For Quick Alerts
ALLOW NOTIFICATIONS  
For Daily Alerts

ಅಧಿಕ ರಕ್ತದೊತ್ತಡದ ಶಮನಕ್ಕೆ ಲಿಂಬೆಯ ಚಮತ್ಕಾರ

By Cm Prasad
|

ನಾಗರಿಕತೆ ಹಲವು ಸೌಲಭ್ಯಗಳಿಂದ ನಮಗೆ ಅನುಕೂಲತೆ ಕಲ್ಪಿಸಿಕೊಟ್ಟಿದೆಯಾದರೂ ಜೊತೆಜೊತೆಗೇ ನಮ್ಮನ್ನು ಸೋಮಾರಿಗಳನ್ನಾಗಿಯೂ ಮಾಡಿದೆ. ಜಡತ್ವ ಹಲವು ರೋಗಗಳಿಗೆ ಆಹ್ವಾನ ನೀಡಿದೆ. ಸ್ಥೂಲಕಾಯ, ಹೃದಯ ಸಂಬಂಧಿ ಕಾಯಿಲೆಗಳು ಮೊದಲಾದವು ಚಿಕ್ಕವಯಸ್ಸಿನಲ್ಲಿಯೇ ಧಾಳಿಯಿಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡದ ಕಾರಣ ಇನ್ನೂ ಹಲವು ಕಾಯಿಲೆಗಳು ಕೇಳದೇ ದೇಹದ ಕದತಟ್ಟುತ್ತಿವೆ. ಇದರಲ್ಲಿ ಪ್ರಮುಖವಾದುದು ಏರಿದ ರಕ್ತದೊತ್ತಡ.

ಹೌದು, ರಕ್ತದೊತ್ತಡವು ಇತ್ತೀಚೆಗೆ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಪ್ರಮುಖವಾದದ್ದು. ಅಧಿಕ ರಕ್ತದೊತ್ತಡವು ಪ್ರಸ್ತುತ ವಿಶ್ವದಾದ್ಯಂತ ಕಂಡು ಬರುತ್ತಿರುವ ಸಾಂಕ್ರಾಮಿಕ ರೋಗ ಎನಿಸಿಕೊಂಡಿದೆ. ಫಾಸ್ಟ್‌ ಫುಡ್‌ ಸೇವನೆ, ಆಹಾರಕ್ರಮದಲ್ಲಿ ಏರುಪೇರು, ಮತ್ತು ಒತ್ತಡದ ಜೀವನದಿಂದಾಗಿ ಇಂದು ಭಾರತದಲ್ಲಿ ಸರಾಸರಿ ಪ್ರತಿ ಮೂರು ಜನರಲ್ಲಿ ಒಬ್ಬರು ಅಧಿಕ ರಕ್ತದೊತ್ತಡಕ್ಕೆ ತುತ್ತಾಗುತ್ತಿದ್ದಾರೆ. ಅದರಲ್ಲೂ ರಕ್ತದೊತ್ತಡವು ಅತಿಯಾದರೂ ತೊಂದರೆ, ಕಡಿಮೆಯಾದರೂ ತೊಂದರೆ.

ರಕ್ತದೊತ್ತಡದ ಮಟ್ಟವನ್ನು ಸಮತೋಲನದಿಂದ ಕಾಪಾಡುವುದೇ ಈಗ ದೊಡ್ಡ ಸವಾಲಾಗಿದೆ. ಈ ಸಮಸ್ಯೆಯನ್ನು ಮನೆಯಲ್ಲಿ ಸಿಗುವ ಪದಾರ್ಥಗಳಿಂದಲೇ ಸುಲಭವಾಗಿ ನಿವಾರಿಸಬಹುದು. ಅಧಿಕ ರಕ್ತದೊತ್ತಡವನ್ನು ಸುಲಭವಾಗಿ ನಿವಾರಿಸಲು ನೆರವಾಗುವ ಕೆಲ ಸಂಗತಿಗಳನ್ನು ಈ ಲೇಖನದಲ್ಲಿ ನಿಮಗಾಗಿ ನೀಡಲಾಗಿದೆ, ಮುಂದೆ ಓದಿ... ರಕ್ತದೊತ್ತಡವನ್ನು ಹದ್ದು ಬಸ್ತಿನಲ್ಲಿಡುವ ಟಾಪ್ ಫುಡ್

