ಮನೆ ಔಷಧ: ಹೃದಯಾಘಾತವನ್ನು ತಡೆಯುವ ದಿವ್ಯೌಷಧ

ಹೃದಯಾಘಾತ, ಹೇಳದೇ ಕೇಳದೇ ಬಂದು ಕ್ಷಣಮಾತ್ರದಲ್ಲಿ ಯಮನ ಬಳಿಗೆ ಕೊಂಡೊಯ್ಯುವ ಪಾಶ. ಹಾಗಾಗಿ ಹೃದಯಾಘಾತಕ್ಕೂ ಮೊದಲೇ ಸರಿಯಾದ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ಮಾತ್ರವೇ ಪ್ರಾಣಾಪಾಯದಿಂದ ಪಾರಾಗಬಹುದು

By: manu
Subscribe to Boldsky

ದೇಶದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಾ ಇದೆ. ಹೃದಯದ ಬಗ್ಗೆ ಕಾಳಜಿ ಇಲ್ಲದೆ ಇರುವುದು ಹಾಗೂ ಅನಾರೋಗ್ಯಕರ ಆಹಾರ ಸೇವನೆ ಮಾಡುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಕೊಬ್ಬು ಶೇಖರಣೆ, ಹೃದಯದ ದುರ್ಬಲತೆ, ರಕ್ತನಾಳಗಳಿಗೆ ಹಾನಿ, ಕೊಲೆಸ್ಟ್ರಾಲ್ ಶೇಖರಣೆ ಇತ್ಯಾದಿ ಹೃದಯಾಘಾತಕ್ಕೆ ಕಾರಣವಾಗಬಹುದು.

Heart
 

ಹೃದಯದ ಕೆಲವೊಂದು ಸಾಮಾನ್ಯ ಕಾಯಿಲೆಗಳೆಂದರೆ ಅಧಿಕ ರಕ್ತದೊತ್ತಡ, ಹೃದಯ ಸ್ತಂಭನ, ರಕ್ತಹೆಪ್ಪುಗಟ್ಟಿ ಹೃದಯ ಸ್ತಂಭನ, ಪಾರ್ಶ್ವವಾಯು, ಪರಿಧಮನಿ ಕಾಯಿಲೆ ಇತ್ಯಾದಿ. ಒಂದು ಅಥವಾ ಅದಕ್ಕಿಂತ ಹೆಚ್ಚಿನ ರಕ್ತನಾಳವು ಹೃದಯಕ್ಕೆ ರಕ್ತದ ಹರಿವು ಮತ್ತು ಆಮ್ಲಜನಕವನ್ನು ತಡೆದಾಗ ಇಂತಹ ಸಮಸ್ಯೆಯಾಗುತ್ತದೆ. 

Heart Attack
 

ಹೃದಯಾಘಾತ ಎನ್ನುವುದು ಜೀವಕ್ಕೆ ಯಾವತ್ತಿಗೂ ಜೀವಕ್ಕೆ ಅಪಾಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಾಗಿ ಆರೋಗ್ಯಕರ ಜೀವನಶೈಲಿಯನ್ನು ನಡೆಸಿ ಹೃದಯಕ್ಕೆ ಬರುವ ಅಪಾಯವನ್ನು ತಡೆಯಬಹುದು.... ಬನ್ನಿ ಕೆಲವೊಂದು ಮನೆಮದ್ದಿನಿಂದ ಕೂಡ ಅಪಾಯವನ್ನು ತಪ್ಪಿಸಬಹುದು. ಅದು ಯಾವುದು ಎಂದು ಈ ಲೇಖನವನ್ನು ಓದುತ್ತಾ ತಿಳಿಯಿರಿ. ಥಟ್ಟನೇ ಕಾಡುವ 'ಹೃದಯಾಘಾತ'! ತಿಳಿಯಲೇಬೇಕಾದ ಸತ್ಯ ಸಂಗತಿ    

lime juice
 

ಮದ್ದು ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು
*ಬೆಳ್ಳುಳ್ಳಿ 2-3 ಎಸಲು
*ಆಪಲ್ ಸೀಡರ್ ವಿನೇಗರ್ 1 ಚಮಚ
*ನಿಂಬೆರಸ 1 ಚಮಚ                ಹೃದಯಾಘಾತ ಬರದಂತೆ ತಡೆಯಬೇಕೆ?

