For Quick Alerts
ALLOW NOTIFICATIONS  
For Daily Alerts

ಪಥ್ಯ ಮಾಡ್ತಾ ಇರುವಾಗ ಸಿಹಿ ತಿನ್ನುವುದು ಹೇಗೆ?

|

ನೀವು ಪಥ್ಯ ಅಥವಾ ಡಯಟ್ ನಲ್ಲಿದ್ದೀರಾ? ಸಿಹಿ ಪದಾರ್ಥಗಳೆಂದರೆ ಭಯವೇ? ತೊಂದರೆಯಿಲ್ಲ. ಪಥ್ಯದಲ್ಲಿದ್ದರೂ ಕೂಡ ನಿಮ್ಮ ಇಷ್ಟದ ಸಿಹಿ ಪದಾರ್ಥಗಳನ್ನು ಮತ್ತು ಕ್ಯಾಲೋರಿ ಖಾಲಿಯಿರುವ ಹಬ್ಬದೂಟವನ್ನು ಖುಷಿಯಿಂದ ಆಸ್ವಾದಿಸಬಹುದು. ಚಾಕೋಲೇಟ್, ಕುಕ್ಕೀಸ್, ಚಿಪ್ಸ್ ನಂತಹ ಕುರುಕಲು ತಿಂಡಿಗಳು ನಿಮಗೆ ಪ್ರಿಯವಾದರೆ, ಒಂದಷ್ಟು ಪ್ರಾಥಮಿಕ ಜ್ಞಾನವನ್ನು ಹೊಂದಿದ್ದು ನಿಮ್ಮಿಷ್ಟದ ಊಟವನ್ನು ಖುಷಿಯಿಂದ ಆಸ್ವಾದಿಸಬಹುದು. ಆರೋಗ್ಯವನ್ನೂ ಕಾಪಾಡಿಕೊಂಡು ತೂಕವನ್ನೂ ಕೂಡ ಇಳಿಸಿಕೊಳ್ಳಬಹುದು.

1. ದಿನವೊಂದಕ್ಕೆ ನೀವು ಸ್ವೀಕರಿಸಬಹುದಾದ ಸಿಹಿ ಪದಾರ್ಥಗಳ ಕ್ಯಾಲೋರಿಯನ್ನು ಲೆಕ್ಕ ಹಾಕಿ. ಹೆಚ್ಚೂ ಕಡಿಮೆ 200 ರಿಂದ 300 ಕ್ಯಾಲೋರಿಯಷ್ಟು ಸಿಹಿ ಪದಾರ್ಥ ದಿನವೊಂದಕ್ಕೆ ಸರಿಯಾಗಬಹುದು.

2. ಸಿಹಿ ತಿನ್ನುವಾಗ ನಿಯಂತ್ರಣದಲ್ಲಿರಲಿ. ಇದೀಗ ಕ್ರಿಸ್ಟೀಸ್ ತಿನ್ಸೇಶನ್ಸ್ ಕುಕೀಸ್ ಮತ್ತು ಸ್ನ್ಯಾಕ್ಸ್ 100 ಕ್ಯಾಲೋರಿ ಪ್ಯಾಕ್ ನಲ್ಲಿ ಲಭ್ಯವಿದೆ. ಇದರ ಜೊತೆಗೆ ಕ್ಯಾಡ್ ಬರಿ, ಕಿಟ್ ಕ್ಯಾಟ್ ಮತ್ತು ಏರೋ ಸಿಂಗಲ್ಸ್ ಚಾಕೋಲೇಟ್ ಬಾರ್ ಗಳೂ ಕೂಡ ಕಡಿಮೆ ಕ್ಯಾಲೋರಿಯಲ್ಲಿ ಲಭ್ಯವಿವೆ.

