For Quick Alerts
ALLOW NOTIFICATIONS  
For Daily Alerts

ಕುತ್ತಿಗೆ ನೋವಿಂದ ಮುಕ್ತಿ ಪಡೆಯಲು ಹೀಗೆ ಮಾಡಿ

|
Neck pain
ಕಂಪ್ಯೂಟರ್ ಮುಂದೆ 8-10 ಗಂಟೆಗಳ ಕಾಲ ನಿರಂತರವಾಗಿ ಕೂತು ಕೆಲಸ ಮಾಡುವವರಿಗೆ ಕುತ್ತಿಗೆ ನೋವು ಸಾಮಾನ್ಯ. ಕುಳಿತುಕೊಳ್ಳುವ ವಿಧಾನ, ತುಂಬಾ ಹೆಚ್ಚು ಹೊತ್ತು ಕೂರುವುದು ಬೆನ್ನು ನೋವು ಮತ್ತು ಕಣ್ಣಿನ ತೊಂದರೆಯನ್ನೂ ತಂದೊಡ್ಡುತ್ತದೆ.

ಆದರೆ ಕೆಲಸದ ಮಧ್ಯೆಯೇ ಕೆಲವೊಂದು ಸಣ್ಣ ವ್ಯಾಯಾಮವನ್ನು ಮಾಡುವುದರ ಮೂಲಕ ಕುತ್ತಿಗೆ ನೋವು ಕಾಡದಂತೆ ತಡೆಯಬಹುದು. ಕೆಲಸದ ಸಮಯದಲ್ಲಿ ಕುತ್ತಿಗೆಗೆ ಕೆಲವು ನಿಮಿಷ ವ್ಯಾಯಾಮ ಮಾಡಿದರೆ ನೋವು ನಿವಾರಿಸುವುದು ಸಾಧ್ಯ.

ಕುತ್ತಿಗೆ ಮತ್ತು ಬೆನ್ನು ನೋವು ನಿವಾರಿಸುವ ಕೆಲವು ವ್ಯಾಯಾಮಗಳು ಇಲ್ಲಿವೆ.

1. ಕುರ್ಚಿಯಲ್ಲಿ ನೇರವಾಗಿ ಕುಳಿತುಕೊಂಡು ನಿಮ್ಮ ಗದ್ದವನ್ನು ಎದೆಯ ಮಟ್ಟಕ್ಕೆ ಬಾಗಿಸಬೇಕು. ನಿಮ್ಮ ಕುತ್ತಿಗೆ ಸ್ವಲ್ಪ ರಿಲ್ಯಾಕ್ಸ್ ಆಗುತ್ತಿರುವುದು ನಿಮ್ಮ ಗಮನಕ್ಕೆ ಬಂದರೆ 15-20 ಸೆಕೆಂಡ್ ಗಳ ಕಾಲ ಅದೇ ಭಂಗಿಯಲ್ಲಿ ಇರಬೇಕು. ಇದನ್ನು ಸುಮಾರು 3-4 ಬಾರಿ ಮಾಡಬೇಕು.

2. ನಿಮ್ಮ ತಲೆಯನ್ನು ಹಿಂಭಾಗಕ್ಕೆ ಬಾಗಿಸಿ, ಅಂದರೆ ಕಣ್ಣುಗಳು ಮೇಲೆ ನೋಡುವಂತೆ ಬಾಗಿಸಬೇಕು. ಕುತ್ತಿಗೆಯ ಮುಂಭಾಗ ಹಿಂದಕ್ಕೆ ಬಾಗಿದಂತೆ ಕತ್ತು ತುಂಬಾ ರಿಲ್ಯಾಕ್ಸ್ ಆಗುತ್ತದೆ.

3. ನಿಮ್ಮ ಎಡ ಕಿವಿಯನ್ನು ಎಡ ಭುಜಕ್ಕೆ ತಾಗಿಸಬೇಕು, ಹಾಗೆಯೇ ಬಲ ಕಿವಿಯನ್ನು ಬಲ ಭುಜಕ್ಕೆ ತಾಗಿಸಬೇಕು. ಸುಮಾರು 20 ಸೆಕೆಂಡುಗಳ ಕಾಲ ಹಾಗೇ ಬಾಗಿಸಿರಬೇಕು. ಇದನ್ನು 4-5 ಬಾರಿ ಮಾಡಬೇಕು.

