For Quick Alerts
ALLOW NOTIFICATIONS  
For Daily Alerts

ಅಧಿಕ ರಕ್ತದೊತ್ತಡದ ಕಿರಿಕಿರಿ-ಮನೆಮದ್ದೇ ಸರಿ

|

ಅಧಿಕ ರಕ್ತದೊತ್ತಡ ಪ್ರಸ್ತುತ, ವಿಶ್ವದಾದ್ಯಂತ ಕಂಡು ಬರುತ್ತಿರುವ ಒಂದು ಸಾಂಕ್ರಾಮಿಕ ರೋಗ ಎನಿಸಿಕೊಂಡಿದೆ. ಅನಾರೋಗ್ಯಕ್ಕೆ ಕಾರಣವಾಗುವ ಆಹಾರಗಳ ಸೇವನೆ ಒತ್ತಡದ ಜೀವನದಿಂದಾಗಿ ಇಂದು ಭಾರತದಲ್ಲಿ ಸರಾಸರಿ ಪ್ರತಿ ಮೂರು ಜನರಲ್ಲಿ ಒಬ್ಬರು ಅಧಿಕ ರಕ್ತದೊತ್ತಡಕ್ಕೆ ತುತ್ತಾಗುತ್ತಿದ್ದಾರೆ. ಅಲ್ಲದೆ ಇದು ಹೃದಯ ಖಾಯಿಲೆ, ಪಾರ್ಶ್ವವಾಯು ಮತ್ತು ಮೂತ್ರಪಿಂಡ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಎಚ್ಚರ: ರಕ್ತದೊತ್ತಡ ಅಧಿಕವಾಗುತ್ತಿದೆ ಎಂಬುದನ್ನು ಸೂಚಿಸುವ ಲಕ್ಷಣಗಳಿವು!

ಅಧಿಕ ರಕ್ತದೊತ್ತಡವು ಒಂದು ಸಾಮಾನ್ಯವಾದ ಆರೋಗ್ಯದ ಸಮಸ್ಯೆಯಾಗಿದ್ದು, ಇದು ಅಧಿಕ ಸಂದರ್ಭಗಳಲ್ಲಿ ನಿಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಿ ಬಿಡುತ್ತದೆ. ಅಧಿಕ ರಕ್ತದೊತ್ತಡದಿಂದ ನರಳುವ ಸುಮಾರು ಜನರಿಗೆ ತುಂಬಾ ವರ್ಷಗಳ ಕಾಲ ಅದರ ಲಕ್ಷಣಗಳು ಕಂಡು ಬಂದಿರುವುದಿಲ್ಲ. ರಕ್ತವು ರಕ್ತ ನಾಳಗಳ ಮೂಲಕ ಹರಿಯುವಾಗ ಅಪಧಮನಿಯ ಗೋಡೆಗಳ ಮೇಲೆ ಉಂಟು ಮಾಡುವ ಒತ್ತಡವೇ ರಕ್ತದೊತ್ತಡ.

ಅಂದರೆ ಯಾವಾಗ ಒಬ್ಬ ವ್ಯಕ್ತಿಯು ತಾನು ಅಧಿಕ ರಕ್ತದೊತ್ತಡದಿಂದ ನರಳುತ್ತಿದ್ದೇನೆ ಎಂದು ಹೇಳುತ್ತಾನೋ, ಆಗ ಅವನ ಅಪಧಮನಿಯ ಗೋಡೆಗಳು ಹೃದಯದಿಂದ ಪಂಪ್ ಆಗಿ ಬರುವ ರಕ್ತದ ಅಧಿಕವಾದ ಒತ್ತಡವನ್ನು ಸ್ವೀಕರಿಸುತ್ತಿವೆ ಎಂದು ಭಾವಿಸಿ. ಸಾಮಾನ್ಯವಾದ ರಕ್ತದೊತ್ತಡವು 140/80mmHg ಇರುತ್ತದೆ. ಯಾವಾಗ ಇದು 140/90mmHg ಆಗುತ್ತದೋ, ಆಗ ನೀವು ಅದಕ್ಕಾಗಿ ಪರೀಕ್ಷೆಯನ್ನು ನಡೆಸುವುದು ಅತ್ಯವಶ್ಯಕ. ಬನ್ನಿ ರಕ್ತದೊತ್ತಡವನ್ನು ನಿಯಂತ್ರಸುವ ಮನೆಮದ್ದು ಯಾವುದು ಎಂಬುದನ್ನು ನೋಡೋಣ..

