For Quick Alerts
ALLOW NOTIFICATIONS  
For Daily Alerts

ಹಾಗಲಕಾಯಿಯ 10 ಚಮತ್ಕಾರಿಕ ಗುಣಗಳು

By Super
|

ಹಾಗಲಕಾಯಿ ಈ ತರಕಾರಿಯನ್ನೊಮ್ಮೆ ನೋಡುವಾಗ, ಅದರ ಕಡುಕಹಿಯು (bitter) ಮನಃಪಟದಲ್ಲಿ ಮೊಟ್ಟಮೊದಲು ಹಾದುಹೋಗುತ್ತದೆ. ಅವು ಬೆಳೆಯುವ ಪ್ರದೇಶಕ್ಕನುಗುಣವಾಗಿ ಅವು ಕಡು ಬಣ್ಣದ್ದಾಗಿರುತ್ತವೆ ಇಲ್ಲವೇ ತಿಳಿ ಹಸಿರು ಬಣ್ಣದ್ದವಾಗಿರುತ್ತವೆ. ರುಚಿಯಲ್ಲಿ ಅವು ಕಡುಕಹಿಯಾಗಿದ್ದರೂ ಕೂಡ, ಅವು ಅನೇಕ ಪ್ರಯೋಜನಕಾರೀ antioxidants ಮತ್ತು ಅವಶ್ಯಕ ವಿಟಮಿನ್ ಗಳಿಂದ ಸಮೃದ್ಧವಾಗಿವೆ.ಹಾಗಲಕಾಯಿಯನ್ನು ಅದರ ಜ್ಯೂಸ್, ಉಪ್ಪಿನಕಾಯಿ, ಅಥವಾ ಅದನ್ನು ಅಡುಗೆಯಲ್ಲಿ ತರಕಾರಿಯ ರೂಪದಲ್ಲಿ ಉಪಯೋಗಿಸುವುದರ ಮೂಲಕ ಸೇವಿಸಬಹುದು.ಹಾಗಲಕಾಯಿಯ

ಪೌಷ್ಟಿಕ ಮೌಲ್ಯ:

ಹಾಗಲಕಾಯಿಯು ವಿಟಮಿನ್ A , ವಿಟಮಿನ್ B, ಮತ್ತು ವಿಟಮಿನ್ C ಗಳ ಆಗರವಾಗಿದೆ ಮಾತ್ರವಲ್ಲದೇ ಬೀಟಾ carotene - ? - carotene, lutein, iron (ಕಬ್ಬಿಣ), zinc (ಸತು), potassium , manganese, ಮತ್ತು magnesium ನಿಂದಲೂ ಸಹ ಸಂಪನ್ನವಾಗಿದೆ. ಹಾಗಲಕಾಯಿಯ ಕೆಲವೊಂದು ಅತಿ ಜನಪ್ರಿಯವಾದ, ಆರೋಗ್ಯದಾಯಕ ಗುಣಗಳ ಕುರಿತು ಒಂದು ಕ್ಷ-ಕಿರಣವನ್ನು ಬೀರೋಣ.

1 . ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ

1 . ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ

ತಾಜಾ ಹಾಗಲಕಾಯಿಯು ಶ್ವಾಸಕೋಶ ಸಂಬಂಧಿ ಸಮಸ್ಯೆಗಳಾದ ಆಸ್ತಮಾ, ಶೀತ, ಕೆಮ್ಮು ಮುಂತಾದವುಗಳಿಗೆ ಅತ್ಯುತ್ತಮ ಪರಿಹಾರವಾಗಿದೆ.

2 . ಯಕೃತ್ ನ ಟಾನಿಕ್

2 . ಯಕೃತ್ ನ ಟಾನಿಕ್

ಯಕೃತ್ ನ ಸಮಸ್ಯೆಗಳನ್ನು ಗುಣಪಡಿಸಲು ಪ್ರತಿದಿನ ಒಂದು ಲೋಟದಷ್ಟು ಹಾಗಲಯಿಯ ಜ್ಯೂಸ್ ನ್ನು ಕುಡಿಯಿರಿ. ಫಲಿತಾಂಶವನ್ನು ಮನಗಾಣಲು ಒಂದು ವಾರದವರೆಗೆ ನಿರಂತರವಾಗಿ ಕುಡಿಯಿರಿ.

