುಂಠಿಯು ತನ್ನಲ್ಲಿರುವ ಜಿಂಜೆರೆಸ್ಸೆನ್ಶಿಯಲ್ ಪೋಷಕಾಂಶಗಳ ಕಾರಣದಿಂದ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಆಹಾರದಲ್ಲಿರುವ ಪ್ರೊಟೀನ್‍ಗಳನ್ನು ಕಡಿಮೆ ಮಾಡುತ್ತದೆ. ಶುಂಠಿಯು ಜಠರದಲ್ಲಿನ ಮ್ಯುಕಸ್ ಅಂಗದಲ್ಲಿ ಲೋಳೆಯನ್ನು ಹೆಚ್ಚಿಸಿ ಅಲ್ಸರ್ ಬರದಂತೆ ತಡೆಯುತ್ತದೆ ಹಾಗು ಅಸಿಡಿಟಿಯನ್ನು ನಿಯಂತ್ರಿಸುತ್ತದೆ. ಅಸಿಡಿಟಿಯಿಂದ ನಿವಾರಣೆ ಪಡೆಯಲು ಶುಂಠಿಯನ್ನು ತಿನ್ನಲೂ ಬಹುದು. ಇದು ಸ್ವಲ್ಪ ಘಾಟು ಅಂಶವನ್ನು ಹೊಂದಿದೆ. ಇದನ್ನು ನೀವು ಬಿಸಿನೀರಿನಲ್ಲಿ ಕಾಯಿಸಿ ಬೇಕಾದರು ಕುಡಿಯಬಹುದು. ಇಲ್ಲವಾದರೆ ಇದನ್ನು ಜಜ್ಜಿ ಬೆಲ್ಲದ ಜೊತೆ ಬೇಕಾದರು ಸವಿಯಬಹುದು. ಹಾಗೆ ಸವಿಯುವಾಗ ಲಾಲಾರಸದೊಂದಿಗೆ ಇದು ಸೇರಿ ಜಠರವನ್ನು ತಂಪು ಮಾಡುತ್ತದೆ.

ಬೆಟ್ಟದ ನೆಲ್ಲಿಕಾಯಿ

ಬೆಟ್ಟದ ನೆಲ್ಲಿಕಾಯಿ

ಇದು ಕಫಾ ಮತ್ತು ಪಿತ ನಿವಾರಕ ಅಂಶಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುವುದರಿಂದ, ಜಠರದಲ್ಲಿರುವ ಗಾಯಗಳನ್ನು ಉಪಶಮನಗೊಳಿಸುತ್ತದೆ. ಅಸಿಡಿಟಿಯನ್ನು ನಿವಾರಿಸಲು ಪ್ರತಿದಿನ ಎರಡು ಚಮಚ ನೆಲ್ಲಿಕಾಯಿ ಪುಡಿಯನ್ನು ಸೇವಿಸಿ.

English summary

10 home remedies for acidity that really work

Whatever the reason may be, acidity can be quite an uncomfortable experience, and sometimes we are left with no option but to reach out for that bottle of antacid. But, did you know that there are alternative, Here are 10 things to treat acidity and its recurrence at bay.
Story first published: Tuesday, October 1, 2013, 10:13 [IST]
X
Desktop Bottom Promotion