For Quick Alerts
ALLOW NOTIFICATIONS  
For Daily Alerts

ಈ ಹೂಗಳನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು

|

ಪೋಷಕಾಂಶದ ಕೊರತೆ ಉಂಟಾದರೆ ಹಣ್ಣು, ತರಕಾರಿಗಳಲ್ಲಿ ಯಾವ ಆಹಾರ ತಿಂದರೆ ಒಳ್ಳೆಯದು ಎಂಬ ಅಂಶದ ಕಡೆ ಗಮನ ಕೊಡುತ್ತೇವೆ ಹೊರತು ಹೂಗಳ ಕಡೆ ಗಮನಕೊಡುವುದಿಲ್ಲ. ಹಣ್ಣು, ಬೀಜಗಳಲ್ಲಿ ಮಾತ್ರವಲ್ಲ ಕೆಲವೊಂದು ಹೂಗಳಲ್ಲೂ ಔಷಧೀಯ ಗುಣಗಳಿರುತ್ತವೆ. ಅವುಗಳಲ್ಲಿ ಪೋಷಕಾಂಶಗಳು ಅಧಿಕವಿದ್ದು ಆರೋಗ್ಯವನ್ನು ವೃದ್ಧಿಸುತ್ತದೆ.

ಮನೆಯಲ್ಲಿ ದಾಸವಾಳ ಗಿಡವಿದ್ದರೆ ಅದು ಹೂ ಬಿಟ್ಟಾಗ ಆ ಹೂ ಸುಮ್ಮೆನೆ ಬಾಡಿ ಹೋಗಲು ಬಿಡಬೇಡಿ. ಅದರಿಂದ ಜ್ಯೂಸ್ ಮಾಡಿ ಕುಡಿಯಿರಿ. ಇದರನ್ನು ಕುಡಿಯುವುದರಿಂದ ಪೋಷಕಾಂಶಗಳ ತೊಂದರೆ ಬರದಂತೆ ತಡೆಯಬಹದು. ಬಿಳಿ ದಾಸವಾಳದ ಹೂ ಸ್ತ್ರೀಯರಿಗೆ ಬಿಳುಪು ಹೋಗುವುದನ್ನು ತಡೆಯುತ್ತದೆ. ಗುಲಾಬಿ ಹೂವಿನ ದಳವನ್ನು ತಿಂದರೆ ತ್ವಚೆ ಆರೋಗ್ಯಕ್ಕೆ ಒಳ್ಳೆಯದು.

ಔಷಧೀಯ ಗುಣವಿರುವ, ಅಧಿಕ ಪೋಷಕಾಂಶಗಳನ್ನು ಹೊಂದಿರುವ ಅನೇಕ ಹೂಗಳಿವೆ. ಆ ಹೂಗಳು ಯಾವುವು, ಅವುಗಳನ್ನು ತಿಂದರೆ ಏನು ಪ್ರಯೋಜನ ಎಂದು ನೋಡೋಣ ಬನ್ನಿ.

ದಾಸವಾಳದ ಹೂ

ದಾಸವಾಳದ ಹೂ

ದಾಸವಾಳದ ಹೂ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ ಮತ್ತು ಅತ್ಯಧಿಕ ಖನಿಜಾಂಶಗಳಿರುವುದರಿಂದ ಆರೋಗ್ಯವನ್ನು ವೃದ್ಧಿಸುತ್ತದೆ.

ಸ್ಕ್ವ್ಯಾಷ್ ಹೂವು

ಸ್ಕ್ವ್ಯಾಷ್ ಹೂವು

ಇದರಿಂದ ಸೂಪ್ ಮಾಡಿ ಕುಡಿಯಬಹುದು. ಇದರಲ್ಲಿ ವಿಟಮಿನ್ ಸಿ ಮತ್ತು ಪೊಟಾಷ್ಯಿಯಂ ಇದೆ. ದೇಹವು ತನ್ನ ಕಾರ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಪೊಟಾಷ್ಯಿಯಂ ಅಗತ್ಯ.

