For Quick Alerts
ALLOW NOTIFICATIONS  
For Daily Alerts

ಹೃದಯದ ಆರೋಗ್ಯಕ್ಕೆ ಲಿಂಬೆ-ಬೆಳ್ಳುಳ್ಳಿಯ ಮ್ಯಾಜಿಕ್ ಚಿಕಿತ್ಸೆ!

By Manu
|

ಹೃದಯವೆನ್ನುವುದು ದೇಹದ ಮುಖ್ಯ ಕೇಂದ್ರವಿದ್ದಂತೆ. ಇಲ್ಲಿಂದಲೇ ಪ್ರಮುಖ ಅಂಗಾಂಗಗಳಿಗೆ ರಕ್ತ ಪೂರೈಕೆಯಾಗುವುದು. ಹೃದಯದ ಕಾರ್ಯಕ್ಕೆ ಯಾವುದೇ ತೊಂದರೆಯಾದರೂ ಅದರಿಂದ ದೇಹದ ಇತರ ಅಂಗಾಂಗಗಳ ಮೇಲೂ ಪರಿಣಾಮ ಬೀರುವುದು ಖಚಿತ....

ಕೆಲವೊಮ್ಮೆ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾದಾಗ ಹೃದಯದ ರಕ್ತನಾಳಗಳಲ್ಲಿ ತಡೆ ಉಂಟಾಗಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ರಕ್ತವು ತಡೆಯಲ್ಪಡುವುದರಿಂದ ಎದೆನೋವು, ಹೃದಯಾಘಾತ ಉಂಟಾಗುವ ಸಾಧ್ಯತೆಗಳಿವೆ.

Heart Blockages

ಹಾಗಾಗಿ ರಕ್ತನಾಳಗಳಲ್ಲಿ ಉಂಟಾಗುವ ತಡೆಯನ್ನು ನಿವಾರಿಸಲು ಲಿಂಬೆ ಹಾಗೂ ಬೆಳ್ಳುಳ್ಳಿಯನ್ನು ಬಳಸಬೇಕು. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ತಡೆಉಂಟಾಗಿರುವ ಅಪಧಮನಿಗಳನ್ನು ಸ್ವಚ್ಛಗೊಳಿಸಿ ರಕ್ತಸಂಚಾರವನ್ನು ಉತ್ತಮಪಡಿಸುವುದು. ಹೃದಯದಲ್ಲಿನ ತಡೆಯನ್ನು ನಿವಾರಿಸಬೇಕೆಂದು ಲಿಂಬೆ ಹಾಗೂ ಬೆಳ್ಳುಳ್ಳಿಯನ್ನು ಬಳಸುವುದು ಹೇಗೆ ಎಂದು ತಿಳಿದುಕೊಳ್ಳಿ. ಹೃದಯದ ಆರೋಗ್ಯಕ್ಕೆ- ಪುರಾತನ ಕಾಲದ ಆಯುರ್ವೇದ ಚಿಕಿತ್ಸೆ

ಮೊದಲ ವಿಧಾನ
*1 ಕಪ್ ಬೆಳ್ಳುಳ್ಳಿ ರಸ ಒಂದು ಕಪ್ ತಾಜಾ ನಿಂಬೆ ಹಣ್ಣಿನ ರಸ
*1 ಕಪ್ ಆಪಲ್ ಸೀಡರ್ ವಿನೇಗರ್
*1 ಕಪ್ ಶುಂಠಿ ರಸ
*3 ಕಪ್ ಜೇನುತುಪ್ಪ

ತಯಾರಿಸುವುದು ಹೇಗೆ
*ಬೆಳ್ಳುಳ್ಳಿ, ಲಿಂಬೆ, ಆಪಲ್ ಸೀಡರ್ ವಿನೇಗರ್, ಶುಂಠಿ ರಸವನ್ನು ಒಂದು ಪಾತ್ರೆಗೆ ಹಾಕಿಕೊಂಡು ಅರ್ಧ ಗಂಟೆ ಬಿಸಿ ಮಾಡಿ.
*ಇದು ತಣ್ಣಗಾದ ಬಳಿಕ ಅದಕ್ಕೆ ಮೂರು ಕಪ್ ಜೇನುತುಪ್ಪವನ್ನು ಹಾಕಿ.
*ಈ ಮಿಶ್ರಣವನ್ನು ಚೆನ್ನಾಗಿ ಕಳಸಿಕೊಳ್ಳಿ.
*ಇದನ್ನು ಒಂದು ಜಾರ್ ಗೆ ಹಾಕಿಕೊಂಡು ಫ್ರಿಡ್ಜ್ ನಲ್ಲಿಡಿ.
* ಪ್ರತೀದಿನ ಉಪಹಾರಕ್ಕೆ ಮೊದಲು ಇದನ್ನು ಸೇವಿಸಿ.

2ನೇ ವಿಧಾನ
*2-3 ಲಿಂಬೆ
*ಸ್ವಲ್ಪ ಬೆಳ್ಳುಳ್ಳಿ ಎಸಲು
*ಜೇನುತುಪ್ಪ

ತಯಾರಿಸುವುದು ಹೇಗೆ
*ಲಿಂಬೆ ಹಾಗೂ ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಅದನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಬ್ಲೆಂಡರ್ ಗೆ ಹಾಕಿಕೊಳ್ಳಿ. ಇದಕ್ಕೆ ಸ್ವಲ್ಪ ನೀರು ಹಾಕಿ. ಬಳಿಕ ಇದಕ್ಕೆ ಎರಡು ಲೀಟರ್ ನೀರು ಹಾಕಿ ಕುದಿಸಿ.


*ಐದು ನಿಮಿಷ ಕಾಲ ಇದು ಚೆನ್ನಾಗಿ ಕುದಿಯಲು ಬಿಡಿ. ಜೇನುತುಪ್ಪವನ್ನು ರುಚಿಗೆ ತಕ್ಕಷ್ಟು ಹಾಕಿಕೊಳ್ಳಿ.
* ಇನ್ನು ಇದನ್ನು ಜಾರ್‌ಗೆ ಹಾಕಿಕೊಂಡು ಫ್ರಿಡ್ಜ್ ನಲ್ಲಿಡಿ. ಇದನ್ನು ಮೂರು ವಾರಗಳ ಕಾಲ ಸೇವಿಸಿ. ಒಂದು ವಾರ ಬಿಟ್ಟು ಮತ್ತೆ ಮೂರು ವಾರಗಳ ತನಕ ಸೇವಿಸಿ. ದಿನಕ್ಕೆ 50 ಮಿ.ಲೀ. ಸೇವಿಸಿ.
English summary

Lemon & Garlic Mixture To Clear Heart Blockages

Lemon and garlic are two of the most commonly found kitchen ingredients. There are many uses of these two natural ingredients and some of them are the ability to lower the cholesterol in the blood, cleaning clogged arteries and improving circulation. If you want to know how to clear heart blockages, read further.
Story first published: Saturday, December 10, 2016, 18:14 [IST]
X
Desktop Bottom Promotion