For Quick Alerts
ALLOW NOTIFICATIONS  
For Daily Alerts

ವಿಶ್ವ ಹೃದಯ ದಿನ: ಇರುವುದೊಂದೇ ಹೃದಯ ನೆನಪಿರಲಿ..!

By Super
|

ಸೆಪ್ಟೆಂಬರ್ 29ರ ವಿಶೇಷವೇನು? ಇದು ವಿಶ್ವ ಹೃದಯ ದಿನದ ರೂಪದಲ್ಲಿ ವಿಶ್ವದೆಲ್ಲೆಡೆ ಆಚರಿಸಲ್ಪಡುತ್ತದೆ. ಏಕೆಂದರೆ ಹೃದಯಸಂಬಂಧಿ ಕಾರಣದಿಂದ ಚಿಕ್ಕ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದವರ ಸಂಖ್ಯೆ ಗಾಬರಿ ಮೂಡಿಸುತ್ತದೆ. ಕಳೆದ ವರ್ಷ ವಿಶ್ವದಲ್ಲಿ ಹೃದಯಸಂಬಂಧಿ ಕಾರಣಗಳಿಂದ ಮರಣಹೊಂದಿದವರ ಸಂಖ್ಯೆ 1.71 ಕೋಟಿ!

ಈ ಸಂಖ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಹೃದಯ ಒಕ್ಕೂಟ ಪ್ರತಿ ವರ್ಷ ವಿಶ್ವ ಹೃದಯ ದಿನವನ್ನು "ಒಂದೇ ವಿಶ್ವ, ಒಂದೇ ಗೃಹ, ಒಂದೇ ಹೃದಯ" (One World, One Home, One Heart) ಎಂಬ ಧ್ಯೇಯವಾಕ್ಯದೊಡನೆ ಆಚರಿಸಲು ನಿರ್ಧರಿಸಿದೆ. ಪುಟ್ಟ ಹೃದಯದ ಆರೋಗ್ಯಕ್ಕೂ ಸ್ವಲ್ಪ ಆದ್ಯತೆ ನೀಡಿ!

ಈ ಮೂಲಕ ವಿಶ್ವದ ಜನತೆಗೆ ತಮ್ಮ ಜೀವನಶೈಲಿಯಲ್ಲಿ ಸುಧಾರಣೆ ತರುವ ಮೂಲಕ ಹೃದಯದ ಬಗ್ಗೆ ಕಾಳಜಿ ವಹಿಸಲು ಮನವಿಮಾಡಿಕೊಳ್ಳುತ್ತಿದೆ. ತನ್ಮೂಲಕ ಹೃದಯ ಸ್ತಂಭನ, ಹೃದಯಸಂಬಂಧಿ ತೊಂದರೆಗಳಿಂದ ರಕ್ಷಣೆ ಪಡೆಯಲು ಈ ಕಾರ್ಯಕ್ರಮದ ಪ್ರಮುಖ ಅಂಶಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗುತ್ತಿದೆ...

ಹೃದಯ ತೊಂದರೆಗೆ ಕಾರಣವಾದ ಕೊಲೆಸ್ಟ್ರಾಲ್‌ನಿಂದ ದೂರವಿರಿ

ಹೃದಯ ತೊಂದರೆಗೆ ಕಾರಣವಾದ ಕೊಲೆಸ್ಟ್ರಾಲ್‌ನಿಂದ ದೂರವಿರಿ

ಹೃದಯಕ್ಕೆ ಪ್ರಮುಖ ತೊಂದರೆ ಕೊಡುವ ಕಾರಣವೆಂದರೆ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್. ಅರಿವಿರದೇ ಕೆಟ್ಟ ಕೊಲೆಸ್ಟ್ರಾಲ್‌ ಹೆಚ್ಚಿಸುವ ಆಹಾರವನ್ನು ತಮ್ಮ ಜೀವಿತಾವಧಿಯಲ್ಲಿ ಸೇವಿಸಿದ್ದ ಕಾರಣ ನರನರಗಳಲ್ಲಿ ಸಂಗ್ರಹಗೊಂಡಿರುವ ಕೆಟ್ಟ ಕೊಲೆಸ್ಟ್ರಾಲ್‌ ಹೃದಯದ ಒತ್ತಡವನ್ನು ಹೆಚ್ಚಿಸುತ್ತಾ ಹೃದಯಸ್ತಂಭನದ ಸಾಧ್ಯತೆಯನ್ನು ಹೆಚ್ಚಿಸುತ್ತಾ ಹೋಗುತ್ತದೆ.

