ಪ್ರಕೃತಿಯ ನಂಟಿನಿಂದ ಹೆಚ್ಚುವ ಆರೋಗ್ಯ!

By:
Subscribe to Boldsky

ಏಕೆ ವ್ಯಾಯಾಮ ಮಾಡುವಾಗ ಪಾರ್ಕಿನಲ್ಲಿ ಮಾಡಿದರೆ ತುಂಬಾ ಒಳ್ಳೆಯದು? ಏಕೆ ನಡೆಯುವ ಅಥವಾ ಓಡುವ ವ್ಯಾಯಾಮವನ್ನು ಪಾರ್ಕಿನಲ್ಲಿ ಮಾಡಿದರೆ ಒಳ್ಳೆಯದು ಅಂತಾರೆ? ಅದೇ ಅರ್ಧ ಗಂಟೆ ನಡಿಗೆಯನ್ನು ರೋಡ್ ನಲ್ಲಿ ನಡೆದರೆ ಆಗುವುದಿಲ್ಲವೇ? ಎಂಬ ಪ್ರಶ್ನೆ ಮೂಡುತ್ತದೆ.

ವ್ಯಾಯಾಮ ಮಾಡಿದರೆ ಆರೋಗ್ಯ ಹೆಚ್ಚುತ್ತದೆ ನಿಜ ಆದರೆ ಅದೇ ವ್ಯಾಯಾಮವನ್ನು ಹಸಿರು ವನಗಳ ನಡುವೆ ಅಥವಾ ಪಾರ್ಕಿನಲ್ಲಿ ಮಾಡಿದರೆ ಉತ್ತಮವಾದ ಪ್ರಯೋಜನ ಕಾಣಬಹುದು. ಹೇಗೆ ಎಂದು ತಿಳಿಯಲು ಮುಂದೆ ಓದಿ:

ಕಣ್ಣಿನ ದೃಷ್ಟಿಗೆ ಒಳ್ಳೆಯದು: ಹುಲ್ಲಿನ ಮೇಲೆ ಬರೀಗಾಲಿನಲ್ಲಿ ನಡೆದರೆ ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ. ಶೂ ಧರಿಸಬಾರದು. ಬರಿಗಾಲಿನಲ್ಲಿ ನಡೆದರೆ ಒತ್ತಡ ಕಡಿಮೆಯಾಗುತ್ತದೆ. ಆದ್ದರಿಂದ ಮುಂಜಾನೆ ಬರಿಗಾಲಿನಲ್ಲಿ ಹುಲ್ಲಿನ ಮೇಲೆ ನಡೆಯುವುದು ಒಳ್ಳೆಯದು.

ಒತ್ತಡನ್ನು ಕಡಿಮೆ ಮಾಡುತ್ತದೆ: ರೋಡ್ ನಲ್ಲಿ ನಡೆದರೆ ಅದೇ ಕಟ್ಟಡ, ಗಾಡಿ, ಹಾರ್ನ್ ಶಬ್ದ. ಅದರ ಬದಲು ಪಾರ್ಕಿಗೆ ಹೋದರೆ ಅಲ್ಲಿಯ ಹಸಿರು ಮನಸ್ಸಿಗೆ ಮುದ ನೀಡುತ್ತದೆ. ತೋಟದಲ್ಲಿ ಅಡ್ಡಾಡಿದರೆ ಪ್ರಕೃತಿ ಸೌಂದರ್ಯ ನೋಡುತ್ತಾ ಮನಸ್ಸಿನಲ್ಲಿರುವ ಒತ್ತಡ ಕಡಿಮೆಯಾಗುತ್ತದೆ.

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ: ಗಿಡಗಳು ತಮ್ಮನ್ನು ಕೀಟಗಳು ಮತ್ತು ಬ್ಯಾಕ್ಟೀರಿಯಾಗಳಿಂದ ರಕ್ಷಿಸಿಕೊಳ್ಳಲು 'phytoncides' ಎಂಬ ಅಂಶವನ್ನು ಹೊರಹಾಕುತ್ತವೆ. ತೋಟದ ನಡುವೆ ಅಥವಾ ಗಿಡಗಳ ನಡುವೆ ನಡೆದಾಗ ಇದು ನಮ್ಮ ದೇಹ ಸೇರುತ್ತದೆ. ಇವುಗಳು ದೇಹದಲ್ಲಿರುವ ರಾಸಾಯನಿಕಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಪ್ರತಿದಿನ ಗಿಡಗಳ ನಡುವೆ ಅರ್ಧ ಗಂಟೆ ನಡೆದರೆ ಮನಸ್ಸಿನ ಮತ್ತು ದೇಹದ ಆರೋಗ್ಯಕ್ಕೆ ಒಳ್ಳೆಯದು.

ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವುದು: ಹಸಿರು ಗಿಡಗಳ ನಡುವೆ ನಡೆಯುತ್ತಿದ್ದರೆ ಮನಸ್ಸಿನಲ್ಲಿ ಏನೇ ದುಃಖ, ಒತ್ತಡವಿದ್ದರೂ ಅವುಗಳು ಮರೆತು ಹೋಗುತ್ತವೆ, ಹೂ ಅರಳಿ ನಿಂತಿರುವ ಮರಗಳನ್ನು ನೋಡಿದಾಗ ಮನಸ್ಸು ಅದರ ಸೌಂದರ್ಯ ಸವಿಯುವುದರಲ್ಲಿಯೇ ಮಗ್ನವಾಗುತ್ತದೆ. ಆದ್ದರಿಂದಲೇ ರೋಗಿಗಳನ್ನು ಹಸಿರು ಪರಿಸರಕ್ಕೆ ಕರೆದುಕೊಂಡು ಹೋಗಿ ಸ್ವಲ್ಪ ಹೊತ್ತು ಕೂರಿಸಲು ವೈದ್ಯರು ಸಲಹೆ ನೀಡುತ್ತಾರೆ. ಖಿನ್ನತೆಯಿಂದ ಬಳಲುವವರನ್ನು ಹಸಿರು ಗಿಡಗಳ ನಡುವೆ ಪ್ರದಿ ದಿನ ಅರ್ಧ ಗಂಟೆ ನಡೆಯುವ ವ್ಯಾಯಾಮ ಮಾಡಿಸಿದರೆ ಅವರು ಖಿನ್ನತೆಯಿಂದ ಹೊರಬರಲು ಸಹಾಯವಾಗುತ್ತದೆ.

ಅಷ್ಟೇ ಏಕೆ ಕೆಲಸ, ಮನೆ ಎಂಬ ಜಂಜಾಟದ ಬದುಕು ಸಾಕಾದಾಗ ಕೆಲಸಕ್ಕೆ 2-3 ಬ್ರೇಕ್ ಹಾಕಿ ಪ್ರಕೃತಿ ತಾಣಗಳಿಗೆ ಹೋಗಿ ಬಂದರೆ ಮನಸ್ಸಿಗೆ ನವ ಚೈತನ್ಯ ತುಂಬುತ್ತದೆಯಲ್ಲವೇ?

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Thursday, July 12, 2012, 14:50 [IST]
English summary

Walking In A Greenery | Tips For Health | ಹಸಿರ ಗಿಡಗಳ ನಡುವೆ ನಡೆಯುವುದು ಒಳ್ಳೆಯದು | ಆರೋಗ್ಯಕ್ಕಾಗಿ ಕೆಲ ಸಲಹೆ

Walking is a very good exercise if done on a regular basis. Walk for your health in the greens as it eradicates many diseases. Let us explore the benefits of walking in the greenery.
Please Wait while comments are loading...
Subscribe Newsletter