For Quick Alerts
ALLOW NOTIFICATIONS  
For Daily Alerts

ತೆಂಗಿನ ಕಾಯಿಯಿಂದ ಆರೋಗ್ಯವೃದ್ಧಿ ಹೇಗೆ?

|
ತೆಂಗಿನ ಕಾಯಿಯನ್ನು ಸಾಮಾನ್ಯ ಎಲ್ಲಾ ಭಾರತೀಯ ಅಡುಗೆಗಳಲ್ಲಿಯೂ ಬಳಸಿಕೊಳ್ಳಲಾಗುತ್ತೆ. ತೆಂಗಿನ ಕಾಯಿಲ್ಲದೆ ಅಡುಗೆಯೇ ರುಚಿಸುವುದಿಲ್ಲ.

ಆದರೆ ಕೇವಲ ರುಚಿಗಷ್ಟೇ ತೆಂಗಿನ ಕಾಯನ್ನು ಬಳಸಿಕೊಳ್ಳುವುದಲ್ಲ, ಅದರಲ್ಲಿ ಆರೋಗ್ಯಕ್ಕೆ ಅನುವಾಗುವ ಹಲವು ಅಂಶಗಳೂ ಅಡಗಿದೆ. ತೆಂಗಿನ ಕಾಯಿ ಆಹಾರ ಮತ್ತು ಔಷಧ ಎರಡರಲ್ಲೂ ಬಳಸಿಕೊಳ್ಳಲಾಗುತ್ತೆ.

* ತೆಂಗಿನ ಕಾಯಿಯಲ್ಲಿ ವಿಟಮಿನ್ ಇ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಹೇರಳವಾಗಿದೆ.
* ಕ್ಯಾಲ್ಸಿಯಂ, ಕಬ್ಬಿಣಾಂಶ, ಫಾಸ್ಪರಸ್ ಮತ್ತು ಖನಿಜಾಂಶ ತೆಂಗಿನ ಕಾಯಿಯಲ್ಲಿ ಅಡಗಿದೆ. ಇದರಲ್ಲಿ ಆಲ್ಕಲೈನ್ ಎಣ್ಣೆಯೂ ಅಧಿಕ ಪ್ರಮಾಣದಲ್ಲಿರುತ್ತದೆ.
* ತೆಂಗಿನ ಕಾಯಿಯನ್ನು ಆಹಾರದಲ್ಲಿ ಬಳಸಿಕೊಳ್ಳುವುದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ. ಮತ್ತು ಇದರಿಂದ ದೇಹಕ್ಕೆ ಅವಶ್ಯಕವಾದ ಪೋಷಕಾಂಶವೂ ದೊರಕುತ್ತದೆ.
* ತೆಂಗಿನ ಕಾಯಿಯ ಅಂಶ ರಕ್ತವನ್ನು ಶುದ್ಧಗೊಳಿಸಿ ಮೂತ್ರನಾಳವೂ ಸರಾಗವಾಗುತ್ತದೆ.ವಾತ, ಪಿತ್ತ, ಕಫ ಎಂಬ ಮೂರು ದೋಷಗಳೂ ನಿವಾರಣೆಯಾಗುತ್ತದೆ.
* ದಿನವೂ ತೆಂಗಿನ ತುರಿಯನ್ನು ಜಿಗಿಯುವುದರಿಂದ ಬಾಯಿಗೆ ತಗುಲುವ ಹಲವು ಸಮಸ್ಯೆಗಳನ್ನು ತಡೆಯಬಹುದು.
* ತೆಂಗಿನ ತುರಿಯನ್ನು ಗರ್ಭಿಣಿಯರು ತಿನ್ನುತ್ತಿದ್ದರೆ ಮಗುವಿನ ಆರೋಗ್ಯ ಹೆಚ್ಚುತ್ತದೆ.
* ಎಳನೀರು ಕುಡಿಯುವುದೂ ಎದೆ ಹಾಲಿನಷ್ಟು ಶುದ್ಧ. ಇದನ್ನು ಮಕ್ಕಳು ನಿರಂತರವಾಗಿ ಕುಡಿಯುತ್ತಿದ್ದರೆ ಆರೋಗ್ಯ ವೃದ್ಧಿಯಾಗುವುದಲ್ಲದೆ ಹೊಟ್ಟೆ ಹುಣ್ಣು, ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಹೆಚ್ಚಿಸುತ್ತದೆ.

English summary

Coconut Benefit | Coconut Health Benefits | ತೆಂಗಿನ ಕಾಯಿ ಉಪಯೋಗ | ತೆಂಗಿನಕಾಯಿಯಿಂದ ಆರೋಗ್ಯಕರ ಉಪಯೋಗ

Coconut which is used almost in every indian dishes not only add taste, it also has several health benefits in it. So lets see what are the health benefits of coconut.
Story first published: Friday, December 23, 2011, 11:14 [IST]
X
Desktop Bottom Promotion