For Quick Alerts
ALLOW NOTIFICATIONS  
For Daily Alerts

ಆಗಾಗ ಕಾಡುವ ಮೂಳೆ ನೋವಿನಿಂದ ಮುಕ್ತಿ ಹೇಗೆ?

By Super
|

ಮೂವತ್ತಕ್ಕೆಲ್ಲ ಮೂಳೆ ನೋವು ಕಂಡುಬರುವ ಈ ಕಾಲದಲ್ಲಿ, ಮೂಳೆನೋವಿಗೆ ಕಾರಣ, ಅದು ಬರುವ ಲಕ್ಷಣ ಹಾಗೂ ತಡೆಗಟ್ಟುವ ವಿಧಾನ ತಿಳಿದುಕೊಳ್ಳುವುದು ತುಂಬಾ ಅವಶ್ಯಕ. ಮೂಳೆಗಳ ತೊಂದರೆಗೆ ಪುನಃ ಪುನಃ ಆವರ್ತಿತವಾಗುವ ಚಲನೆ ಕೂಡ ಒಂದು ಕಾರಣ (Repetitive Motion Injury).

ಇದರಿಂದ ಮೂಳೆಗಳು, ಮಾಂಸಖಂಡಗಳು ಹಾಗೂ ನರಗಳು ಅವುಗಳ ಚಲನೆ ಮತ್ತು ಕಾರ್ಯ ದಕ್ಷತೆಯನ್ನು ಕಡಿಮೆಮಾಡುತ್ತದೆ. ಅಲ್ಲದೇ ಸಹಿಸಲಸಾಧ್ಯವಾದ ನೋವು ಉಂಟಾಗುತ್ತದೆ.

How to Prevent Repetitive Motion Injury

ಈ ಕೆಳಗೆ ನಾವು ಕೆಲವು ಟಿಪ್ಸ್ ನೀಡಿದ್ಧೇವೆ, ಅವು ನಿಮ್ಮನ್ನು ಪದೇ ಪದೇ ಕಾಡುವ ಮೂಳೆ ನೋವಿನ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತವೆ.

ಈ ಸಮಸ್ಯೆಗೆ ಕಾರಣಗಳು:

* ಸ್ನಾಯುಗಳಲ್ಲಿ ಶಕ್ತಿ ಕಮ್ಮಿಯಾದರೆ, ಸ್ನಾಯುಗಳ ಮೇಲೆ ಅಧಿಕ ಒತ್ತಡ ಬಿದ್ದರೆ ಈ ರೀತಿ ಉಂಟಾಗುತ್ತದೆ.

* ಅನುಚಿತ ಭಂಗಿ. ಕುಳಿತಿರುವ ಅಥವಾ ನಿಂತಿರುವ ಸಂದರ್ಭದಲ್ಲಿ ಸರಿಯಾದ ಭಂಗಿಯನ್ನು ಅನುಸರಿಸದಿದ್ದಲ್ಲಿ ಸ್ನಾಯುಗಳು ಮತ್ತು ನರಗಳ ಮೇಲೆ ಅನವಶ್ಯಕ ಒತ್ತಡ ಬಿದ್ದು ಆಯಾಸ ಹೆಚ್ಚುವುದು.

* ಎಳೆಯುವ, ತಳ್ಳುವ ಹಾಗು ಎತ್ತುವ ಸಂದರ್ಭಗಳಲ್ಲಿ ಸ್ನಾಯುಗಳು, ಮೂಳೆಗಳು ಮತ್ತು ನರಗಳ ಮೇಲೆ ಅತಿಹೆಚ್ಚು ಒತ್ತಡ ಬೀಳುವುದರಿಂದಲೂ ಸ್ನಾಯುಗಳಲ್ಲಿ ಅಸ್ವಸ್ಥತೆ, ನೋವು, ಮತ್ತು ಹಾನಿ ಕಂಡುಬರುತ್ತದೆ.

* ಸ್ನಾಯುಗಳ ಮೇಲೆ ತುಂಬಾ ಒತ್ತಡ ಹಾಕಿದರೆ ಸ್ನಾಯುಗಳ ಉದ್ವಿಗ್ನತೆ, ದಣಿವು ಉಂಟಾಗಿ ಮೂಳೆಗಳಿಗೆ ಪೆಟ್ಟಾಗುವುದು.

*ನೋವಿರುವ ಕೈಯಿಂದ ಭಾರ ಎತ್ತುವುದು, ತುಂಬಾ ಕೆಲಸ ಮಾಡುವುದು ಮಾಡಿದರೆ ಆ ನೋವು ಹೆಚ್ಚಾಗುತ್ತದೆ.

