For Quick Alerts
ALLOW NOTIFICATIONS  
For Daily Alerts

ಕಡಿಮೆ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ಪವರ್ ಫುಲ್ ಮನೆಮದ್ದು

By Manu
|

ನೀವು ಹಾಸಿಗೆಯಿಂದ ಬೆಳಗ್ಗೆ ಎದ್ದ ಕೂಡಲೆ ತಲೆ ಸುತ್ತು, ಸುಸ್ತು, ನಾಸಿಯಾ ಮತ್ತು ಮಂದ ದೃಷ್ಟಿಯ ಸಮಸ್ಯೆಗಳು ಕಾಣಿಸಿಕೊಂಡರೆ, ನೀವು ತಪ್ಪದೆ ವೈದ್ಯರನ್ನು ಕಾಣಬೇಕಾಗುತ್ತದೆ. ಏಕೆಂದರೆ ಈ ಲಕ್ಷಣಗಳು ಕಡಿಮೆ ರಕ್ತದೊತ್ತಡ ಅಥವಾ ಹೈಪರ್‌ಟೆನ್ಶನ್‌ನ ಕಾರಣದಿಂದಾಗಿ ಬಂದಿರಬಹುದು. ಹಲವಾರು ಬಾರಿ ನಾವು ಈ ಸಮಸ್ಯೆಗಳನ್ನು ಮರೆತಿರುತ್ತೇವೆ ಇಲ್ಲವೇ ಈ ರೋಗದ ಲಕ್ಷಣಗಳನ್ನು ಉದಾಸೀನ ಮಾಡಿರುತ್ತೇವೆ.

ಸಾಮಾನ್ಯವಾಗಿ ನಮ್ಮ ರಕ್ತದೊತ್ತಡವು 120/80 ಮಿ.ಮೀ ಎಚ್‌ಜಿ ಗಿಂತ ಕಡಿಮೆಯಿದ್ದಲ್ಲಿ ಅದನ್ನು ಕಡಿಮೆ ರಕ್ತದೊತ್ತಡ ಎಂದು ಕರೆಯುತ್ತಾರೆ. ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ಇದ್ದಲ್ಲಿ (ಅಂದರೆ ಹೈಪೊಟೆನ್ಶನ್) ಅಥವಾ ಹೆಚ್ಚಿದ್ದಲ್ಲಿ (ಹೈಪರ್‌ಟೆನ್ಶನ್) ಅದು ನಿಮ್ಮ ದೇಹದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಬಿಪಿಯನ್ನು ನಿಯಂತ್ರಿಸುವ 'ಆಹಾರ ಪಥ್ಯ', ತಪ್ಪದೇ ಅನುಸರಿಸಿ

ಆದ್ದರಿಂದ ನಮ್ಮ ದೇಹಕ್ಕೆ ಅಗತ್ಯವಾದ ಪ್ರಮಾಣದ ಆರೋಗ್ಯಕರ ರಕ್ತದೊತ್ತಡವನ್ನು ನಾವು ಕಾಪಾಡಿಕೊಳ್ಳಬೇಕಾಗುತ್ತದೆ. ಕೆಲವೊಂದು ಆಹಾರ ಪದಾರ್ಥಗಳು ನಮ್ಮ ದೇಹದಲ್ಲಿ ರಕ್ತದೊತ್ತಡವನ್ನು ಶೀಘ್ರವಾಗಿ ಹೆಚ್ಚಿಸುತ್ತವೆಯಂತೆ. ಇದಕ್ಕಾಗಿ ನಮ್ಮ ಮನೆಯ ಅಡುಗೆ ಮನೆಯಲ್ಲಿ ನಮಗೆ ಹಲವಾರು ಪದಾರ್ಥಗಳು ದೊರೆಯುತ್ತವೆ. ಕಡಿಮೆ ರಕ್ತದೊತ್ತಡವನ್ನು ನಿವಾರಿಸಿಕೊಳ್ಳಲು ಇವು ನಮಗೆ ತಕ್ಷಣ ಉಪಶಮನವನ್ನು ನೀಡುತ್ತವೆ. ಬನ್ನಿ ಅವು ಯಾವುವು ಎಂದು ನೋಡೋಣ...

ಕಾಫಿ

ಕಾಫಿ

ಒಂದು ವೇಳೆ ನಿಮಗೆ ರಕ್ತದೊತ್ತಡವು ಕಡಿಮೆಯಾಗಿದೆ ಎಂದು ಅನಿಸಿದಲ್ಲಿ, ಒಂದು ಅರ್ಧ ಕಪ್ ಸ್ಟ್ರಾಂಗ್ ಕಾಫಿಯನ್ನು ಸೇವಿಸಿ. ಇದು ನಿಮ್ಮ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಸಹಕರಿಸುತ್ತದೆ.