3 . ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

3 . ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಸೋಂಕುಗಳ ವಿರುದ್ಧ ಹೋರಾಡಲು, ಹಾಗಲಕಾಯಿ ಗಿಡದ ಎಲೆಗಳನ್ನು ಅಥವಾ ಹಣ್ಣುಗಳನ್ನು ನೀರಿನಲ್ಲಿ ಕುಡಿಸಿ ಪ್ರತಿದಿನ ಸೇವಿಸಿರಿ. ಇದು ನಿಮ್ಮ ರೋಗನಿರೋಧಕ ಶಕ್ತಿಯ ವರ್ಧನೆಗೆ ಸಹಕಾರಿ.

4 . ಮೊಡವೆಗಳಿಗೆ (acne)

4 . ಮೊಡವೆಗಳಿಗೆ (acne)

ಹಾಗಲಕಾಯಿಯ ಸೇವನೆಯು ಮೊಡವೆಗಳ ನಿವಾರಣೆಗೆ ಸಹಕಾರಿಯಾಗಿದೆ ಮಾತ್ರವಲ್ಲದೇ ಆಳವಾದ ಚರ್ಮದ ಸೋಂಕುಗಳಿಗೂ ಶಮನಕಾರಿಯಾಗಿದೆ. ಹಾಗಲಕಾಯಿಯ ರಸವನ್ನು ನಿಂಬೆ ಹಣ್ಣಿನ ರಸದೊಂದಿಗೆ ಬೆರೆಸಿ, ಪ್ರತಿದಿನ ಖಾಲಿ ಹೊಟ್ಟೆಗೆ 6 ತಿಂಗಳುಗಳ ಕಾಲ ಸೇವಿಸಿರಿ ಇಲ್ಲವೇ ನಿಮ್ಮ ನಿರೀಕ್ಷಿತ ಫಲಿತಾಂಶ ದೊರೆಯುವವರೆಗೆ ಸೇವನೆಯನ್ನು ಮುಂದುವರೆಸಿರಿ.

5 . ಮಧುಮೇಹ (Diabetes)

5 . ಮಧುಮೇಹ (Diabetes)

Type 2 ಮಧುಮೇಹವನ್ನು ಗುಣಪಡಿಸಲು ಹಾಗಲಕಾಯಿಯ ಜ್ಯೂಸ್ ಅತಿ ಸಾಮಾನ್ಯವಾದ, ಜನಪ್ರಿಯ ಪರಿಹಾರವಾಗಿದೆ. insulin ಗೆ ಸಮನಾದ ಕೆಲವು ರಾಸಾಯನಿಕಗಳು ಹಾಗಲಕಾಯಿಯಲ್ಲಿದ್ದು, ಅವು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತವೆ.

6 . ಮಲಬದ್ಧತೆ (Constipation)

6 . ಮಲಬದ್ಧತೆ (Constipation)

ಹಾಗಲಕಾಯಿಯ ನಾರಿನ ಗುಣಗಳು, ಪಚನಕ್ರಿಯೆಯಲ್ಲಿ ಸಹಕಾರಿಯಾಗಿವೆ. ಇದರಿಂದಾಗಿ ಆಹಾರವು ಸುಲಭವಾಗಿ ಪಚನವಾಗುತ್ತದೆ ಹಾಗೂ ತ್ಯಾಜ್ಯವು ಸುಲಲಿತವಾಗಿ ಹೊರಗೆಸೆಯಲ್ಪಡುತ್ತದೆ ಹಾಗೂ ತನ್ಮೂಲಕ ಅಜೀರ್ಣ ಹಾಗೂ ಮಲಬದ್ಧತೆಯನ್ನು ನಿವಾರಿಸುತ್ತವೆ.

