For Quick Alerts
ALLOW NOTIFICATIONS  
For Daily Alerts

ಹೃದಯಾಘಾತದ 7 ಲಕ್ಷಣಗಳು-ಯಾವುದಕ್ಕೂ ಎಚ್ಚರಿಕೆಯಿಂದಿರಿ!

By Manu
|

ಫಾಸ್ಟ್ ಫುಡ್ ಯುಗದಲ್ಲಿ ನಾವು ಕೂಡ ತುಂಬಾ ಫಾಸ್ಟ್ ಆಗಿಯೇ ಇರಬೇಕಾಗುತ್ತದೆ. ಈಗ ನಾವು ಎಷ್ಟು ಫಾಸ್ಟ್ ಆಗಿದ್ದೇವೆ ಎಂದರೆ ನಮ್ಮ ಆರೋಗ್ಯದ ಕಡೆ ಗಮನಹರಿಸಲು ಸಮಯವೇ ಇಲ್ಲದಂತಾಗಿದೆ. ಸಿಕ್ಕಿದ್ದೆಲ್ಲವನ್ನೂ ತಿಂದುಕೊಂಡು ನಮ್ಮ ದೇಹವನ್ನು ಅನಾರೋಗ್ಯದ ಗೂಡನ್ನಾಗಿ ಮಾಡಿಕೊಂಡಿದ್ದೇವೆ. ಇದರಿಂದ ರೋಗನಿರೋಧಕ ಶಕ್ತಿಯು ದೇಹದಲ್ಲಿ ಕಡಿಮೆಯಾಗುತ್ತಾ ಹೋಗುತ್ತಿದೆ. ಎಲ್ಲವನ್ನು ನಾವಾಗಿಯೇ ತಂದುಕೊಂಡಿರುವುದು. ಗುಣಪಡಿಸುವುದಕ್ಕಿಂತ ಮುನ್ನೆಚ್ಚರಿಕೆ ಒಳ್ಳೆಯದು ಎನ್ನುವ ಮಾತಿದೆ. ಹೃದಯದ ಆರೋಗ್ಯಕ್ಕೆ- ಪುರಾತನ ಕಾಲದ ಆಯುರ್ವೇದ ಚಿಕಿತ್ಸೆ

ಆದರೆ ಕೆಲವೊಂದು ಸಂದರ್ಭಗಳಲ್ಲಿ ನಮಗೆ ಈ ರೀತಿಯ ಅನಾರೋಗ್ಯ ಕಾಡಬಹುದು ಎಂದು ಗೊತ್ತಾಗುವುದೇ ಇಲ್ಲ. ಇನ್ನು ಕೆಲವು ಸಲ ನಾವು ಇದನ್ನು ಕಡೆಗಣಿಸುತ್ತೇವೆ. ಏನೇ ಆದರೂ ಆರೋಗ್ಯದ ನಿರ್ಲಕ್ಷ್ಯ ಅಕ್ಷಮ್ಯ ಅಪರಾಧ ಎನ್ನಬಹುದಾಗಿದೆ. ಅದರಲ್ಲೂ ಹೃದಯದ ಬಗ್ಗೆ ನಾವು ಹೆಚ್ಚಿನ ಜಾಗ್ರತೆ ವಹಿಸಿಕೊಳ್ಳಬೇಕು. ಹೃದಯಾಘಾತ ಬರದಂತೆ ತಡೆಯಬೇಕೆ?

ಇಂದಿನ ದಿನಗಳಲ್ಲಿ ಇದರ ಬಗ್ಗೆ ಜಾಗೃತಿಯೂ ನಡೆಯುತ್ತಾ ಇದೆ. ಆದರೆ ಹೃದಯಾಘಾತ ಬರಬಹುದು ಎಂದು ನಮಗೆ ತಿಳಿಯುವುದಾದರೂ ಹೇಗೆ? ಹೃದಯಾಘಾತವಾಗಬಹುದು ಎಂಬ ಬಗ್ಗೆ ನಮಗೆ ಏನಾದರೂ ಲಕ್ಷಣಗಗಳಿಂದ ತಿಳಿದುಕೊಳ್ಳಬಹುದೇ ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳಿ. ಹೃದಯಾಘಾತವಾಗುತ್ತದೆ ಎನ್ನುವ ಮುನ್ಸೂಚನೆಗಳನ್ನು ಇಲ್ಲಿ ನೀಡಲಾಗಿದೆ.

ಎದೆ ಭಾಗದಲ್ಲಿ ಬಿಗಿಹಿಡಿತ

ಎದೆ ಭಾಗದಲ್ಲಿ ಬಿಗಿಹಿಡಿತ

ಎದೆಭಾಗದಲ್ಲಿ ಬಿಗಿಹಿಡಿತ, ಒತ್ತಡ, ಉರಿಯುವಂತಾಗುವುದು ಇತ್ಯಾದಿ ಕಾಣಿಸಿಕೊಳ್ಳುತ್ತಿದ್ದರೆ ನೀವು ವೈದ್ಯರನ್ನು ಭೇಟಿಯಾಗುವುದು ಉತ್ತಮ.

