For Quick Alerts
ALLOW NOTIFICATIONS  
For Daily Alerts

ಲವಲವಿಕೆಯ ಹೃದಯಕ್ಕಾಗಿ ಆರೋಗ್ಯಕರ ಆಹಾರಕ್ರಮ

ಹೃದಯವೆನ್ನುವುದು ದೇಹದ ಮುಖ್ಯ ಕೇಂದ್ರವಿದ್ದಂತೆ. ಇಲ್ಲಿಂದಲೇ ಪ್ರಮುಖ ಅಂಗಾಂಗಗಳಿಗೆ ರಕ್ತ ಪೂರೈಕೆಯಾಗುವುದು. ಹೃದಯದ ಕಾರ್ಯಕ್ಕೆ ಯಾವುದೇ ತೊಂದರೆಯಾದರೂ ಅದರಿಂದ ದೇಹದ ಇತರ ಅಂಗಾಂಗಗಳ ಮೇಲೂ ಪರಿಣಾಮ ಬೀರುವುದು ಖಚಿತ!

By Manu
|

ಟೀವಿಯಲ್ಲಿ ಬರುವ ಹಲವು ಜಾಹೀರಾತುಗಳಲ್ಲಿ ಕೆಲವು ಆಹಾರವಸ್ತುಗಳನ್ನು ಹೃದಯವನ್ನು ರಕ್ಷಿಸುವ ರಾಯಭಾರಿಗಳಂತೆ ಕೆಲವೊಮ್ಮೆ ಬಿಂಬಿಸಲಾಗುತ್ತದೆ. ತಮ್ಮ ಉತ್ಪನ್ನ ಬಳಸಿದರೆ ಮಾತ್ರ ಹೃದಯಕ್ಕೆ ಒಳ್ಳೆಯದೆಂದೂ ಬೇರಾವ ಉತ್ಪನ್ನ ಕೊಂಡರೆ ಕೆಲವು ದಿನಗಳಲ್ಲಿಯೇ ಗೊಟಕ್ ಅನ್ನುತ್ತೀರೆಂದೂ ಉತ್ಪ್ರೇಕ್ಷಿಸಲಾಗುತ್ತದೆ. ಅಂದಹಾಗೆ ಜಾಹೀರಾತು ಎಂದರೆ ಉತ್ಪ್ರೇಕ್ಷೆಯೇ ಅಲ್ಲವೇ? ಇದಕ್ಕೆ ಮರುಳಾಗದವರು ಯಾರು!

ವಾಸ್ತವವಾಗಿ ಈ ಜಾಹೀರಾತುಗಳು ಎದೆ ತಟ್ಟಿ ಹೇಳಿಕೊಳ್ಳುವ ಮತ್ತು ಹೃದಯಕ್ಕೆ ಉತ್ತಮವಾದ ಪೋಷಕಾಂಶಗಳಿದ್ದರೂ ಈ ಉತ್ಪನ್ನಗಳ ಬೆಲೆ ಮಾತ್ರ ಕಡಿಮೆ ಇರುವುದಿಲ್ಲ. ಜಾಹೀರಾತಿಗೆ ಸುರಿದ ಲಕ್ಷಾಂತರ ರೂಪಾಯಿ ಆ ಸಂಸ್ಥೆ ವಸೂಲಿ ಮಾಡಿಕೊಳ್ಳುವುದಾದರೂ ಹೇಗೆ?

ಇದೇನಿದು, ಹೃದಯದ ಆರೋಗ್ಯಕ್ಕೆ ವೈನ್ ಒಳ್ಳೆಯದಂತೆ!

ಯಾವುದೋ ರೂಪದರ್ಶಿ ದುಡ್ಡು ಪಡೆದ ಮುಲಾಜಿಗೆ ತಾನೆಂದೂ ಬಳಸದೇ ಬೇರೆಯವರಿಗೆ ಬಳಸಲು ಹೇಳಿದ ಉತ್ಪನ್ನವನ್ನು ಕೋಲೆಬಸವನಂತೆ ದುಬಾರಿ ಬೆಲೆ ಕೊಟ್ಟು ಮನೆಗೆ ತರುವ ಬದಲು ಇದಕ್ಕೂ ಉತ್ತಮವಾಗಿ ಕೆಲಸ ನಿರ್ವಹಿಸಬಲ್ಲ ಮತ್ತು ಹೃದಯಕ್ಕೆ ಅತ್ಯುತ್ತಮವಾದ ಆಹಾರಗಳನ್ನು, ಹಾಗೂ ಕೆಲವೊಂದು ವ್ಯಾಯಾಮಗಳನ್ನು ಮಾಡುವುದರ ಮೂಲಕ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.. ಅಷ್ಟಕ್ಕೂ ನಮ್ಮ ಹಿರಿಯರು ಇಂತಹ ದುಬಾರಿ ಆಹಾರಗಳನ್ನು ಸೇವಿಸದೇ ಉತ್ತಮ ಆಯಸ್ಸು ಹೊಂದಿರಲಿಲ್ಲವೇ? ಮುಂದೆ ಓದಿ...

