For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್ ಮಾರಮ್ಮನಿಗೊಂದು ಮಾರಕ ಗುಳಿಗೆ

|
ಲಂಡನ್, ನ.15 (ಪಿಟಿಐ): ಕ್ಯಾನ್ಸರ್ ಪೀಡಿತರಿಗೆ ಒಂದು ಶುಭ ಸಮಾಚಾರ. ಮಾರಕ ಕಾಯಿಲೆಯನ್ನು ಗುಣಪಡಿಸುವ ದಿಕ್ಕಿನಲ್ಲಿ ಅತ್ಯಮೂಲ್ಯವಾದ ಒಂದು ಔಷಧಿಯನ್ನು ಕಂಡುಹಿಡಿದಿರುವುದಾಗಿ ವಿಜ್ಞಾನಿಗಳು ಹೇಳುತ್ತಿದ್ದಾರೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ನೇತೃತ್ವದ ಅಂತಾರಾಷ್ಟ್ರೀಯ ತಂಡ ಕ್ಯಾನ್ಸರನ್ನು ಬುಡಸಮೇತ ಕಿತ್ತೊಗೆಯಲು ಕಂಡುಹಿಡಿದಿರುವ ರಾಮಬಾಣದ ಹೆಸರು KG5

ಈ ಔಷಧಿ ಕ್ಯಾನ್ಸರ್ ಗೆ ಕಾರಣವಾಗುವ ಜೀವ ಕೋಶಗಳ ನಿರ್ಮೂಲನೆ ಮಾತ್ರವಲ್ಲ, ಮಾರಣಾಂತಿಕ ಜೀವಕೋಶಗಳು ದ್ವಿಗುಣಗೊಳ್ಳುವುದನ್ನು ತಡೆಯುವುದು ಗಮನಾರ್ಹ ಎಂದು 'ನೇಚರ್ ಮೆಡಿಸನ್' ನಿಯತಕಾಲಿಕೆ ವರದಿಮಾಡಿದೆ.

ಕ್ಯಾನ್ಸರ್ ಗೆ ತುತ್ತಾಗಿರುವ ಅನೇಕ ರೋಗಿಗಳಿಗೆ ನವಚೈತನ್ಯ ನೀಡಲಿರುವ ಈ ಅತ್ಯಮೂಲ್ಯ ಔಷಧಿ ಇನ್ನು ಐದೇ ವರ್ಷಗಳಲ್ಲಿ ಗುಳಿಗೆ ರೂಪದಲ್ಲಿ ಹೊರಬರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ವಾವ್!

KG5 ಕ್ಯಾನ್ಸರ್ ಜೀವಕೋಶಗಳ ಹರಡುವಿಕೆಯನ್ನು ನಿರ್ಬಂಧಿಸುವುದಲ್ಲದೆ, ಅವು ದ್ವಿಗುಣಗೊಳ್ಳದಂತೆ ತಡೆಯೊಡ್ಡುತ್ತದೆ ಎಂದು ಹಿರಿಯ ವಿಜ್ಞಾನಿ ಪ್ರೊ.ಡೇವಿಡ್ ಚೆರಿಶ್ ತಿಳಿಸಿದ್ದಾರೆ.

ಪ್ಯಾಂಕ್ರಿಯಸ್, ಕಿಡ್ನಿ ಮತ್ತು ಸ್ತನ ಕ್ಯಾನ್ಸರ್ ಗೂ ಈ ಔಷಧಿ ಅತಿ ಪರಿಣಾಮಕಾರಿಯಾಗಿದೆ. ಕ್ಯಾನ್ಸರ್ ನಿರ್ಮೂಲನೆಗೆಂದು ಇದ್ದ ಸಾಂಪ್ರದಾಯಿಕ ಚಿಕಿತ್ಸೆಗಿಂತ ಇದು ವಿಭಿನ್ನವಾಗಿದೆ. ಕ್ಯಾನ್ಸರ್ ಬೆಳವಣಿಗೆ ಮಾಡುವ RAF ಎಂಜೈಮಿನ ಆಕಾರವನ್ನೇ ಬದಲಿಸಿ ಸಂಪೂರ್ಣವಾಗಿ ಕ್ಯಾನ್ಸರ್ ತೊಲಗಿಸುತ್ತದೆ.

English summary

KG5 Wonder Drug to Combat Cancer | Nature Medicine| University of California | ಕ್ಯಾನ್ಸರ್ ನಿರ್ಮೂಲನೆಗೆ KG5 ಔಷಧಿ | ಕ್ಯಾನ್ಸರ್ ನಿವಾರಿಸುವ ನೂತನ ಔಷಧಿ

An International team led by University of California claim to have achieved a drug to kill off cancer. The scientist have discovered KG5 Drug which works by making cancer cells commit suicide. It could be available in as little as five year.
Story first published: Tuesday, November 15, 2011, 14:54 [IST]
X
Desktop Bottom Promotion