For Quick Alerts
ALLOW NOTIFICATIONS  
For Daily Alerts

ಗ್ರಿಲ್ಡ್ ಮಾಡಿ ತಿನ್ನಲು ಸೂಕ್ತವಾದ 10 ಆಹಾರಗಳು

|

ಗ್ರಿಲ್ಡ್ ಮಾಡಿದ ಆಹಾರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಮಾಂಸಾಹಾರವನ್ನು ಫ್ರೈ ಮಾಡಿ ತಿನ್ನುವುದಕ್ಕಿಂತ ಗ್ರಿಲ್ಡ್ ಮಾಡಿ ತಿಂದರೆ ಒಳ್ಳೆಯದು. ಕೆಲವೊಂದು ಸಸ್ಯಾಹಾರವನ್ನು ಕೂಡ ಗ್ರಿಲ್ಡ್ ಮಾಡಬಹುದು.

ಈ ರೀತಿ ಗ್ರಿಲ್ಡ್ ಮಾಡಿದ ಆಹಾರ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಈ ರೀತಿ ಆಹಾರಗಳನ್ನು ಗ್ರಿಲ್ಡ್ ಮಾಡುವಾಗ ಜೋಪಾನವಾಗಿ ಮಾಡಬೇಕು. ಇಲ್ಲದಿದ್ದರೆ ಸುಟ್ಟು ಕರಿಕಲು ಆಗುತ್ತದೆ. ಈ ಗ್ರಿಲ್ಡ್ ಮಾಡಿದ ಆಹಾರ ಪ್ರಮುಖ ಪ್ರಯೋಜನವೆಂದರೆ ಫ್ರೈಗೆ ಬಳಸಿದಷ್ಟು ಎಣ್ಣೆಯನ್ನು ಗ್ರಿಲ್ಡ್ ಮಾಡಲು ಬಳಸುವುದಿಲ್ಲ, ಇದರಿಂದ ಅಧಿಕ ಕೊಬ್ಬಿನಂಶ ಇರುವ ಆಹಾರ ದೇಹಕ್ಕೆ ಸೇರುವುದು ತಪ್ಪುತ್ತದೆ. ಅಲ್ಲದೆ ಗ್ರಿಲ್ಡ್ ಮಾಡಿದ ಆಹಾರಗಳನ್ನು ಫ್ರೈ ಮಾಡಿದರೆ ಎಷ್ಟು ರುಚಿಕರವಾಗಿರುತ್ತದೆಯೋ ಅಷ್ಟೆ ಅಥವಾ ಅದಕ್ಕಿಂತ ಅಧಿಕ ರುಚಿಕರವಾಗಿರುತ್ತದೆ.

ಎಲ್ಲಾ ಆಹಾರಗಳನ್ನು ಗ್ರಿಲ್ಡ್ ಮಾಡಲು ಸಾಧ್ಯವಿಲ್ಲ, ಆದರೆ ಈ ಕೆಳಗಿನ ಆಹಾರಗಳನ್ನು ಗ್ರಿಲ್ಡ್ ಮಾಡಿ ತಿನ್ನಬಹುದಾಗಿದ್ದು, ಈ ರೀತಿ ಮಾಡಿ ತಿಂದರೆ ಇವುಗಳಿಂದ ಹೆಚ್ಚಿನ ಆರೋಗ್ಯಕರ ಗುಣಗಳನ್ನು ಪಡೆಯಬಹುದು.

1. ಪನ್ನೀರ್

1. ಪನ್ನೀರ್

ಪನ್ನೀರ್ ಅನ್ನು ಹೆಚ್ಚಾಗಿ ಫ್ರೈ ಮಾಡಿ ಅಡುಗೆಯಲ್ಲಿ ಬಳಸುತ್ತೇವೆ. ಆದರೆ ಇದಕ್ಕೆ ಮಸಾಲೆಯನ್ನು ಸವರಿ ಗ್ರಿಲ್ಡ್ ಮಾಡಿ ತಿಂದರೆ ರುಚಿಯ ಜೊತೆಗೆ ಹೆಚ್ಚು ಆರೋಗ್ಯಕರ.

2. ಅಣಬೆ

2. ಅಣಬೆ

ಅಣಬೆಯನ್ನು ಕೂಡ ಗ್ರಿಲ್ಡ್ ಮಾಡಬಹುದಾಗಿದ್ದು ಡಯಟ್ ನಲ್ಲಿರುವವರು ಈ ರೀತಿಯ ಗ್ರಿಲ್ಡ್ ಪದಾರ್ಥ ತಿಂದರೆ ಬಾಯಿಗೂ ಮೋಸವಿಲ್ಲ, ದೇಹದ ತೂಕ ಕೂಡ ಹೆಚ್ಚಾಗುವುದಿಲ್ಲ.

3. ದುಂಡು ಮೆಣಸು

3. ದುಂಡು ಮೆಣಸು

ದುಂಡು ಮೆಣಸಿನಲ್ಲಿ ಕಡಿಮೆ ಉರಿಯಲ್ಲಿ ಗ್ರಿಲ್ಡ್ ಮಾಡಬೇಕು. ದುಂಡು ಮೆಣಸಿನ ಒಳಗೆ ಬೇಯಿಸಿದ ತರಕಾರಿಗಳನ್ನು ತುಂಬಿ ನಂತರ ಅದನ್ನು ಗ್ರಿಲ್ಡ್ ಮಾಡಿ ತಿಂದರೆ ತುಂಬಾ ರುಚಿಯಾಗಿರುತ್ತದೆ.