How to Enjoy Sweets on a Diet

3. ಸಕ್ಕರೆ ರಹಿತ ಸಿಹಿ ಪದಾರ್ಥಗಳನ್ನು ಕೊಂಡುಕೊಳ್ಳಿ. ಹಲವಾರು ಆರೋಗ್ಯ ಸಂಬಂಧಿ ಆಹಾರದ ಅಂಗಡಿಗಳಲ್ಲಿ ಇವು ದೊಡ್ಡ ಪ್ರಮಾಣದಲ್ಲೂ ಸಿಗುತ್ತವೆ. ಈ ಪದಾರ್ಥಗಳಲ್ಲಿ ನಿಜವಾದ ನೈಸರ್ಗಿಕ ಸಕ್ಕರೆಯ ಬದಲಿಗೆ ಕ್ರತಕ ಸಿಹಿಯನ್ನು ಬಳಸಲಾಗಿರುತ್ತದೆ. ಇವು ಕ್ಯಾನ್ಸರ್ ಗೂ ಕಾರಣವಾಗಬಹುದು. ಹೀಗಾಗಿ ಇಂಥ ಪದಾರ್ಥಗಳನ್ನು ಆದಷ್ಟು ಕಡಿಮೆ ಬಳಸಿ. ಕೇವಲ ಮನಸಂತೃಪ್ತಿಗೆ ಮಾತ್ರ.

4. ಹೆಚ್ಚಿನ ಕ್ಯಾಲೋರಿಯನ್ನು ಕರಗಿಸಿ. 200 ಕ್ಯಾಲೋರಿಯಷ್ಟು ಮತ್ತು ಅದಕ್ಕಿಂತ ಕಡಿಮೆ ಕ್ಯಾಲೋರಿಯುಳ್ಳ ಪದಾರ್ಥಗಳನ್ನು ಸೇವಿಸಿದರೆ ಹೆಚ್ಚಿನ ಕ್ಯಾಲೋರಿಯನ್ನು ಕರಗಿಸಬೇಕಾದ ಅವಶ್ಯಕತೆಯಿಲ್ಲ. ತೂಕವನ್ನು ಕಡಿಮೆ ಮಾಡಿಕೊಳ್ಳಬೇಕಿದ್ದರೆ ಮಾತ್ರ ನೀವು ಪ್ರತಿದಿನ ಸೇವಿಸುವ ಹೆಚ್ಚಿನ ಕ್ಯಾಲೋರಿಯನ್ನು ಕರಗಿಸಲೇಬೇಕು.

ಕ್ಯಾಲೋರಿ ಕರಗಿಸುವುದು:

15 ನಿಮಿಷ ಮೆಟ್ಟಿಲುಗಳನ್ನು ಹತ್ತಿದರೆ 220 ಕ್ಯಾಲೋರಿ ಕರಗುತ್ತದೆ.

1 ತಾಸು ಡ್ರಮ್ ಬಾರಿಸಿದರೆ 235 ಕ್ಯಾಲೋರಿ ಕಡಿಮೆಯಾಗುತ್ತದೆ.

30 ನಿಮಿಷಗಳ ಕಾಲ ಹುಲ್ಲುಹಾಸಿನ ಮೇಲೆ ನಡೆದಾಡುವುದರಿಂದ 117 ಕ್ಯಾಲೋರಿಯನ್ನು ಸುಡಬಹುದು.

1 ತಾಸು ಬೌಲಿಂಗ್ ಮಾಡುವುದರಿಂದ 175 ಕ್ಯಾಲೋರಿ ಕಡಿಮೆಯಾಗುತ್ತದೆ.

1 ತಾಸು ಬಾಸ್ಕೇಟ್ ಗಳನ್ನು ಬಿಸಾಡುವುದರಿಂದ 265 ಕ್ಯಾಲೋರಿ ಕರಗುತ್ತದೆ.

1 ತಾಸು ಮಿನಿ ಗಾಲ್ಫ್ ಆಡುವುದರಿಂದ 175 ಕ್ಯಾಲೋರಿ ಸುಡುತ್ತದೆ.

15 ನಿಮಿಷ ಹಗ್ಗ ಜಿಗಿಯುವುದರಿಂದ 177 ಕ್ಯಾಲೋರಿಯಷ್ಟನ್ನು ಕಡಿತಗೊಳಿಸಬಹುದು.

10 ನಿಮಷ 1 ಮೈಲಿನಷ್ಟು ದೂರ ಓಡುವುದರಿಂದ 100 ಕ್ಯಾಲೋರಿ ಸುಡಬಹುದು.

15 ನಿಮಿಷ ಈಜುವುದರಿಂದ 100 ಕ್ಯಾಲೋರಿ ಕಡಿಮೆಯಾಗುತ್ತದೆ.

