For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್ ತಡೆಗಟ್ಟುವ ಮನೆ ಮದ್ದುಗಳಿವು!

By ಲೇಖಕ
|

ಕ್ಯಾನ್ಸರ್ ಕಾಯಿಲೆ ಅಪಾಯಕಾರಿಯಾದ ಕಾಯಿಲೆಯಾಗಿದ್ದರೂ ಈ ಕಾಯಿಲೆಗೆ ಮದ್ದು ಇದೆ. ಆದರೆ ಕ್ಯಾನ್ಸರ್ ಬಂದ ನಂತರ ಚಿಕಿತ್ಸೆ ತಗೆದುಕೊಂಡರೆ ವ್ಯಕ್ತಿ ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ ಹಾಗೂ ಕ್ಯಾನ್ಸರ್ ಚಿಕಿತ್ಸೆಗೆ ತಗುಲುವ ವೆಚ್ಚ ಕೂಡ ಅಧಿಕ. ಆದರೆ ಈ ಕ್ಯಾನ್ಸರ್ ಕಾಯಿಲೆಯನ್ನು ಕೆಲವೊಂದು ವಿಧಾನಗಳ ಮುಖಾಂತರ ಬರದಂತೆ ತಡೆಯಬಹುದು.

ಕ್ಯಾನ್ಸರ್ ಕಣಗಳು ನಮ್ಮ ದೇಹದಲ್ಲಿ ಉತ್ಪತ್ತಿಯಾಗದಂತ ಮಾಡುವ ಸಾಮರ್ಥ್ಯ ಕೂಡಾ ನಮ್ಮಲ್ಲಿಯೇ ಇದೆ. ಅದಕ್ಕಾಗಿ ಏನು ಮಾಡಬೇಕೆಂದು ಸ್ಲೈಡ್ ನಲ್ಲಿ ನೀಡಿದ್ದೇವೆ ನೋಡಿ:

1. ಬ್ರೊಕೋಲಿ

1. ಬ್ರೊಕೋಲಿ

ಬ್ರೊಕೋಲಿ (ಕೋಸುಗಡ್ಡೆ) ನೀವು ಪರಿಣಾಮಕಾರಿಯಾಗಿ ಕ್ಯಾನ್ಸರ್ ತಡೆಯಲು ಸಹಾಯ ಮಾಡುವ ಉತ್ತಮ ಆಹಾರಗಳಲ್ಲಿ ಒಂದಾಗಿದೆ.

2. ಬೆಳ್ಳುಳ್ಳಿ

2. ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಕ್ಯಾನ್ಸರ್ ನಿರೋಧಕ ಶಕ್ತಿ ಬಲವಾಗಿದೆ. ಇದು ಕ್ಯಾನ್ಸರ್ ನಿರೋಧಕ ಶಕ್ತಿಯನ್ನು ದೇಹದಲ್ಲಿ ನಿಯಮಿತವಾಗಿ ಹೆಚ್ಚು ಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ ಬೆಳ್ಳುಳ್ಳಿ ಜಠರದ ಕ್ಯಾನ್ಸರ್ ತಡೆಯುವ ದಿವ್ಯ ಔಷಧವಾಗಿದೆ.

3. ವ್ಯಾಯಾಮ

3. ವ್ಯಾಯಾಮ

ನಿರಂತರ ವ್ಯಾಯಾಮ ಮನುಷ್ಯನ ಎಲ್ಲಾ ರೋಗಗಳಿಂದ ದೂರವಿಡುವ ಸಾಮರ್ಥ್ಯವನ್ನು ಹೊಂದಿದೆ. ವ್ಯಾಯಾಮ ದೇಹದಲ್ಲಿ ರಾಸಾಯನಿಕಗಳು, ಕಿಣ್ವಗಳು ಮತ್ತು ಹಾರ್ಮೋನ್ ಏರುಪೇರಾಗುವುದನ್ನು ತಪ್ಪಿಸುತ್ತದೆ.