 ಬೀಟ್‌ರೂಟ್ ಜ್ಯೂಸ್

ಬೀಟ್‌ರೂಟ್ ಜ್ಯೂಸ್

ಬೀಟ್‌ರೂಟ್ ಜ್ಯೂಸ್ ಕಡಿಮೆ ರಕ್ತದೊತ್ತಡಕ್ಕೆ ಉತ್ತಮ ಪರಿಹಾರವಾಗಿದೆ. ಎರಡು ಲೋಟ ಬೀಟ್‌ರೂಟ್ ಜ್ಯೂಸ್ ಅನ್ನು ಪ್ರತಿದಿನ ಸೇವಿಸಿದರೆ, ರಕ್ತದೊತ್ತಡವನ್ನು ಸರಿಪಡಿಸಿಕೊಳ್ಳಬಹುದು. ಬೀಟ್‌ರೂಟ್ ಜ್ಯೂಸ್, ಎಂದಾಕ್ಷಣ ಮುಖಸಿಂಡರಿಸಬೇಡಿ...

ಒಣ ದ್ರಾಕ್ಷಿ

ಒಣ ದ್ರಾಕ್ಷಿ

ರಾತ್ರಿಯ ಹೊತ್ತು 10-20 ಒಣ ದ್ರಾಕ್ಷಿಯನ್ನು ನೆನೆಸಿಕೊಳ್ಳಲು. ಬೆಳಗ್ಗೆ ಎದ್ದ ಕೂಡಲೆ ಈ ನೆನೆಸಿದ ಒಣ ದ್ರಾಕ್ಷಿಯನ್ನು ಸೇವಿಸಿ. ಇದನ್ನು ಒಂದು ವಾರ ಕಾಲ ಮಾಡಿ.

ಉಪ್ಪು ನೀರು

ಉಪ್ಪು ನೀರು

ಒಂದು ವೇಳೆ ನಿಮಗೆ ಕಡಿಮೆ ರಕ್ತದೊತ್ತಡ ಇದ್ದಲ್ಲಿ, ಉಪ್ಪು ನೀರು ನಿಮಗೆ ಸಹಾಯ ಮಾಡುತ್ತದೆ. ಒಂದು ಲೋಟ ನೀರಿಗೆ ಅರ್ಧ ಟೀ ಸ್ಪೂನ್ ಉಪ್ಪನ್ನು ಬೆರೆಸಿಕೊಂಡು ದಿನಕ್ಕೆ ಎರಡು ಬಾರಿ ಸೇವಿಸಿ.

ಜೇನು ತುಪ್ಪ

ಜೇನು ತುಪ್ಪ

ನಿಮ್ಮ ರಕ್ತದೊತ್ತಡವು ಕುಸಿದಾಗ ನಿಮಗೆ ತಲೆ ಸುತ್ತುವ ಅನುಭವ ಉಂಟಾಗಬಹುದು. ಆಗ ಒಂದು ಲೋಟ ನೀರಿಗೆ ಒಂದು ಟೀಸ್ಪೂನ್ ಭರ್ತಿ ಜೇನು ತುಪ್ಪವನ್ನು ಬೆರೆಸಿಕೊಂಡು ಸೇವಿಸಿ, ಸರಿ ಹೋಗುತ್ತದೆ.

ತುಳಸಿ ಎಲೆಗಳು

ತುಳಸಿ ಎಲೆಗಳು

ತುಳಸಿ ಎಲೆಗಳು ಕಡಿಮೆ ರಕ್ತದೊತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತವೆ. ಇದಕ್ಕಾಗಿ ತುಳಸಿ ಎಲೆಗಳನ್ನು ಜಜ್ಜಿ ಅಥವಾ ಜ್ಯೂಸ್ ರೀತಿ ಮಾಡಿಕೊಂಡು ಸೇವಿಸಿ. ಈ ಜ್ಯೂಸಿಗೆ ಒಂದು ಟೀಸ್ಪೂನ್ ಜೇನು ತುಪ್ಪವನ್ನು ಬೆರೆಸಿಕೊಳ್ಳಿ. ಇದನ್ನು ಬೆಳಗ್ಗೆ ಎದ್ದ ಕೂಡಲೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ದಾಳಿಂಬೆ

ದಾಳಿಂಬೆ

ದಾಳಿಂಬೆಯು ಕಡಿಮೆ ರಕ್ತದೊತ್ತಡವನ್ನು ಶೀಘ್ರವಾಗಿ ನಿವಾರಿಸಲು ಸಹಾಯ ಮಾಡುತದೆ. ಇದಕ್ಕಾಗಿ ನೀವು ಹಣ್ಣನ್ನಾದರು ಸೇವಿಸಬಹುದು ಅಥವಾ ಜ್ಯೂಸನ್ನಾದರು ಸೇವಿಸಬಹುದು.

English summary

Instant Cures For Low Blood Pressure

The moment you get up in the morning and you feel dizzy and fatigued and have nausea and a blurred vision, you need to check with your doctor. These could be the symptoms of low blood pressure or hypotension. Many a times we tend to ignore these symptoms assuming them to be a result of inadequate sleep or sleep disturbances. But it should not be ignored. Check out these foods and drinks that provide instant cure for low blood pressure:
Story first published: Monday, July 25, 2016, 20:21 [IST]
X
Desktop Bottom Promotion