For Quick Alerts
ALLOW NOTIFICATIONS  
For Daily Alerts

ಬೆನ್ನು ನೋವಿಗೆ ಗುಡ್ ಬೈ ಹೇಳಲು ಈ ರೀತಿ ಮಾಡಿ!

|

ಈಗೆಲ್ಲಾ ಬೆನ್ನು ನೋವು ಚಿಕ್ಕ ಪ್ರಾಯದಲ್ಲಿಯೇ ಪ್ರಾರಭವಾಗುತ್ತದೆ. ಹೀಗೆ ಚಿಕ್ಕದಾಗಿ ಬೆನ್ನು ನೋವು ಕಾಣಿಸಿಕೊಂಡರೆ ಸ್ವಲ್ಪ ಮೂವ್ ಅಥವಾ ಅಮೃತಾಂಜನ ಹಚ್ಚಿ ಸುಮ್ಮನೆಯಾಗಿ ಬಿಡುತ್ತೇವೆ. ಸಹಿಸಲು ಅಸಾಧ್ಯವಾದ ಬೆನ್ನುನೋವು ಕಾಣಿಸಿಕೊಂಡಾಗ ವೈದ್ಯರನ್ನು ಕಾಣಲು ಹೋಗುತ್ತೇವೆ. ಆರೋಗ್ಯಕರವಲ್ಲದ ಜೀವನ ಶೈಲಿ, ತುಂಬಾ ಹೊತ್ತು ಕಂಪ್ಯೂಟರ್ ನಲ್ಲಿ ಕೆಲಸ ಮಾಡುವುದು, ವ್ಯಾಯಾಮ ಮಾಡದಿರುವುದು , ಮಾನಸಿಕ ಒತ್ತಡ ಈ ಎಲ್ಲಾ ಕಾರಣಗಳಿದ ಬೆನ್ನು ನೋವು ಅಧಿಕವಾಗುತ್ತದೆ. ಈ ರೀತಿ ಬೆನ್ನು ನೋವು ಕಾಣಿಸಿಕೊಂಡರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಸಾಕು, ಬೆನ್ನು ನೋವು ನಿವಾರಣೆಯಾಗುವುದು.

How To Get Rid From Back pain

1. ವಿಟಮಿನ್ ಡಿ ಅಧಿಕ ಸೇವಿಸಿ: ವಿಟಮಿನ್ ಡಿ ಕೊರತೆ ಉಂಟಾದರೆ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ವಿಟಮಿನ್ ಡಿ ಇರುವ ಆಹಾರಗಳನ್ನು ಹೆಚ್ಚಾಗಿ ತಿನ್ನಬೇಕು. ಅಣಬೆ, ಕಾಡ್ ಲಿವರ್, ಮೊಟ್ಟೆ, ಸೊಪ್ಪು ಮತ್ತು ಮೀನಿನಲ್ಲಿ ವಿಟಮಿನ್ ಡಿ ಹೆಚ್ಚಾಗಿರುತ್ತದೆ.

2. ಮ್ಯೂಸಿಕ್ ಥೆರಪಿ:
ಒಳ್ಳೆಯ ಸಂಗಿತವನ್ನು ಕೇಳುತ್ತಿದ್ದರೆ ಒತ್ತಡ ಕಡಿಮೆಯಾಗುತ್ತದೆ. ಒತ್ತಡ ಕಡಿಮೆಯಾದರೆ ಬೆನ್ನು ನೋವು ಕೂಡ ಕಡಿಮೆಯಾಗುವುದು. ಸಂಗೀತವನ್ನು ಕೇಳುವುದರಿಂದ ಮಾನಸಿಕ ನೆಮ್ಮದಿ ದೊರಕುತ್ತದೆ. ಹೆಚ್ಚಿನ ಕಾಯಿಲೆಗಳು ಒತ್ತಡದಿಂದ ಬರುತ್ತದೆ. ಸಂಗೀತವು ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗುವುದು.

3. ಪ್ರಾಣಾಯಾಮ: ಪ್ರಾಣಾಯಾಮ ಮಾಡುವುದರಿಂದ ಕೂಡ ಬೆನ್ನುನೋವಿಗೆ ಪರಿಹಾರವನ್ನು ಕಂಡು ಹಿಡಿಯಬಹುದು. ಪ್ರಾಣಾಯಾಮವನ್ನು ಮನೆಯಲ್ಲಿಯೇ ಮಾಡಬಹುದಾಗಿದ್ದು ಕೇವಲ ಬೆನ್ನು ನೋವು ಮಾತ್ರ ಕಡಿಮೆ ಮಾಡುವುದಲ್ಲದೆ, ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ, ಇದನ್ನು ಮಾಡಿದ್ದೇ ಆದರೆ ಹತ್ತು ಹಲವು ಪ್ರಯೋಜನಗಳನ್ನು ಪಡೆಯಬಹುದು.

4. ಮಸಾಜ್: ಬೆನ್ನು ನೋವು ಕಾಣಿಸಿಕೊಂಡರೆ ಮಸಾಜ್ ಥೆರಪಿ ಮಾಡಿಸಿಕೊಂಡರೆ ಗುಣವಾಗುತ್ತದೆ. ಈ ರೀತಿಯ ಥೆರಪಿಯನ್ನು ಗರ್ಭಿಯಾಗಿರುವಾಗ ಬೆನ್ನು ನೋವು ಕಡಿಮೆ ಮಾಡಲು ಬಳಸುತ್ತಾರೆ.
* ಬೆಳ್ಳುಳ್ಳಿ ಎಣ್ಣೆಯನ್ನು ಬೆನ್ನು ನೋವಿರುವಲ್ಲಿಗೆ ಹಚ್ಚಿ ಮಸಾಜ್ ಮಾಡಿದರೆ ನೋವು ಬೇಗನೆ ಶಮನವಾಗುವುದು.