ಬಾರ್ಲಿ

ಬಾರ್ಲಿ

ನೋಡಲಿಕ್ಕೆ ಬಿಳಿಯ ಬಣ್ಣದ ಗೋಧಿಯಂತೆಯೇ ಇರುವ ಬಾರ್ಲಿ ಸಹಾ ಹೃದಯಕ್ಕೆ ಉತ್ತಮವಾದ ಆಹಾರವಾಗಿದೆ. ಬಾರ್ಲಿಯನ್ನು ತೊಳೆದು ತಣ್ಣೀರಿನಲ್ಲಿ ಇಡಿಯ ರಾತ್ರಿ ನೆನೆಸಿಟ್ಟ ನೀರು ಸಹಾ ಉತ್ತಮವಾಗಿದೆ. ನಿಮ್ಮ ಆಹಾರದಲ್ಲಿ ಬಾರ್ಲಿಯ ಖಾದ್ಯಗಳು ಸಾಕಷ್ಟಿರುವಂತೆ ನೋಡಿಕೊಳ್ಳಿ. ಬಾರ್ಲಿಯ ಸೂಪ್ ಮತ್ತು ಭಕ್ಷ್ಯಗಳನ್ನು ಆಗಾಗ ನಿಮ್ಮ ಆಹಾರದ ಒಂದು ಭಾಗವನ್ನಾಗಿಸಿ. ಇಡಿಯ ಗೋಧಿ ಉಪಯೋಗಿಸಿ ತಯಾರಿಸುವ ಹುಗ್ಗಿ ಮೊದಲಾದ ಸಿಹಿಗಳನ್ನು ಬಾರ್ಲಿ ಉಪಯೋಗಿಸಿಯೂ ತಯಾರಿಸಬಹುದು. ಕೊಂಚ ಅಂಟಾಗುವುದು ಹೆಚ್ಚು ಎನ್ನಿಸುವುದೇ ವಿನಃ ಪೋಷಕಾಂಶಗಳ ದೃಷ್ಟಿಯಿಂದ ಬಾರ್ಲಿ ಉತ್ತಮವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಬಾರ್ಲಿ ಪುಡಿಗಿಂತಲೂ ಬಾರ್ಲಿಯ ಕಾಳುಗಳೇ ಉತ್ತಮವಾಗಿವೆ.

ಬಾರ್ಲಿ ನೀರು: ಇದುವೇ ಆರೋಗ್ಯ ವೃದ್ಧಿಗೆ ಪನ್ನೀರು

ಸಿಹಿಗೆಣಸು

ಸಿಹಿಗೆಣಸು

ಇದರಲ್ಲಿರುವ ಉತ್ತಮ ಪ್ರಮಾಣದ ಕರಗದ ಮತ್ತು ಕರಗುವ ನಾರು, ವಿಟಮಿನ್ ಎ, ಲೈಕೋಪೀನ್ ಎಂಬ ಪೋಷಕಾಂಶಗಳು ಹೃದಯಕ್ಕೆ ಉತ್ತಮವಾಗಿದ್ದು ನಿಧಾನವಾಗಿ ಜೀರ್ಣಗೊಳ್ಳುವ ಮೂಲಕ ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಧಾನವಾಗಿ ಮತ್ತು ಸೂಕ್ತ ಪ್ರಮಾಣದಲ್ಲಿ ಸೇರಿಸುತ್ತಾ ಹೋಗುತ್ತದೆ. ಸಿಹಿಗೆಣಸನ್ನು ಹಸಿಯಾಗಿ ಸೇವಿಸುವುದು ಉತ್ತಮ. ಚಿಕ್ಕದಾಗಿ ತುಂಡು ಮಾಡಿದ ಗೆಣಸನ್ನು ನಿಮ್ಮ ನಿತ್ಯದ ಸಾಲಾಡ್ ನೊಂದಿಗೆ ಸ್ವಲ್ಪ ದಾಲ್ಚಿನ್ನಿ ಪುಡಿ ಮತ್ತು ಲಿಂಬೆರಸವನ್ನು ಚಿಮುಕಿಸಿ ಸೇವಿಸುವುದರಿಂದ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು.