ಯಾವುದೇ ಕಾರ್ಯವನ್ನು ನಿರ್ವಹಿಸುವಾಗ ಮಣಿಕಟ್ಟನ್ನು ಅನುಚಿತವಾದ ಸ್ಥಾನದಲ್ಲಿಟ್ಟು ಕೊಳ್ಳುವುದು. (ಉದಾಹರಣೆಗೆ, ಕಂಪ್ಯೂಟರ್ ಮೌಸ್ ನ್ನು ಹಿಡಿಯುವ ಪದ್ಧತಿ).
* ಕೆಲವು ವೈದ್ಯಕೀಯ ಪರಿಸ್ಥಿತಿಗಳಾದ ಸಂಧಿವಾತ ಮತ್ತು ಮಧುಮೇಹದಂತಹ ಸಂದರ್ಭಗಳು ಈ ಸಮಸ್ಯೆಗೆ ಪ್ರಮುಖ ಕಾರಣ.

ರೋಗಲಕ್ಷಣ

ಕೀಲುಗಳ ಸುತ್ತಲಿನ ಪ್ರದೇಶಗಳಲ್ಲಿ (ಅಂದರೆ ಮಣಿಕಟ್ಟು, ಕೈಗಳು, ಬೆರಳು) ನೋವು ಅಥವಾ ಪೆಡುಸುತನ ಕಂಡುಬರುವುದು. ಸಾಮಾನ್ಯವಾಗಿ ಕೆಲಸ ಮಾಡುವಾಗ ಇಂತಹ ನೋವಿನಿಂದಾಗೆ ಬಹಳ ತೊಂದರೆಯಾಗುವುದು.

ಪೀಡಿತ(ನೋವಿರುವ) ಪ್ರದೇಶದಲ್ಲಿ ಊತ ಕಂಡುಬರುವುದು.

ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ.

ಶಕ್ತಿ ಮತ್ತು ಹೊಂದಾಣಿಕೆಯ ಕೊರತೆ (ಸಾಮಾನ್ಯವಾಗಿ ಕೈಗಳಲ್ಲಿ ಕಂಡುಬರುತ್ತದೆ).
ಇದನ್ನು ತಡೆಗಟ್ಟುವ ಬಗೆ ಹೇಗೆ ? ಕೆಳಗೆ ಹೇಳಿದಂತೆ ಮಾಡಿ :
ದೀರ್ಘ ಗಂಟೆಗಳ ಪುನರಾವರ್ತಿತ ಚಲನೆಯ ನಡುವೆ ಕೀಲುಗಳನ್ನು ವಿಸ್ತರಿಸುವಂತಹ ವ್ಯಾಯಾಮಗಳನ್ನು ಮಾಡಿ.
ಒಂದು ವಿರಾಮವನ್ನು ತೆಗೆದುಕೊಳ್ಳಿ! ಇದು ಈ ಸಮಸ್ಯೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಮಾರ್ಗವಾಗಿದೆ. ನೀವು ಹೆಚ್ಚು ಬಳಸುವ ಕೈಗೆ ಸಾಧ್ಯವಾದಾಗಲೆಲ್ಲಾ ವಿಶ್ರಾಂತಿ ನೀಡಿ. ಸುತ್ತಿಗೆಯಂತಹ ಕಂಪಿಸುವ ಉಪಕರಣಗಳನ್ನು ಬಳಸುವಾಗ ಹೆಚ್ಚುವರಿ ಎಚ್ಚರಿಕೆವಹಿಸಿ.

ಕೆಲಸ ಮಾಡುವಾಗ ಸರಿಯಾದ ಭಂಗಿಯನ್ನು ಅನುಸರಿಸಿ.ಸೂಕ್ತ ಚೇರ್ ಬಳಸಿ.

ಇದರಿಂದ ಈ ಸಮಸ್ಯೆಯಿಂದ ಹೊರಬರಬಹುದು.

English summary

How to Prevent Repetitive Motion Injury | Tips For Health | ಪದೇ ಪದೇ ಉಂಟಾಗುವ ಟಾಯ್ಲೆಟ್ ತೊಂದರೆಯಿಂದ ಮುಕ್ತಿ ಹೇಗೆ? | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Repetitive Motion Injury or Repetitive Strain Injury is an injury to the bones, muscles, or nerves caused by repetitive motions and tasks. Prevent it by doing the following:
X
Desktop Bottom Promotion