For Quick Alerts
ALLOW NOTIFICATIONS  
For Daily Alerts

ಎಲೆಕೋಸಿನ ಅತ್ಯುತ್ತಮ 10 ಪ್ರಯೋಜನಗಳು

By Super
|

ಎಲೆ ಕೋಸು ಇದ್ದರೆ ಏನು ಮಾಡಬಹುದು. ಒಂದು ಪಲ್ಯ, ಒಂದು ಉಪ್ಪು ಸಾರು ಅಷ್ಟೇ ತಾನೇ ಎಂಬ ಯೋಚನೆ ಹಲವರಿಗೆ. ಇನ್ನು ಕೆಲವರು ಇದನ್ನು ಸೇವಿಸುವುದರಿಂದ ಉಷ್ಣ ಹಾಗೆ ಹೀಗೆ! ಎಂಬ ಅಪವಾದಗಳನ್ನು ಇದರ ಮೇಲೆ ಹೊರಿಸುತ್ತಾರೆ. ಅವೆಲ್ಲ ಇರಲಿ ಮೊದಲು ಎಲೆ ಕೋಸಿನ ಬಗ್ಗೆ ಎಳೆ ಎಳೆಯಾಗಿ ತಿಳಿದುಕೊಳ್ಳೋಣಾ.

ಎಲೆಕೋಸು ಎಂಬುದು ಬ್ರಸ್ಸಿಕ ಕುಟುಂಬದ ಒಂದು ತರಕಾರಿ. ಈ ಕುಟುಂಬದಲ್ಲಿ ಬ್ರೊಕೊಲಿ, ಹೂಕೋಸು ಮತ್ತು ಬ್ರುಸ್ಸೆಲ್ ಮೊಳಕೆಗಳು ಸೇರಿವೆ. ಹೆಸರಿಗೆ ತಕ್ಕಂತೆ ಎಲೆಗಳ ಪದರಗಳಿಂದಲೆ ಆವೃತವಾಗಿರುವ ಈ ಎಲೆಕೋಸು ಮೂಲತಃ ಪೂರ್ವ ಮೆಡಿಟರೇನಿಯನ್ ಮತ್ತು ಏಶಿಯಾ ಮೈನರ್ ಪ್ರಾಂತ್ಯದ ತರಕಾರಿಯಾಗಿದೆ. ಈ ಆರೋಗ್ಯಕಾರಿ ತರಕಾರಿಯು ವರ್ಷದ ಎಲ್ಲಾಭಾಗದಲ್ಲೂ ದೊರೆಯುತ್ತದೆ.

ಹೂಕೋಸಿನಲ್ಲಿ ಹಲವಾರು ವಿಧ ಅದರಲ್ಲಿ ಕೆಂಪು ಮತ್ತು ಹಸಿರು ಬಣ್ಣದ ಹೂಕೋಸುಗಳಲ್ಲಿ ಯಾವುದಾದರೊಂದನ್ನು ಆರಿಸಿಕೊಳ್ಳಿ. ಇವುಗಳನ್ನು ಆಹಾರದಲ್ಲಿ ಆಗಲಿ ಅಥವಾ ಹಾಗೆಯೇ ಕಚ್ಛಾ ತರಕಾರಿಯಾಗಿ ಸಹ ಸೇವಿಸಬಹುದು. ಇದರಲ್ಲಿರುವ ಸಮೃದ್ಧ ವಿಟಮಿನ್‍ಗಳು, ಕಬ್ಬಿಣ ಮತ್ತು ಪೊಟಾಷ್ಯಿಯಂ ಹಾಗು ಕಡಿಮೆ ಕ್ಯಾಲೋರಿಯು ಈ ಕೆಳಗಿನ ಆರೋಗ್ಯಕರ ಗುಣಗಳನ್ನು ಹೊಂದಿದೆ:

