For Quick Alerts
ALLOW NOTIFICATIONS  
For Daily Alerts

ಮಾವಿನ ಹಣ್ಣಿನಲ್ಲಿರುವ 8 ಆರೋಗ್ಯಕರ ಗುಣಗಳು

|
Health Benefit Of Mango
ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣು ಮತ್ತು ಹಲಸಿನ ಹಣ್ಣು ಹೆಚ್ಚಾಗಿ ದೊರೆಯುತ್ತದೆ. ಮಾವಿನ ಕಾಯಿ ಮತ್ತು ಹಣ್ಣಿನಿಂದ ವಿಧ-ವಿಧದ ಖಾದ್ಯಗಳನ್ನು ಮತ್ತು ಜ್ಯೂಸ್ ಗಳನ್ನು ತಯಾರಿಸುತ್ತೇವೆ. ಮಾವಿನ ಹಣ್ಣು ಬಾಯಿಗೆ ರುಚಿ ಮಾತ್ರವಲ್ಲ ಈ ಕೆಳಗಿನ ಆರೋಗ್ಯಕರ ಗುಣಗಳನ್ನು ಹೊಂದಿದೆ.

ಮಾವಿನ ಹಣ್ಣಿನ ಆರೋಗ್ಯಕರ ಗುಣಗಳು:

1. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ:
ಅಸಿಡಿಟಿ, ಅಜೀರ್ಣ ಸಮಸ್ಯೆಯಿಂದ ಬಳಲುವವರು ಮಾವಿನ ಹಣ್ಣು ತಿನ್ನುವುದು ಒಳ್ಳೆಯದು.

2. ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತೆ:
ಮಾವಿನ ಹಣ್ಣಿನಲ್ಲಿ ನಾರಿನಂಶ ಅಧಿಕ ಇದ್ದು, ಇದರಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

3. ಲೈಂಗಿಕ ಕ್ರಿಯೆ: ಮಾವಿನ ಹಣ್ಣಿನಲ್ಲಿ ವಿಟಮಿನ್ 'ಇ' ಅಂಶವಿರುವುದರಿಂದ ಸೆಕ್ಸ್ ಹಾರ್ಮೋನ್ ಗಳನ್ನು ನಿಯಂತ್ರಣದಲ್ಲಿಡಲು ಮತ್ತು ಲೈಂಗಿಕ ಕ್ರಿಯೆಗೆ ಸಹಕಾರಿಯಾಗಿದೆ.

4. ಏಕಾಗ್ರತೆ: ಮಾವಿನ ಕಾಯಿ ಅಥವಾ ಹಣ್ಣಿನಲ್ಲಿರುವ ಗ್ಲೂಟಾಮೈನ್ ಆಸಿಡ್ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

5. ಮೊಡವೆ: ಮಾವಿನ ಹಣ್ಣನ್ನು ಕತ್ತರಿಸಿ ಅದರ ಚಿಕ್ಕ ತುಂಡನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿ ನಂತರ ಸ್ನಾನ ಮಾಡುವುದರಿಂದ ಮೊಡವೆ ಕಡಿಮೆಯಾಗುವುದು.

6. ಅಧಿಕ ಕಬ್ಬಿಣದಂಶ: ಮಾವಿನ ಹಣ್ಣಿನಲ್ಲಿ ಅಧಿಕ ಕಬ್ಬಿಣದಂಶವಿದೆ. ಮಹಿಳೆಯರಲ್ಲಿ 40ರ ನಂತರ ಮೆನೊಪಸ್ ಕಡಿಮೆಯಾಗುವುದು. ಆದ್ದರಿಂದ 40ರ ನಂತರ ಕಬ್ಬಿಣದಂಶವಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು.

ಆದರೆ ಗರ್ಭಿಣಿ ಸ್ತ್ರೀಯರು ಅಧಿಕ ಮಾವಿನ ಕಾಯಿ ಅಥವಾ ಹಣ್ಣು ತಿನ್ನಬಾರದು. ಚಿಕ್ಕ ಪ್ರಾಯದಿಂದಲೆ ತುಂಬಾ ಮಾವಿನ ಕಾಯಿ ತಿಂದು ಅಭ್ಯಾಸವಿದ್ದರೆ ಗರ್ಭಿಣಿ ಸಮಯದಲ್ಲಿ ಕೂಡ ಅಧಿಕ ಮಾವಿನ ಕಾಯಿ ತಿನ್ನಬಹುದು.

7. ಡಯಾಬಿಟಿಸ್: ಮಧುಮೇಹ ಅಥವಾ ಡಯಾಬಿಟಿಸ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಮಾವು ಹೊಂದಿದೆ. ಮಧುಮೇಹ ಇರುವವರು 10-15 ಮಾವಿನ ಎಲೆಯನ್ನು ಬಿಸಿ ನೀರಿನಲ್ಲಿ ಹಾಕಿ ಆ ಪಾತ್ರೆಯ ಮುಚ್ಚಳವನ್ನು ಮುಚ್ಚಿ ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯುವುದು ಒಳ್ಳೆಯದು.

8. ಕ್ಯಾನ್ಸರ್ ತಡೆಗಟ್ಟುತ್ತದೆ: ಕ್ಯಾನ್ಸರ್ ಮತ್ತು ಹೃದಯಾಘಾತ ಕಾಯಿಲೆಗಳನ್ನು ನಿಯಂತ್ರಣದಲ್ಲಿಡುವಲ್ಲಿ ಮಾವಿನ ಹಣ್ಣು ಸಹಕಾರಿಯಾಗಿದೆ.

English summary

Health Benefit Of Mango | Tips For Health | ಮಾವುನಲ್ಲಿರುವ ಆರೋಗ್ಯಕರ ಗುಣಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Mango Is seasonal fruit. During summer will get variety of Mango fruit in the market. This Mango fruit has lots of health benefits. This article covers all the the amazing health benefits of mangoes.
Story first published: Tuesday, April 3, 2012, 12:56 [IST]
X
Desktop Bottom Promotion