4. ನಿದ್ರೆ

4. ನಿದ್ರೆ

ಮನುಷ್ಯನ ದೇಹಕ್ಕೆ ದಿನದಲ್ಲಿ 8 ಗಂಟೆಗಳ ಕಾಲ ಅವಶ್ಯಕ. ಅದರಲ್ಲೂ ಆರೋಗ್ಯಕರ ಹಾರ್ಮೋನ್ ಗಳ ನಿರ್ವಹಣೆಗೆ ರಾತ್ರಿಯ ಸಮಯದಲ್ಲಿಯೇ ನಿದ್ರಿಸುವುದು ಉತ್ತಮ.

5. ರೆಡ್ ವೈನ್

5. ರೆಡ್ ವೈನ್

ರೆಡ್ ವೈನ್ ದೇಹದಲ್ಲಿ ಕ್ಯಾನ್ಸರ್ ನಿರೋಧಕ ಶಕ್ತಿಯನ್ನು ಉತ್ಪತ್ತಿಮಾಡಬಲ್ಲದು. ಒಂದು ಸಂಶೋಧನೆಯ ಪ್ರಕಾರ ರೆಡ್ ವೈನ್ ರಕ್ತ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಗಳನ್ನು ವ್ಯಾಪಕವಾಗಿ ತಡೆಗಟ್ಟಬಲ್ಲದು.

6. ಚಾಕಲೇಟ್

6. ಚಾಕಲೇಟ್

ಪ್ಲೇವೋನೈಡ್ಸ್ ಹೊಂದಿರುವ ಕೋಕೋ ಚಾಕಲೇಟ್ ಗಳು ಕ್ಯಾನ್ಸರ್ ವಿರುದ್ಧ ಹೋರಾಟದ ಗುಣಗಳನ್ನು ಹೊಂದಿದೆ. ದಿನವೂ ಡಾರ್ಕ್ ಚಾಕಲೇಟ್ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

7. ವಿಟಮಿನ್ ಡಿ

7. ವಿಟಮಿನ್ ಡಿ

ಕ್ಯಾಲ್ಸಿಯಂ ಪೂರಕ ವಿಟಮಿನ್ ಡಿ ಪೋಷಕಾಂಶಗಳಿರುವ ಆಹಾರಗಳ ಸೇವನೆ ನಿಮ್ಮನ್ನು ಕ್ಯಾನ್ಸರ್ ರೋಗಗಳಿಂದ ದೂರವಿಡುತ್ತವೆ.

9. ನೀರು

9. ನೀರು

ಇಂಗ್ಲೇಂಡ್ ನ ಔಷಧಿ ಸಂಸ್ಥೆಯ ಸಂಶೋಧನೆ ಹೇಳುವಂತೆ ದಿನದಲ್ಲಿ 8 ಲೋಟಗಳಿಗಿಂತ ಹೆಚ್ಚು ನೀರು ಕುಡಿಯುವುದರಿಂದ ಕರುಳಿನ ಕ್ಯಾನ್ಸರ್ ತಡೆಗಟ್ಟಬಹುದು. ಶೇ 45 ಮಹಿಳೆಯರಲ್ಲಿ ನೀರನ್ನು ಕುಡಿಯುವುದರಿಂದ ಕ್ಯಾನ್ಸರ್ ಬರುವುದಿಲ್ಲ.

10. ಗ್ರೀನ್ ಟೀ

10. ಗ್ರೀನ್ ಟೀ

ಹೊಸ ಸಂಶೋಧನೆಯ ಪ್ರಕಾರ ಗ್ರೀನ್ ಟೀ ಹಲವಾರು ವಿಧದ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ರೋಗಗಳನ್ನು ಬರದಂತೆ ತಡೆಯುತ್ತದೆ ಎಂದು ತಿಳಿದು ಬಂದಿದೆ.

