For Quick Alerts
ALLOW NOTIFICATIONS  
For Daily Alerts

ಮಲಗುವ ಮುನ್ನ ತಿನ್ನಬಾರದ ಹೈ ಕ್ಯಾಲೋರಿ ಫುಡ್ಸ್

|

ಹೊಟ್ಟೆ ತುಂಬಾ ಊಟ ಮಾಡಿ ತಕ್ಷಣ ಹಾಸಿಗೆ ಸೇರಿ ಬೆಚ್ಚಗೆ ಮಲಗಿಬಿಡುವುದು ಒಳ್ಳೆಯದಲ್ಲ ಅಂತ ನಮಗೆಲ್ಲ ಗೊತ್ತಿದೆ ಅಲ್ವಾ. ಆಫೀಸ್ನಲ್ಲಿ ಅಥವ ಸ್ಕೂಲ್ನಲ್ಲಿ ದಿನವಿಡಿ ಕೆಲಸ ಮಾಡಿ ದೇಹಕ್ಕೆ ಸುಸ್ತಾಗಿರುತ್ತೆ. ಅದಕ್ಕೆ ವಿಶ್ರಾಂತಿ ಬೇಕು. ಅದೇ ರೀತಿ ನಿಮ್ಮ ಜೀರ್ಣಾಂಗಗಳಿಗೂ ವಿಶ್ರಾಂತಿ ಬೇಕು. ಮಲಗುವ ಮುಂಚೆ ಭೂರಿಭೋಜನ ಮಾಡಿದರೆ ಎದೆಯುರಿಯುಂಟಾಗಬಹುದು. ಅದಕ್ಕೆ ಯಾವಾಗಲೂ ಮಲಗುವುದಕ್ಕೆ ಎರಡು ಅಥವ ಮೂರು ಗಂಟೆ ಮುಂಚೆ ಊಟ ಮಾಡುವುದು ಒಳಿತು.

ಮಲಗುವುದಕ್ಕೆ ಮುಂಚೆ ನೀವು ತಿನ್ನಲೇಬಾರದಾದ ಅತಿ ಹೆಚ್ಚು ಕ್ಯಾಲೊರಿಗಳಿರುವ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ:

Food Which Not Eat Before Sleep

1. ಪಾಸ್ತಾ
ಪಾಸ್ತಾದಲ್ಲಿ ಅತಿ ಹೆಚ್ಚು ಕೊಬ್ಬಿನಂಶ ಇರುತ್ತದೆ. ಆದ್ದರಿಂದ ಅದನ್ನುರಾತ್ರಿ ಮಲಗುವ ಮುಂಚೆ ತಿನ್ನಬಾರದು. ಪಾಸ್ತಾದಿಂದ ಕೇವಲ 30 ನಿಮಿಷದಲ್ಲಿ ಹಲವು ಬಗೆಯ ತಿಂಡಿ ಮಾಡಬಹುದು. ಇದು ಹಸಿವಾಗಿದ್ದಾಗ ನಿಮಗೆ ತಿಂಡಿ ತಯಾರಿಸಲು ಸುಲಭ ಮಾರ್ಗ ಎನ್ನಿಸಬಹುದು. ಆದರೆ ನೆನಪಿಡಿ ಪಾಸ್ತಾದಲ್ಲಿ ಅತಿಹೆಚ್ಚು ಕಾರ್ಬೋಹೈಡ್ರೈಡ್ಗಳಿದ್ದು ಅವು ನೀವು ಹಾಸಿಗೆ ಸೇರಿ ನಿದ್ರೆಗೆ ಜಾರುತ್ತಿದ್ದಂತೆ ಕೊಬ್ಬಾಗಿ ಪರಿವರ್ತಿತವಾಗುತ್ತದೆ. ಅದೂ ಅಲ್ಲದೆ ಪಾಸ್ತಾ ತಿಂಡಿಗಳಲ್ಲಿ ಚೀಸ್ ಮತ್ತು ಎಣ್ಣೆಯ ಅಂಶ ಹೆಚ್ಚಾಗಿ ಬಳಕೆಯಾಗುತ್ತದೆ ಇದನ್ನು ಜೀರ್ಣಿಸಿಕೊಳ್ಳುವುದು ಸುಲಭವಲ್ಲ. ಆದ್ದರಿಂದ ಮಲಗುವ ಮುಂಚೆ ಪಾಸ್ತಾ ತಿನ್ನದಿರಿ.

