For Quick Alerts
ALLOW NOTIFICATIONS  
For Daily Alerts

ಕೀಲು ನೋವಿನ ಪರಿಹಾರಕ್ಕೆ ಪೂರಕ ಔಷಧಿ ಯಾವುದು?

|
Gout Home Remedies
ಸಂಧಿವಾತ ಅಥವಾ ಕೀಲೂರ, ವಯಸ್ಸಾಗುತ್ತಿರುವ ಪುರುಷರಲ್ಲಿ ಮತ್ತು ಮುಟ್ಟು ನಿಂತ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ. ರಕ್ತದಲ್ಲಿ ಯುರಿಕ್ ಆಸಿಡ್ ಹೆಚ್ಚಾಗುವುದೇ ಈ ಸಮಸ್ಯೆಗೆ ಮೂಲ ಕಾರಣ.

ಕೀಲೂರದಿಂದ ಕೀಲುಗಳಲ್ಲಿ ಹೆಚ್ಚು ಉರಿ ಕಾಣಿಸಿಕೊಂಡು ಸಹಿಸಲಾರದಷ್ಟು ನೋವು ನೀಡುತ್ತದೆ. ಅತಿಯಾದ ಮದ್ಯ ಸೇವನೆ ಮತ್ತು ಅನಾರೋಗ್ಯಕರ ಆಹಾರವೂ ಕೀಲು ನೋವಿಗೆ ಕಾರಣ. ಕೀಲಿನಲ್ಲಿ ಉರಿಯಾಗುವುದು ಮತ್ತು ಅತಿಯಾಗಿ ಬೆವರುವುದು ಈ ಸಮಸ್ಯೆಯ ಲಕ್ಷಣ.
ಕೆಲವೊಂದು ಆಹಾರಗಳು ಸಂಧಿವಾತ ಸಮಸ್ಯೆಯನ್ನು ಹೋಗಿಸಲು ಸಹಕಾರಿ. ಅದ್ಯಾವುವೆಂದು ಇಲ್ಲಿ ತಿಳಿಯಿರಿ.

1. ಸೇಬು: ಕೀಲು ನೋವಿಗೆ ಸೇಬು ಸೇವನೆ ತುಂಬಾ ಒಳ್ಳೆಯದು. ಪ್ರತಿ ದಿನವೂ ಸೇಬು ತಿನ್ನುವುದರಿಂದ ಕೀಲು ನೋವನ್ನು ಕಡಿಮೆಗೊಳಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಚೆರ್ರಿ ಜ್ಯೂಸ್ ನ ಅಂಶವೂ ಕೂಡ ಕೀಲು ನೋವಿಗೆ ಅತ್ಯುಪಕಾರಿ. ಚೆರಿಯಲ್ಲಿ ಆಂತೊಸಿಯಾನಿನ್ಸ್ ಎಂಬ ಆಂಟಿಯಾಕ್ಸಿಡಂಟ್ ಇರುವುದರಿಂದ ಕೀಲು ನೋವಿನ ಉರಿಯನ್ನು ಹೋಗಿಸಿ ಕ್ರಮೇಣ ನೋವನ್ನು ನಿವಾರಿಸುತ್ತದೆ.

2. ನಿಂಬೆ: ನಿಂಬೆ ಕೀಲು ನೋವಿಗೆ ಅತಿ ಪರಿಣಾಮಕಾರಿ. ದಿನವೂ ಮೂರು ಬಾರಿ ನಿಂಬೆ ಜ್ಯೂಸ್ ಸೇವಿಸುವುದರಿಂದ ಈ ನೋವನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು.

3. ಕ್ಯಾರೆಟ್: ಕ್ಯಾರೆಟ್, ಬೀಟ್ ರೂಟ್, ಸೌತೆಕಾಯಿ, ಬೂದುಗುಂಬಳಕಾಯಿ ಮುಂತಾದ ತರಕಾರಿಗಳು ರಕ್ತವನ್ನು ಶುದ್ಧಗೊಳಿಸಿ ನೋವನ್ನು ಕ್ರಮೇಣ ಕಡಿಮೆ ಮಾಡುತ್ತದೆ.

4. ನೀರಿನ ಆರೈಕೆ: ಬೆಚ್ಚಗಿನ ನೀರಿನೊಂದಿಗೆ ಕಲ್ಲುಪ್ಪು ಮತ್ತು ಇದ್ದಿಲಿನ ಪುಡಿಯನ್ನು ಹಾಕಿ ಅದರಲ್ಲಿ ಕಾಲುಗಳನ್ನು ಅದ್ದಿದರೆ ನೋವಿಗೆ ರಿಲೀಫ್ ನೀಡುತ್ತೆ.

5. ಮಸಾಜ್: ಶುಂಠಿ ಅರಿಶಿಣದ ಪೇಸ್ಟನ್ನು ನೋವಿರುವ ಜಾಗಕ್ಕೆ ಮಸಾಜ್ ಮಾಡಿದರೂ ಪರಿಣಾಮಕಾರಿಯಾಗಿ ತಕ್ಷಣವೇ ನೋವು ನಿವಾರಣೆಯಾಗುತ್ತದೆ.

6. ಗಿಡ ಮೂಲಿಕೆ: ಸಾಸಿವೆ, ನೀರು ಹಿಪ್ಪೆಯ ತೊಗಟೆ ಮುಂತಾದವೂ ಕೂಡ ಕೀಲು ನೋವಿಗೆ ಹೆಚ್ಚು ಪರಿಣಾಮಕಾರಿ.

English summary

Gout Home Remedies | Joint Pain Relief | ಸಂಧಿವಾತಕ್ಕೆ ಮನೆ ಮದ್ದು | ಕೀಲೂರ ಸಮಸ್ಯೆಗೆ ಪರಿಹಾರ

Gout, a kind of arthritis has become a common disorder in aging men and post menopausal women. It occurs when uric acid builds up in the blood. Gout causes joint inflammation and the condition can get extremely painful. There are home remedies to treat gout which we will be discussing in detail. Take a look.
Story first published: Thursday, December 15, 2011, 16:13 [IST]
X
Desktop Bottom Promotion