For Quick Alerts
ALLOW NOTIFICATIONS  
For Daily Alerts

ನಿದ್ರಾಹೀನತೆ ಸಮಸ್ಯೆಯೇ? ಈ ಆಹಾರಗಳನ್ನು ದೂರವಿಡಿ

|

ಮಲಗಿದ ತಕ್ಷಣ ನಿದ್ರೆ ಮಾಡುತ್ತಾರಲ್ಲಾ ಅವರೇ ಭಾಗ್ಯವಂತರು! ಏಕೆಂದರೆ ಮಲಗಿ ನಿದ್ರೆ ಬರದೆ ತುಂಬಾ ಹೊತ್ತಿನವರೆಗೆ ಒದ್ದಾಡುತ್ತಿದ್ದರೆ ಒಂಥರಾ ಮಾನಸಿಕ ಹಿಂಸೆ ಆಗುತ್ತದೆ. ಕೆಟ್ಟ ಯೋಚನೆಗಳು, ಕೆಟ್ಟ ನೆನಪುಗಳೇ ತಲೆಯಲ್ಲಿ ಸುಳಿಯುತ್ತವೆ. ರಾತ್ರಿಯಿಡೀ ಒದ್ದಾಡುತ್ತಾ ಬೆಳಗ್ಗೆ ಎದ್ದಾಗ ಮಂಕಾಗಿ ಇರುತ್ತೇವೆ.

ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿರಬೇಕೆಂದರೆ ದಿನದಲ್ಲಿ 6-8 ಗಂಟೆ ನಿದ್ದೆ ಅವಶ್ಯಕ. ಕಾಯಿಲೆ, ಮಾನಸಿಕ ಒತ್ತಡವಿದ್ದರೆ ನಿದ್ದೆ ಸರಿಯಾಗಿ ಬರುವುದಿಲ್ಲ. ನಿದ್ದೆ ಬರದಿದ್ದಾಗ ನಿದ್ದೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ದೈಹಿಕ ವ್ಯಾಯಾಮ ಮಾಡಿ, ಪಾದಗಳಿಗೆ ಸುವಾಸನೆ ಇರುವ ಎಣ್ಣೆಯಿಂದ ಮಸಾಜ್ ಮಾಡಿದರೆ ನಿದ್ದೆ ಬರುವುದು.

ರಾತ್ರಿಯಲ್ಲಿ ಸುಖ ನಿದ್ದೆ ಬೇಕೆಂದರೆ ಈ ಕೆಳಗಿನ ಆಹಾರಗಳನ್ನು ದೂರವಿಡುವುದು ಒಳ್ಳೆಯದು:

 ಕೆಫೀನ್ ವಸ್ತುಗಳು

ಕೆಫೀನ್ ವಸ್ತುಗಳು

ಕೆಫೀನ್ ಇರುವ ವಸ್ತುಗಳಾದ ಚಾಕಲೇಟ್, ಕಾಫಿ, ಟೀ, ಎನರ್ಜಿ ಡ್ರಿಂಕ್ಸ್ ಇವುಗಳನ್ನು ಅತೀಯಾಗಿ ಕುಡಿದರೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಕೆಲವರಿಗೆ ಮಲಗುವ ಹೊತ್ತಿಗೆ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸವಿರುತ್ತದೆ. ಅದು ಕೂಡ ಒಳ್ಳೆಯದಲ್ಲ.

ಮದ್ಯ

ಮದ್ಯ

ಮದ್ಯ ದೇಹದಲ್ಲಿರುವ ನೀರಿನಂಶವನ್ನು ಕಡಿಮೆ ಮಾಡುತ್ತದೆ. ಇದು ದೇಹಲ್ಲಿರುವ ಸೆರೊಟೊನಿನ್(serotonin) ಪ್ರಮಾಣ ಕಡಿಮೆ ನಿದ್ರಾಹೀನತೆ ಉಂಟಾಗುವಂತೆ ಮಾಡುತ್ತದೆ.

ಅಧಿಕ ಪ್ರೊಟೀನ್

ಅಧಿಕ ಪ್ರೊಟೀನ್

ಪ್ರೊಟೀನ್ ಆಹಾರ ಒಳ್ಳೆಯದೆಂದು ತುಂಬಾ ಪ್ರೊಟೀನ್ ತಿನ್ನುವುದು ಕೂಡ ಒಳ್ಖೆಯದಲ್ಲ. ಇದು ಕೂಡ ಸೆರೊಟೊನಿನ್ ಉತ್ಪತ್ತಿಯನ್ನು ಕಡಿಮೆ ಮಾಡಿ ರಾತ್ರಿ ಇಡೀ ನೀವು ಎಚ್ಚರದಿಂದ ಇರುವಂತೆ ಮಾಡುತ್ತವೆ.

ಗ್ಯಾಸ್ ಉತ್ಪತ್ತಿ

ಗ್ಯಾಸ್ ಉತ್ಪತ್ತಿ

ಗ್ಯಾಸ್ ಉತ್ಪತ್ತಿ ಮಾಡುವಂತಹ ಆಹಾರಗಳಾದ ಬೀನ್ಸ್, ಬಟಾಣಿ, ಕಡಲೆ, ಬ್ರೊಕೋಲಿ ಈ ರೀತಿಯ ಆಹಾರಗಳನ್ನು ನಿದ್ರಾಹೀನತೆ ಸಮಸ್ಯೆ ಇರುವವರು ತಿನ್ನಬಾರದು. ತುಂಬಾ ಖಾರದ ಪದಾರ್ಥಗಳು ಕೂಡ ಒಳ್ಳೆಯದಲ್ಲ.