ಹೃದಯ ತೊಂದರೆಗೆ ಕಾರಣವಾದ ಕೊಲೆಸ್ಟ್ರಾಲ್‌ನಿಂದ ದೂರವಿರಿ

ಹೃದಯ ತೊಂದರೆಗೆ ಕಾರಣವಾದ ಕೊಲೆಸ್ಟ್ರಾಲ್‌ನಿಂದ ದೂರವಿರಿ

ಇದಕ್ಕೆ ಕಡಿವಾಣ ಹಾಕಿ ಈ ಕೊಲೆಸ್ಟ್ರಾಲ್‌ ಹೊರಹಾಕಲು ಮನಸ್ಸನ್ನು ಅಣಿಗೊಳಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ. ನಾರು ಹೆಚ್ಚಿರುವ, ಕಡಿಮೆ ಕೊಲೆಸ್ಟ್ರಾಲ್‌ ಇರುವ ಆಹಾರ ಸೇವಿಸುವ ಮೂಲಕ, ಸೂಕ್ತ ವ್ಯಾಯಾಮಗಳ ಮೂಲಕ ಮತ್ತು ಎಣ್ಣೆಯನ್ನು ಬದಲಿಸುವ ಮೂಲಕ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಯತ್ನಿಸಿ.

ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತನ್ನಿ

ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತನ್ನಿ

ಅಧಿಕ ರಕ್ತದೊತ್ತಡ ಎಂದಿಗೂ ಹೃದಯಕ್ಕೆ ಮಾರಕವೇ. ಇದಕ್ಕೆ ಹಲವಾರು ಕಾರಣಗಳಿರಬಹುದು. ಮುಖ್ಯ ಕಾರಣವೆಂದರೆ ಸ್ಥೂಲಕಾಯ. ಅಲ್ಲದೇ ನರಗಳ ಒಳಗೆ ಸಂಗ್ರಹಗೊಂಡಿರುವ ಕೊಬ್ಬು, ಜಿಡ್ಡುಗಳ ಕಾರಣದಿಂದಲೂ ರಕ್ತದೊತ್ತಡ ಹೆಚ್ಚುತ್ತದೆ.

ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತನ್ನಿ

ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತನ್ನಿ

ಇದಕ್ಕಾಗಿ ನೀವು ಆರೋಗ್ಯವಂತರಿದ್ದೀರಿ ಎನ್ನಿಸಿದರೂ ನಿಯಮಿತವಾಗಿ ವೈದ್ಯರಿಂದ ತಪಾಸಣೆಗೊಳಪಟ್ಟು ಸೂಕ್ತ ಔಷಧಿ ಮತ್ತು ವ್ಯಾಯಾಮಗಳನ್ನು ಅನುಸರಿಸುವ ಮೂಲಕ ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತನ್ನಿ.

ಮಧುಮೇಹವನ್ನು ನಿಯಂತ್ರಿಸಿ

ಮಧುಮೇಹವನ್ನು ನಿಯಂತ್ರಿಸಿ

ಒಂದು ವೇಳಿ ನೀವು ಮಧುಮೇಹಿಗಳಾಗಿದ್ದರೆ ನಿಮ್ಮ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣವನ್ನು ನಿಯಂತ್ರಿಸಲು ವೈದ್ಯರ ಸಲಹೆಗಳನ್ನು ಸರ್ವಥಾ ಪಾಲಿಸಿ. ಇದರಿಂದ ನರಗಳ ಒಳಗೆ ಸಂಗ್ರಹಗೊಂಡಿದ್ದ ಕೊಬ್ಬು ನಿವಾರಣೆಯಾಗಲು ನೆರವಾಗುತ್ತದೆ. ಸೂಕ್ತ ಆಹಾರಕ್ರಮ ಮತ್ತು ವ್ಯಾಯಾಮಗಳು ನಿಮ್ಮ ಮಧುಮೇಹವನ್ನು ನಿಯಂತ್ರಿಸಲು ಅಗತ್ಯವಾದ ಕ್ರಮಗಳಾಗಿವೆ.

