For Quick Alerts
ALLOW NOTIFICATIONS  
For Daily Alerts

ಅಸ್ತಮಾ ವಂಶಪಾರಂಪರ್ಯವಾದ ಕಾಯಿಲೆಯೇ?

|
Is Asthma A Genetic Disorder
ಅಸ್ತಮಾ ಕಾಯಿಲೆ ಇರುವವರು ಉಸಿರಾಡಲು ಕಷ್ಟ ಪಡುವುದನ್ನು ನೋಡುವಾಗ ಎಂತಹವರಿಗೂ ಅಯ್ಯೋ ಪಾಪ ಅನಿಸುತ್ತದೆ. ಅಸ್ತಮಾ ಕಾಯಿಲೆ ಹಲವಾರು ಕಾರಣಗಳಿಂದ ಕಾಣಿಸಿಕೊಳ್ಳಬಹುದು. ಇದೇ ಕಾರಣದಿಂದ ಕಾಣಿಸಿಕೊಂಡಿದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಈ ಕೆಳಗಿನ ಹೇಳಿರುವ ಯಾವುದಾದರೂ ಒಂದು ಕಾರಣದಿಂದ ಅಸ್ತಮಾ ಕಾಯಿಲೆ ಕಂಡು ಬರುವ ಸಾಧ್ಯತೆ ಹೆಚ್ಚು.

ವಂಶಪಾರಂಪರ್ಯ, ಹವಾಮಾನ ಬದಲಾದಾಗ, ತಂಪಾದ ಹವಾಮಾನದಿಂದ, ಪರಿಸರ ಮಾಲಿನ್ಯ, ದೂಳು, ಧೂಮಪಾನ, ಆಗಾಗ ಕೆಮ್ಮು ಕಂಡು ಬರುವುದು, ಕೆಲವು ವಸ್ತುಗಳಿಂದ ಅಲರ್ಜಿ ಉಂಟಾಗಿ ಅಸ್ತಮಾ ಕಂಡು ಬರುವುದು.

ಅಸ್ತಮಾ ಬರಲು ವಂಶಪಾರಂಪರ್ಯ ಒಂದು ಕಾರಣವಾಗಿದ್ದರಿಂದ, ಅಸ್ತಮಾ ಕಾಯಿಲೆ ತಂದೆ ಅಥವಾ ತಾಯಿಗೆ ಇದ್ದರೆ ಮಗುವಿಗೆ ಬಂದೇ ಬರುತ್ತದೆಯೇ ಎಂಬ ಸಂಶಯ ಅನೇಕ ಜನರಲ್ಲಿರುತ್ತದೆ. ಅಸ್ತಮಾ ಕಾಯಿಲೆ ವಂಶವಾಹಿನಿಯಾಗಿ ಬರುವ ಸಾಧ್ಯತೆ ಇದೆ. ಹಾಗಂತ ಕಡ್ಡಾಯವಾಗಿ ಬಂದೇ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಏಕೆಂದರೆ ಅಸ್ತಮಾ ಕಾಯಿಲೆಗೆ ದೇಹದಲ್ಲಿರುವ 62 ಜೀನ್ ಗಳು ಪ್ರಮುಖ ಕಾರಣವಾಗಿದೆ ಎಂದು ಡಾ. ಜಿಯಾನ್ ಜಾಂಗ್ ಎಂಬುವವರು 2008 ರಲ್ಲಿ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ. ಈ ಎಲ್ಲಾ ಜೀನ್ ಗಳು ಎಲ್ಲವೂ ಮಗುವಿನಲ್ಲಿದ್ದರೆ ಮಾತ್ರ ಅಸ್ತಮಾ ಕಾಯಿಲೆ ಕಂಡು ಬರುತ್ತದೆ. ಈ ರೀತಿಯ ವಂಶಪಾರಂಪರ್ಯವಾಗಿ ಅಸ್ತಮಾ ಬರುವ ಸಾಧ್ಯತೆ ಶೇ. 20 ಮಾತ್ರ.

ಅದರಲ್ಲಿ ಅಲರ್ಜಿ ಅಸ್ತಮಾ ವಂಶಪಾರಂಪರ್ಯವಾಗಿ ಕಂಡುಬರುವುದಿಲ್ಲ. ದೂಳಿನ ಪರಿಸರದಲ್ಲಿದ್ದರೆ ಅಧಿಕ ರಾಸಾಯನಿಕ ವಸ್ತುಗಳಲ್ಲಿ ಕೆಲಸ ಮಾಡುತ್ತಿದ್ದರೆ, ಫ್ಯಾಕ್ಟರಿ ಹೊಗೆ ಈ ಎಲ್ಲಾ ಕಾರಣಗಳಿಂದ ಅಸ್ತಮ ಕಾಯಿಲೆ ಕಂಡುಬರುತ್ತದೆ. ಮೂಗು, ಶ್ವಾಸಕೋಶ ಉಬ್ಬಿಕೊಂಡು ಉಸಿರಾಡಲು ತೊಂದರೆಯಾಗುತ್ತದೆ.

ಶುದ್ಧಗಾಳಿಯನ್ನು ಉಸಿರಾಡುವುದು, ವ್ಯಾಯಾಮ ಇವುಗಳಿಂದ ಅಸ್ತಮಾ ಕಾಯಿಲೆ ಹೆಚ್ಚಾಗದಂತೆ ತಡೆಯಬಹುದು.

English summary

Is Asthma A Genetic Disorder | Tips For Health | ಅಸ್ತಮಾ ವಂಶಪಾರಂಪರ್ಯವಾದ ಕಾಯಿಲೆಯೇ? | ಆರೋಗ್ಯಕ್ಕಾಗಿ ಕೆಲ ಸಲಹೆಗಳು

It is not a single gene that is responsible for causing this disease but a cluster of genes. Researcher identified 62 genes that may be responsible in some way or other for causing asthma.
X
Desktop Bottom Promotion