For Quick Alerts
ALLOW NOTIFICATIONS  
For Daily Alerts

ಬಿಸಿ ನೀರಿನಲ್ಲಿದೆ ಉತ್ತಮ ಆರೋಗ್ಯದ ಸೂತ್ರ

|
Hot water
ನೀರು ಜೀವಸೆಲೆ. ಅದರ ಹೊರತು ಜೀವಿಸುವುದು ಅಸಾಧ್ಯ. ಸರಿಯಾದ ಆಹಾರದೊಂದಿಗೆ ದೇಹದಲ್ಲಿ ಹೆಚ್ಚು ನೀರಿನಂಶವಿದ್ದಷ್ಟು ಆರೋಗ್ಯ ಬಲವಾಗಿರುತ್ತದೆ. ನೀರನ್ನು ಹಾಗೆಯೇ ಕುಡಿಯಬಹುದು ಅಥವಾ ಬಿಸಿ ಮಾಡಿಯಾದರೂ ಕುಡಿಯಬಹುದು. ಆದರೆ ಬಿಸಿ ನೀರು ಕುಡಿಯುವುದರಿಂದ ದೇಹಕ್ಕೆ ಒಂದಿಷ್ಟು ಉಪಯೋಗವಿದೆ. ಅದರಲ್ಲೂ ಈ ಮಳೆಗಾಲದಲ್ಲಿ ಬಿಸಿ ನೀರಿನ ಅಗತ್ಯ ಹೆಚ್ಚು.

ಬಿಸಿ ನೀರು ದೇಹಕ್ಕೆ ಎಷ್ಟು ಅವಶ್ಯಕ ಎಂಬುದನ್ನು ತಿಳಿದುಕೊಳ್ಳಿ

1. ಬಿಸಿ ನೀರಿನ ಸೇವನೆಯಿಂದಾಗಿ ದೇಹದಲ್ಲಿ ಉಷ್ಣಾಂಶ ಸ್ವಲ್ಪ ಹೆಚ್ಚಾಗಿ ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ.

2. ರಕ್ತಸಂಚಲನವನ್ನು ಹೆಚ್ಚುಗೊಳಿಸುವುದಲ್ಲದೆ, ಕಟ್ಟಿಕೊಂಡ ಮೂಗಿಗೆ ಉಪಶಮನ ನೀಡುತ್ತದೆ.

3. ಬಿಸಿ ನೀರಿನೊಂದಿಗೆ ಜೇನು ಮತ್ತು ನಿಂಬೆರಸ ಬೆರೆಸಿ ಕುಡಿದರೆ ದೇಹದ ತೂಕ ಕಡಿಮೆಯಾಗುವುದಲ್ಲದೆ ರೋಗ ನಿರೋಧಕ ಶಕ್ತಿಯೂ ಹೆಚ್ಚುವಂತೆ ಮಾಡುತ್ತದೆ.

4. ಬಿಸಿ ನೀರು ನರಮಂಡಲವನ್ನು ಶುದ್ಧಗೊಳಿಸುವುದರೊಂದಿಗೆ ಮೆದುಳು ಮನಸ್ಸು ಚೈತನ್ಯದಿಂದಿರುವಂತೆ ನೋಡಿಕೊಳ್ಳುತ್ತದೆ.

5. ಈ ಮಳೆಗಾಲದಲ್ಲಿ ಕೆಮ್ಮು ಅಥವಾ ನೆಗಡಿ ಅಂಟಿಕೊಂಡಾಗ ಬಿಸಿ ನೀರು ನೈಸರ್ಗಿಕ ಔಷಧಿಯಂತೆ ಕೆಲಸ ಮಾಡುತ್ತದೆ. ತಕ್ಷಣವೇ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ.

6. ಬೆಚ್ಚಗಿನ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಜೀರ್ಣಕ್ರಿಯೆ ಸರಾಗವಾಗಿರುವಂತೆ ಮಾಡುತ್ತದೆ.

7. ದೇಹದ ಬೊಜ್ಜು ಕರಗಿಸಬೇಕಾದರೆ ಊಟದ ನಂತರ ನಿಂಬೆರಸ ಮಿಶ್ರಿತ ಬಿಸಿ ನೀರಿನ ಸೇವನೆ ಮಾಡುವುದು ಸೂಕ್ತ. ಅದರಲ್ಲೂ ಎಣ್ಣೆ ಅಥವಾ ಜಿಡ್ಡಿನ ಪದಾರ್ಥಗಳ ಸೇವನೆ ಮಾಡಿದರೆ ಬಿಸಿ ನೀರನ್ನು ಕುಡಿದರೆ ಉತ್ತಮ.

ಈ ಮಳೆಗಾಲದಲ್ಲಿ ಅನೇಕ ಕಾಯಿಲೆಗಳು ತಗುಲುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಆರೋಗ್ಯ ಸಮಸ್ಯೆ ಇರಲಿ ಬಿಡಲಿ, ಬಿಸಿ ನೀರನ್ನು ಕುಡಿಯುವುದನ್ನು ಮರೆಯಬೇಡಿ. ಸಮಸ್ಯೆಗಳು ಬಂದಾಗ ಪರಿತಪಿಸುವುದಕ್ಕಿಂತ ಅದನ್ನು ಬರದಂತೆ ಮಾಡುವುದೇ ಬುದ್ಧಿವಂತಿಕೆ.

English summary

Hot water benefits | Hot water healthy benefits | ಬಿಸಿ ನೀರು | ಬಿಸಿ ನೀರಿನ ಉಪಯೋಗ

Water can be consumed cold or hot. But it is found out that hot water benefits the body in many ways. Take a look how hot water benefits the body.
Story first published: Saturday, August 13, 2011, 12:08 [IST]
X
Desktop Bottom Promotion