For Quick Alerts
ALLOW NOTIFICATIONS  
For Daily Alerts

ಧೂಮಪಾನದ ಹಾನಿ ತಡೆಯುವ 9 ಆಹಾರಗಳು

|

ಹೊಗೆಸೊಪ್ಪಿನಲ್ಲಿ ನಿಕೋಟಿನ್ ಎಂಬ ವಿಷಕಾರಿ ಅಂಶವಿರುತ್ತದೆ. ಇದು ದೇಹಕ್ಕೆ ಒಳಕ್ಕೆ ಸೇರಿದರೆ ನಿಧಾನಕ್ಕೆ ದೇಹದ ಆರೋಗ್ಯವನ್ನು ಹಾಳು ಮಾಡುತ್ತಾ ಬರುತ್ತದೆ. ಆದ್ದರಿಂದಲೇ ಧೂಮಪಾನ ಮಾಡಿದರೆ ಆರೋಗ್ಯಕ್ಕೆ ಹಾನಿಕಾರಕ. ಕೆಟ್ಟ ಚಟಗಳನ್ನು ಬೆಳೆಸಿಕೊಂಡರೆ ಬಿಡುವುದು ಕಷ್ಟ. ಆದರೆ ಹೆಚ್ಚಿನವರು ತುಂಬಾ ಶ್ರಮ ಪಟ್ಟು ಧೂಮಪಾನದಿಂದಾಗಿ ಅಭ್ಯಾಸವನ್ನು ಬಿಡುತ್ತಾರೆ. ಧೂಮಪಾನ ಬಿಟ್ಟರೂ ಮೊದಲು ಧೂಮಪಾನದಿಂದ ದೇಹ ಸೇರಿದ ನಿಕೋಟಿನ್ ಅಂಶ ಸುಲಭವಾಗಿ ದೇಹದಿಂದ ಹೊರಕ್ಕೆ ಹೋಗುವುದಿಲ್ಲ.

ದೇಹದಲ್ಲಿರುವ ನಿಕೋಟಿನ್ ಅಂಶಗಳನ್ನು ಹೊರಹಾಕುವಲ್ಲಿ ಈ ಕೆಳಗಿನ ಅಂಶಗಳು ತುಂಬಾ ಸಹಕಾರಿಯಾಗಿದೆ.

1. ಬ್ರೊಕೋಲಿ

1. ಬ್ರೊಕೋಲಿ

ಧೂಮಪಾನ ಮಾಡಿದರೆ ದೇಹದಲ್ಲಿರುವ ವಿಟಮಿನ್ ಗಳು ಕಡಿಮೆಯಾಗುತ್ತವೆ. ಬ್ರೊಕೋಲಿಯಲ್ಲಿ ವಿಟಮಿನ್ ಬಿ5 ಇದ್ದು, ದೇಹದಲ್ಲಿರುವ ನಿಕೋಟಿನ್ ಅಂಶವನ್ನು ಹೊರಕ್ಕೆ ಹಾಕಿ ದೇಹದ ಆರೋಗ್ಯವನ್ನು ಕಾಪಾಡುತ್ತದೆ.

2. ಕಿತ್ತಳೆ

2. ಕಿತ್ತಳೆ

ಇದು ದೇಹದಲ್ಲಿರುವ ನಿಕಟಿನ್ ಅಂಶವನ್ನು ಹೊರಹಾಕುವುದು ಮಾತ್ರವಲ್ಲದೆ ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ಪ್ರತಿದಿನ ಕಿತ್ತಳೆ ತಿಂದರೆ ಮಾನಸಿಕ ಒತ್ತಡವನ್ನು ಸ್ವಾಭಾವಿಕವಾಗಿ ಕಡಿಮೆಗೊಳಿಸಬಹುದು.

3. ಕ್ಯಾರೆಟ್ ಜ್ಯೂಸ್

3. ಕ್ಯಾರೆಟ್ ಜ್ಯೂಸ್

ಒಂದು ಸಲ ಧೂಮಪಾನ ಮಾಡಿದರೆ ಅದರಲ್ಲಿರುವ ನಿಕೋಟಿನ್ ಅಂಶ ದೇಹದಲ್ಲಿ 3 ದಿನಗಳವರೆಗೆ ಇರುತ್ತದೆ. ಕ್ಯಾರೆಟ್ ನಲ್ಲಿ ವಿಟಮಿನ್ ಎ, ಸಿ, ಕೆ, ಬಿ ಇದ್ದು ಇದು ದೇಹದಲ್ಲಿರುವ ನಿಕೋಟಿನ್ ಅಂಶವನ್ನು ಹೊರಹಾಕುತ್ತದೆ.