2. ಪಿಜ್ಜಾ
ದೊಡ್ಡ ರಸಭರಿತ ರುಚಿಕರವಾದ ಪಿಜ್ಜಾ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ? ಆದರೆ ಇದು ಲಘು ಆಹಾರವಲ್ಲ ಗೊತ್ತಾ? ಬೆಳಗಿನ ಹೊತ್ತು ಇದನ್ನು ತಿಂದರೇನೆ ದೇಹ ಇದನ್ನು ಜೀರ್ಣಿಸಿಕೊಳ್ಳಲು ಕಷ್ಟಪಡಬೇಕಾಗುತ್ತದೆ. ಅಂದ ಮೇಲೆ ನೀವೇ ಊಹಿಸಿಕೊಳ್ಳಿ ಸಂಜೆ ಅಥವ ರಾತ್ರಿಯ ಹೊತ್ತು ಇದನ್ನು ತಿಂದರೆ ದೇಹ ಎಷ್ಟು ಒದ್ದಾಡಬೇಕಾಗುತ್ತದೆ ಎಂದು. ಪಿಜ್ಜಾದಲ್ಲಿ ಜಿಡ್ಡಿನಂಶ ಹೆಚ್ಚಿರುತ್ತದೆ ಮತ್ತು ಇದರಲ್ಲಿ ಬಳಕೆಯಾಗಿರುವ ಪದಾರ್ಥಗಳಲ್ಲಿ ಹೆಚ್ಚು ಆಮ್ಲೀಯಂಶಗಳಿರುತ್ತವೆ ಇದರಿಂದಾಗಿ ಎದೆಯುರಿಯುಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

3. ಕ್ಯಾಂಡಿ
ನೀವು ಏನು ತಿನ್ನುವಿರೋ ಅದು ನಿಮ್ಮನ್ನು ರೂಪಿಸುತ್ತದೆ. ಆದರೆ ನಿಮಗೆ ಗೊತ್ತೆ ನೀವು ಏನು ತಿನ್ನುವಿರಿ ಎಂದು ನೀವು ಕನಸು ಕಾಣುವಿರಿ. ಅಕ್ಷರಶಃ ಇದು ಹೀಗೆ ಎಂದು ಹೇಳಲಾಗುವುದಿಲ್ಲ. ಆದರೆ ಕೊಬ್ಬಿನ ಪದಾರ್ಥಗಳು ಮತ್ತು ಸಕ್ಕರೆ ಪದಾರ್ಥಗಳು (ಅದರಲ್ಲೂ ಕ್ಯಾಂಡಿ) ನಿಮ್ಮ ಮೆದುಳಿನ ತರಂಗಗಳ ಮೇಲೆ ಪ್ರಭಾವ ಬೀರುತ್ತದೆ ಮತ್ತು ಕನಸು ಕಾಣುವಂತೆ ಮಾಡುತ್ತದೆ. ನೀವು ರಾತ್ರಿ ಪ್ರಶಾಂತವಾದ ನಿದ್ದೆ ಮಾಡಬೇಕೆಂದಿದ್ದರೆ ಜಂಕ್ಫುಡ್ಗಳಿಂದ ದೂರವಿರಿ. ಬದಲಿಗೆ ಓಟ್ಸ್ನಂತಹ ಕಡಿಮೆ ಕ್ಯಾಲೊರಿಗಳಿರುವ ಆಹಾರಗಳನ್ನು ಸೇವಿಸಿ.

4. ರೆಡ್ಮೀಟ್
ಇದರಲ್ಲಿ ಹೆಚ್ಚಿನ ಪ್ರೊಟೀನ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳಿರುತ್ತವೆ. ಆದರೂ ಇದನ್ನು ರಾತ್ರಿ ಹೊತ್ತು ತಿನ್ನುವುದು ಒಳ್ಳೆಯದಲ್ಲ. ಇದು ನಿಮ್ಮ ಪ್ರಶಾಂತವಾದ ಗಾಢವಾದ ನಿದ್ದೆಯನ್ನು ಕದಡುತ್ತದೆ. ನಿಮಗೆ ಗಾಢನಿದ್ದೆ ಸಾಧ್ಯವಾಗಬೇಕಾದರೆ ಇಡೀ ದೇಹ ವಿಶ್ರಾಂಶತ ಸ್ಥಿತಿಯಲ್ಲಿರಬೇಕು. ಆದರೆ ನೀವು ಮಲಗುವ ಮೊದಲು ಮಾಂಸಾಹಾರ ತಿಂದಿದ್ದಲ್ಲಿ ಇದು ಸಾಧ್ಯವಾಗುವುದಿಲ್ಲ.

