For Quick Alerts
ALLOW NOTIFICATIONS  
For Daily Alerts

ಎಲೆಕೋಸು: ಕ್ಯಾನ್ಸರ್, ಹೃದಯದ ಕಾಯಿಲೆಗೆ ಪವರ್ ಫುಲ್ ತರಕಾರಿ

ಎಲೆಕೋಸನ್ನು ನಾವು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಅದರಿಂದ ನಮ್ಮ ದೇಹವು ಹೆಚ್ಚಿನ ಪೋಷಕಾಂಶಗಳನ್ನು ಪಡೆದುಕೊಂಡು ಕ್ಯಾನ್ಸರ್ ಹಾಗೂ ಹೃದಯ ಕಾಯಿಲೆಯಿಂದ ನಮ್ಮನ್ನು ಕಾಪಾಡುತ್ತದೆ.

By Hemanth
|

ದೇಹದಲ್ಲಿನ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬೇಕಾದರೆ ಅಥವಾ ರೋಗಗಳು ಬರದಂತೆ ತಡೆಯಬೇಕಾದರೆ ಆಹಾರ ಕ್ರಮ ಸರಿಯಾಗಿ ಇರಬೇಕು. ಆಹಾರ ಕ್ರಮವೆಂದರೆ ನಾವು ನಿತ್ಯ ತಿನ್ನುವಂತಹ ಆಹಾರಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಅದರಲ್ಲೂ ತರಕಾರಿಗಳನ್ನು ತಿನ್ನುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ. ನಮ್ಮ ದೇಹಕ್ಕೆ ಬೇಕಾದಂತಹ ಪೋಷಕಾಂಶಗಳು ಹಾಗೂ ವಿಟಮಿನ್ ಗಳು ಲಭ್ಯವಾಗುತ್ತದೆ. ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್

ಇಂತಹ ತರಕಾರಿಗಳ ಸಾಲಿನಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವಂತಹ ಎಲೆಕೋಸನ್ನು ನಾವು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಅದರಿಂದ ನಮ್ಮ ದೇಹವು ಹೆಚ್ಚಿನ ಪೋಷಕಾಂಶಗಳನ್ನು ಪಡೆದುಕೊಂಡು ಕ್ಯಾನ್ಸರ್ ಹಾಗೂ ಹೃದಯ ಕಾಯಿಲೆಯಿಂದ ನಮ್ಮನ್ನು ಕಾಪಾಡುತ್ತದೆ. ಎಲೆಕೋಸಿನಲ್ಲಿ ಸಲ್ಫೋರಫನೆ ಎನ್ನುವ ಅಂಶವಿದ್ದು, ಇದು ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ. ಹೃದಯದ ಆರೋಗ್ಯಕ್ಕೆ ನೈಸರ್ಗಿಕ ಮದ್ದು, ತಪ್ಪದೇ ಅನುಸರಿಸಿ

ಎಲೆಕೋಸಿನ ಸೇವನೆಯಿಂದ ಮಧುಮೇಹ, ಬೊಜ್ಜು, ಹೃದಯದ ಕಾಯಿಲೆ ಇತ್ಯಾದಿಗಳನ್ನು ನಿವಾರಿಸಬಹುದು. ಬನ್ನಿ ಎಲೆಕೋಸಿನಿಂದ ಜೀವಕ್ಕೆ ಯಾವ ರೀತಿಯ ಲಾಭಗಳು ಸಿಗುತ್ತದೆ ಎನ್ನುವ ಬಗ್ಗೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದೆ...

ಕರುಳು ಮತ್ತು ಹೊಟ್ಟೆಯ ಕ್ಯಾನ್ಸರ್‌ಗೆ

ಕರುಳು ಮತ್ತು ಹೊಟ್ಟೆಯ ಕ್ಯಾನ್ಸರ್‌ಗೆ

ಎಲೆಕೋಸಿನಲ್ಲಿ ನಾರಿನಾಂಶವಿರುವ ಕಾರಣದಿಂದ ಹಲವಾರು ರೀತಿಯ ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸಬಹುದಾಗಿದೆ. ಎಲೆಕೋಸಿನ ಸೇವನೆ ಮಾಡುವುದರಿಂದ ಕರುಳಿನ ಕ್ಯಾನ್ಸರ್ ಮತ್ತು ಹೊಟ್ಟೆಯ ಕ್ಯಾನ್ಸರ್ ಬೆಳೆಯದಂತೆ ತಡೆಯಬಹುದು.ಎಲೆಕೋಸಿನ ಅತ್ಯುತ್ತಮ 10 ಪ್ರಯೋಜನಗಳು

ಶಕ್ತಿಯ ಮಟ್ಟ ಹೆಚ್ಚಿಸುತ್ತದೆ...

ಶಕ್ತಿಯ ಮಟ್ಟ ಹೆಚ್ಚಿಸುತ್ತದೆ...

ಇದರಲ್ಲಿ ಇರುವಂತಹ ಕಬ್ಬಿನಾಂಶವು ಶಕ್ತಿಯ ಮಟ್ಟ ಹೆಚ್ಚಿಸಿ, ರಕ್ತಪರಿಚಲನೆಯನ್ನು ಹೆಚ್ಚಿಸಿ ಚಯಾಪಚಾಯ ಕ್ರಿಯೆಯನ್ನು ಸುಗಮಗೊಳಿಸುವುದು.ಊಹೆಗೂ ನಿಲುಕದ ಪ್ರಯೋಜನ-ಈ ಎಲೆಕೋಸಿನಲ್ಲಿದೆ!

