For Quick Alerts
ALLOW NOTIFICATIONS  
For Daily Alerts

ಪುಟ್ಟ ಹೃದಯದ ಸ್ವಾಸ್ಥ್ಯಕ್ಕೆ-ಈ ಜ್ಯೂಸ್ ತಪ್ಪದೇ ಕುಡಿಯಿರಿ

By Manu
|

ಕಾಲ ಬದಲಾದಂತೆ ಸವಲತ್ತುಗಳೂ ಹೆಚ್ಚುತ್ತಿವೆ. ನಮ್ಮ ದಿನಚರಿಗಳೂ ಬದಲಾಗುತ್ತಿವೆ. ದೈಹಿಕ ಶ್ರಮ ಹಿಂದೆ ಇದ್ದ ಹತ್ತರಲ್ಲಿ ಒಂದು ಅಂಶವೂ ಈಗ ಇಲ್ಲ. ಅಲ್ಲದೇ ಸಿದ್ಧ ಆಹಾರಗಳೊಂದಿಗೇ ದೇಹದಲ್ಲಿ ಕೊಬ್ಬು ಹೆಚ್ಚಿಸುವ, ಸ್ಥೂಲಕಾಯ ಪಡೆದಿರುವುದನ್ನೂ ಗಮನಿಸಬಹುದು.

ಹೆಚ್ಚಿದ ಮಾನಸಿಕ ಒತ್ತಡ, ಕಡಿಮೆಯಾದ ದೈಹಿಕ ಚಟುವಟಿಕೆ ಮೊದಲಾದವು ನಮ್ಮ ದೇಹದ ಅಂಗಗಳನ್ನೂ ಅವು ಯಾವುದಕ್ಕೆ ತಯಾರಾಗಿದ್ದವೋ ಅಷ್ಟು ಪ್ರಮಾಣದಲ್ಲಿ ಕೆಲಸ ಮಾಡದೇ ಹಲವು ತೊಂದರೆಗಳಿಗೆ ಸುಲಭವಾಗಿ ತುತ್ತಾಗುತ್ತವೆ. ಇದರಲ್ಲಿ ಪ್ರಮುಖವಾದುದು ಎಂದರೆ ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿರುವುದು, ಮಧುಮೇಹ ಮತ್ತು ಹೃದಯ ಸಂಬಂಧಿ ತೊಂದರೆಗಳು...

ಅದರಲ್ಲೂ ಹೃದಯಾಘಾತ ಮತ್ತು ಪಾರ್ಶ್ವವಾಯು ಎನ್ನುವುದು ತುಂಬಾ ಜೀವಕ್ಕೆ ಅಪಾಯಕಾರಿ. ಇದಕ್ಕೆಲ್ಲ ಮುಖ್ಯ ಕಾರಣವೆಂದರೆ ನಾವು ಸಂಸ್ಕರಿತ ಆಹಾರ, ಕೊಬ್ಬಿನ ಆಹಾರವನ್ನು ಸೇವಿಸುವುದು. ಇದಕ್ಕೆ ಪರಿಹಾರ ಇಲ್ಲವೆಂದಲ್ಲ ಅಪಧಮನಿಯಲ್ಲಿರುವ ತಡೆಯನ್ನು ತೆಗೆದರೆ ಆಗ ಹೃದಯಕ್ಕೆ ಆಗುವಂತಹ ಅಪಾಯವು ತುಂಬಾ ಕಡಿಮೆಯಾಗುತ್ತದೆ. ಇದಕ್ಕೆ ಹಲವಾರು ರೀತಿಯ ಔಷಧಿಗಳಿವೆ. ಆದರೆ ಮನೆಮದ್ದನ್ನು ಬಳಸಿಕೊಂಡು ಇದಕ್ಕೆ ನಿವಾರಿಸಲು ಇಲ್ಲಿ ಕೆಲವೊಂದು ವಿಧಾನಗಳನ್ನು ಹೇಳಲಾಗಿದೆ.

ಸೆಲರಿ (ಗುಡ್ಡಸೋಂಪುವಿನ) ಕಾಂಡಗಳನ್ನು ತೆಗೆದುಕೊಂಡು, ಅದಕ್ಕೆ ಒಂದು ಟೊಮೇಟೊ, ಒಂದು ಸಣ್ಣ ತುಂಡು ಶುಂಠಿ, ಕರಿಮೆಣಸು ಮತ್ತು ಮೂರು ಚಮಚ ಲಿಂಬೆ ರಸವನ್ನು ಸೇರಿಸಿ ಮಿಕ್ಸಿಯಲ್ಲಿ ಹಾಕಿ ಜ್ಯೂಸ್ ಮಾಡಿ. ದಿನಕ್ಕೆ ಎರಡು ಬಾರಿ ಈ ಜ್ಯೂಸ್ ಅನ್ನು ಕುಡಿಯಿರಿ, ಮುನ್ನೆಚ್ಚರಿಕೆಯ ಕ್ರಮವಾಗಿ ಅತಿಯಾಗಿ ಇದನ್ನು ಸೇವಿಸಬೇಡಿ. ಬನ್ನಿ ಹೃದಯದ ಸ್ವಾಸ್ಥ್ಯಕ್ಕೆ ಕೆಲವೊಂದು ಮಾಹಿತಿಗಳನ್ನು ನೀಡಿದ್ದೇವೆ, ಮುಂದೆ ಓದಿ...

