For Quick Alerts
ALLOW NOTIFICATIONS  
For Daily Alerts

ಮಾನಸಿಕ ಒತ್ತಡ ಕ್ಯಾನ್ಸರ್ ಗೆ ಒಂದು ಕಾರಣ

|
Caucus Of Cancer
ಕ್ಯಾನ್ಸರ್ ಎಂಬ ಪದ ಕೇಳಿದರೆ ಸಾಕು ಬೆಚ್ಚಿ ಬೀಳುತ್ತೇವೆ. ಕ್ಯಾನ್ಸರ್ ಬಂತೆಂದರೆ ಸಾವು ನಿಶ್ಚಿತವೆಂದೇ ಭಾವಿಸುತ್ತಾರೆ. ಆದರೆ ಕ್ಯಾನ್ಸರ್ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆ ಬಂದಿವೆ. ಕ್ಯಾನ್ಸರ್ ಮೊದಲನೇ ಹಂತದಲ್ಲಿಯೆ ಗೊತ್ತಾದರೆ ಗುಣಪಡಿಸಬಹುದು. ಈ ಕ್ಯಾನ್ಸರ್ ಉಂಟಾಗಲು ಕಾರಣವೇನು ಎಂದು ತಿಳಿಯೋಣ.

ದೇಹದಲ್ಲಿ ಜೀನ್ ಜೀವಕಣಗಳ ಬೆಳವಣಿಗೆಯನ್ನು ನಿಯಂತ್ರಿಸುವ ಮತ್ತು ವಿಂಗಡಿಸುವ ಕಾರ್ಯವನ್ನು ಮಾಡುತ್ತದೆ. ಈ ಕಣಗಳು ದೇಹದಲ್ಲಿ ಕಾರ್ಯನಿರ್ವಹಿಸುವಂತೆ DNA ನಿರ್ದೇಶನ ನೀಡುತ್ತದೆ. ಈ DNA ಕಾರ್ಯದಲ್ಲಿ ವ್ಯತ್ಯಾಸ ಉಂಟಾದರೆ ದೇಹದ ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಈ ರೀತಿ ದೇಹ ಕಣಗಳಲ್ಲಿ ಉಂಟಾಗುವ ವ್ಯತ್ಯಾಸವು ಕ್ಯಾನ್ಸರ್ ನಂತಹ ಮಾರಕ ರೋಗ ತರುತ್ತದೆ. ಹೆಚ್ಚಾಗಿ ಕ್ಯಾನ್ಸರ್ ರೋಗವು 55 ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುತ್ತದೆ. ಅದರಲ್ಲೂ 5% ವಂಶಪಾರಂಪರ್ಯವಾಗಿ ಕೂಡ ಬರುತ್ತದೆ.

ಕ್ಯಾನ್ಸರ್ ಬರಲು ಕಾರಣಗಳು:

1.ಮಾನಸಿಕ ಒತ್ತಡ: ನಿರಂತರವಾಗಿರುವ ಮಾನಸಿಕ ಒತ್ತಡದಿಂದ ದೇಹದ ಸ್ವಾಸ್ಥ್ಯ ಹಾಳಾಗುತ್ತದೆ. ಭಯ, ಕೆಟ್ಟ ಆಲೋಚನೆ, ನೆಮ್ಮದಿ ಇಲ್ಲದಿರುವುದು ಇವುಗಳಿಂದ ದೇಹದ ಆರೋಗ್ಯ ಹಾಳಾಗಿ DNA ಕಣಗಳಿಗೆ ಹಾನಿ ಉಂಟಾಗುತ್ತದೆ. ಇದರಿಂದಾಗಿ ದೇಹದಲ್ಲಿ ಹಾರ್ಮೋನ್ ಮತ್ತು ಕಣಗಳ ಉತ್ಪಾದನೆಯಲ್ಲಿ ವ್ಯತ್ಯಾಸ ಉಂಟಾಗಿ ಕ್ಯಾನ್ಸರ್ ನಂತಹ ಮಾರಕ ರೋಗ ಉಂಟಾಗಲು ಕಾರಣವಾಗುತ್ತದೆ.