ಅಧಿಕ ಸಿಹಿಯ ಪದಾರ್ಥಗಳು

ಅಧಿಕ ಸಿಹಿಯ ಪದಾರ್ಥಗಳು

ಅಧಿಕ ಸಕ್ಕರೆಯಂಶವಿರುವ ಆಹಾರಗಳನ್ನು ರಾತ್ರಿ ಹೊತ್ತಿನಲ್ಲಿ ತಿಂದರೆ ನಿದ್ದೆಗೆ ಭಂಗ ಉಂಟಾಗುವುದು.

 ಅಧಿಕ ಹಾಲಿನ ಉತ್ಪನ್ನಗಳು

ಅಧಿಕ ಹಾಲಿನ ಉತ್ಪನ್ನಗಳು

ಮಲಗುವ ಹೊತ್ತಿಗೆ ಹಾಲಿನ ಉತ್ಪನ್ನಗಳನ್ನು ತಿನ್ನಬೇಡಿ, ತಿಂದರೂ ತುಂಬಾ ಮಿತಿವಾಗಿ ತಿನ್ನಬೇಕು. ಇಲ್ಲದಿದ್ದರೆ ಜಿರ್ಣಕ್ರಿಯೆಗೆ ಕಷ್ಟವಾಗುವುದು, ನಿದ್ದೆ ಕೂಡ ಸರಿಯಾಗಿ ಬರುವುದಿಲ್ಲ.

 ಫಾಸ್ಟ್ ಫುಡ್

ಫಾಸ್ಟ್ ಫುಡ್

ಹೆಚ್ಚಿನವರಿಗೆ ರಾತ್ರಿಯಲ್ಲಿ ಫಾಸ್ಟ್ ಫುಡ್ ತಿಂದು ಮಲಗುವ ಅಭ್ಯಾಸ ಇರುತ್ತದೆ. ಇದರಲ್ಲಿ ಕೊಬ್ಬಿನಂಶಗಳು ಅಧಿಕವಿರುವುದರಿಂದ ಇವುಗಳನ್ನು ತಿಂದು ಮಲಗಿದರೆ ಬೇಗನೆ ನಿದ್ದೆ ಬರುವುದಿಲ್ಲ. ಇದನ್ನು ಪ್ರತಿದಿನ ತಿನ್ನುವ ಅಭ್ಯಾಸ ಬೆಳೆಸಿಕೊಂಡರೆ ನಿದ್ರಾಹೀನತೆ ಕಂಡು ಬರುತ್ತದೆ.

 ನಿಕೋಟಿನ್

ನಿಕೋಟಿನ್

ನಿಕೋಟಿನ್ ನಮ್ಮ ದೇಹದಲ್ಲಿ ಸಂಗ್ರಹವಾಗುತ್ತಾ ಹೋದಂತೆ ನಿದ್ರಾಹೀನತೆ ಸಮಸ್ಯೆ ಕಂಡು ಬರುವುದು.

ಪ್ಯಾಕ್ ಮಾಡಿದ ಆಹಾರಗಳು

ಪ್ಯಾಕ್ ಮಾಡಿದ ಆಹಾರಗಳು

ಈಗೆಲ್ಲಾ ರೆಡಿಮೇಡ್ ಆಹಾರಗಳನ್ನು ಹೆಚ್ಚಾಗಿ ಬಳಸುತ್ತೇವೆ. ಪ್ಲಾಸ್ಟಿಕ್ ನಲ್ಲಿರುವ ಅಂತಹ ಆಹಾರಗಳು ಆರೋಗ್ಯಕ್ಕೆ ಒಳ್ಖೆಯದಲ್ಲ.

 ತುಂಬಾ ನೀರು ಕುಡಿಯುವುದು

ತುಂಬಾ ನೀರು ಕುಡಿಯುವುದು

ತುಂಬಾ ನೀರು ಕುಡಿಯುವ ಅಭ್ಯಾಸ ಕೂಡ ಒಳ್ಳೆಯದಲ್ಲ. ಅಧಿಕ ನೀರಿನಂಶ ದೇಹದಲ್ಲಿದ್ದರೆ ಆಗಾಗ ಮೂತ್ರವಿಸರ್ಜನೆಗೆ ಹೋಗಬೇಕಾಗುತ್ತದೆ. ಇದರಿಂದ ಕೂಡ ನಿದ್ದೆಗೆ ಭಂಗ ಉಂಟಾಗುವುದು.ಅಲ್ಲದೆ ತುಂಬಾ ನೀರು ಕುಡಿಯುವುದು ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದಲ್ಲ.

English summary

10 Foods That Triggers Insomnia | Tips For Health | ನಿದ್ರಾಹೀನತೆಗೆ ತರುವ 10 ಆಹಾರಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Here are some foods that is said to be the major cause to trigger insomnia. Find out what are you allergic to and avoid it so that you will have a good night sleep and not end up being a victim of insomnia.
Story first published: Wednesday, February 6, 2013, 10:30 [IST]
X
Desktop Bottom Promotion