For Quick Alerts
ALLOW NOTIFICATIONS  
For Daily Alerts

ಯಶಸ್ವಿಯಾಗಿ ಸಸ್ಯಾಹಾರಿಯಾಗುವುದು ಹೇಗೆ ?

|

ಅನೇಕ ಮಾಂಸಾಹಾರಿಗಳು ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿ ಸಸ್ಯಾಹಾರಿ ಆಹಾರವನ್ನು ಸೇವಿಸುವತ್ತ ಬದಲಾಗಿದ್ದಾರೆ. ಇದಕ್ಕೆ ಕಾರಣಗಳು ಹಲವಾರಿರಬಹುದು. ಆದರೆ ಆಹಾರ ಪದ್ಧತಿಯನ್ನು ಬದಲಾಯಿಸಲು ನಿರ್ಧರಿಸಿರುವುದು ಉತ್ತಮ ಬದಲಾವಣೆಯೆ. ಆದಾಗ್ಯೂ ಅವುಗಳನ್ನು ಪಾಲಿಸುವುದು ಸುಲಭದ ಮಾತಲ್ಲ. ಏಕೆಂದರೆ ಹುಟ್ಟಿದಾಗಿನಿಂದ ಅನುಸರಿಸಿಕೊಂಡು ಬಂದ ಪದ್ಧತಿಯನ್ನು ಒಮ್ಮೆಲೇ ಬದಲಾಯಿಸುವುದೆಂದರೆ ಯಾರಿಗಾದರೂ ಕಷ್ಟಸಾಧ್ಯವೇ ಸರಿ !

ಒಂದುವೇಳೆ ನೀವು ಇಂತಹ ಆಹಾರ ಪದ್ಧತಿಯವರಾಗಿದ್ದು ಬದಲಾವಣೆ ಬಯಸಿದ್ದಲ್ಲಿ, ನಿಮಗೆ ಹೇಗೆ ಆರಂಭಿಸಬೇಕು ಎಂಬುದರಲ್ಲಿ ಗೊಂದಲವಿದ್ದರೆ ಈ ಲೇಖನವು ನಿಮ್ಮ ಪರಿವರ್ತನೆಯ ಕೆಲವು ಸುಳಿವುಗಳನ್ನು ನೀಡಲು ಸಹಕಾರಿಯಾಗಬಹುದು.

How to successfully become a vegetarian

1. ಮಾನಸಿಕ ಸ್ವೀಕಾರ
ನೀವು ಮಾಂಸಹಾರ ಪದ್ಧತಿಯಿಂದ ಬೇರೆ ಆಹಾರ ಪದ್ಧತಿಯನ್ನು ಅನುಸರಿಸಲು ಬಯಸಿದ್ದರೆ ಅದು ಅಷ್ಟು ಸುಲಭವಲ್ಲ. ಅದಕ್ಕೆ ನಿಮ್ಮ ಮಾನಸಿಕ ಸಿದ್ಧತೆ ಹಾಗೂ ಹೊಂದಾಣಿಕೆ ಬೇಕು! ಪ್ರಸ್ತುತ ನಿಮ್ಮ ಆಹಾರದ ರುಚಿ ಸಸ್ಯಹಾರಕ್ಕಿಂತ ವಿಭಿನ್ನವಾಗಿದ್ದು ನಿಮಗೆ ಬೇಕಾದ ಹಾಗೆಯೇ ಇದೆ. ಆದ್ದರಿಂದ ನಿಮ್ಮ ಮನಸ್ಸನ್ನು ಮುಂದಿನ ಬದಲಾವಣೆಗೆ ಒಗ್ಗಿಕೊಳ್ಳುವಂತೆ ಮೊದಲು ಸಿದ್ಧಪಡಿಸಬೇಕು.