7. ಮೂತ್ರಪಿಂಡ (kidney) ಮತ್ತು ಮೂತ್ರಕೋಶದ ಆರೋಗ್ಯಕ್ಕೆ

7. ಮೂತ್ರಪಿಂಡ (kidney) ಮತ್ತು ಮೂತ್ರಕೋಶದ ಆರೋಗ್ಯಕ್ಕೆ

ಮೂತ್ರಪಿoಡ ಮತ್ತು ಮೂತ್ರಕೋಶಗಳನ್ನು ಆರೋಗ್ಯಪೂರ್ಣವಾಗಿ ಕಾಪಿಟ್ಟುಕೊಳ್ಳಲು, ಹಾಗಳಕಾಯಿಯು ಸಹಕಾರಿ. kidney ಯ ಕಲ್ಲುಗಳ ನಿವಾರಣೆಯಲ್ಲಿಯೂ ಇದು ಉಪಯುಕ್ತ.

8. ಹೃದಯ ಸಂಬಂಧೀ ರೋಗಗಳಿಗೆ

8. ಹೃದಯ ಸಂಬಂಧೀ ರೋಗಗಳಿಗೆ

ಹಾಗಲಕಾಯಿಯು ಹೃದಯದ ಆರೋಗ್ಯಕ್ಕೆ ಹಲವು ವಿಧದಲ್ಲಿ ಅತ್ಯುತ್ತಮವಾಗಿದೆ. ರಕ್ತನಾಳಗಳಲ್ಲಿ ತಡೆಯನ್ನುಂಟು ಮಾಡುವ ಕೆಟ್ಟ ಕೊಲೆಸ್ಟರಾಲ್ (bad cholesterol) ನ ಪ್ರಮಾಣವನ್ನು ತಗ್ಗಿಸುತ್ತದೆ ಹಾಗೂ ಹೃದಯಾಘಾತದ ಸಾಧ್ಯತೆಯನ್ನು ಕ್ಷೀಣಗೊಳಿಸುತ್ತದೆ. ಮಾತ್ರವಲ್ಲದೇ, ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನೂ ಸಹ ತಗ್ಗಿಸುವುದರ ಮೂಲಕ ಹೃದಯವನ್ನು ಸ್ವಸ್ಥವಾಗಿರಿಸುತ್ತದೆ.

9. ಕ್ಯಾನ್ಸರ್ ಖಾಯಿಲೆಗೆ

9. ಕ್ಯಾನ್ಸರ್ ಖಾಯಿಲೆಗೆ

ಕ್ಯಾನ್ಸರ್ ಕೋಶಗಳು ದ್ವಿಗುಣಗೊಳ್ಳುವುದನ್ನು ಹಾಗಲಕಾಯಿಯು ತಡೆಗಟ್ಟಬಲ್ಲುದು.

10. ಹೆಚ್ಚಾದ ತೂಕವನ್ನು ಕಳೆದುಕೊಳ್ಳಲು

10. ಹೆಚ್ಚಾದ ತೂಕವನ್ನು ಕಳೆದುಕೊಳ್ಳಲು

ಹಾಗಲಕಾಯಿಯಲ್ಲಿರುವ antioxidant ಗಳು, ನಿಮ್ಮ ಶರೀರದ ಎಲ್ಲಾ ಕಾರ್ಯಾಂಗ ವ್ಯೂಹಗಳನ್ನು ಶುದ್ಧಗೊಳಿಸುತ್ತವೆ. ಇದರಿಂದ ನಿಮ್ಮ ಚಯಾಪಚಯ ಹಾಗೂ ಜೀರ್ಣಾಂಗವ್ಯೂಹಗಳು ಉತ್ತಮಗೊಳ್ಳುತ್ತವೆ ಹಾಗೂ ತನ್ಮೂಲಕ ನೀವು ಹೆಚ್ಚಾದ ನಿಮ್ಮ ಶರೀರದ ತೂಕವನ್ನು ಬೇಗನೆ ನಿವಾರಿಸಿಕೊಳ್ಳುವುದರಲ್ಲಿ ಸಹಕಾರಿಯಾಗಿದೆ.

English summary

10 Amazing Benefits Of Bitter Gourd

Nutritional value of Bitter Melon: Bitter Melon is high in vitamins A, B and C, flavonoids such as ß-carotene, ?-carotene, lutein, iron, zinc, potassium, manganese and magnesium. Let us quickly look at some of the most well known health benefits of Bitter Gourd.
Story first published: Wednesday, August 14, 2013, 17:26 [IST]
X
Desktop Bottom Promotion