ಧೂಮಪಾನ ತ್ಯಜಿಸಿ

ಧೂಮಪಾನ ತ್ಯಜಿಸಿ

ಒಂದು ವೇಳೆ ನೀವು ಧೂಮಪಾನಿಗಳಾಗಿದ್ದರೆ ಅದು ನಿಮ್ಮನ್ನು ಕೊಲ್ಲುವ ಮುನ್ನವೇ ನೀವು ಅದನ್ನು ಕೊಲ್ಲಿ. ಧೂಮಪಾನಕ್ಕೆ ನಿಮ್ಮ ಮನ ತೀರಾ ದುರ್ಬಲವಾಗಿರುವುದೇ ಕಾರಣ. ಮನಸ್ಸು ಗಟ್ಟಿ ಮಾಡಿ ಧೂಮಪಾನದಿಂದ ಹೊರಬರಲು ಪ್ರಯತ್ನಿಸಿ. ಮನಸ್ಸು ಗಟ್ಟಿ ಮಾಡಿದ್ದೀರಿ ಎಂದು ನಿಮ್ಮ ವೈದ್ಯರಿಗೆ ಮನವರಿಕೆ ಮಾಡಿಸಿದರೆ ಸಾಕು, ಉಳಿದ ವಿಧಾನವನ್ನು ಅವರು ಹೇಳಿಕೊಡುತ್ತಾರೆ.

ಧೂಮಪಾನ ತ್ಯಜಿಸಿ

ಧೂಮಪಾನ ತ್ಯಜಿಸಿ

ಧೂಮಪಾನದ ಮನಸ್ಸಾದಾಗಲೆಲ್ಲಾ ವ್ಯಾಯಾಮದತ್ತ ಮನಸ್ಸು ಹೊರಳಿಸಿ. ನಿಧಾನ ನಡಿಗೆ, ದೀರ್ಘ ಉಸಿರಾಟ, ಸೈಕಲ್ ತುಳಿಯುವುದು ಮೊದಲಾದ ಚಟುವಟಿಕೆಗಳನ್ನು ಅನುಸರಿಸಿ. ಹೆಚ್ಚು ಹೆಚ್ಚು ನೀರು ಕುಡಿಯುವುದು ಮತ್ತು ಚ್ಯೂಯಿಂಗ್ ಗಮ್ ಅಗಿಯುವುದು ಸಹಾ ಪರ್ಯಾಯ ಮಾರ್ಗಗಳಾಗಿವೆ.

ಮದ್ಯಪಾನ ತ್ಯಜಿಸಿ, ಸಾಧ್ಯವಿಲ್ಲದಿದ್ದರೆ ಮಿತಪ್ರಮಾಣಕ್ಕಿಳಿಸಿ

ಮದ್ಯಪಾನ ತ್ಯಜಿಸಿ, ಸಾಧ್ಯವಿಲ್ಲದಿದ್ದರೆ ಮಿತಪ್ರಮಾಣಕ್ಕಿಳಿಸಿ

ಮದ್ಯಪಾನದ ವ್ಯಸನ ಬಿಡುವುದು ಕಷ್ಟಕರ, ಆದರೆ ಅಸಾಧ್ಯವಾದುದಲ್ಲ. ಮದ್ಯಪಾನ ಬಿಡುವತ್ತ ಚಿತ್ತ ಹರಿಸಿ. ಅಸಾಧ್ಯ ಎಂದು ಹಠ ಹಿಡಿದರೆ ಮಾತ್ರ ಮಹಿಳೆಯರಿಗೆ ದಿನಕ್ಕೆ ಮೂವತ್ತು ಮಿಲಿಲೀಟರ್ ಹಾಗೂ ಪುರುಷರಿಗೆ ಅರವತ್ತು ಮಿಲಿ ಲೀಟರ್ ದಾಟದಂತೆ ನೋಡಿಕೊಳ್ಳಿ.