2. ಚಟ ಮತ್ತು ಮಾಲಿನ್ಯ: ಪರಿಸರ ಮಾಲಿನ್ಯದಿಂದ ಗಾಳಿಯಲ್ಲಿ ಕಣ್ಣಿಗೆ ಕಾಣದ ಅನೇಕ ವಿಷಕಾರಕ ಅನಿಲಗಳ ಸೇವನೆ, ಮದ್ಯ, ಧೂಮಪಾನ ಇವುಗಳು ದೇಹದಲ್ಲಿ ಬೇಡದ ಕಣಗಳನ್ನು ಉತ್ಪತ್ತಿ ಮಾಡುವುದರಿಂದ ಕ್ಯಾನ್ಸರ್ ನಂತಕ ರೋಗಕ್ಕೆ ಆಹ್ವಾನ ನೀಡಿದಂತೆ ಆಗುವುದು.

3. ಅಧಿಕ ತೂಕ: ಮಿತಿ ಮೀರಿ ದಪ್ಪಗಾದರೆ ಡಯಾಬಿಟಿಸ್ ಹೀಗೆ ಅನೇಕ ಕಾಯಿಲೆಗಳು ಉಂಟಾಗುತ್ತದೆ. ಇದರಿಂದ ಸ್ತನ, ಕಿಡ್ನಿ ಕ್ಯಾನ್ಸರ್ ಕಾಣಿಸಿಕೊಳ್ಳುವ ಅಪಾಯ ಹೆಚ್ಚು.

4. ಹಾರ್ಮೋನ್ ಗಳಲ್ಲಿ ವ್ಯತ್ಯಾಸ: ದೇಹದಲ್ಲಿ ಹಾರ್ಮೋನ್ ಗಳನ್ನು ಸಮತೋಲನದಲ್ಲಿ ಇಡಬೇಕು. ಅದಕ್ಕಾಗಿ ಉತ್ತಮ ಜೀವನ ಶೈಲಿ ಮತ್ತು ಆಹಾರಕ್ರಮ ಅಭ್ಯಾಸ ಮಾಡಬೇಕು.

5. ಕುಡಿತ:ದಿನವೂ ಮಿತಿ ಮೀರಿ ಮದ್ಯಪಾನ ಸೇವಿಸುವುದರಿಂದ ದೇಹದಲ್ಲಿ ಈಸ್ಟ್ರೋಜನ್ ಅಂಶ ಹೆಚ್ಚಾಗಿ ಸ್ತನ ಕ್ಯಾನ್ಸರ್ ಬರುವುದು.

6. ವ್ಯಾಯಾಮ:
ಮಿತಿಮೀರಿ ಅಥವಾ ಅತಿ ಕಡಿಮೆ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ವ್ಯಾಯಾಮ ಮಾಡಿದಾಗ ಶರೀರದಿಂದ ಟಾಕ್ಸಿನ್ ಬೆವರಿನ ಮುಖಾಂತರ ಹೊರ ಹೋಗುತ್ತದೆ. ಆದರೆ ಅಧಿಕ ವ್ಯಾಯಾಮ ಮಾಡಿದರೆ ದೇಹದಲ್ಲಿ DNA ಕಣಗಳಿಗೆ ಹಾನಿ ಉಂಟಾಗಬಹುದು.

English summary

Causes Of Cancer | Cancer disease | ಕ್ಯಾನ್ಸರ್ ಗೆ ಕಾರಣಗಳು | ಕ್ಯಾನ್ಸರ್ ಕಾಯಿಲೆ

The DNA system in a body will helps to cells to do proper function. If DNA got damage it may bring disease called cancer. Here there are caucus which will badly damage the the DNA cell.
Story first published: Friday, February 10, 2012, 12:04 [IST]
X
Desktop Bottom Promotion