4. ಪಾಲಾಕ್ ಸೊಪ್ಪು

4. ಪಾಲಾಕ್ ಸೊಪ್ಪು

ಪಾಲಾಕ್ ಸೊಪ್ಪಿಗೆ ದೇಹದಲ್ಲಿರುವ ನಿಕೋಟಿನ್ ಅಂಶವನನ್ನು ಕಡಿಮೆಗೊಳಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿರುವ ಫಾಲಿಕ್ ಆಸಿಡ್ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

5. ದಾಳಿಂಬೆ

5. ದಾಳಿಂಬೆ

ದಾಳಿಂಬೆ ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸುತ್ತದೆ. ಧೂಮಪಾನ ಮಾಡುವವರು ಪ್ರತಿದಿನ ಸ್ವಲ್ಪ ದಾಳಿಂಬೆ ತಿಂದರೆ ಧೂಮಪಾನ ದೇಹದ ಮೇಲೆ ಬೀರುವ ಪ್ರಭಾವನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು.

6. ಕಿವಿ ಹಣ್ಣು

6. ಕಿವಿ ಹಣ್ಣು

ಕಿವಿ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಇದ್ದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕ ಧೂಮಪಾನ ಚಟ ಬಿಟ್ಟ ನಂತ ಸ್ವಲ್ಪ ಸಮಯ ಕಿವಿ ಣ್ಣು ತಿಂದರೆ ದೇಹದಲ್ಲಿ ಉಳಿದಿರುವ ನಿಕೋಟಿನ್ ಅಂಶವನ್ನು ಸಂಪೂರ್ಣವಾಗಿ ಹೊರಹಾಕಬಹುದು.

7. ಬೆರ್ರಿ

7. ಬೆರ್ರಿ

ಬೆರ್ರಿ ನಿಕೋಟಿನ್ ಹಾಗೂ ಇತರ ಹಾನಿಕಾರಕ ಅಂಶಗಳನ್ನು ದೇಹದಿಂದ ಹೊರಕ್ಕೆ ಹಾಕಲು ಸಹಕಾರಿಯಾಗಿದೆ. ಇವುಗಳು ದೇಹದಲ್ಲಿರುವ ಅಧಿಕ ಕೊಬ್ಬನ್ನು ಕೂಡ ಕರಗಿಸುತ್ತದೆ.

8. ಒಣ ಗಿಡಮೂಲಿಕೆಗಳು

8. ಒಣ ಗಿಡಮೂಲಿಕೆಗಳು

ದೇಹದಲ್ಲಿ ನಿಕೋಟಿನ್ ಅಂಶವನ್ನು ಕಡಿಮೆ ಮಾಡಲು ಕೆಲವೊಂದು ಗಿಡಮೂಲಿಕೆಗಳಾದ Vitamin B12, Burdock root ಇವೆಲ್ಲಾ ತುಂಬಾ ಸಹಕಾರಿಯಾಗಿದೆ. ಆರ್ಯುವೇದ ವೈದ್ಯನ ಸಲಹೆಯನ್ನು ಪಡೆದು ದೇಹದಲ್ಲಿರುವ ನಿಕೋಟಿನ್ ಅಂಶವನ್ನು ಹೋಗಲಾಡಿಸಿ.

9. ನೀರು

9. ನೀರು

ಧೂಮಪಾನ ಮಾಡಿದರೆ ನಿರ್ಜಲೀಕರಣ ಉಂಟಾಗುತ್ತದೆ. ಸಾಕಷ್ಟು ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಂಶವನ್ನು ಕಾಪಾಡಲು ಸಹಾರಿಯಾಗಿದೆ.

English summary

Foods To Flush Out Nicotine From The Body | Tips For Health | ದೇಹದಲ್ಲಿರುವ ನಿಕೋಟಿನ್ ಅಂಶವನ್ನು ಹೊರಹಾಕುವ 9 ಆಹಾರಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

There is a good news for smart people who have decided to quit smoking. You can flush out nicotine from your body to some extent by having healthy foods and changing your lifestyle.
X
Desktop Bottom Promotion