ಮಲ್ಲಿಗೆ ಹೂ

ಮಲ್ಲಿಗೆ ಹೂ

ಇದು ಕೇವಲ ಸುಗಂಧ ವಾಸನೆ ಇರುವ ಅಲಂಕಾರಿಕ ಹೂವು ಮಾತ್ರವಲ್ಲ, ಇದು ಔಷಧೀಯ ಗುಣವನ್ನು ಕೂಡ ಹೊಂದಿದೆ. ಇದು ಔಷಧೀಯ ಗುಣವನ್ನು ಹೊಂದಿದ್ದು, ಇದರಿಂದ ಟೀ ಮಾಡಿ ಕುಡಿದರೆ ಇದರಲ್ಲಿರುವ antioxidants ಆರೋಗ್ಯವನ್ನು ವೃದ್ಧಿಸುತ್ತದೆ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ.

ಜೋಳದ ಹೂ (cornflower)

ಜೋಳದ ಹೂ (cornflower)

ಇದರಲ್ಲಿ ಪೋಷಕಾಂಶಗಳಿದ್ದು ನೈಸರ್ಗಿಕವಾದ ಕಲರ್ ಅನ್ನು ಅಡುಗೆಗೆ ನೀಡುತ್ತದೆ.

 ರೋಸ್ ಮೆರಿ

ರೋಸ್ ಮೆರಿ

ರೋಸ್ ಮೆರಿ ಹೂವಿನಲ್ಲಿ ವಿಟಮಿನ್ ಎ, ಸಿ ಮತ್ತು ಕಬ್ಬಿಣದಂಶವಿದೆ.

 ಸೂರ್ಯಕಾಂತಿ ಹೂ

ಸೂರ್ಯಕಾಂತಿ ಹೂ

ಇದರಿಂದ ಎಣ್ಣೆಯನ್ನು ಮಾಡಲಾಗುವುದು. ಈ ಹೂವಿನಿಂದ ಅಡುಗೆಯನ್ನು ಕೂಡ ಮಾಡಬಹುದು. ಇದರಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಹೇರಳವಾಗಿದೆ.

 ವೈಲಟ್ ಹೂ (violet flwer)

ವೈಲಟ್ ಹೂ (violet flwer)

ಈ ಹೂವಿನಲ್ಲಿ ಕೂಡ ವಿಟಮಿನ್ ಎ ಮತ್ತು ಸಿ ಅಧಿಕವಿದ್ದು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಕೇಸರಿ

ಕೇಸರಿ

ಹೂವಿನಲ್ಲಿರುವ ಕೇಸರಿಯಲ್ಲಿ antioxidants ಅಧಿಕವಿದ್ದು ಇದು ಅಜೀರ್ಣದಂತಹ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ತಾವರೆ

ತಾವರೆ

ತಾವರೆ ಹೂವಿನಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಇದ್ದು ಇದರಿಂದ ಪಲ್ಯ ಮಾಡಿ ತಿನ್ನಬಹುದು. ಇದರಿಂದ ಟೀ ಕೂಡ ಮಾಡಬಹುದು.

 ಗುಲಾಬಿ ಹೂ

ಗುಲಾಬಿ ಹೂ

ಈ ಹೂವಿನಿಂದ ಜ್ಯೂಸ್ ಮಾಡಿ ಕುಡಿದರೆ ಇದು ತ್ವಚೆ ಆರೋಗ್ಯವನ್ನು ಹೆಚ್ಚಿಸಿ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

English summary

10 Edible Flowers That Are Nutritious | Tips For The Health | ಪೋಷಕಾಂಶವಿರುವ ಹೂಗಳು | ಆರೋಗ್ಯಕ್ಕೆ ಕೆಲ ಸಲಹೆಗಳು

Flowers as we all know is beautiful to look at but at the same time it would be interesting to know that flowers are not just for eyes and nose. It is also a substance that can be eaten.
X
Desktop Bottom Promotion