ಕ್ಯಾನ್ಸರ್ ನಿಯಂತ್ರಿಸಲು ಸಹಕಾರಿ

ಕ್ಯಾನ್ಸರ್ ನಿಯಂತ್ರಿಸಲು ಸಹಕಾರಿ

ಇದರಲ್ಲಿ ಕ್ಯಾನ್ಸರನ್ನು ತಡೆಯುವ ಹಲವಾರು ಪೋಷಕಾಂಶಗಳು ಇವೆ. ಮುಖ್ಯಾವಾಗಿ ಡಿಂಡೊಲಿಮೀಥೆನ್ ( ಡಿಐಎಮ್), ಸಿನಿಗ್ರಿನ್, ಲುಪಿಯಲ್, ಸಲ್ಫರಫೇನ್ ಮತ್ತು ಇಂಡೋಲ್ -3 ಕಾರ್ಬಿನೊಲ್ (13C) ಹೂಕೋಸಿನಲ್ಲಿ ಹೆಚ್ಚಾಗಿ ಇದೆ. ಅದರಲ್ಲಿಯು ಕ್ಯಾನ್ಸರನ್ನು ಬರದಂತೆ ತಡೆಯುವಲ್ಲಿ ಸಲ್ಫರಫೇನ್ ಮತ್ತು 13C ಅಂಶಗಳು ಕ್ಯಾನ್ಸರ್ ಬರದಂತೆ ತಡೆಯುತ್ತವೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಇದರಲ್ಲಿರುವ ಸಮೃದ್ಧ ವಿಟಮಿನ್ ಸಿಯು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಫ್ರೀ ರಾಡಿಕಲ್ ಗಳನ್ನು ಸಹ ಇದು ಹದ್ದು ಬಸ್ತಿನಲ್ಲಿಟ್ಟಿರುತ್ತದೆ.

ಉರಿಯೂತದಿಂದ ನಿವಾರಣೆ ಒದಗಿಸುವ ಸಾಧನ

ಉರಿಯೂತದಿಂದ ನಿವಾರಣೆ ಒದಗಿಸುವ ಸಾಧನ

ಇದರಲ್ಲಿರುವ ಸಮೃದ್ಧ ಅಮೈನೊ ಆಮ್ಲಗಳು ಉರಿಯೂತದ ಮೇಲೆ ಪ್ರಭಾವ ಬೀರಿ ಇಲ್ಲವಾಗಿಸುತ್ತವೆ.

ಕಣ್ಣಿನ ಪೊರೆಯನ್ನು ನಿವಾರಿಸುತ್ತದೆ

ಕಣ್ಣಿನ ಪೊರೆಯನ್ನು ನಿವಾರಿಸುತ್ತದೆ

ಎಲೆಕೋಸಿನಲ್ಲಿರುವ ಬೀಟಾ ಕೆರೊಟಿನ್ ಕಣ್ಣಿನ ರಕ್ಷಣೆಯಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಇದು ಮ್ಯಾಕುಲರ್ ಡಿಜನರೇಷನ್ ಉಂಟಾಗದಂತೆ ಕಾಪಾಡುತ್ತದೆ. ಆಗಾಗಿ ಕಣ್ಣಿನ ಪೊರೆ ಉಂಟಾಗುವುದಿಲ್ಲ.

ಭವಿಷ್ಯದಲ್ಲಿ ಅಲ್ಞೈಮರ್ಸ್ ರೋಗ ಬರದಂತೆ ತಡೆಯುತ್ತದೆ

ಭವಿಷ್ಯದಲ್ಲಿ ಅಲ್ಞೈಮರ್ಸ್ ರೋಗ ಬರದಂತೆ ತಡೆಯುತ್ತದೆ

ಇತ್ತೀಚಿನ ಅಧ್ಯಯನಗಳ ಪ್ರಕಾರ ಎಲೆಕೋಸು, ಅದರಲ್ಲಿಯೂ ಕೆಂಪು ಬಣ್ಣದ ಎಲೆಕೋಸನ್ನು ಸೇವಿಸುವುದರಿಂದ ಭವಿಷ್ಯದಲ್ಲಿ ಅಲ್ಜೀಮರ್ ರೋಗ ಬರದಂತೆ ತಡೆಯಬಹುದು. ಇದಕ್ಕೆ ಇದರಲ್ಲಿರುವ ವಿಟಮಿನ್ ಕೆ ಜೀವಸತ್ವವೇ ಕಾರಣ.