11. ನಡೆಯುವ ವ್ಯಾಯಾಮ

11. ನಡೆಯುವ ವ್ಯಾಯಾಮ

ಪ್ರತೀದಿನ 30 ನಿಮಿಷಗಳ ವಾಕ್ ಹೋಗುವುದು ಒಳ್ಳೆಯದು ಅದರಲ್ಲೂ ಮಹಿಳೆಯರಲ್ಲಿ ಸ್ತನ ಕ್ಯಾನ್ಸರನ್ನು ನಿಯಂತ್ರಿಸಲು ಇದು ಅತ್ಯಂತ ಅವಶ್ಯಕ.

 ಬಿಯರ್

ಬಿಯರ್

ಬಿಯರ್ ಹುಣ್ಣು ಮತ್ತು ಜಠರ ಕ್ಯಾನ್ಸರ್ ನ್ನು ತಡೆಯುತ್ತದೆ. ಏಕಾಣುಜೀವಿ ಹೆಲಿಕೋಬ್ಯಾಕ್ಟರ್ ಪೈಲೊರಿ ವಿರುದ್ಧ ಇದು ಹೋರಾಡುತ್ತದೆ. ಆದರೆ ಅತಿಯಾಗಿ ಸೇವಿಸಬೇಡಿ!

 ಕಾಂಡೋಮ್

ಕಾಂಡೋಮ್

ಬರೀ ಏಡ್ಸ್ ತಡೆಗಟ್ಟಲು ಮಾತ್ರವಲ್ಲ, ಕ್ಯಾನ್ಸರ್ ತಡೆಗಟ್ಟಲು ಸಹಕಾರಿ. ಒಬ್ಬ ಸಂಗಾತಿಯ ಜೊತೆ ಮಾತ್ರ ಲೈಂಗಿಕ ಸಂಪರ್ಕ ಇಟ್ಟುಕೊಳ್ಳಬೇಕು. ಹೆಚ್ಚಿನ ಪುರುಷರ ಜೊತೆ ಲೈಂಗಿಕ ಸಂಪರ್ಕ ಕ್ಯಾನ್ಸರ್ ರೋಗವನ್ನೂ ಕೂಡ ತರಬಹುದು.

ಸೂರ್ಯನ ಶಾಖ

ಸೂರ್ಯನ ಶಾಖ

ಬೆಳಿಗ್ಗೆಯ ಸಮಯ 15 ನಿಮಿಷಗಳ ಕಾಲ ನಿಮ್ಮ ದೇಹವನ್ನು ಸೂರ್ಯನ ಬೆಳಕಿಗೆ ಒಡ್ಡಿದರೆ ನಿಮ್ಮ ಚರ್ಮಕ್ಕೆ ವಿಟಮಿನ್ ಡಿ ಸತ್ವ ದೊರೆಯುತ್ತದೆ.ವಿಟಮಿನ್ ಡಿ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ.

ಕ್ಯಾನ್ಸರ್ ರೋಗ ಬಂದಮೇಲೆ ವೈದ್ಯರನ್ನು ಹುಡುಕುವುದಕ್ಕಿಂತ ಅದನ್ನು ಬರುವ ಮೊದಲೇ ಈ ಮೇಲೆ ಹೇಳಿದ ಸರಳ ನೈಸರ್ಗಿಕ ವಿಧಾನದ ಮೂಲಕ ತಡೆಗಟ್ಟಬಹುದಾದರೆ ಕ್ಯಾನ್ಸರಿನ ಭಯವೇಕೆ?

English summary

How to Prevent Cancer Naturally | Tips For Health | ಕ್ಯಾನ್ಸರ್ ಅನ್ನು ತಡೆಯುವುದು ಹೇಗೆ? | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Cancer is one of the leading causes of death in humans. It is a disease which causes the cells to divide and grow uncontrollably which leads to the formation of a tumour.
X
Desktop Bottom Promotion