ಅತ್ಯಂತ ಆರೋಗ್ಯಕರ ಅಕ್ಕಿ-ಭಾರತದ ಸ್ವರ್ಣ ಅಕ್ಕಿ!

By:
Subscribe to Boldsky

Eat Swarna Rice To Control Diabetes
ಭಾರತದಲ್ಲಿ ಬೆಳೆಯುವ ಅಕ್ಕಿ ತಳಿಗಳಲ್ಲಿ ಸ್ವರ್ಣ ಅಕ್ಕಿಯಿಂದ ತಯಾರಿಸಿದ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಅಂತರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ (International Rice Research Institute (IRRI)) ಹೇಳಿದೆ. ಈ ಸಂಶೋಧನೆಯಲ್ಲಿ ಸುಮಾರು 250 ಅಕ್ಕಿ ತಳಿಗಳನ್ನು ಪರೀಕ್ಷಿಸಲಾಯಿತು. ಅದರಲ್ಲಿ ಭಾರತದ ಅಕ್ಕಿ ತಳಿಯಾದ ಸ್ವರ್ಣ ಅಕ್ಕಿಯಲ್ಲಿ ಅತೀ ಕಡಿಮೆ ಗ್ಲೈಸೆಮಿಕ್ ಅಂಶವಿದ್ದು, ಇದು ಅತ್ಯಂತ ಆರೋಗ್ಯಕರವಾದ ಅಕ್ಕಿ ಎಂದು ಸಾಬೀತಾಗಿದೆ.

ಈ ಸ್ವರ್ಣ ಅಕ್ಕಿಯಲ್ಲಿ ಕಡಿಮೆ ಗ್ಲೈಸಿಮಿಕ್ ಇಂಡೆಕ್ಸ್ ಅಥವಾ ಜಿಐ (glycemic index ) ಇರುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಈ ಅಕ್ಕಿಯಿಂದ ತಯಾರಿಸಿದ ಪದಾರ್ಥಗಳ ಸೇವನೆ ತುಂಬಾ ಒಳ್ಳೆಯದು. ಬಾಸುಮತಿ ಅಕ್ಕಿಯಲ್ಲಿ ಜಿಐ ಪ್ರಮಾಣ ಸ್ವರ್ಣ ಅಕ್ಕಿಯಲ್ಲಿರುವುದಕ್ಕಿಂತ ಅಧಿಕವಿದೆ. ಜಿಐ ಡಯಾಬಿಟಿಸ್ ಹೆಚ್ಚಾಗಲು ಒಂದು ಮಖ್ಯ ಕಾರಣ. ಆದ್ದರಿಂದ ಜಿಐ ಕಡಿಮೆ ಇರುವ ಆಹಾರವನ್ನು ತಿಂದರೆ ಮಧುಮೇಹ ಬರದಂತೆ ತಡೆಯಬಹುದು. ಆದ್ದರಿಂದ ಈ ಅಕ್ಕಿ ಆರೋಗ್ಯದ ರಕ್ಷಣೆಗೆ ತುಂಬಾ ಸಹಕಾರಿಯಾಗಿದೆ.

ಈ ಜಿಐ ಎಂದರೇನು?
ನಾವು ಸೇವಿಸುವ ಆಹಾರದಲ್ಲಿನ ಕಾರ್ಬೋಹೈಡ್ರೇಟ್ಸ್ ಪ್ರಮಾಣವನ್ನು ಅಳೆಯುವ ಮಾಪಕವನ್ನು ಜಿಐ ಎನ್ನಲಾಗುವುದು. ಅಧಿಕ ಜಿಐ ಇರುವ ಆಹಾರ ಮಧುಮೇಹಿಗಳಿಗೆ ಹಾಗೂ ಬೊಜ್ಜನ್ನು ಹೊಂದಿರುವವರಿಗೆ ಒಳ್ಳೆಯದಲ್ಲ. ಅಧಿಕ ಜಿಐ ಇರುವ ಆಹಾರ ಪದಾರ್ಥಗಳು ಉದಾಹರಣೆಗೆ ಆಲೂಗೆಡ್ಡೆ ಸೇವಿಸಿದರೆ ರಕ್ತದ ಗ್ಲೂಕೋಸ್ ಪ್ರಮಾಣ ವೇಗವಾಗಿ ಏರುವುದು. ಆದರೆ ಕಡಿಮೆ ಜಿಐ ಇರುವ ಆಹಾರಗಳನ್ನು ಸೇವಿಸಿದರೆ ರಕ್ತದ ಗ್ಲುಕೋಸ್ ಮಟ್ಟವನ್ನು ನಿಧಾನವಾಗಿ ಏರಿಸುತ್ತವೆ, ಇದರಿಂದ ಮಧುಮೇಹಿಗಳಿಗೆ ಯಾವುದೇ ಅಪಾಯವಿಲ್ಲ.