ಬೀಚ್ ವಾಲಿಬಾಲ್ ಅನ್ನು ಒಂದು ಗಂಟೆ ಕಾಲ ಆಡಿದರೆ 470 ಕ್ಯಾಲೋರಿ ಕಡಿತಗೊಳ್ಳುತ್ತದೆ.

ಸಲಹೆಗಳು:

ಸ್ಟಾರ್ ಬಕ್ಸ್ ನಂತಹ ಸ್ಥಳಗಳಿಂದ ಆದಷ್ಟು ದೂರವಿರಿ. ಮುಂಜಾನೆಯ ಇಂಥ ಕಾಫಿಯನ್ನು ಸರಳವಾದ ಹಣ್ಣುಗಳಿಂದ ಬದಲಾಯಿಸಿ.

ನೀವು ಕೆಲಸ ಮಾಡುವ ಸ್ಥಳದಲ್ಲಿ ಒಂದು ಫ್ರಿಡ್ಜ್ ಇಟ್ಟುಕೊಳ್ಳಿ ಮತ್ತು ಫ್ರಿಢ್ಜಿನಲ್ಲಿ ತಾಜಾ ಹಣ್ಣುಗಳು, ತರಕಾರಿ, ಹಣ್ಣಿನ ಜ್ಯೂಸ್ ಗಳನ್ನು ತುಂಬಿಸಿಟ್ಟುಕೊಳ್ಳಿ.

ಏನಾದರೂ ಸಿಹಿಯಾದ ತಿಂಡಿ ತಿನ್ನಬೇಕೆಂಬ ಹಂಬಲವಾದರೆ, ಅಂಟಿನ ಕಡ್ಡಿಯನ್ನು ಚಪ್ಪರಿಸಿ. ಇದರಿಂದ ಕೇವಲ ಸಿಹಿ ತಿನ್ನಬೇಕೆಂಬ ಹಂಬಲವಷ್ಟೇ ದೂರಾಗುವುದಿಲ್ಲ. ಇದರ ಜೊತೆಗೆ ಅದನ್ನು ಚಪ್ಪರಿಸುವ ವೇಳೆ ಬೇರೆ ಏನೂ ತಿನ್ನಲಾಗುವುದಿಲ್ಲ. ಆದರೆ ಹಣ್ಣಿನ ರಸಗಳ ಅಂಟಿನುಂಡೆಯಿಂದ ದೂರವಿರಿ. ಇವುಗಳಿಂದ ಮತ್ತಷ್ಟು ಹಸಿವಾಗಬಹುದು. ಅಂಟಿನುಂಡೆಗಳನ್ನು ಚಪ್ಪರಿಸುವಾಗ ಬಿಳಿ ಸಕ್ಕರೆಯ ಬದಲು ಜೇನುತುಪ್ಪ ಅಥವಾ ಬೂದು ಸಕ್ಕರೆಯನ್ನೇ ಬಳಸಿ.

ಅಂಟಿನುಂಡೆಗಳನ್ನು ತಿಂದೂ ಕೂಡ ನಿಮಗೆ ತೃಪ್ತಿಯಾಗದಿದ್ದರೆ ಜೇನುತುಪ್ಪ ಅಥವಾ ಬೂದು ಸಕ್ಕರೆ ಬಳಸಿದ ಚಹ ಕುಡಿಯಿರಿ. ಸಾಮಾನ್ಯವಾಗಿ ಚಹದಲ್ಲಿ ಹಾಲು ಬಳಸುತ್ತಿದ್ದರೆ ಕಡಿಮೆ ಕೊಬ್ಬಿನಂಶವಿರುವ ಹಾಲನ್ನು ಅಥವಾ ಅಕ್ಕಿ ಹಾಲನ್ನು ಬಳಸಿ.

English summary

How to Enjoy Sweets on a Diet | ಪಥ್ಯ (ಡಯಟ್) ದಲ್ಲಿರುವಾಗ ಸಿಹಿ ಪದಾರ್ಥಗಳನ್ನು ಆಸ್ವಾದಿಸುವುದು ಹೇಗೆ?

With some basic knowledge, you can enjoy your favourite treats while still being successful at loosing weight and staying healthy!
X
Desktop Bottom Promotion