A tangy zesty home remedy for hypertension

ಲಿಂಬೆಹಣ್ಣುಗಳನ್ನು ಕಂಡರೆ ಅಸಡ್ಡೆ ತೋರದಿರಿ. ಲಿಂಬೆ ಪಾನಕವನ್ನು ತಯಾರಿಸಿ ಸವಿದರೆ ಅಧಿಕ ರಕ್ತದೊತ್ತಡವು ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ರಕ್ತದೊತ್ತಡವು ಹೆಚ್ಚಾಗುವ ಸಂಭವವಿರುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಅಥವಾ ಅದರ ಅಂಚಿನಲ್ಲಿರುವವರು ಹೆಚ್ಚಿನ ಕಾಳಜಿ ವಹಿಸಿ ಸಕಾಲದಲ್ಲಿ ಪರೀಕ್ಷಿಸಿಕೊಳ್ಳಬೇಕಾಗುತ್ತದೆ. ಋತುಗಳಿಗೆ ತಕ್ಕಂತೆ ಔಷಧಿಗಳನ್ನು ಹೆಚ್ಚಾಗಿ ಸೇವಿಸಲು ಸಾಧ್ಯವಿಲ್ಲ.

ಆದರೆ ಮನೆಯಲ್ಲಿಯೇ ಸಿಗುವ ಪದಾರ್ಥಗಳಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಆದ್ದರಿಂದ ನಿಮಗಾಗಿ ಮನೆಮದ್ದಿನ ಸಂಗತಿಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಅಧಿಕ ರಕ್ತದೊತ್ತಡವನ್ನು ಶಮನಮಾಡಲು ಲಿಂಬೆಹಣ್ಣು ನಿಜಕ್ಕೂ ಪರಿಣಾಮಕಾರಿ ಸಾಧನ. ಲಿಂಬೆ ಪಾನಕ ಸೇವಿಸುವುದರಿಂದ ರಕ್ತ ನಾಳಗಳು ಶುದ್ಧಗೊಂಡು ರಕ್ತ ಸಂಚಲನವು ಸುಗಮವಾಗುತ್ತದೆ.

ಇದರಲ್ಲಿರುವ ವಿಟಮಿನ್ ಬಿ ಸತ್ವವು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವುದಲ್ಲದೆ ಹೃದಯ ವೈಫಲ್ಯವನ್ನು ನಿಯಂತ್ರಿಸುತ್ತದೆ. ಅಲ್ಲದೆ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಲ್ಲಿ ಟ್ರೈಗ್ಲಿಸರೈಡ್ ಅಂಶವನ್ನು ಕಡಿಮೆಗೊಳಿಸಿ ಬೊಜ್ಜನ್ನು ಸಹ ನಿಯಂತ್ರಿಸುತ್ತದೆ. ಲಿಂಬೆಹಣ್ಣು ಮೂತ್ರವರ್ಧಕವೂ ಹೌದು. ಆದ್ದರಿಂದ ಲಿಂಬೆ ಹಣ್ಣಿನ ಪಾನಕವನ್ನು ಕ್ರಮವಾಗಿ ಆಗಿಂದಾಗ್ಗೆ ಸೇವಿಸುವುದನ್ನು ರೂಢಿಸಿಕೊಳ್ಳಿ.

ಹಾಗಾಗಿ, ಅಧಿಕ ಒತ್ತಡ ಇರುವವರು, ತಾಜಾ ಲಿಂಬೆಹಣ್ಣಿನ ಪಾನಕವನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೇವಿಸಿದರೆ ಹೆಚ್ಚು ಪ್ರಯೋಜನವಾಗುತ್ತದೆ. ಬೆಚ್ಚನೆಯ ನೀರಿನೊಂದಿಗೆ ಲಿಂಬೆಯನ್ನು ಉಪಯೋಗಿಸಿದರೆ ಹೆಚ್ಚು ಪರಿಣಾಮಕಾರಿಯಾಗಲಿದೆ. ಈ ಮಿಶ್ರಣವನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬೆಳಗಿನ ಜಾವ ಸೇವಿಸಿದಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ಸಕ್ಕರೆ ಅಥವಾ ಉಪ್ಪನ್ನು ಬೆರೆಸದೇ ಲಿಂಬೆ ಪಾನಕವನ್ನು ಸೇವಿಸಿರಿ. ಲಿಂಬೆ ಹಣ್ಣಿನಿಂದ ಹೆಚ್ಚು ಆರೋಗ್ಯಕರ ಪ್ರಯೋಜನಗಳಿದ್ದು, ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಲಿಂಬೆಹಣ್ಣನ್ನು ಅಳವಡಿಸಿಕೊಳ್ಳಲು ಮರೆಯದಿರಿ.

English summary

A tangy zesty home remedy for hypertension

Is life throwing lemons at you? Don’t throw them back. Make lime juice and control your blood pressure instead. Blood pressure level is usually high during winters. For people already suffering from high blood pressure or on the border line, you need to work harder to keep the level in check. Since you cannot increase the dosage of medicines during one particular season, why not opt for natural remedies that can help reduce or control your blood pressure.
Story first published: Saturday, January 9, 2016, 20:21 [IST]
X
Desktop Bottom Promotion