ಪ್ರತಿರೋಧಕ ಶಕ್ತಿ ಹೆಚ್ಚಳ

ಪ್ರತಿರೋಧಕ ಶಕ್ತಿ ಹೆಚ್ಚಳ

ವಿಟಮಿನ್ ಸಿ ಸಮೃದ್ಧವಾಗಿರುವ ಎಲೆಕೋಸು ಪ್ರತಿರೋಧಕ ಶಕ್ತಿಯನ್ನು ಬಲಿಷ್ಠಗೊಳಿಸುವುದು.

ಮೂಳೆಗಳ ಬಲಕ್ಕೆ

ಮೂಳೆಗಳ ಬಲಕ್ಕೆ

ಇದರಲ್ಲಿ ಇರುವಂತಹ ವಿಟಮಿನ್ ಕೆ ಪ್ರೋಟೀನ್ ಉತ್ಪತ್ತಿಗೆ ನೆರವಾಗಿ ಮೂಳೆಗಳಲ್ಲಿ ಖನಿಜಾಂಶವನ್ನು ಸಮತೋಲನದಲ್ಲಿಡುತ್ತದೆ. ಇದು ಅಸ್ಥಿರಂಧ್ರತೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೂಳೆಗಳ ಆರೋಗ್ಯ ಕಾಪಾಡಲು ಎಲೆಕೋಸು ಮಹತ್ವದ ಪಾತ್ರ ನಿರ್ವಹಿಸಲಿದೆ.

ಉರಿಯೂತ ನಿವಾರಣೆ

ಉರಿಯೂತ ನಿವಾರಣೆ

ಎಲೆಕೋಸಿನಲ್ಲಿ ಇರುವಂತಹ ಆ್ಯಂಟಿ ಆಕ್ಸಿಡೆಂಟ್ ಉರಿಯೂತವನ್ನು ಕಡಿಮೆ ಮಾಡುವುದು. ಎಲೆಕೋಸನ್ನು ನಿಯಮಿತವಾಗಿ ಸೇವನೆ ಮಾಡಿದರೆ ದೇಹದಲ್ಲಿನ ನೋವು ನಿವಾರಣೆಯಾಗುವುದು.

ಕ್ಯಾನ್ಸರ್ ಕೋಶಗಳ ಕೊಲ್ಲುವುದು

ಕ್ಯಾನ್ಸರ್ ಕೋಶಗಳ ಕೊಲ್ಲುವುದು

ಎಲೆಕೋಸಿನಲ್ಲಿ ಇರುವಂತಹ ಅತ್ಯಂತ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್ ಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಕಾರಣವಾಗುವಂತಹ ಫ್ರೀ ರ್ಯಾಡಿಕಲ್ ಗಳನ್ನು ನಿವಾರಣೆ ಮಾಡುತ್ತದೆ. ಇದು ಆರೋಗ್ಯಕ್ಕೆ ಆಗುವ ಪ್ರಮುಖ ಲಾಭವಾಗಿದೆ.

ಹೃದಯದ ಆರೋಗ್ಯಕ್ಕೆ

ಹೃದಯದ ಆರೋಗ್ಯಕ್ಕೆ

ಇದರಲ್ಲಿ ನಾರಿನಾಂಶ ಹೆಚ್ಚಿನ ಮಟ್ಟದಲ್ಲಿ ಇರುವ ಕಾರಣದಿಂದ ಎಲೆಕೋಸು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ನ ನಕಾರಾತ್ಮಕ ಪರಿಣಾಮವು ಕಡಿಮೆಯಾಗುವಂತೆ ಮಾಡುತ್ತದೆ. ಇದು ಹೃದಯದ ಕಾಯಿಲೆಯನ್ನು ತಡೆಯುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ದೃಷ್ಟಿ ಮತ್ತು ಚರ್ಮದ ಆರೋಗ್ಯಕ್ಕೆ

ದೃಷ್ಟಿ ಮತ್ತು ಚರ್ಮದ ಆರೋಗ್ಯಕ್ಕೆ

ಎಲೆಕೋಸಿನಲ್ಲಿ ಇರುವಂತಹ ವಿಟಮಿನ್ ಎ ದೃಷ್ಟಿ ಹಾಗೂ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಕ್ಷಿಪಟಲದ ಅವನತಿ ಮತ್ತು ಕಣ್ಣಿನ ಪೊರೆ ಬರದಂತೆ ತಡೆಯುತ್ತದೆ. ಚರ್ಮದಲ್ಲಿ ಕೆಂಪು ಕಲೆಗಳು ಮೂಡುವುದು ಹಾಗೂ ನೆರಿಗೆ ಬೀಳುವುದನ್ನು ಇದು ತಡೆಯುತ್ತದೆ.

English summary

Use This Secret Weapon Against Cancer & Heart Disease!

Cabbage is known to have some amazing health benefits. It is known to be a secret weapon against preventing cancer and heart disease. The health benefits of cabbage are so vast that it doesn't end with this alone. Cabbage is a part of the cruciferous vegetable family. These vegetables are a chock-o-block of nutrition.
Story first published: Thursday, March 30, 2017, 19:38 [IST]
X
Desktop Bottom Promotion