ಅಡುಗೆ ಎಣ್ಣೆ ವಿಷಯದಲ್ಲಿ ಎಚ್ಚರಿಕೆ!

ಅಡುಗೆ ಎಣ್ಣೆ ವಿಷಯದಲ್ಲಿ ಎಚ್ಚರಿಕೆ!

ಕರಿದ ಪದಾರ್ಥಗಳೇ ಹೆಚ್ಚಿನವರಿಗೆ ಇಷ್ಟವಾಗುವ ಕಾರಣದಿಂದ ಎಣ್ಣೆಯು ಅತಿಯಾಗಿ ನಮ್ಮ ದೇಹವನ್ನು ಸೇರಿಕೊಳ್ಳುವುದು. ಇದರಿಂದ ಹೃದಯದ ಕಾಯಿಲೆ ಸಮಸ್ಯೆಯು ಹೆಚ್ಚಾಗಿರುತ್ತದೆ. ದೈನಂದಿನ ಆಹಾರ ಕ್ರಮದಲ್ಲಿ ಮೂರರಿಂದ ನಾಲ್ಕು ಚಮಚಕ್ಕಿಂತ ಹೆಚ್ಚಿನ ಎಣ್ಣೆ ಬಳಸಬೇಡಿ. ಅಲ್ಲದೆ 3-4 ತಿಂಗಳಿಗೊಮ್ಮೆ ಎಣ್ಣೆ ಬದಲಾಯಿಸುತ್ತಾ ಇರಿ. ತೆಂಗಿನ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಆಲಿವ್ ಎಣ್ಣೆ, ಸಾಸಿವೆ ಎಣ್ಣೆ ಹೀಗೆ ಬದಲಾಯಿಸುತ್ತಾ ಇದ್ದರೆ ವಿವಿಧ ರೀತಿಯ ಪೋಷಕಾಂಶಗಳು ನಿಮ್ಮ ದೇಹವನ್ನು ಸೇರಿಕೊಳ್ಳುತ್ತದೆ. ಇದರಿಂದ ಹೃದಯವು ಆರೋಗ್ಯವಾಗಿರುತ್ತದೆ.

ಊಟದ ಬಳಿಕ ಸಿಹಿ ತಿನ್ನಬೇಡಿ!

ಊಟದ ಬಳಿಕ ಸಿಹಿ ತಿನ್ನಬೇಡಿ!

ಭಾರತದಲ್ಲಿ ಹೆಚ್ಚಿನವರು ಊಟದ ಬಳಿಕ ಸಿಹಿ ತಿನ್ನುವಂತಹ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಆದರೆ ಇದರಿಂದ ರಕ್ತದ ಗ್ಲೂಕೋಸ್ ಮಟ್ಟ ಹೆಚ್ಚಾಗಿ ಮಧುಮೇಹ ಕಾಣಿಸಿಕೊಳ್ಳಬಹುದು. ಸಿಹಿಯಲ್ಲಿ ಹೆಚ್ಚಿನ ಕೊಬ್ಬು ಮತ್ತು ಸಕ್ಕರೆ ಇರುವುದರಿಂದ ಇದು ನಿಮ್ಮನ್ನು ಹೃದಯದ ಕಾಯಿಲೆಯ ಅಪಾಯಕ್ಕೆ ಒಡ್ಡಬಹುದು.

ಒಣದ್ರಾಕ್ಷಿ

ಒಣದ್ರಾಕ್ಷಿ

ನಿಯಮಿತವಾಗಿ ಒಣದ್ರಾಕ್ಷಿ ತಿನ್ನುವುದರಿಂದ ಹೃದಯದ ಬಡಿತವನ್ನು ಸಮತೋಲನದಲ್ಲಿ ಇಡಬಹುದು. ಹೃದಯಾಘಾತವಾಗಿ ಚೇತರಿಸಿ ಕೊಳ್ಳುತ್ತಿರುವವರು ಇದನ್ನು ತಿನ್ನುವುದರಿಂದ ಹೃದಯದ ಬಡಿತವನ್ನು ಸಮತೋಲನಕ್ಕೆ ತರಬಹುದು.