2. ಜೀವನಶೈಲಿಯ ಬದಲಾವಣೆಗಳ ಒಂದು ಪಟ್ಟಿಯನ್ನು ತಯಾರಿಸಿ
ಸಸ್ಯಾಹಾರವನ್ನು ಸೇವಿಸಲು ಹೊರಟಿರುವ ನೀವು ಮೊದಲು ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು. ನಿಮ್ಮ ಈ ಬದಲಾವಣೆಯ ನಿರ್ಧಾರಕ್ಕೆ ನೀವೆಷ್ಟು ಬದ್ಧರಾಗಿದ್ದೀರಿ ಎಂಬುದು ಕೂಡಾ ಬಹಳ ಮುಖ್ಯ. ಸಸ್ಯಾಹಾರವನ್ನೇ ಮುಂದೆ ಸೇವಿಸುವುದಾದರೆ ಆ ಉತ್ಪನ್ನಗಳನ್ನು ಖರೀದಿಸುವುದಕ್ಕಾಗಿ ನಿಮಗೆ ಅಗತ್ಯವಿರುವ ರೆಸ್ಟೋರೆಂಟ್ /ಭೋಜನಾ ಮಂದಿರ, ಮಳಿಗೆಗಳು, ಸೂಪರ್ ಮಾರ್ಕೆಟ್ ಇವುಗಳಲ್ಲಿ ಉತ್ತಮವಾದವುಗಳ ಪಟ್ಟಿ ಮಾಡಿಕೊಳ್ಳಿ.

3. ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ತಿಳಿಸಿ
ಸಾಮಾಜಿಕ ವಲಯದಲ್ಲಿ ಜೀವಿಸುತ್ತಿರುವ ನೀವು ನಿಮ್ಮವರ ಜೊತೆ ಆಹಾರ ಸೇವಿಸುವುದು ಸಾಮಾನ್ಯ. ಆದರೆ ನಿಮ್ಮ ಈ ನಿರ್ಧಾರ ಅವರಿಗೆ ಆಶ್ವರ್ಯವನ್ನು ತರಬಹುದು ಹಾಗೂ ಅವರು ಕೇಳುವ ಹಲವಾರು ಪ್ರಶ್ನೆಗಳಿಗೆ ನೀವು ಉತ್ತರಿಸಬೇಕಾಗಬಹುದು. ಆದ್ದರಿಂದ ನಿಮ್ಮ ನಿರ್ಣಯ ಆಗೂ ವಾಸ್ತವದ ಬಗ್ಗೆ ಅವರಿಗೆ ಅರಿವು ಮೂಡಿಸಲು ನೀವು ಸಿದ್ಧರಾಗಿರಿ.

4.ದೇಹದ ತೂಕ
ನಿಮ್ಮ ಆಹಾರ ಪದ್ಧತಿಯ ಬದಲಾವಣೆಯಿಂದ ನಿಮ್ಮ ದೇಹ ತೂಕ ಹಾಗೂ ಆರೋಗ್ಯದಲ್ಲಿ ವ್ಯತ್ಯಾಸಗಳಾಗಬಹುದು ! ಆದ್ದರಿಂದ ಮಾಂಸಾಹಾರದಿಂದ ನಿಮ್ಮ ದೇಹಕ್ಕೆ ಒದಗಿಸುತ್ತಿದ್ದ ಪೋಷಕಾಂಶಗಳು ಸಸ್ಯಾಹಾರಗಳಲ್ಲಿಯೂ ಸಿಗುವಂತೆ ನೋಡಿಕೊಳ್ಳಿ. ಅಥವಾ ಅಂತಹುದೇ ಅಂಶವಿರುವ ಆಹಾರ ಉತ್ಪನ್ನಗಳನ್ನು ಸೇವಿಸಿ.

5. ಸಸ್ಯಾಹಾರಿ ಪಾಕವಿಧಾನದ ಪುಸ್ತಕಗಳ ಖರೀದಿ

ಸಸ್ಯಾಹಾರಗಳನ್ನು ನೀವೆ ಸ್ವತಃ ತಯಾರಿಸಲು ಹೊರಟಾಗ ಅದಕ್ಕೆ ಬೇಕಾಗುವ ಸಮ ಪ್ರಮಾಣದ ಸಾಮಗ್ರಿಗಳ ಬಗ್ಗೆ ನಿಮಗೆ ಗೊತ್ತಿಲ್ಲದಿರಬಹುದು. ಆದ್ದರಿಂದ ಅಡುಗೆ ತಯಾರಿಸುವ ವಿಧಾನಗಳಿರುವ ಪುಸ್ತಕಗಳನ್ನು ಖರೀದಿಸಿ, ಆಹಾರವನ್ನು ತಯಾರಿಸಿ. ಇದರಿಂದ ಹೊಸತರದ ಹಾಗೂ ಸುಲಭವಾಗಿ ಸಸ್ಯಾಹಾರಗಳನ್ನು ನೀವೇ ಸ್ವತಃ ತಯಾರಿಸಬಹುದು.