ವಿವರಿಸಲಾಗದ ನಿಶ್ಯಕ್ತಿ

ವಿವರಿಸಲಾಗದ ನಿಶ್ಯಕ್ತಿ

ಯಾವುದೇ ಕಾರಣವಿಲ್ಲದೆ ಹಠಾತ್ ಆಗಿ ನಿಶ್ಯಕ್ತಿ ಕಾಣಿಸಿಕೊಳ್ಳುವುದು ಹೃದಯಾಘಾತದ ಲಕ್ಷಣವಾಗಿರಬಹುದು. ಹೃದಯಾಘಾತಕ್ಕೆ ಒಂದು ತಿಂಗಳ ಮೊದಲು ಹೀಗಾಗುತ್ತದೆ.

ದೀರ್ಘಸಮಯದ ಶೀತ

ದೀರ್ಘಸಮಯದ ಶೀತ

ದೀರ್ಘಸಮಯದಿಂದ ಶೀತದ ಸೋಂಕಿನಿಂದ ಬಳಲುತ್ತಿದ್ದರೆ ಇದು ಹೃದಯಾಘಾತದ ಎಚ್ಚರಿಕೆಯಾಗಿರಬಹುದು. ಹೃದಯಕ್ಕೆ ಸರಿಯಾಗಿ ಆಮ್ಲಜನಕ ಸಿಗದೆ ಇರುವಾಗ ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ಪರಿಣಾಮ ಉಂಟಾಗುವುದು.

ಊತ

ಊತ

ದೇಹದ ಭಾಗಗಳಾದ ಪಾದ, ಹೊಟ್ಟೆ ಮತ್ತು ಕೈ ಇತ್ಯಾದಿ ಊದಿಕೊಂಡರೆ ಹೃದಯವು ಅಸಹಜ ರೀತಿಯಲ್ಲಿ ರಕ್ತವನ್ನು ಹೊರಹಾಕುತ್ತಿದೆ ಎಂದರ್ಥ. ಇದರಿಂದಾಗಿ ಅಪಧಮನಿಗಳಲ್ಲಿ ಉರಿ ಕಾಣಿಸಿಕೊಳ್ಳಬಹುದು.

ಉಸಿರು ಕಟ್ಟುವುದು

ಉಸಿರು ಕಟ್ಟುವುದು

ಹೃದಯವು ನಿತ್ರಾಣವಾದಾಗ ಅದು ಶ್ವಾಸಕೋಶಕ್ಕೆ ಸರಿಯಾಗಿ ರಕ್ತಸಂಚಾರ ಮಾಡಲು ವಿಫಲವಾಗುತ್ತದೆ. ಇದರಿಂದ ಉಸಿರಾಟದಲ್ಲಿ ತೊಂದರೆಯಾಗುವುದು.

ತಲೆಸುತ್ತುವುದು

ತಲೆಸುತ್ತುವುದು

ಯಾವುದೇ ಕಾರಣವಿಲ್ಲದೆ ತಲೆಸುತ್ತುವಿಕೆ ಉಂಟಾಗುತ್ತಿದ್ದರೆ ಮತ್ತು ಯಾವಾಗಲೂ ತಲೆನೋವು ಕಾಣಿಸುತ್ತಿದ್ದರೆ ನಿತ್ರಾಣವಾಗಿರುವ ಹೃದಯವು ಮೆದುಳಿಗೆ ಸರಿಯಾಗಿ ರಕ್ತವನ್ನು ಸರಬರಾಜು ಮಾಡುತ್ತಿಲ್ಲವೆಂದರ್ಥ. ಇದು ಹೃದಯಾಘಾತದ ಒಂದು ಲಕ್ಷಣವಾಗಿರಬಹುದು.

ವಾಕರಿಕೆ

ವಾಕರಿಕೆ

ಆರೋಗ್ಯಕರವಾದ ಆಹಾರವನ್ನು ತಿನ್ನುತ್ತಾ ಇದ್ದರೂ ಯಾವಾಗಲೂ ಅಜೀರ್ಣ, ಹೃದಯದಲ್ಲಿ ಉರಿ ಮತ್ತು ವಾಕರಿಕೆ ಕಂಡು ಬರುತ್ತಿದ್ದರೆ ಹೃದಯಾಘಾತವು ಕೇವಲ ಒಂದು ತಿಂಗಳಲ್ಲೇ ನಿಮ್ಮನ್ನು ಕಾಡಲಿದೆ ಎನ್ನಬಹುದು. ಆದಷ್ಟು ಬೇಗ ನೀವು ವೈದ್ಯರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆದುಕೊಳ್ಳುವುದು ಉತ್ತಮ.

English summary

7 Common Symptoms Seen A Month Before Heart Attack!

They say, "prevention is better than cure"; however, how do you prevent a negative occurrence from happening, if you never see it coming in the first place? Well, it is the same when it comes to diseases. Unless we see certain symptoms and warning signs, we will never know whether we are at the risk of a certain disorder or not. Many a times, people suffer fatal consequences onlybecause they never foresaw the symptoms of the diseases that they were affected with!
X
Desktop Bottom Promotion