For Quick Alerts
ALLOW NOTIFICATIONS  
For Daily Alerts

ಅಲರ್ಜಿ ನಿವಾರಣೆಗೆ ಇಲ್ಲಿವೆ ಸೂಪರ್ ಮನೆಮದ್ದು

|

ಅಲರ್ಜಿ ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಈ ಸಮಸ್ಯೆ ನಾನಾ ಕಾರಣಗಳಿಂದ ಬರುತ್ತದೆ. ಅಲರ್ಜಿ ದೂಳಿನಿಂದ ಬರಬಹುದು ಅಥವಾ ರಾಸಾಯನಿಕ ವಸ್ತುಗಳಿಂದ ಹಾಗೂ ಆಹಾರದಿಂದ ಕೂಡ ಬರಬಹುದು. ಆಗಾಗ ಕೆಮ್ಮು, ಶೀತದಂತಹ ತೊಂದರೆಗಳು ಕಾಣಿಸಿಕೊಳ್ಳುವುದು ಅಲರ್ಜಿನಿಂದಾಗಿರುತ್ತದೆ. ಆದ್ದರಿಂದ ಅಲರ್ಜಿ ತೊಂದರೆ ಇರುವವರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.

ಅಲರ್ಜಿ ಉಂಟಾದರೆ ಮೈ ಮೇಲೆ ಕೆಂಪಗೆ ಗುಳ್ಳೆಗಳು ಬರುತ್ತವೆ. ಆ ಗುಳ್ಳೆಗಳಿಂದಾಗಿ ವಿಪರೀತ ತುರಿಕೆ ಉಂಟಾಗುವುದರಿಂದ ತುಂಬಾ ಹಿಂಸೆ ಅನಿಸುತ್ತದೆ. ಈ ರೀತಿಯ ತೊಂದರೆಯು ಯಾವ ಕಾರಣದಿಂದ ಉಂಟಾಗುತ್ತದೆ ಎಂದು ಮೊದಲು ಕಂಡು ಹಿಡಿಯಬೇಕು. ದೂಳಿನಿಂದ ಆದರೆ ಆದಷ್ಟು ದೂಳಿರುವ ಪ್ರದೇಶಕ್ಕೆ ಹೋಗಬಾರದು, ಗುಡಿಸುವಾಗ ಆ ಜಾಗದಲ್ಲಿ ನಿಲ್ಲಬಾರದು, ಗಾಡಿಯಲ್ಲಿ ಹೋಗುವಾಗಲೂ ಇದರ ಬಗ್ಗೆ ಎಚ್ಚರಿಕೆವಹಿಸಬೇಕು. ಆಹಾರದಿಂದಾದರೆ ಅದರ ಬಗ್ಗೆ ಎಚ್ಚರವಹಿಸಬೇಕು.

ಈ ರೀತಿಯ ಅಲರ್ಜಿಯನ್ನು ಮನೆ ಮದ್ದಿನಿಂದ ಹೋಗಲಾಡಿಸಬಹುದು. ಅದರಲ್ಲೂ ಈ ಕೆಳಗಿನ ಮನೆಮದ್ದು ತುಂಬಾ ಪರಿಣಾಮಕಾರಿಯಾಗಿದೆ.

ದೊಡ್ಡ ಪತ್ರೆ

ದೊಡ್ಡ ಪತ್ರೆ

ಅಲರ್ಜಿಯಿಂದ ಮೈಯಲ್ಲಿ ಗುಳ್ಳೆ ಬಂದರೆ ದೊಡ್ಡಪತ್ರೆಯ ರಸ ತೆಗೆದು ಅದನ್ನು ಮೈಗೆ ಉಜ್ಜಿದರೆ ತಕ್ಷಣ ಕಡಿಮೆಯಾಗುವುದು. ಅದಲ್ಲದಿದ್ದರೆ ಸ್ವಲ್ಪ ದೊಡ್ಡ ಪತ್ರೆಯ ರಸಕ್ಕೆ 3-4 ಹನಿ ಜೇನು ಹಾಕಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾ ಬಂದರೆ ಅಲರ್ಜಿ ಸಮಸ್ಯೆ ಕಾಡಬಹುದು. ಇದರಿಂದ ಚಟ್ನಿ ತಯಾರಿಸಿ ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಅರಿಶಿಣ ಹಾಕಿದ ಹಾಲು

