For Quick Alerts
ALLOW NOTIFICATIONS  
For Daily Alerts

ಅಣಬೆ ತಿಂದರೆ ಆರೋಗ್ಯಕ್ಕೆ ನಾನಾ ಲಾಭ!

|

ಅಣಬೆ ಒಂದು ಬಗೆಯ ಸಸ್ಯ ಆಗಿದ್ದರೂ ಅದನ್ನು ಮಾಂಸಾಹಾರದ ಗುಂಪಿಗೆ ಸೇರಿಸಲಾಗಿದೆ ಆದ್ದರಿಂದ ತುಂಬಾ ಜನರು ಇದನ್ನು ತಿನ್ನುವುದಿಲ್ಲ. ಆದರೆ ಅಣಬೆ ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಅದರಲ್ಲೂ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು.

Health Benefits From Mushroom

1. ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತೆ: ಪ್ರತಿದಿನ ಒಂದು ಔನ್ಸ್ ನಷ್ಟು ಅಣಬೆ ಸೇವಿಸಿದರೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಶೇಕಡಾ 64 ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ. ಇಂತಹದೇ ಇನ್ನೊಂದು ಅಧ್ಯಯನ, ಸ್ತನ ಕ್ಯಾನ್ಸರ್ ತಗುಲುವ ಸಾಧ್ಯತೆಯನ್ನು ಅಣಬೆ ಶೇಕಡಾ 90 ರಷ್ಟು ಕಡಿಮೆಗೊಳಿಸುತ್ತದೆ ಎಂದೂ ವರದಿ ಮಾಡಿದೆ.

2. ವಿಟಮನ್ ಬಿ2: ಶಕ್ತಿಯನ್ನು ನೀಡಲು ಆಹಾರವನ್ನು ಗ್ಲೂಕೋಸ್ ಆಗಿ ಪರಿವರ್ತನೆ ಮಾಡುವಲ್ಲಿ ವಿಟಮಿನ್ ಬಿ ತುಂಬಾ ಅಗತ್ಯ. ಅಣಬೆಯಲ್ಲಿ ಅತಿ ಹೆಚ್ಚು ವಿಟಮಿನ್ ಬಿ2 ಮತ್ತು ಬಿ3 ಇರುವುದರಿಂದ ದೇಹಕ್ಕೆ ಇದು ತುಂಬಾ ಒಳ್ಳೆಯದು.

3. ಕೊಲೆಸ್ಟ್ರಾಲ್ ಕರಗಿಸುತ್ತೆ: ಅಣಬೆಯಲ್ಲಿ ಬೊಜ್ಜಿನ ಅಂಶವಿಲ್ಲ ಮತ್ತು ಕಡಿಮೆ ಕಾರ್ಬೊ ಹೈಡ್ರೇಡ್ ಹೊಂದಿದೆ. ಅಷ್ಟೇ ಅಲ್ಲ ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಬೊಜ್ಜು ಕರಗಿಸುವುದು ಸುಲಭ. ಇದರಲ್ಲಿನ ಕೆಲವು ಎಂಜೈಮು ದೇಹದಲ್ಲಿ ಕೊಲೆಸ್ಟ್ರಾಲ್ ಕರಗಿಸಲು ಸಹಾಯ ಮಾಡುತ್ತದೆ.

4. ಮಧುಮೇಹ: ಇದು ದೇಹದಲ್ಲಿರುವ ಅಧಿಕ ಸಕ್ಕರೆಯಂಶವನ್ನು ಕಡಿಮೆ ಮಾಡುವುದರಿಂದ ಮಧುಮೇಹಿ ಈ ಆಹಾರವನ್ನು ತಿನ್ನುವುದು ಒಳ್ಳೆಯದು.

5. ರೋಗನಿರೋಧಕ ಶಕ್ತಿ: ಇದು ದೇಹಕ್ಕೆ ರೋಗ ನಿರೋಧಕ ಶಕ್ತಿ ಒದಗಿಸುತ್ತದೆ. ಇದರಲ್ಲಿನ antibiotic ಅಂಶ ದೇಹ ಇನ್ನಿತರ ಸೋಂಕುಗಳಿಗೆ ತುತ್ತಾಗುವುದನ್ನು ತಡೆಯುತ್ತದೆ.

6. ರಕ್ತಹೀನತೆ: ವಿಟಮಿನ್ ಡಿ ಹೊಂದಿರುವ ಏಕೈಕ ತರಕಾರಿಯೆಂದರೆ ಅಣಬೆ. ಅಷ್ಟೇ ಅಲ್ಲ, ಅಣಬೆಯಲ್ಲಿ ಎಲುಬಿಗೆ ಶಕ್ತಿ ನೀಡುವ ಕ್ಯಾಲ್ಸಿಯಂ, ರಕ್ತಹೀನತೆ ನಿವಾರಿಸುವ ಕಬ್ಬಿಣಾಂಶ ಮತ್ತು ರಕ್ತದೊತ್ತಡ ಕಡಿಮೆ ಮಾಡಲು ಸಹಕರಿಸುವ ಪೊಟಾಶಿಯಂ ಪೂರಕವಾಗಿದೆ.

English summary

Health Benefits From Mushroom | Tips For Health | ಅಣಬೆಯ ಆರೋಗ್ಯಕರ ಗುಣಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

You must have heard many people say that it is good to eat mushrooms. But, did you ever consider why? The reasons are here.
Story first published: Wednesday, September 26, 2012, 17:21 [IST]
X
Desktop Bottom Promotion