For Quick Alerts
ALLOW NOTIFICATIONS  
For Daily Alerts

ಆಹಾರವನ್ನು ಹೇಗೆ ತಿನ್ನುವ ಅಭ್ಯಾಸ ನಿಮ್ಮದು?

|

ತಿನ್ನಲು ಏನಾದರೂ ಕೊಟ್ಟರೆ ಒಬ್ಬೊಬ್ಬರು ಒಂದೊಂದು ಸ್ಟೈಲ್ ನಲ್ಲಿ ತಿನ್ನುತ್ತಾರೆ. ಕೆಲವರು ಆಹಾರವನ್ನು ನುಂಗಿದರೆ ಮತ್ತೆ ಕೆಲವರು ಅರ್ಧಂಬರ್ಧ ಜಗಿದು ತಿನ್ನುತ್ತಾರೆ, ಮತ್ತೆ ಕೆರವರು ನಿಧಾನಕ್ಕೆ ಜಗಿದು ತಿನ್ನುತ್ತಾರೆ. ಅರ್ಜೆಂಟ್ ನಲ್ಲಿ ತಿನ್ನಬೇಡಿ, ನಿಧಾನಕ್ಕೆ ಜಗಿದು ತಿನ್ನಿ ಅಂದರೆ ಹೇಗಾದರೂ ತಿಂದರೆ ಏನು? ಹೊಟ್ಟೆ ತುಂಬಿದರೆ ಸಾಕಲ್ಲವೇ ಎಂದು ನಿಮಗೆ ಅನಿಸಬಹುದು. ಜಗಿದು ತಿನ್ನಿ ಎಂದು ಏಕೆ ಹೇಳುತ್ತಿದ್ದೇನೆ ಅಂದರೆ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು.

ಹೊಟ್ಟೆ ತುಂಬುವುದು: ನಿಧಾನಕ್ಕೆ ಜಗಿಯುತ್ತಾ ತಿಂದರೆ ಹೊಟ್ಟೆ ತುಂಬಿದಂತೆ ಅನಿಸುವುದು. ಅವಸರವಾಗಿ ತಿಂದರೆ ಎಷ್ಟು ತಿಂದೆವು ಅಂತ ಗೊತ್ತಾಗುವುದಿಲ್ಲ. ಇದರಿಂದ ಬೇಗನೆ ಹೊಟ್ಟೆ ಹಸಿವು ಆಗುವುದು.

Benefits Of Chewing Food Properly

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ಆಹಾರವನ್ನು ನಿಧಾನಕ್ಕೆ ಚೆನ್ನಾಗಿ ಜಗಿದು ತಿಂದರೆ ಜೀರ್ಣಕ್ರಿಯೆಗೆ ಸುಲಭವಾಗುತ್ತದೆ.

ಬಾಯಿಯ ಶುಚಿತ್ವಕ್ಕೆ ಒಳ್ಳೆಯದು: ನಿಧಾನಕ್ಕೆ ತಿನ್ನುವುದರಿಂದ ಹಲ್ಲಿನಲ್ಲಿ ಆಹಾರ ಅಂಟಿಕೊಳ್ಳುವುದಿಲ್ಲ. ಅಲ್ಲದೆ ಬಾಯಿ ದುರ್ಗಂಧ ಬೀರುವುದನ್ನು ತಡೆಯುತ್ತದೆ.

ದೇಹಕ್ಕೆ ಬೇಗನೆ ಶಕ್ತಿ ತುಂಬುತ್ತದೆ. ಆಹಾರವನ್ನು ಜಗಿದು ತಿನ್ನುವಾಗ ಅದರಲ್ಲಿರುವ ಪೋಷಕಾಂಶಗಳು ಎಂಜಲಿನ ಜೊತೆ ಹೊಟ್ಟೆಯನ್ನು ಸೇರಿಸಿ ದೇಹಕ್ಕೆ ಬೇಗನೆ ಶಕ್ತಿಯನ್ನು ಪೂರೈಕೆ ಮಾಡುತ್ತದೆ.

English summary

Benefits Of Chewing Food Properly | Tips For Health | ಆಹಾರವನ್ನು ಚೆನ್ನಾಗಿ ಜಗಿದು ತಿನ್ನಿ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Chewing the food properly and calmly increases the secretion of chemicals that aids digestion. Moreover, if you chew the food properly, you can control your food cravings.
X
Desktop Bottom Promotion