For Quick Alerts
ALLOW NOTIFICATIONS  
For Daily Alerts

ಮೂತ್ರ ಉರಿಯೇ? ಇಲ್ಲಿದೆ ಮನೆಮದ್ದು

|

ಮೂತ್ರ ಮಾಡಿದ ನಂತರ ಕೆಲವರಲ್ಲಿ ಆ ಭಾಗದಲ್ಲಿ ತುಂಬಾ ಉರಿ ಕಂಡು ಬರುತ್ತದೆ. ಈ ರೀತಿ ಉಂಟಾದರೆ ಮೂತ್ರ ಉರಿ ಕಾಯಿಲೆಯಿಂದ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಈ ರೀತಿಯ ಕಾಯಿಲೆಗಳು ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರಲ್ಲಿ ಕೂಡ ಕಂಡು ಬರುತ್ತದೆ.

ಮೂತ್ರನಾಳಕ್ಕೆ ಸೋಂಕು ತಗುಲಿದರೆ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. ಮೂತ್ರದ ನಂತರ ರೀತಿ ಕಂಡು ಬಂದರೆ ಈ ಕೆಳಗಿನ ಅಂಶಗಳು ಪ್ರಮುಖ ಕಾರಣಗಳಾಗಿವೆ:

Burning Urination Problem? Home Remedies

ಮೂತ್ರ ಉರಿಗೆ ಕಾರಣಗಳು:
* UTI ಸಮಸ್ಯೆ ಅಥವಾ ಮೂತ್ರನಾಳದಲ್ಲಿ ಸೋಂಕು
* ದೇಹದಲ್ಲಿ ನೀರಿನಂಶ ಕಡಿಮೆಯಾದರೆ
* ಕಿಡ್ನಿಯಲ್ಲಿ ಕಲ್ಲಿದ್ದರೆ
* ಲಿವರ್ ನ ಸಮಸ್ಯೆ ಇದ್ದರೆ (ಯಕೃತ್ ಸಮ್ಯಸ್ಯೆ)
* ಅಲ್ಸರ್
* ಹೆರಿಗೆ ನಂತರ ನರಗಳಲ್ಲಿ ತೊಂದರೆ ಉಂಟಾದರೆ
* ವೀರ್ಯಾಣುಗಳಲ್ಲಿ ಸೋಂಕು ಇದ್ದರೆ
* ಎಸ್ ಟಿ ಡಿ (sexually transmitted diseases)
* ಮಧುಮೇಹವಿದ್ದರೆ
* ಪೋಷಕಾಂಶದ ಕೊರತೆ ಉಂಟಾದರೆ
ಮೂತ್ರ ನಾಳ ಚಿಕ್ಕದಾಗಿದ್ದರೆ ಈ ರೀತಿಯ ಸಮಸ್ಯೆ ಕಂಡು ಬರುವುದು.

ಮನೆಮದ್ದು:

* ತುಂಬಾ ನೀರು ಕುಡಿಯಿರಿ. ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಉರಿ ಮೂತ್ರ ಉಂಟಾದರೆ ಮೂತ್ರ ಹಳದಿ ಬಣ್ಣದಲ್ಲಿರುತ್ತದೆ. ಈ ರೀತಿ ಕಂಡು ಬಂದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ.

* ಎಳೆ ನೀರು ಕುಡಿಯುವುದರಿಂದ, ಕೊತ್ತಂಬರಿ ಬೀಜ ಮತ್ತು ಬೆಲ್ಲವನ್ನು ಹಾಕಿ ಕುದಿಸಿ ಕುಡಿಯುವುದರಿಂದ ಕೂಡ ಈ ಉರಿ ಮೂತ್ರದ ಸಮಸ್ಯೆಯನ್ನು ಕಡಿಮೆ ಮಾಡಬಹುದು.

* ಒಂದು ಗ್ಲಾಸ್ ನೀರಿನಲ್ಲಿ 1 ಚಮಚ ಕೊತ್ತಂಬರಿ ಪುಡಿಯನ್ನು ಹಾಕಿ ಒಂದು ರಾತ್ರಿ ಇಟ್ಟು ಬೆಳಗ್ಗೆ ಸ್ವಲ್ಪ ಬೆಲ್ಲದ ಪುಡಿ ಸೇರಿಸಿ ಮಿಕ್ಸಿ ಮಾಡಿ ಕುಡಿದರೆ ಮೂತ್ರ ಉರಿ ಕಡಿಮೆಯಾಗುವುದು.

ಇಷ್ಟೆಲ್ಲಾ ಮಾಡಿ ಕಡಿಮೆಯಾಗದಿದ್ದರೆ ಕಿಡ್ನಿ ಸಮಸ್ಯೆ ಇರಬಹುದು, ಆದ್ದರಿಂದ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು ಒಳ್ಳೆಯದು.

English summary

Burning Urination Problem? Home Remedies | Tips For Health | ಮೂತ್ರ ಉರಿಯೇ? ಇಲ್ಲಿದೆ ಮನೆಮದ್ದು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Having a burning sensation after urination is not uncommon among women. Even men have this urinary problem. Well, most of the times, this happens when the woman suffers from UTI or other vaginal infections.
X
Desktop Bottom Promotion