4. ಸೀಗಡಿ

4. ಸೀಗಡಿ

ಸೀಗಡಿಯನ್ನು ಮಸಾಲೆಯಲ್ಲಿ ಮಿಶ್ರಣ ಮಾಡಿ ಅರ್ಧ ಗಂಟೆ ಇಟ್ಟು ನಂತರ ಅತೀ ಕಡಿಮೆ ಉರಿಯಲ್ಲಿ ಗ್ರಿಲ್ಡ್ ಮಾಡಿದರೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

6. ಈರುಳ್ಳಿ

6. ಈರುಳ್ಳಿ

ಈರುಳ್ಳಿಯನ್ನು ವಿನಿಗರ್ ನಲ್ಲಿ ಅದ್ದಿ ನಂತರ ತುಂಬಾ ಕಡಿಮೆ ಉರಿಯಲ್ಲಿ ಗ್ರಿಲ್ಡ್ ಮಾಡಿದರೆ ತಿನ್ನಲು ರುಚಿಯಾಗಿರುತ್ತದೆ. ಹಸಿ ತಿನ್ನುವುದಕ್ಕಿಂತ ಹೀಗೆ ಮಾಡಿ ತಿಂದು ನೋಡಿ.

7. ಆಲೂಗೆಡ್ಡೆ

7. ಆಲೂಗೆಡ್ಡೆ

ಆಲೂಗೆಡ್ಡೆಯನ್ನು ಮಸಾಲೆಯಲ್ಲಿ ಸ್ವಲ್ಪ ಹೊತ್ತು ಇಟ್ಟು ನಂತರ ಗ್ರಿಲ್ಡ್ ಮಾಡಿ ತಿಂದು ನೋಡಿ, ಇದರ ರುಚಿ ನಿಮಗೆ ತುಂಬಾ ಇಷ್ಟವಾಗುವುದು.

6. ಚಿಕನ್

6. ಚಿಕನ್

ಡಯಟ್ ನಲ್ಲಿರುವವರು, ದೇಹದ ತೂಕ ಹೆಚ್ಚಾಗಬಾರದೆಂದು ಬಯಸುವವರು ಫ್ರೈ ಮಾಡಿದ ಚಿಕನ್ ಬದಲು ಗ್ರಿಲ್ಡ್ ಚಿಕನ್ ತಿನ್ನುವುದು ಒಳ್ಳೆಯದು. ಚಿಕನ್ ಗ್ರಿಲ್ಡ್ ಆಗಲು 25-30 ತೆಗೆದುಕೊಳ್ಳುತ್ತದೆ.

8. ಟೊಮೆಟೊ

8. ಟೊಮೆಟೊ

ಪನ್ನೀರ್ ಅಥಚಾ ಚಿಕನ್ ತುಂಡುಗಳ ನಡುವೆ ಟೊಮೆಟೊವನ್ನು ಇಟ್ಟು ಕೂಡ ಗ್ರಿಲ್ಡ್ ಮಾಡಬಹುದು. ಅಲ್ಲದೆ ಈ ರೀತಿ ಗ್ರಿಲ್ಡ್ ಮಾಡಿದ ಟೊಮೆಟೊದ ರುಚಿಯೇ ಭಿನ್ನವಾಗಿರುತ್ತದೆ.

9. ಮೀನು

9. ಮೀನು

ಹೆಚ್ಚಿನವರು ಮೀನನ್ನು ಸಾರು ಮಾಡಿ ತಿನ್ನಲು ಇಷ್ಟಪಡುವುದಿಲ್ಲ, ಅದರ ಬದಲು ಫ್ರೈ ಮಾಡಿ ತಿನ್ನಲು ಇಷ್ಟಪಡುತ್ತಾರೆ. ಆದರೆ ಫ್ರೈ ಮೀನು ತಿಂದರೆ ದೇಹದ ತೂಕ ಹೆಚ್ಚಾಗುವುದು, ಆದ್ದರಿಂದ ಮೀನನ್ನು ಗ್ರಿಲ್ಡ್ ಮಾಡಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.

10. ಬದನೆಕಾಯಿ

10. ಬದನೆಕಾಯಿ

ಬದನೆಕಾಯಿಗೆ ಉಪ್ಪು, ಖಾರ ಎಲ್ಲಾ ಹಾಕಿ ಸ್ವಲ್ಪ ಹೊತ್ತು ಇಡಬೇಕು. ನಂತರ ಕಡಿಮೆ ಉರಿಯಲ್ಲಿ ಗ್ರಿಲ್ಡ್ ಮಾಡಬೇಕು. ಈ ರೀತಿ ಗ್ರಿಲ್ಡ್ ಮಾಡಿದ ಬದನೆಕಾಯಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

English summary

10 Foods That Should Be Grilled | Tips For Health | ಗ್ರಿಲ್ಡ್ ಮಾಡಿ ತಿನ್ನಬೇಕಾದ 10 ಆಹಾರಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Grilling is a great way to cook as long as it does not burn away the nutrition value of food. You must not get carried away and over-cook foods on the grill. That is why, the grilling time for different foods vary.
X
Desktop Bottom Promotion