ಇತರ ಅಕ್ಕಿಗಳಲ್ಲಿ ಜಿಐ ಪ್ರಮಾಣ ಅಧಿಕವಿರುವುದರಿಂದ ಅವುಗಳಿಂದ ತಯಾರಿಸಿದ ಅನ್ನವನ್ನು ಮಧುಮೇಹಿಗಳು ತಿನ್ನಬಾರದು. ಈ ಸ್ವರ್ಣ ಅಕ್ಕಿಯ ಅನ್ನವನ್ನು ತಿಂದರೆ ಇದರಲ್ಲಿ ತುಂಬಾ ಕಡಿಮೆ ಜಿಐ ಇದ್ದು, ತುಂಬಾ ನಿಧಾನಕ್ಕೆ ಜೀರ್ಣವಾಗುವುದರಿಂದ , ದೇಹಕ್ಕೆ ಗ್ಲೂಕೋಸ್ ಅಂಶ ನಿಧಾನಕ್ಕೆ ಸೇರುತ್ತದೆ, ಆದ್ದರಿಂದ ಮಧುಮೇಹ ಕಾಯಿಲೆ ಹತ್ತಿರ ಸುಳಿಯಲೂ ಬಿಡುವುದಿಲ್ಲ. ಈ ಅಕ್ಕಿ ಮಧುಮೇಹಿಗಳಿಗೆ ಮಾತ್ರವಲ್ಲ ಇತರರು ಸೇವಿಸಿದರೆ ಮಧುಮೇಹ ಕಾಯಿಲೆಯ ಭಯವಿಲ್ಲದೆ ಆರಾಮವಾಗಿ ಜೀವಿಸಬಹುದು.

ಮಧುಮೇಹ ಕಾಯಿಲೆ ಇರುವವರೆಗೆ ಅನ್ನ ತಿನ್ನದಂತೆ ವೈದ್ಯರು ಹೇಳುತ್ತಾರೆ. ಆದರೆ ಇನ್ನು ಮುಂದೆ ಮಧುಮೇಹಿಗಳಿಗೆ ಅನ್ನ ತಿನ್ನಬೇಕೆಂದು ಅನಿಸಿದಾಗ ಸ್ವರ್ಣ ಅಕ್ಕಿಯಿಂದ ತಯಾರಿಸಿದ ಅನ್ನವನ್ನು ತಿನ್ನಬಹುದು. ಇತರರೂ ಅಷ್ಟೇ ಪಿಜ್ಜಾ, ಬರ್ಗರ್ , ನೂಡಲ್ಸ್ ಅಂತ ತಿನ್ನುವ ಬದಲು ಸ್ವರ್ಣ ಅಕ್ಕಿಯಿಂದ ತಯಾರಿಸಿದ ಆಹಾರವನ್ನು ಸೇವಿಸಿ ಆರೋಗ್ಯವಾಗಿರಿ!

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Read more about: ಅನ್ನ
Story first published: Saturday, July 14, 2012, 11:26 [IST]
English summary

Eat Swarna Rice To Control Diabetes | Tips For Health | ಮಧುಮೇಹವನ್ನು ನಿಯಂತ್ರಿಸುವ ಸ್ವರ್ಣ ಅಕ್ಕಿ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Indian rice Swarna is amongst the most healthy varieties key food staple as researchers have found it has low risk of diabetes, says a leading rice research organisation.
Please Wait while comments are loading...
Subscribe Newsletter