6. ಪರಿವರ್ತನೆಯನ್ನು ನಿಧಾನವಾಗಿ ಮಾಡಿ
ಮೀನು, ಮಾಂಸವನ್ನು ಸೇವಿಸುವುದನ್ನು ಥಟ್ಟನೆ ನಿಲ್ಲಿಸಬೇಡಿ. ಇದು ಮದ್ಯಪಾನವನ್ನು ಬಿಟ್ಟಹಾಗೆ ತಕ್ಷಣಕ್ಕೆ ಬೇರೆಯದೇ ಪರಿಣಾಮ ಬೀರಬಹುದು. ಆದ್ದರಿಂದ ಹಂತ ಹಂತವಾಗಿ ಪರಿವರ್ತನೆಯನ್ನು ಹೊಂದಿರಿ.

7. ಮಾಂಸ ಬದಲಿ ಆಹಾರವನ್ನು ಸೇವಿಸಿ
ಮಾಂಸಸ ಪೋಷಕಾಂಶಗಳನ್ನು ಹೊಂದಿರುವ ಸಾಕಷ್ಟು ಪದಾರ್ಥಗಳು ಸಸ್ಯಾಹಾರದಲ್ಲಿದೆ. ಅಂತಹ ಉತ್ಪನ್ನಗಳನ್ನೇ ಸೇವಿಸಿ. ಇದರಿಂದಾಗಿ ನಿಮ್ಮ ಆಹಾದ ಪದ್ಧತಿಯ ಪರಿವರ್ತನೆ ನಿಮಗೆ ಇನ್ನಷ್ಟು ಸುಲಭವೆನಿಸುವುದು. ಉದಾಹರಣೆಗೆ ಸೋಯಾಬಿನ್ ಇಂತಹ ಆಹಾರ ಉತ್ಪನ್ನಗಳಲ್ಲಿ ಒಂದು.

8. ತಿನಿಸುಗಳ ಪ್ರಮಾಣದ ಬಗ್ಗೆ ಗಮಸಹರಿಸಿ
ನೀವು ಮಾಂಸಹಾರಕ್ಕೆ ಸರಿದೂಗಿಸಬೇಕಾದರೆ ಸಸ್ಯಾಹಾರವನ್ನು ತುಸು ಹೆಚ್ಚಾಗಿಯೇ ತಿನ್ನಬೇಕಾಗಬಹುದು. ನಿಮ್ಮ ದೇಹಕ್ಕೆ ಅದೇ ರೀತಿಯ ಕ್ಯಾಲರಿಯ ಅಗತ್ಯವಿರುತ್ತದೆ. ಆದ್ದರಿಂದ ನೀವು ಸಸ್ಯಾಹಾರದಲ್ಲಿ 1200 ಕ್ಯಾಲರಿಯಷ್ಟು ಪಡೆಯುತ್ತಿದ್ದೀರೆ ಎಂದು ಪರೀಕ್ಷಿಸಿಕೊಳ್ಳಿ.

ಮಾಂಸಾಹಾರ ಪದ್ಧತಿಯಿಂದ ಸಸ್ಯಾಹಾರ ಪದ್ಧತಿಗೆ ಬದಲಾವಣೆಯನ್ನು ಹೊಂದುವುದು ಉತ್ತಮವಾದ ನಿರ್ಧಾರವೇ. ಆದರೆ ಇದಕ್ಕಾಗಿ ನಿಮ್ಮ ಸ್ವಯಂ ನಿಯಂತ್ರಣ ಹಾಗೂ ಶಿಸ್ತು ಬಹಳ ಮುಖ್ಯ. ಈ ಮೇಲಿನ ಕೆಲವು ಸಲಹೆಗಳು ನಿಮ್ಮನ್ನು ನಿಮ್ಮ ನಿರ್ಧಾರದಲ್ಲಿ ಸಫಲತೆಯನ್ನು ಕಾಣಲು ಖಂಡಿತ ಸಹಕಾರಿಯಾಗಲಿದೆ.

English summary

How to successfully become a vegetarian | ಯಶಸ್ವಿಯಾಗಿ ಸಸ್ಯಾಹಾರಿಯಾಗುವುದು ಹೇಗೆ ?

If you are one of those people looking to make that shift but don’t know where to start, this article will give you some tips on how you can make the transition happen.
X
Desktop Bottom Promotion