5. ಚಾಕೊಲೇಟ್
ಡಾರ್ಕ್ ಚಾಕೊಲೇಟ್ಗಳು ನಿಮ್ಮ ಮೆದುಳಿಗೆ ಮತ್ತು ಜ್ಞಾಪಕಶಕ್ತಿಗೆ ಬಹಳ ಒಳ್ಳೆಯದು. ಆದರೆ ಇದನ್ನು ರಾತ್ರಿ ಹೊತ್ತು ತಿನ್ನಬಾರದು. ಏಕೆಂದರೆ ರಾತ್ರಿ ಹೊತ್ತಲ್ಲಿ ದೇಹ ವಿಶ್ರಾಂೆತ ಸ್ಥಿತಿಯಲ್ಲಿರುವುದರಿಂದ ಆ ಸಮಯದಲ್ಲಿ ದೇಹದೊಳ ಸೇರಿದ ಕ್ಯಾಲೊರಿಗಳೆಲ್ಲ ಕೊಬ್ಬಾಗಿ ಪರಿವರ್ತಿತವಾಗುತ್ತದೆ. ಒಂದು ಸಣ್ಣ ತುಂಡು ಚಾಕೊಲೇಟ್ ನಿಮ್ಮ ಊಟಕ್ಕೆ ಡೆಸರ್ಟಾಗಿ ಸುಂದರ ಅಂತ್ಯವನ್ನು ನೀಡುತ್ತದೆ. ಆದರೆ ಹಲವು ಮಂದಿ ಒಂದು ಸಣ್ಣತುಂಡಿಗೆ ಅದನ್ನು ಸೀಮಿತಗೊಳಿಸುವುದಿಲ್ಲ ಅದೇ ಸಮಸ್ಯೆ.
ನೀವು ರಾತ್ರಿ ಹೊತ್ತು ಚಾಕೊಲೇಟ್ ತಿನ್ನಬಾರದು ಎನ್ನುವುದಕ್ಕೆ ಮುಖ್ಯಕಾರಣವೆಂದರೆ ಅದರಲ್ಲಿ ಕೆಫೀನ್ ಅಂಶ ಹೆಚ್ಚಿರುತ್ತದೆ ಇದು ಹೃದಯದ ಕೆಲಸವನ್ನು ಪ್ರಚೋದಿಸುತ್ತದೆ ಇದರ ಪರಿಣಾಮವಾಗಿ ಮೆದುಳು ಹೆಚ್ಚು ಏಕಾಗ್ರತೆಯಿಂದ ಕಾರ್ಯನಿರ್ವಹಿಸಲು ಆರಂಭಿಸುತ್ತದೆ. ರಾತ್ರಿಯ ವಿಶ್ರಾಂತಿ ಇದರಿಂದ ಹಾಳಾಗುತ್ತದೆ.

6. ತರಕಾರಿಗಳು
ತರಕಾರಿಗಳು ಪೌಷ್ಟಿಕಾಂಶಭರಿತವಾದ ಉತ್ತಮ ಡಯೆಟ್ ಆಹಾರ. ಆದರೆ ಇದನ್ನು ಕೂಡ ಮಲಗುವ ಮುಂಚೆ ತಿನ್ನದಿರುವುದೇ ಒಳ್ಳೆಯದು. ಏಕೆಂದರೆ ಈರುಳ್ಳಿ, ಕೋಸಿನಂತಹ ತರಕಾರಿಗಳಲ್ಲಿ ಫೈಬರ್ ಅಂಶ ಹೆಚ್ಚಿದ್ದು ಇವು ನಿಮ್ಮ ಹೊಟ್ಟೆಯನ್ನು ಹೆಚ್ಚು ಹೊತ್ತು ತುಂಬಿರುವಂತೆ ನೋಡಿಕೊಳ್ಳುತ್ತದೆ. ಇದು ದಿನದಲ್ಲಿ ಒಳ್ಳೆಯದು ಆದರೆ ರಾತ್ರಿ ವೇಳೆ ಫೈಬರ್ನಿಂದಾಗಿ ಜೀರ್ಣಕ್ರಿಯೆ ತಡವಾಗುತ್ತದೆ. ಮತ್ತೊಂದು ನೆನಪಿಡಬೇಕಾದ ಅಂಶವೆಂದರೆ ಇದು ವಾಯು ಹೆಚ್ಚಿರುವ ತರಕಾರಿಗಳು.