ಹೊಟ್ಟೆಯಲ್ಲಿನ ಅಲ್ಸರ್ ಸಮಸ್ಯೆಗೆ ಸೂಕ್ತ ಪರಿಹಾರ

ಹೊಟ್ಟೆಯಲ್ಲಿನ ಅಲ್ಸರ್ ಸಮಸ್ಯೆಗೆ ಸೂಕ್ತ ಪರಿಹಾರ

ಹೊಟ್ಟೆಯಲ್ಲಿ ಉಂಟಾದ ಅಲ್ಸರಿಗೆ ಎಲೆಕೋಸು ಅತ್ಯುತ್ತಮವಾದ ಪರಿಹಾರವಾಗಿದೆ. ಇದರ ರಸದಲ್ಲಿ ಅಲ್ಸರ್ ನಿರೋಧಕ ಅಂಶಗಳು ಇವೆ. ಇದಕ್ಕೆ ಕಾರಣ ಇದರಲ್ಲಿ ಹೆಚ್ಚಾಗಿರುವ ಗ್ಲುಟಮಿನ್ ಎಂಬ ಅಂಶವೇ ಕಾರಣ.

ತೂಕ ಇಳಿಸುವಲ್ಲಿ ನೆರವಾಗುತ್ತದೆ

ತೂಕ ಇಳಿಸುವಲ್ಲಿ ನೆರವಾಗುತ್ತದೆ

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಹೇಳಿ ಮಾಡಿಸಿದ ಆಹಾರವಾಗಿದೆ. ಇಡೀ ಒಂದು ಕಪ್ ಎಲೆಕೋಸಿನಲ್ಲಿ ಕೇವಲ 33 ಕ್ಯಾಲೋರಿ ಮಾತ್ರವಿರುತ್ತದೆ. ಹಾಗಾಗಿ ಎಲಕೋಸನ್ನು ಸೇವಿಸುವುದರಿಂದ ಯಾವುದೇ ರೀತಿಯಲ್ಲೂ ನೀವು ದಪ್ಪಗಾಗುವ ತೊಂದರೆ ಇರುವುದಿಲ್ಲ.

ಮಲಬದ್ಧತೆಯಿಂದ ಪರಿಹಾರವನ್ನೊದಗಿಸುತ್ತದೆ

ಮಲಬದ್ಧತೆಯಿಂದ ಪರಿಹಾರವನ್ನೊದಗಿಸುತ್ತದೆ

ಇದರಲ್ಲಿ ಯಥೇಚ್ಛವಾಗಿರುವ ನಾರಿನಂಶಗಳು ನಮ್ಮ ಜೀರ್ಣಶಕ್ತಿಯನ್ನು ಉದ್ಧೀಪನಗೊಳಿಸುತ್ತವೆ. ಹಾಗಾಗಿ ಮಲಬದ್ಧತೆಯು ನಮ್ಮನ್ನು ಭಾದಿಸುವುದಿಲ್ಲ.

ತ್ವಚೆಯ ಅತ್ಯುತ್ತಮ ರಕ್ಷಕ

ತ್ವಚೆಯ ಅತ್ಯುತ್ತಮ ರಕ್ಷಕ

ಎಲೆಕೋಸಿನಲ್ಲಿ ಯಥೇಚ್ಛವಾಗಿರುವ ಆಂಟಿ ಆಕ್ಸಿಡೆಂಟ್‍ಗಳು ತ್ವಚೆಯನ್ನು ಫ್ರೀರಾಡಿಕಲ್ಸ್ ಗಳಿಂದ ರಕ್ಷಿಸುತ್ತವೆ. ಇವುಗಳು ನಮ್ಮ ತ್ವಚೆಯು ವಯಸ್ಸಾದಂತೆ ಕಾಣುವುದನ್ನು ತಡೆಯುತ್ತವೆ.

ಸ್ನಾಯುಗಳ ಹುಣ್ಣಿನಿಂದ ಪರಿಹಾರವನ್ನೊದಗಿಸುತ್ತದೆ

ಸ್ನಾಯುಗಳ ಹುಣ್ಣಿನಿಂದ ಪರಿಹಾರವನ್ನೊದಗಿಸುತ್ತದೆ

ಎಲೆಕೋಸಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಸ್ನಾಯುಗಳಲ್ಲಿ ಉಂಟಾಗಿರುವ ಹುಣ್ಣಿನಿಂದ ನಿಮಗೆ ಬಿಡುಗಡೆಯನ್ನೊದಗಿಸುತ್ತದೆ.

English summary

10 Best Benefits Of Cabbages

Several varieties of cabbage are available to choose from such as red and green cabbages. Being rich in vitamins, iron and potassium and low in calories, they are widely used in both eastern and western cuisines.
X
Desktop Bottom Promotion