ನಿಯಮಿತವಾಗಿ ಆರೋಗ್ಯಕರ ಆಹಾರ ಹಾಗೂ ವ್ಯಾಯಾಮ ಮಾಡುವುದರೊಂದಿಗೆ ಆರೋಗ್ಯವನ್ನು ಕಾಪಾಡಿಕೊಂಡರೆ ಈ ಮದ್ದು ಒಳ್ಳೆಯ ಪರಿಣಾಮವನ್ನು ಬೀರುವುದು.

ಬೆಳ್ಳುಳ್ಳಿ, ನಿಂಬೆರಸ ಮತ್ತು ಆಪರ್ ಸೀಡರ್ ವಿನೇಗರ್ ನಿಂದ ಮಾಡಿದ ಈ ಮದ್ದು ಅಪಧಮನಿಗಳಲ್ಲಿ ರಕ್ತವು ಹೆಪ್ಪುಗಟ್ಟದಂತೆ ಮಾಡುತ್ತದೆ.  

apple cider vinegar
 

ಹೃದಯದಲ್ಲಿ ರಕ್ತವು ಹೆಪ್ಪುಗಟ್ಟದೆ ಇದ್ದರೆ ಹೃದಯಕ್ಕೆ ರಕ್ತ ಹಾಗೂ ಆಮ್ಲಜನಕವು ಸರಿಯಾಗಿ ಸರಬರಾಜು ಆಗುತ್ತದೆ. ಇದರಿಂದ ಹೃದಯಾಘಾತ ಆಗುವುದು ತಪ್ಪುತ್ತದೆ. ಈ ಮನೆಮದ್ದು ದೇಹದಲ್ಲಿನ ಅತಿಯಾದ ಕೊಲೆಸ್ಟ್ರಾಲ್ ನ್ನು ತೆಗೆದುಹಾಕುವುದು. ಇದರಿಂದ ಹೃದಯಾಘಾತದ ಸಾಧ್ಯತೆಯು ಕಡಿಮೆಯಾಗುತ್ತದೆ.    ಹೃದಯಾಘಾತ ತಡೆಯುವ ಶಕ್ತಿ ಲೈಂಗಿಕತೆಗೆ ಇದೆ!   

Garlic
 

ಮನೆಮದ್ದನ್ನು ತಯಾರಿಸುವ ವಿಧಾನ
*ಮೊದಲು ಬೆಳ್ಳುಳ್ಳಿಯನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಒಂದು ಕಪ್ ಗೆ ಬೆಳ್ಳುಳ್ಳಿ ಪೇಸ್ಟ್, ಹೇಳಿದಷ್ಟು ಪ್ರಮಾಣದ ಆಪಲ್ ಸೀಡರ್ ವಿನೇಗರ್ ಮತ್ತು ನಿಂಬೆರಸವನ್ನು ಹಾಕಿ.
*ಇನ್ನು ಇದನ್ನು ಸರಿಯಾಗಿ ಕಳಸಿಕೊಂಡು ಮಿಶ್ರಣ ಮಾಡಿ. ಮನೆಮದ್ದು ಸೇವಿಸಲು ತಯಾರಾಗಿದೆ.
ಬೆಳಿಗ್ಗೆ ಉಪಹಾರಕ್ಕೆ ಮೊದಲು ಇದನ್ನು ಸೇವಿಸಿ.
*ಈ ಮದ್ದು ಹೃದಯಾಘಾತವನ್ನು ತಡೆಯುವ ದಿವ್ಯೌಷಧಿಯೆಂದು ನಿಮಗೆ ಅನಿಸಿದರೆ ನಮಗೆ ನಿಮ್ಮ ಪ್ರತಿಕ್ರಿಯೆ ನೀಡಿ.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Thursday, December 1, 2016, 12:42 [IST]
English summary

This Easy Home Remedy Can Prevent A Heart Attack!

A heart attack can prove to be fatal, so it is important to take precautions and maintain a healthy lifestyle to prevent heart diseases from affecting you early in life. So, if you are looking for a natural remedy that can help you prevent heart attack, then try this amazing recipe!
Please Wait while comments are loading...
Subscribe Newsletter