7. ಆಲ್ಕೋಹಾಲ್
ಆಲ್ಕೊಹಾಲ್ ನಿಶ್ಯಬ್ಧ ಕೊಲೆಗಾರ. ರಾತ್ರಿ ವೇಳೆ ಮದ್ಯಸೇವನೆಯಿಂದಾಗಿ ಬೆವರು ಹೆಚ್ಚಾಗಿ ನೀವು ಮತ್ತೆ ಮತ್ತೆ ಎಚ್ಚರಗೊಳ್ಳುವಿರಿ. ಮದ್ಯಪಾನದಿಂದ ಅದರಲ್ಲೂ ವೈನ್ ಸೇವನೆಯಿಂದ ನಿಮ್ಮ ನಿದ್ದೆ ಕಡಿಮೆಯಾಗುತ್ತದೆ ಮತ್ತು ಇದರಲ್ಲಿ ಹೆಚ್ಚು ಕ್ಯಾಲೊರಿಗಳಿರುತ್ತದೆ.

8. ಚೀಸ್ಬರ್ಗರ್ಸ್
ಚೀಸ್ಬರ್ಗರ್ ಕೂಡ ಹೆಚ್ಚು ಕ್ಯಾಲೊರಿಗಳಿಂದ ಕೂಡಿದ ಆಹಾರವಾದ್ದರಿಂದ ಇದನ್ನು ಸೇವಿಸದಿರುವುದು ಒಳ್ಳೆಯದು. ಏಕೆಂದರೆ ಇದು ಹೊಟ್ಟೆಯಲ್ಲಿ ಆಮ್ಲ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಇದರಿಂದಾಗಿ ಎದೆಯುರಿಯುಂಟಾಗುತ್ತದೆ.

9. ಚಿಲ್ಲಿ ಸಾಸ್

ಮೆಣಸಿನಕಾಯಿ ಹಲವು ಬೇರೆ ಬೇರೆ ಪದಾರ್ಥಗಳೊಂದಿಗೆ ಬೆರೆಸಿದಾಗ ನಿಜಕ್ಕೂ ಲಾಭದಾಯಕ. ಆದರೆ ಬರಿ ಚಿಲ್ಲಿ ಸಾಸ್ ತಿನ್ನುವುದು ಒಳ್ಳೆಯದಲ್ಲ. ಇದು ಹೆಚ್ಚು ಕ್ಯಾಲೊರಿಯುಕ್ತವಾಗಿದ್ದು ಪ್ರೊಟೀನ್ ಮತ್ತು ನಿಧಾನವಾಗಿ ಕರಗುವ ಕಾರ್ಬೊಹೈಡ್ರೈಟ್ಗಳನ್ನು ಹೊಂದಿರುತ್ತದೆ.10. ಕುರುಕುತಿಂಡಿಗಳು ಮತ್ತು ಚಿಪ್ಸ್
ಸಂಸ್ಕರಿಸಿದ ಸ್ನಾಕ್ ಅಥವ ಕುರುಕು ತಿಂಡಿಗಳನ್ನು ತಿನ್ನಬೇಡಿ. ಇವುಗಳಲ್ಲಿ ಮೊನೊಸೋಡಿಯಂ ಗ್ಲುಟಮೇಟ್ ಹೆಚ್ಚಿರುತ್ತದೆ ಮತ್ತು ಇದರಿಂದ ಹಲವು ರೀತಿಯಲ್ಲಿ ನಿದ್ರೆಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

English summary

10 High Calorie Foods You Should Never Eat Before Going To Bed

We all know that going to bed on a full stomach is a big no. After a hard day at work or school, our body needs a break from performing the functions it performs on a daily basis, and your digestive system should be no exception to this.
Story first published: Thursday, November 14, 2013, 16:15 [IST]
X
Desktop Bottom Promotion