For Quick Alerts
ALLOW NOTIFICATIONS  
For Daily Alerts

ಅನಾರೋಗ್ಯದಿಂದ ದೂರವಾಗುವುದು ಹೇಗೆ?

By ಲೇಖಕ
|

ಆರೋಗ್ಯ ಸರಿಯಿಲ್ಲ ಎಂದು ಮನೆಯಲ್ಲೇ ಇರುವುದು ಅದೆಷ್ಟು ಸುಲಭ ಮತ್ತು ಆರಾಮದಾಯಕ ಅಲ್ಲವೇ? ಇಡಿ ದಿನ ಮನೆಯಲ್ಲೇ ಕೂತು ಟಿ.ವಿ ನೋಡಬಹುದು ಅದಲ್ಲದೇ ಶಾಲೆಗೆ ಹೋಗುವ ಅಗತ್ಯವಿಲ್ಲ. ಆದರೆ ಕೆಲವೊಮ್ಮೆ ಇದೆಷ್ಟು ಬೇಸರ ತರಿಸುತ್ತದೆ ಎಂದು ಮರೆಯುತ್ತೀರಿ. ಅದಕ್ಕೆ ಹುಷಾರು ತಪ್ಪಬೇಡಿ.

1. ನಿಮ್ಮ ಬಗ್ಗೆ ಕಾಳಜಿ ತೆಗೆದುಕೊಳ್ಳಿ: ಹೆಚ್ಚು ನೀರು ಕುಡಿಯಿರಿ, ಬೇಕಾದಷ್ಟು ನಿದ್ದೆ ಮಾಡಿ, ಔಷಧಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಿ ಮತ್ತು ಕೈಯನ್ನು ಸ್ವಚ್ಛವಾಗಿ ತೊಳೆಯಿರಿ. ಹೀಗೆ ಮಾಡದಿದ್ದರೆ ನೀವು ಬೇಗ ಗುಣಮುಖರಾಗುವುದಿಲ್ಲ.

How to Cope with Being Sick

2. ತಲೆನೋವು ಇದ್ದರೆ ಹೆಚ್ಚು ಓದಬೇಡಿ: ಇದು ನಿಮ್ಮ ತಲೆನೋವನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.

3. ನಿಮ್ಮ ಗೆಳೆಯರನ್ನು ಕರೆಯಿರಿ: ನಿಮ್ಮ ಆರೋಗ್ಯ ಸರಿಯಿಲ್ಲದಿದ್ದಾಗ ನಿಮ್ಮ ಗೆಳೆಯರೊಂದಿಗೆ ಹರಟೆ ಹೊಡೆಯುವುದು ನಿಮಗೆ ಆರಾಮದಾಯಕೆವೆನ್ನಿಸುತ್ತದೆ. ಇದು ನಿಮ್ಮ ಮನಸ್ಸನ್ನು ನಿಮ್ಮ ಅನಾರೋಗ್ಯದಿಂದ ಹೊರಗೆ ತರಲು ನೆನಪಾಗುತ್ತದೆ.

4. ಹೊಟ್ಟೆ ಸರಿಯಿಲ್ಲದಿದ್ದರೆ ಉಪಾಹಾರ ಇರುವ ಕಾರ್ಯಕ್ರಮಗಳಿಗೆ ಭೇಟಿ ನೀಡಬೇಡಿ: ನಿಮ್ಮ ಹೊಟ್ಟೆಯ ಮೇಲೆ ಸ್ವಲ್ಪ ಬಿಸಿ ಇರುವ ಯಾವುದೇ ವಸ್ತುವನ್ನು ಇಡಿ ಮತ್ತು ಆರಾಮವಾಗಿ ಮಲಗಿ. ಹೊರಗಿನ ತಿಂಡಿಯನ್ನು ಆದಷ್ಟು ಮಟ್ಟಿಗೆ ತಿನ್ನಬೇಡಿ.

5. ಟಿ.ವಿ. ನೋಡಿ ಅಥವಾ ಗಣಕಯಂತ್ರದೊಡನೆ ಸಮಯ ಕಳೆಯಿರಿ: ಇದು ತಲೆನೋವನ್ನು ತರದು ಮತ್ತು ಹೆಚ್ಚು ಓಡಾಡುವ ಅಗತ್ಯವಿಲ್ಲ. ಆದರೆ ಅತಿಯಾಗಿ ಟಿ.ವಿ ಪರದೆಯನ್ನು ನೋಡುವುದು ನಿಮ್ಮ ಕಣ್ಣಿಗೆ ತ್ರಾಸದಾಯಕವಾಗಿದೆ ಮತ್ತು ತಲೆನೋವಿಗೂ ಕಾರಣವಾಗಬಹುದು.

6. ನಿಮ್ಮ ಅನಾರೋಗ್ಯಕ್ಕೆ ಇವ್ಯಾವುದೂ ಕಾರಣ ಅಲ್ಲ ಎಂದಾದರೆ ಈ ದಿನದ ಸದುಪಯೋಗ ಪಡೆದುಕೊಳ್ಳಿ.

ಸಲಹೆಗಳು:

ನಿಮಗೆ ಇಷ್ಟವಾಗದ್ದನ್ನು ನಿಮಗೆ ಕಿರಿಕಿರಿ ತರುವಂಥದ್ದನ್ನು ತಲೆನೋವು ತರಿಸುವ ಕೆಲಸ ಮಾಡಬೇಡಿ.

ನಿಮಗೆ ಕಿರಿಕಿರಿ ತರುವ ವಿಷಯಗಳೆಂದರೆ ಸೋಫ್ಟ್ ಡ್ರಿಂಕ್ಸ್ ಸೇವನೆ, ಬಹಳ ಹೆಚ್ಚು ನಡೆಯುವುದು, ಅತಿಯಾಗಿ ಖಾರವಾದ ವಸ್ತುಗಳನ್ನು ತಿನ್ನುವುದು.

ಆರೋಗ್ಯವೇ ಭಾಗ್ಯ ಎನ್ನುವುದನ್ನು ನೆನಪಿಡಿ

ನಿಮಗೆ ದಣಿವು ಅನಿಸದಿದ್ದರೂ ಸಾಕಷ್ಟು ವಿಶ್ರಾಂತಿ ಪಡೆಯಿರಿ. ಇದು ನಿಮ್ಮ ಆರೋಗ್ಯ ಸರಿಪಡಿಸಲು ಅತೀ ಅಗತ್ಯ.

English summary

How to Cope with Being Sick | ಅನಾರೋಗ್ಯದಿಂದ ದೂರವಾಗುವುದು ಹೇಗೆ?

Sick days seem like a pretty good deal. You get to sit home and watch TV all day, and you don't have to go to school. But sometimes we forget how boring it can be and how bad you feel.
X
Desktop Bottom Promotion