ತೂಕ ಹೆಚ್ಚಾದರೂ ಥೈರಾಯ್ಡ್ ಪರೀಕ್ಷೆ ಮಾಡಿಸಬೇಕೆ?

By:
Subscribe to Boldsky

ಗಂಟಲಿನಲ್ಲಿ ನೋವು , ಹೆಚ್ಚುತ್ತಿರುವ ದೇಹದ ತೂಕ, ಮುಟ್ಟು ಸರಿಯಾಗಿ ಆಗುತ್ತಿಲ್ಲ, ಪದೇ ಪದೇ ಗರ್ಭಪಾತ ಈ ರೀತಿಯ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಆಸ್ಪತ್ರೆಗ ಹೋದಾಗ ವೈದ್ಯರು ಥೈರಾಯ್ಡ್ ಚಿಕಿತ್ಸೆ ಮಾಡಿಸಿ ಎಂದು ಹೇಳುತ್ತಾರೆ. ಏಕೆಂದರೆ ಥೈರಾಯ್ಟ್ ಸಮಸ್ಯೆಯಿದ್ದರೆ ಈ ರೀತಿಯ ಲಕ್ಷಣಗಳು ಕಂಡು ಬರುವುದು ಸಹಜ. ಆದ್ದರಿಂದ ಇದ್ದಕ್ಕಿದ್ದ ಹಾಗೇ ದೇಹದ ತೂಕ ಹೆಚ್ಚಾದರೆ ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ದೇಹದಲ್ಲಿ ಅಯೋಡಿನ್ ಕೊರತೆ ಉಂಟಾದಾಗ ಈ ರೀತಿಯ ಸಮಸ್ಯೆ ಉಂಟಾಗುವುದು. ಅದರಲ್ಲೂ ಈ ರೀತಿಯ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

Symptoms Of Thyroid Cancer

ಥೈರಾಯ್ಡ್ ಸಮಸ್ಯೆಯಿಂದ ಬಳಲುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಹದಲ್ಲಿ ಅಯೋಡಿನ್ ಕೊರತೆಯಿಮದ ಥೈರಾಯ್ಡ್ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ T3 ಮತ್ತು T4 ಟೆಸ್ಟ್ (ಪರೀಕ್ಷೆ) ಮಾಡಿಸಲು ಹೇಳುತ್ತಾರೆ. ನಮ್ಮ ಗಂಟಲಿನಲ್ಲಿ ಥೈರಾಯ್ಡ್ ಗ್ರಂಥಿ ಇದ್ದು ಇದು ದೇಹದ ರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖವಾಗಿದೆ. ಥೈರಾಯ್ಡ್ ಗ್ರಂಥಿಯ ಕಾರ್ಯವನ್ನು ಗಾಡಿಯ ಚಕ್ರದಲ್ಲಿರುವ ಗಾಳಿಗೆ ಹೋಲಿಸಬಹುದು. ಹೇಗೆ ಗಾಡಿ ಚಲಿಸಲು ಟೈರ್ ನಲ್ಲಿ ಗಾಳಿ ಅವಶ್ಯಕವೊ ಅದೇ ರೀತಿ ದೇಹದ ಕಾರ್ಯಗಳು ಸರಿಯಾಗಿ ನಿರ್ವಹಿಸಲು ಥೈರಾಯ್ಡ್ ಗ್ರಂಥಿ ಅವಶ್ಯಕ. ಥೈರಾಯ್ಡ್ ಸಮಸ್ಯೆಯನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆಯನ್ನು ಪ್ರಾರಂಭಿಸಿದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ಅದನ್ನು ಹಾಗೇ ಬಿಟ್ಟರೆ ಥೈರಾಯ್ಡ್ ಕ್ಯಾನ್ಸರ್ ಬರಬಹುದು. ಇದನ್ನು ಚಿಕಿತ್ಸೆ ಮಾಡದೇ ಹೋದರೆ ಮೆದುಳಿಗೆ ತೊಂದರೆ ಉಂಟಾಗಬಹುದು.

ಥೈರಾಯ್ಡ್ ಕ್ಯಾನ್ಸರ್ ಅನ್ನು ಈ ಕೆಳಗಿನ ಲಕ್ಷಣಗಳಿಂದ ಕಂಡು ಹಿಡಿಯಬಹುದು.
1. ಗಂಟಲಿನಲ್ಲಿ ಊತ
2. ಇದ್ದಕಿದ್ದ ಹಾಗೇ ಶಬ್ದದಲ್ಲಿ ವ್ಯತ್ಯಾಸ ಉಂಟಾಗುವುದು
3. ಗಂಟಲು ನಾಳ ದಪ್ಪಗಾಗುವುದು
4. ಅಲರ್ಜಿ ಮತ್ತು ಕಡಿಮೆಯಾಗದ ಕೆಮ್ಮು

ಚಿಕಿತ್ಸೆ: ಥೈರಾಯ್ಡ್ ಕ್ಯಾನ್ಸರ್ ಉಂಟಾದರೆ ಅದನ್ನು ಚಿಕಿತ್ಸೆ ಮೂಲಕ ಪರಿಹರಿಸಬಹುದು. ಕಲೆ ಮತ್ತು ನೋವಿಲ್ಲದೆ ಶಸ್ತ್ರ ಚಿಕಿತ್ಸೆ ಮಾಡಬಹುದಾಗಿದೆ. ಈ ರೀತಿಯ ಚಿಕಿತ್ಸೆಯ ನಂತರ ಐಯೋಡಿನ್ ಚಿಕಿತ್ಸೆಯನ್ನು ನೀಡಲಾಗುವುದು. ರೋಗಿ ಸ್ವಲ್ಪ ಗುಣಮುಖವಾದ  ನಂತರ ಥೈರಾಯ್ಡ್ ಹಾರ್ಮೋನ್ ಮಾತ್ರೆ ನೀಡಲಾಗುವುದು. ಈ ಮಾತ್ರೆಯನ್ನು ಜೀವಿಸಿರುವಷ್ಟು ಕಾಲ ತೆಗೆದುಕೊಳ್ಳಬೇಕಾಗುತ್ತದೆ. ಈ ಮಾತ್ರೆ ಬೆಲೆ ಕೂಡ ತುಂಬ ಕಮ್ಮಿಯಿದ್ದು ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

Symptoms Of Thyroid Cancer | Tips For Health | ಥೈರಾಯ್ಡ್ ಕ್ಯಾನ್ಸರ್ ನ ಲಕ್ಷಣಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Thyroid Cancer can be cure. If you didn't take treatment there is a chance cancer goes on to affect the brain.
Please Wait while comments are loading...
Subscribe Newsletter