ಮಳೆಗಾಲದಲ್ಲಿ ಟಾನ್ಸಿಲ್ ಸಮಸ್ಯೆ ಬಗ್ಗೆ ಎಚ್ಚರ

By:
Subscribe to Boldsky

Tonsil Problem And Symptoms
ಗಂಟಲಿನಲ್ಲಿ ಕಂಡು ಬರುವ ಸಮಸ್ಯೆಗಳಲ್ಲಿ ಒಂದು ಟಾನ್ಸಿಲ್ (Tonsil). ಗಂಟಲು ಗ್ರಂಥಿಯ ಹಿಂಭಾಗದಲ್ಲಿ ಎರಡು ಗುಳ್ಳೆಗಳಿರುತ್ತವೆ ಇವುಗಳಿಗೆ ಟಾನ್ಸಿಲ್‌ಗ‌ಳು ಎಂದು ಹೆಸರು. ಈ ಟಾನ್ಸಿಲ್‌ಗ‌ಳು ಶ್ವಾಸ ನಾಳದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಟಾನ್ಸಿಲ್ ಗಳು ಶ್ವಾಸ ನಾಳದಲ್ಲಿ ಸೋಂಕು ಉಂಟು ಮಾಡಬಹುದಾದ ರೋಗಾಣುಗಳನ್ನು ತಡೆದು ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳನ್ನೂ ಕೂಡ ಉತ್ಪಾದಿಸುತ್ತವೆ.

ಆದರೆ, ಕೆಲವೊಮ್ಮೆ ಈ ಟಾನ್ಸಿಲ್‌ಗ‌ಳಿಗೂ ಸೋಂಕು ತಗುಲುವುದು. ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳ ದಾಳಿಯಿಂದಾಗಿ ಟಾನ್ಸಿಲ್‌ಗ‌ಳು ಉರಿಯೂತಕ್ಕೊಳಗಾಗಿ, ಊದಿಕೊಳ್ಳುವುದು. ಈ ರೀತಿ ಉಂಟಾದರೆ ಟಾನ್ಸಿಲೈಟಿಸ್‌ ಎಂದು ಕರೆಯಲಾಗುವುದು. ಟಾನ್ಸಿಲೈಟಿಸ್‌ ಅಥವಾ ಟಾನ್ಸಿಲ್‌ಗ‌ಳ ಉರಿಯೂತವು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಂಡು ಬರುತ್ತದೆ. ಟಾನ್ಸಿಲ್ ಗಳು ಒಮ್ಮೆ ಸೋಂಕಿಗೆ ಒಳಗಾದರೆ ಆಗಾಗ ಸೋಂಕಿಗೆ ಒಳಗಾಗುತ್ತಲೇ ಇರುತ್ತವೆ. ಈ ರೀತಿ ತೊಂದರೆಯಿಂದ ಬಳಲುವವರು ಹವಾಮಾನ ಬದಲಾಗುತ್ತಿದ್ದಂತೆ ತುಂಬಾ ಎಚ್ಚರಿಕೆ ವಹಿಸಬೇಕು, ಅದರಲ್ಲೂ ಮಳೆಗಾಲದಲ್ಲಿ ಕೆಮ್ಮು, ಶೀತ ಅಧಿಕ ಉಂಟಾಗುವುದರಿಂದ ಈ ಟಾನ್ಸಿಲ್ ತೊಂದರೆ ಮರುಗಳಿಸಬಹುದು.

ಟಾನ್ಸಿಲ್ ತೊಂದರೆಯು ಅಡೆನೋವೈರಸ್‌ಗಳು, ಇನ್ ಫ್ಲೂಯೆಂಜಾದಂತಹ ವೈರಸ್ ಗಳಿಂದ ಉಂಟಾಗುವುದು. ಈ ಕಾಯಿಲೆ ಕಾಣಿಸಿಕೊಂಡರೆ ಈ ಕೆಳಗಿನ ಪ್ರಮುಖ ಲಕ್ಷಣಗಳಿಂದ ಗುರುತಿಸಬಹುದು.