ವಿಧಾನ#1

ವಿಧಾನ#1

ಹೃದಯದಲ್ಲಿನ ತಡೆಯನ್ನು ನಿವಾರಿಸಲು ನೀವು ತರಕಾರಿ, ಹಣ್ಣು ಮತ್ತು ಬೀಜಗಳನ್ನು ಸೇವಿಸಬೇಕು. ಇದರಲ್ಲಿರುವ ವಿಟಮಿನ್ ಸಿ, ಬಿ12 ಮತ್ತು ಬಿ6 ಹೃದಯಕ್ಕೆ ತುಂಬಾ ಒಳ್ಳೆಯದು.

ವಿಧಾನ#2

ವಿಧಾನ#2

ಸರಿಯಾಗಿ ನಿದ್ರೆ ಮಾಡಿ ಮತ್ತು ನೀವು ನಿದ್ರೆಯಿಂದ ವಂಚಿತವಾಗದಿರುವಂತೆ ನೋಡಿಕೊಳ್ಳಿ. ಕಡಿಮೆ ನಿದ್ರೆಯಿಂದ ಆರೋಗ್ಯದ ಮೇಲೆ ಹಲವಾರು ಪರಿಣಾಮ ಉಂಟಾಗಬಹುದು.

ವಿಧಾನ#3

ವಿಧಾನ#3

ಸಂಸ್ಕರಿತ ಕೊಬ್ಬಿನಿಂದ ದೂರ ಉಳಿಯಿರಿ. ಈ ಆಹಾರವು ಕೆಟ್ಟ ಕೊಲೆಸ್ಟ್ರಾಲ್, ವಿಷಕಾರಿ ಅಂಶ ಹಾಗೂ ತೂಕವನ್ನು ಹೆಚ್ಚು ಮಾಡುತ್ತದೆ.

ವಿಧಾನ#4

ವಿಧಾನ#4

ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಲು ನಿಯಮಿತವಾಗಿ ಸರಳ ವ್ಯಾಯಾಮ ಮಾಡಿ. ಇದರ ಬಗ್ಗೆ ನಿಮ್ಮ ವೈದ್ಯರೊಂದಿಗೆ ಚರ್ಚಿಸಿ.

ವಿಧಾನ#5

ವಿಧಾನ#5

ಹೃದಯದ ಆರೋಗ್ಯ ಕಾಪಾಡಲು ಹಸಿರು ಎಲೆ ತರಕಾರಿಗಳನ್ನು ಯಾವಾಗಲೂ ತಿನ್ನಿ. ನಾರಿನಾಂಶವಿರುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ.

ವಿಧಾನ#6

ವಿಧಾನ#6

ಮಲಗುವ ಮೊದಲು ಸ್ವಲ್ಪ ಸಮಯ ಧ್ಯಾನ ಮಾಡಿ ಇದರಿಂದ ಒತ್ತಡ ಕಡಿಮೆಯಾಗಿ ನಿಮ್ಮ ದೇಹದ ಬೇಗನೆ ಆರಾಮವನ್ನು ಪಡೆಯುತ್ತದೆ.

ವಿಧಾನ#7

ವಿಧಾನ#7

ಧೂಮಪಾನ ಮಾಡಲೇಬೇಡಿ. ಇದರಲ್ಲಿರುವ ವಿಷಕಾರಿ ಅಂಶಗಳು ನಿಮ್ಮ ಹೃದಯನಾಳಗಳು ಹಾಗೂ ಅಪಧಮನಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಧೂಮಪಾನದಿಂದ ರಕ್ತದೊತ್ತಡ ಹೆಚ್ಚಾಗಿ ಅದರಿಂದ ಅಪಧಮನಿಗೆ ತೊಂದರೆಯಾಗಬಹುದು.

ವಿಧಾನ#8

ವಿಧಾನ#8

ಮೀನಿನಲ್ಲಿ ಒಮೆಗಾ3 ಕೊಬ್ಬಿನ ಎಣ್ಣೆಯಿರುವ ಕಾರಣ ಮೀನಿನ ಎಣ್ಣೆ ಸೇವನೆ ಮಾಡಿ. ಬಾದಾಮಿ ಎಣ್ಣೆ, ಅವಕೋಡು ಎಣ್ಣೆ ಮತ್ತು ಆಲಿವ್ ಎಣ್ಣೆ ಹೃದಯಕ್ಕೆ ಒಳ್ಳೆಯದು.

English summary

Ways to keep your heart healthy and strong

Clogged arteries are dangerous to your heart. Many people die every year due to clogged arteries. Both heart attacks and strokes are life threatening conditions. Though there are medicines to do that, trying a simple home remedy could be safer. Here is one such remedy. have a look
X
Desktop Bottom Promotion