ತೂಕವನ್ನು ಆರೋಗ್ಯಕರ ಮಟ್ಟದಲ್ಲಿರಿಸಿ

ತೂಕವನ್ನು ಆರೋಗ್ಯಕರ ಮಟ್ಟದಲ್ಲಿರಿಸಿ

ಸ್ಥೂಲಕಾಯಕ್ಕೂ ಹೃದಯದ ಒತ್ತಡಕ್ಕೂ ನೇರ ಸಂಬಂಧವಿದೆ. ರಕ್ತದೊತ್ತಡ ಕಡಿಮೆಗೊಳಿಸಲು ತೂಕ ಇಳಿಸುವುದೂ ಅನಿವಾರ್ಯವಾಗಿದೆ. ಸ್ಥೂಲಕಾಯದವರಲ್ಲಿ ಮಧುಮೇಹ, ಹೆಚ್ಚಿನ ಕೊಲೆಸ್ಟ್ರಾಲ್ ಮೊದಲಾದ ತೊಂದರೆಗಳು ಕರೆಯದೇ ಬರುವ ಅತಿಥಿಗಳಾಗಿವೆ. ಈ ಅತಿಥಿಗಳನ್ನು ಓಡಿಸಲು ನಿಮ್ಮ ಸ್ಥೂಲಕಾಯವನ್ನು ಕರಗಿಸಿ ಆರೋಗ್ಯಕರ ಮಟ್ಟದಲ್ಲಿರಿಸುವುದು ಅಗತ್ಯವಾಗಿದೆ. ಇದಕ್ಕಾಗಿ ನಿಮ್ಮ ಆಹಾರ ಮತ್ತು ಜೀವನಕ್ರಮದಲ್ಲಿ ಕೊಂಚ ಮಾರ್ಪಾಡು ಅಗತ್ಯವಾಗಿದೆ.

ನಿತ್ಯದ ವ್ಯಾಯಾಮ ಅಗತ್ಯ

ನಿತ್ಯದ ವ್ಯಾಯಾಮ ಅಗತ್ಯ

ಆರಾಮ ಮಾಡುವ ದಿನಗಳನ್ನು ಮರೆತು ಕೊಂಚ ದೈಹಿಕ ವ್ಯಾಯಾಮದತ್ತ ಗಮನ ಹರಿಸಿ. ಇದಕ್ಕಾಗಿ ಬೆಳಗ್ಗಿನ ಸವಿನಿದ್ದೆಗೆ ಕೊಂಚ ತಿಲಾಂಜಲಿ ನೀಡಬೇಕಾಗಿ ಬರಬಹುದು. ಬೆಳಗ್ಗಿನ ಮತ್ತು ಸಂಜೆಯ ನಡಿಗೆ,ವಾರಕ್ಕೆ ಕನಿಷ್ಠ ಮೂರು ಬಾರಿ ಮೂವತ್ತು ನಿಮಿಷಗಳ ಏರೋಬಿಕ್ಸ್, ವಾರಕ್ಕೆ ಕನಿಷ್ಟ ಎರಡು ಬಾರಿ ಸ್ನಾಯುಗಳನ್ನು ಸೆಳೆಯುವ ಕಸರತ್ತುಗಳನ್ನು ನಿರ್ವಹಿಸಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕ ವ್ಯಾಯಾಮಗಳನ್ನು ನಿಯಮಿತವಾಗಿ ನಿರ್ವಹಿಸುತ್ತಾ ಬನ್ನಿ.

ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ

ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ

ಸಿದ್ಧ ಆಹಾರಗಳ ಬದಲಿಗೆ ಹಣ್ಣು ಮತ್ತು ಹಸಿಯಾಗಿ ಸೇವಿಸಬಹುದಾದ ತರಕಾರಿಗಳನ್ನು ಸೇವಿಸಿ. ಇವುಗಳಲ್ಲಿ ಆರೋಗ್ಯಕರ ಪ್ರಮಾಣದಲ್ಲಿ ವಿಟಮಿನ್ ಮತ್ತು ಇತರ ಪೋಷಕಾಂಶಗಳಿವೆ. ಜೊತೆಗೇ ಉತ್ತಮ ಪ್ರಮಾಣದ ಕರಗುವ ಮತ್ತು ಕರಗದ ನಾರು ಸಹಾ ಇದೆ. ಇವುಗಳಲ್ಲಿರುವ ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೇ ರಕ್ತನಾಳಗಳ ಒಳಗಣ ಗೋಡೆಯನ್ನು ದೃಢಗೊಳಿಸುವ ಮೂಲಕ ಹೃದಯಕ್ಕೆ ಹೆಚ್ಚಿನ ಹೊರೆಯಾಗದಂತೆ ನೋಡಿಕೊಳ್ಳುತ್ತದೆ.

English summary

World Heart Day: Heart is one, don’t play with it

World Heart Day is a day to spread the word that the leading cause of death in the world are heart disease and stroke, and that most of the deaths could be prevented. Over 17.1 million lives are claimed each year due to cardiovascular diseases. This year the theme for World Heart Day is ‘One World, One Home, One Heart.’
Story first published: Tuesday, September 29, 2015, 10:21 [IST]
X
Desktop Bottom Promotion