ಲಕ್ಷಣಗಳು:
* ಟಾನ್ಸಿಲ್‌ಗ‌ಳು ಉರಿ ಊತಕ್ಕೊಳಗಾಗಿ ಬಾತುಕೊಳ್ಳುವುದು.
* ಶ್ವಾಸನಾಳದ ಅಡಚಣೆ ಉಂಟಾದರೆ ನೋವು ಮತ್ತು ಉಸಿರಾಟದ ತೊಂದರೆ
*ಗಂಟಲು ನೋವು (ಗಂಟಲು ಮುಟ್ಟಲೂ ಸಾಧ್ಯವಾಗದಂತಹ ನೋವು)
* ಟಾನ್ಸಿಲ್‌ಗ‌ಳು ಕೆಂಪಾಗುವುದು
* ಗಂಟಲಿನಲ್ಲಿ ನೋವಿನಿಂದ ಕೂಡಿದ ಮಚ್ಚೆಗಳು ಅಥವಾ ಹುಣ್ಣುಗಳು.
* ಧ್ವನಿ ವ್ಯತ್ಯಾಸ ಉಂಟಾಗುವುದು ಅಥವಾ ಸ್ವರ ಇಲ್ಲದಾಗುವುದು
* ತಲೆನೋವು.
* ಹಸಿವು ಇಲ್ಲದಿರುವುದು ಮತ್ತು ತಿನ್ನಲು ಸಾಧ್ಯವಾಗುವುದಿಲ್ಲ
* ಕಿವಿನೋವು.
* ಬಾಯಿವಾಸನೆ , ಕುತ್ತಿಗೆ ಹಾಗೂ ದವಡೆಯ ಬಳಿ ಗ್ರಂಥಿಗಳು ಊದಿಕೊಳ್ಳುವುದು.

ಟಾನ್ಸಿಲ್ ಬಂದರೆ ಪಾಲಿಸಬೇಕಾದ ಎಚ್ಚರಿಕೆಗಳು:

1. ಸ್ವಚ್ಛತೆ: ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಊಟವನ್ನು ಮಾಡುವ ಮೊದಲು ಕೈಗಳನ್ನು ಶುಚಿಗೊಳಿಸಬೇಕು. ಶೀತ, ಕೆಮ್ಮು ಇದ್ದರೆ ಸ್ಪೂನ್ ಬಳಸಿ ಊಟ ಮಾಡುವುದು ಒಳ್ಳೆಯದು. ಇತರರು ಕೆಮ್ಮುವಾಗ ಅಥವಾ ಸೀನುವಾಗ ಅವರಿಂದ ಸ್ವಲ್ಪ ದೂರವಿರಬೇಕು.

2. ತಣ್ಣಗಿನ ಪದಾರ್ಥ ತಿನ್ನಬಾರದು: ತಣ್ಣೀರು ಕುಡಿಯುವುದಾಗಲಿ, ತಣ್ಣಗಿನ ಪದಾರ್ಥ ತಿನ್ನುವುದಾಗಲಿ ಮಾಡಬಾರದು.

3. ಹರ್ಬಲ್ ಟೀ: ಟಾನ್ಸಿಲ್ ತೊಂದರೆ ಇರುವವರು ಹರ್ಬಲ್ ಟೀ ಕುಡಿಯುವುದು ಒಳ್ಳೆಯದು.

4. ಸಿಟ್ರಸ್ ಅಂಶವಿರುವನ್ನು ತಿನ್ನಬಾರದು: ಸಿಟ್ರಸ್ ಅಂಶವಿರುವ ಪದಾರ್ಥಗಳಿಂದ ದೂರವಿರಬೇಕು.

5. ಮದ್ಯಪಾನ ಮತ್ತು ದೂಮಪಾನದಿಂದ ದೂರವಿರಬೇಕು: ಟಾನ್ಸಿಲ್ ತೊಂದರೆ ಇರುವವರು ಮದ್ಯ ಮತ್ತು ಧೂಮಪಾನ ಅಭ್ಯಾಸವಿದ್ದರೆ ಅದನ್ನು ಬಿಡಬೇಕು.

6. ಆಹಾರ: ಟಾನ್ಸಿಲ್ ಬಂದರೆ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು ಮತ್ತು ಮೃದುವಾದ ಆಹಾರ ಸೇವನೆ ಮಾಡಬೇಕು.

ಚಿಕಿತ್ಸೆ:
ಈ ರೀತಿ ತೊಂದರೆ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು. ಈ ರೋಗ ಉಲ್ಬಣಗೊಂಡರೆ ಮಾತ್ರ ಶಸ್ತ್ರ ಚಿಕಿತ್ಸೆ ಮಾಡಿ ಗುಣಪಡಿಸಲಾಗುವುದು.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

Tonsil Problem And Symptoms | Tips For Health | ಟಾನ್ಸಿಲ್ ತೊಂದರೆ ಮತ್ತು ಲಕ್ಷಣಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Tonsillitis, this is a throat problem that happens mostly during monsoon and winter. When you know that seasonal changes lead to this throat infection, it is best to prevent it before you are badly hit with the throat pain and cough.
Please Wait while comments are loading...
Subscribe Newsletter