ದಾಸವಾಳ

ದಾಸವಾಳ

ದಾಸವಾಳದ ಹೂವಿನ ಮೂಲಕ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು ಎಂದು ಸಾಕಷ್ಟು ವರ್ಷಗಳಿಂದ ಹೇಳಲಾಗುತ್ತದೆ.ಆದರೆ ಇತ್ತೀಚಿಗೆ ಇದು ಆಶ್ಚರ್ಯಕರ ರೀತಿಯಲ್ಲಿ ರಕ್ತದೊತ್ತಡ ಕಡಿಮೆ ಮಾಡಲು ಸಹಕರಿಸುತ್ತದೆ ಎಂಬುದು ಸಾಬೀತಾಗಿದೆ. ಸ್ವಲ್ಪ ದಾಸವಾಳದ ಹೂವನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಅದನ್ನು ನೀರಿನಲ್ಲಿ ಕುದಿಸಿ.ಇದಕ್ಕೆ ಜೇನು, ಲಿಂಬೆ ರಸ ಮತ್ತು ಎರಡು ಚಕ್ಕೆಯನ್ನು ಹಾಕಿ ಕುದಿಸಿ.ಸ್ವಲ್ಪ ಹೊತ್ತು ತಣಿಯಲು ಬಿಟ್ಟು ನಂತರ ಇದನ್ನು ಕುಡಿಯಿರಿ. ಈ ರೀತಿ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ತಡೆಯಬಹುದು.

ಎಳನೀರು

ಎಳನೀರು

ಎಳನೀರನ್ನು ಬಳಸುವುದರಿಂದ ದೇಹದ ಸ್ನಾಯು ಮತ್ತು ಹೃದಯದ ಸ್ನಾಯುಗಳು ರಕ್ತದ ಹರಿವನ್ನು ಸುಗಮವಾಗಿಸಿ ಸ್ನಾಯುಗಳ ಉತ್ತಮ ಕಾರ್ಯ ನಿರ್ವಹಣೆಗೆ ಸಹಕರಿಸುತ್ತದೆ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣಿನಲ್ಲಿರುವ ಸಿಟ್ರುಲಿನ್ ಎಂಬ ಸಾವಯುವ ಸಂಯುಕ್ತವು ಹೃದಯವು ರಕ್ತವನ್ನು ಪಂಪ್ ಮಾಡಲು ಸಹಕರಿಸುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ಹಣ್ಣನ್ನು ತಿನ್ನುವುದು ರೂಡಿಸಿಕೊಳ್ಳಿ.ಕಲ್ಲಂಗಡಿ ಬೀಜವೂ ಕೂಡ ರಕ್ತವನ್ನು ತಿಳಿಗೊಳಿಸಿ, ಮೂತ್ರಪಿಂಡದ ಕಾರ್ಯವನ್ನು ಸುಗಮಗೊಳಿಸಿ, ಅಧಿಕ ರಕ್ತದೊತ್ತಡವನ್ನು ತಡೆಯಲು ಸಹಕರಿಸುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಅಧಿಕ ರಕ್ತದೊತ್ತಡ ತಡೆಗಟ್ಟಲು ಬಾಳೆಹಣ್ಣು ರಾಮಬಾಣದಂತೆ ಕೆಲಸ ಮಾಡುತ್ತದೆ.ಬಾಳೆಹಣ್ಣಿನಲ್ಲಿರುವ ಪೊಟ್ಯಶಿಯಂ ಅಂಶ ದೇಹದಲ್ಲಿ ಸೋಡಿಯಂನ ಪರಿಣಾಮವನ್ನು ಕಡಿಮೆ ಮಾಡುತ್ತದೆ.ಬಾಳೆಹಣ್ಣಿನ ಜೊತೆಗೆ ಪಾಲಾಕ್, ಕಿತ್ತಳೆ ಜ್ಯೂಸ್, ದ್ರಾಕ್ಷಿ ಇನ್ನಿತರ ಹಣ್ಣು ತರಕಾರಿಗಳನ್ನು ಸೇವಿಸುವುದು ಕೂಡ ಒಳ್ಳೆಯದು.