5. ಕೂರುವ ಭಂಗಿ:
* ಬೆನ್ನಿಗೆ ಹೊಂದಿಕೊಳ್ಳುವಂತೆ ಕುರ್ಚಿಗಳನ್ನು ಉಪಯೋಗಿಸಬೇಕು.
* ಗಟ್ಟಿಯಾದ ಜಮಖಾನ ಅಥವಾ ಚಾಪೆಯ ಮೇಲೆ ಮಲಗುವ ಅಭ್ಯಾಸ ಮಾಡಬೇಕು.
*ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
* ಕುಳಿತುಕೊಳ್ಳುವ ಮತ್ತು ನಿಲ್ಲುವ ಭಂಗಿಯನ್ನು ಕ್ರಮವಾಗಿ ಅಭ್ಯಾಸ ಮಾಡಬೇಕು.
* ಹೆಚ್ಚು ಕಾಲ ನಿಲ್ಲುವುದನ್ನು ತಪ್ಪಿಸಬೇಕು.

6.ಆಹಾರ: ಲಿಂಬೆಯಲ್ಲಿರುವ 'ಸಿ' ಸತ್ವ, ಬೆಳ್ಳುಳ್ಳಿ, ಆಲೂಗೆಡ್ಡೆ, ಟೊಮೆಟೋ, ಕ್ಯಾರೆಟ್, ಸೌತೆಕಾಯಿ, ಮೂಲಂಗಿ, ಹಣ್ಣುಗಳ ಸಲಾಡ್‌ಗಳನ್ನು ಹೆಚ್ಚಾಗಿ ಬಳಸಬೇಕು. ಹೂಕೋಸು, ಎಲೆ ಕೋಸು ಬಸಳೆ, ಸೇವಿಸಿದರೆ ಒಳ್ಳೆಯದು. ಬಾಳೆಹಣ್ಣನ್ನು ಒಂದು ತಿಂದರೆ ಒಳ್ಳೆಯದು. ಹೆಚ್ಚು ತಿನ್ನಲು ಹೋಗಬಾರದು. ದೇಹದ ತೂಕ ಅದರಲ್ಲೂ ಬೆನ್ನಿನ ಬೊಜ್ಜು ಕಡಿಮೆ ಮಾಡಲು ವ್ಯಾಯಾಮ ಮಾಡಬೇಕು. ಬೆನ್ನು ನೋವನ್ನು ಹೊಂದಿರುವ ವ್ಯಕ್ತಿಯು ಕೊಬ್ಬು ಇರುವ ಪದಾರ್ಥಗಳು, ಖಾರ ಪದಾರ್ಥಗಳು ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು, ಮೊಸರು, ಸಿಹಿತಿಂಡಿಗಳು, ಸಕ್ಕರೆ, ಉಪ್ಪಿನಕಾಯಿ ಟೀ ಕಾಫಿ ಮೊದಲಾದವುಗಳನ್ನು ತಿನ್ನಬಾರದು.

7. ಮಧ್ಯ ವಯಸ್ಸು ದಾಟಿದ ಮಹಿಳೆಯರಿಗೆ ಬೆನ್ನು ನೋವು ಹೆಚ್ಚಾಗಿ ಕಂಡು ಬರುತ್ತದೆ. ಈ ರೀತಿ ಬೆನ್ನು ನೋವು ಬರದಂತೆ ತಡೆಯಲು ಈ ಕೆಳಗಿನ ಸಲಹೆ ಪಾಲಿಸ ಬಹುದು.
1. ಕ್ಯಾಲ್ಸಿಯಂ ಇರುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.
2. ಹೆರಿಗೆಯಾದಾಗ ಅಧಿಕ ಕ್ಯಾಲ್ಸಿಯಂ ಇರುವ ಆಹಾರಗಳನ್ನು ಸೇವಿಸಬೇಕು.
3. ತುಂಬಾ ಹೊತ್ತು ಕೂತು ಕೆಲಸ ಮಾಡುವಾಗ ಕೂರುವ ಭಂಗಿ ಸರಿಯಾಗಿದ್ದರೆ (ಬೆನ್ನಿಗೆ ಸಪೋರ್ಟ್ ಕೊಟ್ಟು ಕೂರಿ) ಬೆನ್ನುನೋವು ಬರುವುದಿಲ್ಲ.
4. ದೇಹದ ತೂಕ ಮಿತಿಮೀರಿ ಹೆಚ್ಚಾಗಲು ಬಿಡಬಾರದು. 1/2 ಗಂಟೆ ನಡೆಯುವ ವ್ಯಾಯಾಮ ಒಳ್ಳೆಯದು.
5. ಡ್ರೈವಿಂಗ್ ಮಾಡುವಾಗ ಕುರ್ಚಿಯಲ್ಲಿ ಕೂರುವಾಗ ಬೆನ್ನಿಗೆ ಸರಿಯಾದ ಸಪೋರ್ಟ್ ಇಟ್ಟುಕೊಳ್ಳುವುದು ಒಳ್ಳೆಯದು.

English summary

How To Get Rid From Backpain | Tips For Health | ಬೆನ್ನುನೋವಿನ ನಿವಾರಣೆ ಹೇಗೆ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Back pain one of the serious health problem. Lifestyle, stress, lack of vitamin are the main reason for back pain. In the early stage itself you can cure back pain from simple remedies. Here are few home remedies for back pain.
Story first published: Thursday, May 31, 2012, 11:54 [IST]
X
Desktop Bottom Promotion