For Quick Alerts
ALLOW NOTIFICATIONS  
For Daily Alerts

ಬಳಲಿದ ಕಣ್ಣಿಗೆ ಸ್ಪೆಷಲ್ ಕೇರ್ ನೀಡೋದು ಹೇಗೆ?

|
Easy Methods to get rid from Eye Pain
ಕಂಪ್ಯೂಟರ್ ಮುಂದೆ ಕೂತು ತುಂಬಾ ಹೊತ್ತು ಕೆಲಸ ಮಾಡುವವರ ಕಣ್ಣಿಗೆ ಆಯಾಸ ಸಹಜ. ಕಣ್ಣು ತುಂಬಾ ಸೂಕ್ಷ್ಮ ಮತ್ತು ಪ್ರಮುಖ ಅಂಗವಾದ್ದರಿಂದ ಇದರೆಡೆಗಿನ ನಿರ್ಲಕ್ಷ್ಯ ಸಲ್ಲದು. ಕಣ್ಣಿನ ಮೇಲಿನ ಅತಿಯಾದ ಒತ್ತಡ ಕಣ್ಣು ನೋವಿಗೆ ಕಾರಣವಾಗಬಹುದು.

ಆದ್ದರಿಂದ ಕಣ್ಣಿಗೂ ಸ್ಪೆಷಲ್ ಕೇರ್ ಅಗತ್ಯವಿದೆ. ಕೆಲವು ಸಿಂಪಲ್ ಸಲಹೆಗಳನ್ನು ಪಾಲಿಸಿದರೆ ಕಣ್ಣಿನ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು.

* ಕಣ್ಣುಗಳು ತುಂಬಾ ಒತ್ತಡದಲ್ಲಿದ್ದಂತೆ ಕಂಡರೆ, ಕಣ್ಣನ್ನು ಮುಚ್ಚಿ ಅಂಗೈಯ್ಯನ್ನು ವೃತ್ತಾಕಾರವಾಗಿ ಕಣ್ಣುಗಳ ಮೇಲೆ ಆಡಿಸಿ ಕೆಲವು ನಿಮಷ ಹಾಗೇ ಅಂಗೈನಿಂದ ಕಣ್ಣನ್ನು ಮುಚ್ಚಿಕೊಳ್ಳಬೇಕು. ಇದು ಆಯಾಸ ಕಡಿಮೆಗೊಳಿಸುತ್ತದೆ.

* ಕಣ್ಣುಗಳನ್ನು ಅಂಗೈನಿಂದ ಮುಚ್ಚಿ ಬೆಚ್ಚಗಿರಿಸಿದರೆ ಆ ಬೆಚ್ಚಗಿನ ಅನುಭವ ನೋವು ನಿವಾರಣೆಗೆ ಸಹಕಾರಿ.

* ಕೆಲಸದ ಮಧ್ಯೆ ಕೆಲವು ನಿಮಿಷ ಬಿಡುವು ಮಾಡಿಕೊಂಡು ಎಲ್ಲಾ ದಿಕ್ಕುಗಳೆಡೆಗೂ ಒಮ್ಮೆ ಕಣ್ಣನ್ನು ಹಾಯಿಸಬೇಕು. ಕೆಲವು ನಿಮಿಷ ಬಿಸಿಲು ಕಣ್ಣಿಗೆ ನೇರವಾಗಿ ಬೀಳುವಂತೆ ನೋಡಿಕೊಂಡರೂ ಕಣ್ಣಿಗೆ ಹೆಚ್ಚು ಆಯಾಸವಾಗದಂತೆ ನೋಡಿಕೊಂಡು ರಕ್ತ ಸಂಚಲನ ಹೆಚ್ಚಿಸುತ್ತದೆ.

* ತುಂಬಾ ತಣ್ಣಗಿನ ನೀರಿನಲ್ಲಿ ಹತ್ತಿಯನ್ನು ಅದ್ದಿ, ಕಣ್ಣಿನ ಮೇಲೆ ಅದನ್ನು ಅರ್ಧ ಗಂಟೆ ಇಟ್ಟುಕೊಳ್ಳುವುದರಿಂದ ಕಣ್ಣುರಿ ಮತ್ತು ಕಣ್ಣು ಕೆಂಪಗಾಗುವ ಸಮಸ್ಯೆ ತಡೆಯಬಹುದು.

* ಸೌತೆಕಾಯಿ ಮತ್ತು ಆಲೂಗಡ್ಡೆ ಹೋಳನ್ನು ಕಣ್ಣುಗಳ ಮೇಲಿರಿಸಿದರೆ ಕಣ್ಣುಗಳ ಒತ್ತಡ ಕಡಿಮೆಗೊಳ್ಳುವುದಲ್ಲದೆ, ಕಣ್ಣಿನ ಸುತ್ತಲ ಚರ್ಮವನ್ನೂ ಕಾಪಾಡುತ್ತದೆ.

* ಕಂಪ್ಯೂಟರ್ ಮುಂದೆ ನಿರಂತರವಾಗಿ ಕೂರದೆ ಆಗಾಗ್ಗೆ ವಿಶ್ರಾಂತಿ ತೆಗೆದುಕೊಳ್ಳಬೇಕು. ದೂರದ ವಸ್ತುಗಳನ್ನು ಕೆಲ ನಿಮಿಷ ನೋಡುವುದು, ಕಣ್ಣನ್ನು ಅತ್ತಿತ್ತ ಹೊರಳಿಸುವುದು ಹೀಗೆ ಮಾಡಿದರೆ ಕಣ್ಣಿನ ಮೇಲೆ ಹೆಚ್ಚು ಒತ್ತಡ ಬೀಳುವುದಿಲ್ಲ.

* ವಿಟಮಿನ್ ಎ ಹೆಚ್ಚಿರುವ ಆಹಾರ ಸೇವನೆ ದೃಷ್ಟಿ ದೋಷ ಮತ್ತು ದೃಷ್ಟಿ ಕೊರತೆಯನ್ನು ನಿವಾರಿಸುತ್ತದೆ. ಹಸಿರು ತರಕಾರಿ, ಟೊಮೆಟೊ, ಸೋಯಾ, ಕಿತ್ತಳೆ, ಪರಂಗಿ, ಸೇಬು, ದ್ರಾಕ್ಷಿ ಕಣ್ಣಿಗೆ ಅಗತ್ಯ ಪೋಷಕಾಂಶವನ್ನು ಒದಗಿಸುತ್ತದೆ. ಇದರಿಂದ ಕಣ್ಣಿಗೆ ಸೋಂಕು ತಗುಲುವುದನ್ನೂ ತಡೆಯಲು ಸಹಕಾರಿಯಾಗುತ್ತದೆ. ಆದರೆ ಈ ಸಮಸ್ಯೆ ನಿರಂತರವಾದರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು ಅವಶ್ಯಕ.

English summary

Eye Pain Remedies | Easy Methods to get rid from Eye Pain | ಕಣ್ಣು ನೋವಿಗೆ ಪರಿಹಾರ | ಕಣ್ಣು ನೋವಿನಿಂದ ಹೊರಬರಲು ಸರಳ ಸಲಹೆ

Eyes are the most sensitive organ of our body. They require special care as they are very delicate and important part. Due to pollution and computer usage, they tend to get irritated and result in poor vision and disease. Here are some home remedies which help you to get rid from eye pain.
Story first published: Monday, October 24, 2011, 12:35 [IST]
X
Desktop Bottom Promotion