ಅಧಿಕ ಪ್ರಮಾಣದಲ್ಲಿ ಸೊಪ್ಪನ್ನು ಸೇವಿಸಿ

ಅಧಿಕ ಪ್ರಮಾಣದಲ್ಲಿ ಸೊಪ್ಪನ್ನು ಸೇವಿಸಿ

ಅಧಿಕ ರಕ್ತದೊತ್ತಡವನ್ನು ತಡೆಯಲು ಅಥವಾ ಹತೋಟಿಯಲ್ಲಿಡಲು ಮನೆಯ ಹಿಂಬದಿಯಲ್ಲಿಯೇ ಬೆಳೆಯಬಹುದಾದ ಪಾಲಕ್ ಅಥವಾ ಬಸಳೆ ಸೊಪ್ಪು ಉಪಯೋಗಕ್ಕೆ ಬರುತ್ತದೆ.ಇದು ಹೃದಯ ಮತ್ತು ಅಪಧಮನಿಗಾಗುವ ಒತ್ತಡವನ್ನು ಕಡಿಮೆ ಮಾಡುತ್ತದೆ.

ನೆಲ್ಲಿಕಾಯಿ

ನೆಲ್ಲಿಕಾಯಿ

ಸಾಂಪ್ರದಾಯಿಕವಾಗಿ, ನೆಲ್ಲಿಕಾಯಿಯನ್ನು ರಕ್ತದೊತ್ತಡ ಇರುವವರು ಕಡಿಮೆ ಪ್ರಮಾಣದಲ್ಲಿ ಬಳಸುತ್ತಾರೆ. ಆದರೆ ಆಮ್ಲದಲ್ಲಿರುವ ವಿಟಮಿನ್ ಸಿ ರಕ್ತನಾಳಗಳ ವಿಸ್ತರಣೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಇದನ್ನು ರಕ್ತದ ಒತ್ತಡವನ್ನು ಕಡಿಮೆ ಮಾಡಲು ಸಹ ಬಳಸಲಾಗುತ್ತದೆ. ತ್ರಿಫಲಾ ಮಿಶ್ರಣದ ಆಮ್ಲ ಎಲ್ಲಾ ಆರ್ಯುವೇದ ಅಂಗಡಿಗಳಲ್ಲಿ ಲಭ್ಯ.

ನುಗ್ಗೆ ಕಾಯಿ

ನುಗ್ಗೆ ಕಾಯಿ

ನುಗ್ಗೆಕಾಯಿ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಫಲಕಾರಿ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಪ್ರೊಟೀನ್, ವಿಟಮಿನ್ ಹಾಗೂ ಖನಿಜಾಂಶಗಳು ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ. ಸಂಶೋಧನೆಗಳು ಸಾದರಪಡಿಸಿರುವಂತೆ, ಈ ಸಸ್ಯದ ಎಲೆಗಳಲ್ಲಿರುವ ಸಾರವು ರಕ್ತದೊತ್ತಡದ ಸಂಕೋಚನ (systolic) ಮತ್ತು ವ್ಯಾಕೋಚನವನ್ನು (diastolic) ಕಡಿಮೆಗೊಳಿಸಲು ಸಹಾಯಕಾರಿಯಾಗುತ್ತದೆ.

English summary

Home Remedies For High Blood Pressure

Blood pressure means the force of pressure with which the blood is pumped from the heart to the arteries. During high blood pressure the blood is pumped in a greater force which leads the arteries to get damaged. These are some of the home remedies that will help you shun hypertension and blood pressure naturally.
X
Desktop Bottom Promotion