4. ನಿಮ್ಮ ಕುತ್ತಿಗೆಯನ್ನು ಎಡಗಡೆಗೆ ಎಷ್ಟು ಸಾಧ್ಯವೋ ಅಷ್ಟು ತಿರುಗಿಸಿ 20 ಸೆಕೆಂಡ್ ಹಾಗೆಯೇ ಇರಬೇಕು. ಇದನ್ನೇ ಬಲಗಡೆಗೂ ಅನುಸರಿಸಬೇಕು. ಆದರೆ ತುಂಬಾ ಬೇಗಬೇಗನೆ ಈ ವ್ಯಾಯಾಮವನ್ನು ಮಾಡಬಾರದು. ನಿಧಾನವಾಗಿ ಅನುಸರಿಸಬೇಕು.

5. ಉಸಿರನ್ನು ನಿಧಾನವಾಗಿ ತೆಗೆದುಕೊಂಡು ಬಲಗಡೆ ಕತ್ತನ್ನು ತಿರುಗಿಸಬೇಕು. ಮತ್ತೆ ನೆಟ್ಟಗೆ ಕುಳಿತು ಉಸಿರನ್ನು ಬಿಡಬೇಕು. ಎಡಗಡೆಗೂ ಹಾಗೆಯೇ ಮಾಡಬೇಕು. ಆಗ ಕತ್ತು ನೋವು ಉಪಶಮನಗೊಳ್ಳುತ್ತದೆ.

6. ವೃತ್ತಾಕಾರವಾಗಿ ಕುತ್ತಿಗೆಯನ್ನು ತಿರುಗಿಸುತ್ತಿದ್ದರೆ ಕುತ್ತಿಗೆ ಮತ್ತು ಬೆನ್ನು ನೋವು ಕ್ರಮೇಣ ಕಡಿಮೆಗೊಳ್ಳುತ್ತದೆ. ಗಡಿಯಾರದ ರೀತಿ ಆಕಡೆ ಈಕಡೆಗೆ ಕತ್ತನ್ನು ಆಗಾಗ್ಗೆ ವಾಲಿಸುತ್ತಿರಬೇಕು.

ಈ ಆರೂ ವ್ಯಾಯಾಮವನ್ನು ಕೆಲಸದ ಮಧ್ಯೆ ಆಗಾಗ್ಗೆ ಮಾಡುತ್ತಿದ್ದರೆ ಕುತ್ತಿಗೆ ನೋವು ಮತ್ತು ಬೆನ್ನು ನೋವು ನಿಮ್ಮನ್ನು ಕಾಡುವುದರಿಂದ ತಪ್ಪಿಸಿಕೊಳ್ಳಬಹುದು ಮತ್ತು ಇದು ದೀರ್ಘ ಕಾಲದ ಪರಿಣಾಮ ಬೀರದಂತೆ ತಡೆಯಲೂ ಬಹುದು.

English summary

Simple Neck exercise at work | Exercise reduce neck pain, Back ache | ಕತ್ತು ನೋವಿಗೆ ಸುಲಭ ವ್ಯಾಯಾಮ | ವ್ಯಾಯಾಮದಿಂದ ಕುತ್ತಿಗೆ ಮತ್ತು ಬೆನ್ನು ನೋವು ನಿವಾರಣೆ

Neck pain is a common health problem of the working professionals as sitting on your desk in front of a computer for a continuous stretch of 8-10 hours is a hectic routine. Long stretch sitting often leads to back ache, neck pain and eye strain due to exposure to computer and wrong sitting postures. So, here are tips to reduce neck pain with neck exercises which can be done at work.
Story first published: Wednesday, August 24, 2011, 13:26 [IST]
X
Desktop Bottom Promotion