ಸರಳ ಉಸಿರಾಟದ ವ್ಯಾಯಾಮದಲ್ಲಿ ಕರಗುತ್ತೆ ಬೊಜ್ಜು

By:
Subscribe to Boldsky

Breathing Exercise To Loose Belly Fat
ಉಸಿರಾಟದ ವ್ಯಾಯಾಮದಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು ಅಂದರೆ ನಂಬುತ್ತೀರಾ? ಉಸಿರಾಟದ ವ್ಯಾಯಾಮ ಮಾಡಿದರೆ ಅಧಿಕ ತೂಕ ಕಡಿಮೆಯಾಗಿ ಆಕರ್ಷಕ ಮೈಕಟ್ಟನ್ನು ಪಡೆಯಬಹುದು ಮತ್ತು ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ. ಈ ವ್ಯಾಯಾಮವನ್ನು ಮನೆಯಲ್ಲಿಯೇ ಮಾಡಬಹುದಾಗಿದ್ದು ಈ ಉಸಿರಾಟದ ವ್ಯಾಯಮವನ್ನು ಮಾಡಬಹುದು ಎಂದ ತಿಳಿಯಲು ಮುಂದೆ ಓದಿ.

ಈ ವ್ಯಾಯಾಮವನ್ನು ಮಾಡಲು ದಿನದಲ್ಲಿ 15-20 ನಿಮಿಷ ಸಮಯವನ್ನು ಮೀಸಲಿಟ್ಟರೆ ಸಾಕು. ಉಸಿರಾಟದ ವ್ಯಾಯಾಮ ಮಾಡಿದರೆ ದೇಹಕ್ಕೆ ಆಮ್ಲಜನಕ ಪೂರೈಕೆಯಾಗುತ್ತದೆ. ಇದರಿಂದ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದರಿಂದ ಉಸಿರಾಟದ ಸಮಸ್ಯೆ ಕಂಡು ಬರುವುದಿಲ್ಲ ಮತ್ತು ಆರೋಗ್ಯ ಕೂಡ ಹೆಚ್ಚುತ್ತದೆ.

ಉಸಿರಾಟದ ವ್ಯಾಯಾಮ ಮಾಡುವ ವಿಧಾನ:

ಮೊದಲನೆಯದಾಗಿ ನೇರವಾಗಿ ಕುಳಿತುಕೊಳ್ಳಬೇಕು. ನಂತರ ಕೈಗಳನ್ನು ತೊಡೆಯ ಮೇಲೆ ಇಟ್ಟುಕೊಳ್ಳಬೇಕು, ಕಣ್ಣುಗಳನ್ನು ಮುಚ್ಚಬೇಕು. ನಂತರ ಆಳವಾಗಿ ಉಸಿರು ಎಳೆದು ನಿಧಾನಕ್ಕೆ ಹೊರಬಿಡಬೇಕು. ಈ ರೀತಿ 5-6 ಬಾರಿ ಮಾಡಬೇಕು. ಆಗ ಆಮ್ಲಜನಕ ಅಧಿಕವಾಗಿ ದೇಹವನ್ನು ಸೇರುತ್ತದೆ. ಇದು ದೇಹದಲ್ಲಿ ಕೊಬ್ಬನ್ನು ಕರಗಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ವ್ಯಾಯಾಮ ಮಾಡಿದಾದರೆ ಆಗಾಗ ಹಸಿವು ಆಗುವುದಿಲ್ಲ ಆದ್ದರಿಂದ ಮಿತಿಯಲ್ಲಿ ಊಟ ಮಾಡುತ್ತೇವೆ. ಈ ವ್ಯಾಯಾಮದ ಬಳಿಕ 30 ಸೆಕೆಂಡ್ ವಿಶ್ರಾಂತಿ ತೆಗೆದುಕೊಳ್ಳಬೇಕು.

ಎರಡನೆಯ ವ್ಯಾಯಾಮ ಮಾಡುವಾಗ ಚೇರ್ ನಲ್ಲಿ ನೇರವಾಗಿ ಕುಳಿತುಕೊಡು ಕೈಯಿಂದ ಬಾಯಿಯನ್ನು ಮುಚ್ಚಿಕೊಂಡು ನಂತರ ಆಳವಾಗಿ ಉಸಿರು ಎಳೆದುಕೊಂಡು ನಿಧಾನಕ್ಕೆ ಹೊರಬಿಡಬೇಕು. ಈ ರೀತಿ ಮಾಡಿದರೆ ಶ್ವಾಸಕೋಶದ ಆರೋಗ್ಯಕ್ಕೆ ಒಳ್ಳೆಯದು. ಈ ವ್ಯಾಯಾಮ ಮಾಡಿದರೆ ದಿನಪೂರ್ತಿ ಚಟುವಟಿಕೆಯಿಂದ ಇರಬಹುದು.

ನಂತರ ನೆಲದ ಮೇಲೆ ಒಂದು ಚಾಪೆ ಹಾಸಿ ಅದರ ಮೇಲೆ ಮಂಡಿ ಊರಿ ಕುಳಿತು ಕೊಳ್ಳಬೇಕು. ಬೆನ್ನು ಮತ್ತು ಸೊಂಟ ನೇರವಾಗಿ ಇರಬೇಕು. ನಂತರ ಕಣ್ಣುಗಳನ್ನು ಮುಚ್ಚಿ ಒಂದು ನಿಮಿಷ ಕಣ್ಣು ಮುಚ್ಚಿ ಕೂರಬೇಕು. ಈಗ ಉಸಿರನ್ನು ವೇಗವಾಗಿ ಹೊಳಗೆ ಎಳೆಯುವುದು, ಹೊರಗೆ ಬಿಡುವುದು ಮಾಡಬೇಕು. ಈ ರೀತಿ 10 ಬಾರಿ ಮಾಡಬೇಕು. ನಂತರ ಉಸಿರನ್ನು ನಿಧಾನಕ್ಕೆ ಎಳೆದು ಹೊರಬಿಡಬೇಕು. ಈ ರೀತಿ 5 ಬಾರಿ ಮಾಡಬೇಕು. ಈ ರೀತಿ ಮಾಡಿದರೆ ಹೊಟ್ಟೆ ಬೊಜ್ಜು ಬರುವುದಿಲ್ಲ.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Saturday, September 8, 2012, 11:30 [IST]
English summary

Breathing Exercise To Loose Belly Fat | Tips For Health | ಬೊಜ್ಜು ಕಡಿಮೆ ಮಾಡಲು ಉಸಿರಾಟದ ವ್ಯಾಯಾಮ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Did you know that breathing exercises can be an effective way to lose weight and get back in shape. Lets check out some easy breathing exercises that can be tried at home.
Please Wait while comments are loading...
Subscribe Newsletter