For Quick Alerts
ALLOW NOTIFICATIONS  
For Daily Alerts

ದಿನವಿಡೀ ಕುಳಿತುಕೊಂಡೇ ಇದ್ದರೆ ಹೃದಯಕ್ಕೆ ಅಪಾಯ!

By Super Admin
|

ದಿನವಿಡಿ ಕುಳಿತುಕೊಂಡೇ ಕೆಲಸ ಮಾಡಿಕೊಂಡು ಮನೆಗೆ ಬಂದ ಬಳಿಕ ಮತ್ತೆ ಟಿವಿ ಮುಂದೆ ಕುಳಿತುಕೊಂಡು ರಾತ್ರಿ ನಿದ್ರೆ ಮಾಡುವ ತನಕವೂ ಹೀಗೆ ಕುಳಿತುಕೊಂಡೇ ಇರುವವರು ನೀವಾಗಿದ್ದರೆ ಇದರ ಬಗ್ಗೆ ಎಚ್ಚರಿಕೆ ವಹಿಸಿಕೊಳ್ಳುವುದು ತುಂಬಾ ಮುಖ್ಯ. ದಿನವಿಡೀ ಕುಳಿತು ಕೆಲಸ ಮಾಡುವವರು, ತಪ್ಪದೇ ಈ ಲೇಖನ ಓದಿ....

ಯಾಕೆಂದರೆ ಕುಳಿತುಕೊಂಡೇ ಇರುವವರಿಗೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಕುಳಿತೇ ಇದ್ದರೆ ಹೃದಯ ಮತ್ತು ಇತರ ಅಂಗಾಂಗಗಳ ಕಾರ್ಯಚಟುವಟಿಕೆಗೆ ಸಮಸ್ಯೆಯಾಗಲಿದೆ. ಅದರಲ್ಲೂ ದೀರ್ಘಕಾಲದ ತನಕ ಕುಳಿತೇ ಇದ್ದರೆ ಅದರಿಂದ ಹೃದಯಕ್ಕೆ ಹಾನಿಯಾಗಲಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕುಳಿತೇ ಇರುವುದರಿಂದ ಮುಂದೆ ಹೃದಯಕ್ಕೆ ಯಾವ್ಯಾವ ಸಮಸ್ಯೆಯಾಗಲಿದೆ ಎನ್ನುವುದನ್ನು ತಿಳಿದುಕೊಳ್ಳಿ. ಇದೇ ಕಾರಣಕ್ಕೆ 'ಹೃದ್ರೋಗ ಸಮಸ್ಯೆ' ಕಾಣಿಸಿಕೊಳ್ಳುವುದು!

ಬೊಜ್ಜು

ಬೊಜ್ಜು

ಯಾವುದೇ ವ್ಯಾಯಮ ಮಾಡದೇ ದಿನದಲ್ಲಿ ಸುಮಾರು 6-8 ಗಂಟೆ ಕುಳಿತುಕೊಂಡೇ ಇದ್ದರೆ ಬೊಜ್ಜು ಬೆಳೆಯುವ ಸಾಧ್ಯತೆ ಅಧಿಕವಾಗಿರುತ್ತದೆ. ದೀರ್ಘಕಾಲದ ತನಕ ಕುಳಿತೇ ಇರುವುದರಿಂದ ಹೊಟ್ಟೆಯ ಸುತ್ತಲು ಬೊಜ್ಜು ಬೆಳೆಯುತ್ತದೆ. ಇದರಿಂದ ಹೃದಯಕ್ಕೆ ರಕ್ತಪರಿಚಲನೆಯಾಗುವುದು ಕಷ್ಟವಾಗುತ್ತದೆ. ಇದು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಗೂ ಕಾರಣವಾಗಬಹುದು. ಶ್! ಇದು ಕೊಬ್ಬು ಕರಗಿಸುವ ಸಿಂಪಲ್ ಟ್ರಿಕ್ಸ್-ಪ್ರಯತ್ನಿಸಿ ನೋಡಿ...

ಬೊಜ್ಜು

ಬೊಜ್ಜು

ಅಧ್ಯಯನದ ಪ್ರಕಾರ ದೀರ್ಘ ಕಾಲದವರೆಗೆ ಕುಳಿತೇ ಇರುವುದರಿಂದ ಪರಿಧಮನಿಯ ಕಾಲ್ಸಿಯಮ್ ಗೆ ಕಾರಣವಾಗಬಹುದು. ಇದರಿಂದ ಅಪಧಮನಿಯ ಕಾಯಿಲೆ ಕಾಣಿಸಿಕೊಳ್ಳಬಹುದು. ದೀರ್ಘ ಕಾಲ ಕುಳಿತೇ ಇರುವುದರಿಂದ ಹಾರ್ಮೋನುಗಳು ಹಾಗೂ ಕಿಣ್ವಗಳು ಬಿಡುಗಡೆಯಾಗಿ ಅಪಧಮನಿಗಳಲ್ಲಿ ಕ್ಯಾಲ್ಸಿಯಮ್ ಶೇಖರಣೆ ಮಾಡುತ್ತದೆ. ಇದರಿಂದಾಗಿ ನೆತ್ತರುನಾಳದ ಗಡಸು ಉಂಟಾಗುವ ಅಪಾಯವು ಹೆಚ್ಚಾಗುತ್ತದೆ.

ರಕ್ತದೊತ್ತಡ

ರಕ್ತದೊತ್ತಡ

ಕಡಿಮೆ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ಪವರ್ ಫುಲ್ ಮನೆಮದ್ದು

 ಮಧುಮೇಹ

ಮಧುಮೇಹ

ಕಂಪ್ಯೂಟರ್ ಮುಂದೆ ಕುಳಿತುಕೊಂಡು ಕೆಲಸ ಮಾಡುವುದು, ಟಿವಿ ನೋಡುತ್ತಾ ಇರುವುದು ಅಥವಾ ವಾಹನ ಚಾಲನೆ ಮಾಡುವುದರಿಂದ ಎರಡನೇ ಹಂತದ ಮಧುಮೇಹ ಕಾಣಿಸಿಕೊಳ್ಳಬಹುದು.

ಮಧುಮೇಹ

ಮಧುಮೇಹ

ಮಧುಮೇಹಿಗಳು ಸೇವಿಸಬಹುದಾದ 7 ಸಿಹಿ ಹಣ್ಣುಗಳು

English summary

Ways sitting for long can kill the heart

Have you ever realised how much you sit? While unwinding on the couch in front of the Tv after reaching home, while working on your computer or even while driving to work? Health experts light on how sitting for too long can harm your heart.
X
Desktop Bottom Promotion