ಅರಿಶಿಣ ಹಾಕಿದ ಹಾಲು

ಅಲರ್ಜಿ ಕೆಮ್ಮವಿದ್ದರೆ ಒಂದು ಲೋಟ ಬಿಸಿಹಾಲಿಗೆ ಒಂದು ಚಮಚೆ ಶುದ್ಧ ಅರಿಶಿಣಪುಡಿಯನ್ನು ಬೆರೆಸಿ ಕುಡಿದರೆ ತುಂಬಾ ಒಳ್ಳೆಯದು. ಹಾಲು ಇಷ್ಟ ಪಡದವರು ನೀರಿಗೆ ಕೂಡ ಹಾಕಿ ಕುಡಿದರೆ ಅಲರ್ಜಿ ಕೆಮ್ಮು ಹಾಗೂ ಶೀತ ಕಡಿಮೆಯಾಗುವುದು.

ಸ್ನಾನ

ಸ್ನಾನ

* ಸ್ನಾನಕ್ಕೆ ಹದ ಬಿಸಿನೀರನ್ನು ಬಳಸಿ, ತುರಿಕೆ ತಡೆಯಲು ಸಡಿಲವಾದ ಉಡುಗೆಯನ್ನು ತೊಡಬೇಕು.

* ಹಳ್ಳಿಗಳಲ್ಲಿ ಗಾಳಿ ಸೊಪ್ಪು ದೊರೆಯುತ್ತದೆ. ಅದನ್ನು ಹಚ್ಚಿದರೂ ಕಡಿಮೆಯಾಗುವುದು.

* ಸ್ನಾನದ ನೀರಿಗೆ ಕಹಿಬೇವಿನ ಎಲೆ ಹಾಕಿದರೆ ತುಂಬಾ ಒಳ್ಳೆಯದು.

ಬಿಳಿ ರಕ್ತ ಕಣ ಹೆಚ್ಚಿಸುವ ಆಹಾರ

ಬಿಳಿ ರಕ್ತ ಕಣ ಹೆಚ್ಚಿಸುವ ಆಹಾರ

ಬಿಳಿರಕ್ತಕಣ ಹೆಚ್ಚಿಸುವ ಆಹಾರಗಳನ್ನು ತಿನ್ನಿ. ನೆಲ್ಲಿಕಾಯಿ ಪುಡಿಗೆ ಸ್ವಲ್ಪ ಜೇನು ಬೆರೆಸಿ ಪ್ರತಿದಿನ ಸೇವಿಸುವುದರಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದು.

ತಿನ್ನಬಾರದ ಆಹಾರಗಳು

ತಿನ್ನಬಾರದ ಆಹಾರಗಳು

ಕೆಲವರಿಗೆ ಬದನೆಕಾಯಿ ತಿಂದರೆ ಆಗುವುದಿಲ್ಲ, ಮತ್ತೆ ಕೆಲವರಿಗೆ ಟೊಮೆಟೊ ಆಗುವುದಿಲ್ಲ ಯಾವ ಆಹಾರ ಅಲರ್ಜಿ ತರುತ್ತದೆಯೋ ಅದನ್ನು ತಿನ್ನಲು ಹೋಗಬೇಡಿ. ಹುಳಿ ವಸ್ತುಗಳನ್ನು ತಿನ್ನಬಾರದು.

English summary

Home Remedies For Allergy | Tips For Health | ಅಲರ್ಜಿಗೆ ಮನೆಮದ್ದು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Most of the people suffering from allergy problem. Dust, climate, food these are all main reason for the allergy. If you get allergy use these home remedies, will get relief.
X
Desktop Bottom Promotion