ಸಾಲ್ಮನ್ ಮೀನು : ಹೃದಯಕ್ಕೆ ಅತ್ಯುತ್ತಮವಾದ ಆಹಾರ

ಸಾಲ್ಮನ್ ಮೀನು : ಹೃದಯಕ್ಕೆ ಅತ್ಯುತ್ತಮವಾದ ಆಹಾರ

ಹೃದಯಕ್ಕೆ ಅತ್ಯುತ್ತಮವಾದ ಆಹಾರಗಳಲ್ಲಿ ಸಾಲ್ಮನ್ ಮೀನು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಇದರಲ್ಲಿರುವ ಒಮೆಗಾ - 3 ಕೊಬ್ಬಿನ ತೈಲವೇ ಇದಕ್ಕೆ ಕಾರಣ. ಈ ತೈಲ ಹೃದಯದೊತ್ತಡವನ್ನು ಕಡಿಮೆಗೊಳಿಸಿ ರಕ್ತಪರಿಚಲನೆಯ ಏರುಪೇರುಗಳನ್ನು ಸರಿಗೊಳಿಸುತ್ತದೆ. ಅಲ್ಲದೇ ಹೃದಯಕ್ಕೆ ಮಾರಕವಾಗಿರುವ ಟ್ರೈಗ್ಲಿಸರೈಡ್ ಗಳೆಂಬ ಕಣಗಳನ್ನೂ ನಿವಾರಿಸಿ ಹೃದಯದ ಉರಿಯನ್ನು ಶಮನಗೊಳಿಸುತ್ತದೆ. ವಾರಕ್ಕೆ ಕನಿಷ್ಟ ಎರಡು ತುಂಡು ಸಾಲ್ಮನ್ ಮೀನಿನ್ನು ಸೇವಿಸಲು ಅಮೇರಿಕಾದ ಹೃದಯ ಸಂಸ್ಥೆ ಶಿಫಾರಸ್ಸು ಮಾಡುತ್ತದೆ.

ಒಂದು ಗ್ಲಾಸ್ ದಾಳಿಂಬೆ ಜ್ಯೂಸ್

ಒಂದು ಗ್ಲಾಸ್ ದಾಳಿಂಬೆ ಜ್ಯೂಸ್

ನಮಗೆ ಗೊತ್ತಿರುವ ಹಾಗೆ ಮಧುಮೇಹವಿದ್ದವರಿಗೆ ಹೃದಯದ ತೊಂದರೆಯೂ ಇರುತ್ತದೆ. ಆದರೆ ಪ್ರತಿದಿನ ಒಂದು ಲೋಟ ದಾಳಿಂಬೆ ರಸವನ್ನು ಕುಡಿಯುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿರಿಸಬಹುದು ಹಾಗೂ ತನ್ಮೂಲಕ ಹೃದಯದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ದಾಳಿಂಬೆಯಲ್ಲಿ ಕಡಿಮೆ ಪ್ರಮಾಣದ ಸಕ್ಕರೆ ಇರುವ ಮತ್ತು ಹೆಚ್ಚು ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಇರುವ ಕಾರಣ ಈ ರಸ ಮಧುಮೇಹಿಗಳೂ ಸೇವಿಸಬಹುದಾಗಿದ್ದು ದಿನವಿಡೀ ಬಾಯಾರಿಕೆಯಾಗದಂತೆಯೂ ನೋಡಿಕೊಳ್ಳಬಹುದು.

ಸಾಕಷ್ಟು ನಿದ್ರೆ ಮಾಡಿ

ಸಾಕಷ್ಟು ನಿದ್ರೆ ಮಾಡಿ

ದಿನಾಲೂ ಸಾಕಷ್ಟು ಮತ್ತು ಗುಣಮಟ್ಟದ ನಿದ್ದೆ ಮಾಡಿ. ನಿದ್ದೆ ಕಡಿಮೆಯಾಗುವುದರಿಂದ ಆತಂಕ, ಒತ್ತಡ, ನಿದ್ದೆ ಅಸ್ವಸ್ಥತೆಯಂತಹ ಹಲವಾರು ಆರೋಗ್ಯ ಸಮಸ್ಯೆಗಳು ಬರಬಹುದು ಮತ್ತು ಇದು ನಿಮ್ಮ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

English summary

Heart-Healthy Foods to Work into Your Diet

Foods that are good for the heart are foods which are full of antioxidants, B vitamins, nutrients, fibre and monounsaturated and polyunsaturated fats. The key to having a healthy heart is to follow a whole foods diet which only means to eat food in its natural kind, the less processed the better..have a look
Story first published: Tuesday, May 23, 2017, 9:51 [IST]
X
Desktop Bottom Promotion