For Quick Alerts
ALLOW NOTIFICATIONS  
For Daily Alerts

ನಿದ್ರಾಹೀನತೆ ಸಮಸ್ಯೆ ನಿವಾರಿಸುವ ಮನೆಮದ್ದು!

|

ವಯಸ್ಸಾದಂತೆ ಅಥವಾ ಮಾನಸಿಕ ಒತ್ತಡ, ಅನಾರೋಗ್ಯ ಈ ಎಲ್ಲಾ ಕಾರಣಗಳಿಂದ ನಿದ್ರಾ ಹೀನತೆ ಸಮಸ್ಯೆ ಉಂಟಾಗುವುದು. ಈ ರೀತಿ ಉಂಟಾದರೆ ದೇಹದ ಆರೋಗ್ಯ ಮತ್ತಷ್ಟು ಹದಗೆಡುವುದು, ಸುಸ್ತು, ಮರೆವು ಕಾಣಿಸಿಕೊಳ್ಳುವುದು. ಈ ರೀತಿ ನಿದ್ದೆ ಸಮಸ್ಯೆ ಕಾಣಿಸಿಕೊಂಡಾಗ ನಿದ್ದೆ ಮಾತ್ರೆ ನುಂಗಿದರೆ ಅದು ಆರೋಗ್ಯಕ್ಕೆ ಮತ್ತಷ್ಟು ಅಪಾಯ! ಆದ್ದರಿಂದ ಈ ರೀತಿಯ ನಿದ್ರಾಹೀನತೆ ಸಮಸ್ಯೆಯನ್ನು ಈ ಕೆಳಗಿನ ಮನೆ ಮದ್ದಿನ ಮುಖಾಂತರ ಪರಿಹರಿಸಿಕೊಳ್ಳುವುದು ಒಳ್ಳೆಯದು.

Home Remedies For Insomnia

1. ಅಶ್ವಗಂಧ: ಈ ಗಿಡಮೂಲಿಕೆ ದೇಹದಲ್ಲಿ ಉತ್ತಮ ರೀತಿಯಲ್ಲಿ ಪರಿಣಾಮ ಬೀರುತ್ತದೆ. ದೇಹಕ್ಕೆ ಬಲ ನೀಡುವುದರ ಜೊತೆಗೆ ಸುಸ್ತನ್ನು ನಿವಾರಿಸುತ್ತದೆ. ಅಲ್ಲದೆ ನಿದ್ದೆ ಸರಿಯಾಗಿ ಬರುವಂತೆ ಮಾಡುತ್ತದೆ.

2.ಲ್ಯಾವೆಂಡರ್: ಮಲಗುವ ಮೊದಲು, ಹದ ಬಿಸಿ ನೀರಿಗೆ ಸ್ವಲ್ಪ ಲ್ಯಾವೆಂಡರ್ ಎಣ್ಣೆ ಹಾಕಿ ಸ್ನಾನ ಮಾಡಬೇಕು. ಲ್ಯಾವೆಂಡರ್ ಎಣ್ಣೆ ನರಗಳಿಗೆ ಶಕ್ತಿ ತುಂಬುವ ಟಾನಿಕ್‌ನಂತೆ ವರ್ತಿಸುತ್ತದೆ. ಈ ಎಣ್ಣೆಯಿಂದ ಮಸಾಜ್ ಮಾಡಿದರೆ ದೇಹ ಮತ್ತು ಮನಸ್ಸಿಗೆ ಆರಾಮದಾಯಕವಾಗಿರುತ್ತದೆ.

3. ಬಿಸಿ ಎಣ್ಣೆಯಿಂದ ಮಸಾಜ್ : ಹದ ಬಿಸಿ ಎಣ್ಣೆಯಿಂದ ತಲೆಗೆ ಮತ್ತು ಪಾದಗಳಿಗೆ ಮಸಾಜ್ ಮಡಿದರೆ ಬೇಗನೆ ನಿದ್ದೆ ಬರುತ್ತದೆ. ಈ ರೀತಿ ಮಸಾಜ್ ಮಾಡಲು ಸಾಸಿವೆ ಎಣ್ಣೆ, ಜಾಸ್ಮಿನ್ ಎಣ್ಣೆ, ಬ್ರಾಹ್ಮಿ ಎಣ್ಣೆ ಅಥವಾ ತುಪ್ಪ ಬಳಸುವುದು ಒಳ್ಳೆಯದು.

4. ವ್ಯಾಯಾಮ: ನಿದ್ದೆ ಸರಿಯಾಗಿ ಬರದಿದ್ದರೆ ಈ ಕೆಳಗಿನಂತೆ ಮಾಡಿದರೆ ಸಾಕು ನಿದ್ದೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ.

* ಬೆಡ್ ಮೇಲೆ ಸರಿಯಾಗಿ ಕೂತುಕೊಂಡು ನಮ್ಮ ಗಮನವನ್ನು ಹುಬ್ಬುಗಳ ನಡುವೆ ಇರುವ ಜಾಗದ ಮೇಲೆ ಕೇಂದ್ರೀಕರಿಸಬೇಕು.

* ನಂತರ ಉಸಿರಾಟದ ಮೇಲೆ ಗಮನ ಹರಿಸಬೇಕು.ಉಸಿರನ್ನು ಜೋರಾಗಿ ಎಳದು ನಂತರ ಬಿಡಬೇಕು.

* ನಂತರ ಅಂಗಾತ ಮಲಗಿ ಜೋರಾಗಿ ಉಸಿರು ಎಳೆದು-ಬಿಡುವ ವ್ಯಾಯಾಮ ಮಾಡಬೇಕು.

* 'ಈಗ ನಾನು ಸರಿಯಾಗಿ ನಿದ್ದೆ ಮಾಡುತ್ತೇನೆ' ಅಂತ ಮನಸ್ಸಿಗೆ ಮಂತ್ರದ ರೀತಿ ಹೇಳುತ್ತಿರಬೇಕು. ಈ ರೀತಿ ವ್ಯಾಯಾಮ ಮಾಡಿದರೆ ಸುಖವಾಗಿ ನಿದ್ದೆ ಮಾಡಲು ಸಹಕಾರಿಯಾಗುವುದು.

English summary

Home Remedies For Insomnia | Tips For Health | ನಿದ್ದೆ ಹೀನತೆಗೆ ಮನೆ ಮದ್ದು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Insomnia will bring so many health problem. The person need 8 hours sleep to be health. If you are suffering from health problem you can try these home remedies.
Story first published: Monday, May 21, 2012, 12:17 [IST]
X
Desktop Bottom Promotion