For Quick Alerts
ALLOW NOTIFICATIONS  
For Daily Alerts

ಎಚ್ಚರ: ಎದೆ ನೋವು ಎನ್ನುವುದು ಸಾಮಾನ್ಯ ಕಾಯಿಲೆ ಅಲ್ಲ..!

By Super
|

ಎದೆ ನೋವು ಸಾಮಾನ್ಯವಾಗಿ ಎಲ್ಲರಿಗು ಕಾಣಿಸಿಕೊಳ್ಳುತ್ತದೆ. ಭುಜದಿಂದ ಕೆಳಗೆ, ಹೊಟ್ಟೆಯ ಭಾಗದಿಂದ ಮೇಲೆ ಕಂಡು ಬರುವ ಈ ನೋವಿಗೆ ಎದೆ ನೋವು ಎಂದು ನಾವು ಕರೆಯುತ್ತೇವೆ. ಬಹಳಷ್ಟು ಸಲ ಇದಕ್ಕೆ ನಿಖರ ಕಾರಣವನ್ನು ನಮ್ಮಿಂದ ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ.

ಆದರೂ ಕೆಲವೊಮ್ಮೆ ಇದು ಗಂಭೀರವಾದಾಗ, ಇದು ಹೃದಯಕ್ಕೆ ಅಪಾಯವನ್ನುಂಟು ಮಾಡಬಹುದು. ಸಾಮಾನ್ಯವಾದ ಎದೆ ನೋವು ಹೃದ್ರೋಗ, ಹೃದಯಾಘಾತ, ಆಸಿಡಿಟಿ ಮತ್ತು ಶ್ವಾಸಕೋಶದ ಸಮಸ್ಯೆಗಳಿಗೆ ಸಂಬಂಧಿಸಿದ್ದಾಗಿರಬಹುದು. ನರಕಯಾತನೆ ನೀಡುವ ಎದೆಯುರಿ ಸಮಸ್ಯೆಗೆ ಫಲಪ್ರದ ಮನೆಮದ್ದು

ಗಮನಿಸಿ: ಯಾವಾಗ ನಿಮ್ಮ ಎದೆಯ ಮಧ್ಯ, ಎಡ ಅಥವಾ ಬಲಭಾಗದಲ್ಲಿ ನೋವು ಕಾಣಿಸಿಕೊಂಡು, ನಿಮಗೆ ವಿಪರೀತ ಬೆವರುವಿಕೆ, ಉಸಿರಾಡಲು ಕಷ್ಟವಾಗಿ, ಕುತ್ತಿಗೆಯಲ್ಲಿ ನೋವು ಮತ್ತು ವಾಂತಿ ಬರುವ ರೀತಿ ಕಂಡು ಬರುತ್ತದೆಯೋ, ಆಗ ತಡ ಮಾಡದೆ ತುರ್ತು ಕರೆಗೆ ಕರೆ ಮಾಡಿ, ವೈದ್ಯರ ನೆರವನ್ನು ಪಡೆಯಿರಿ. ಬನ್ನಿ ಎದೆ ನೋವಿನ ಕುರಿತು ಕೆಲವು ಸಂಗತಿಗಳನ್ನು ತಿಳಿದುಕೊಳ್ಳೋಣ:

ಹೃದಯದ ಸಮಸ್ಯೆಗಳು

ಹೃದಯದ ಸಮಸ್ಯೆಗಳು

ಎದೆ ನೋವು ಬರಲು ಪ್ರಮುಖ ಕಾರಣಗಳಲ್ಲಿ ಒಂದು, ಹೃದ್ರೋಗ. ಇದನ್ನು ವೈದ್ಯಕೀಯವಾಗಿ "ಅಂಜಿನ" ಎಂದು ಕರೆಯುತ್ತಾರೆ. ಅಧ್ಯಯನಗಳ ಪ್ರಕಾರ ಸ್ವಲ್ಪ ಅಥವಾ ದೀರ್ಘ ಕಾಲದಿಂದಲು ಅಂಜಿನದಿಂದ ಬಳಲುವ ವ್ಯಕ್ತಿಗೆ ಎದೆನೋವು ಕಾಣಿಸಿಕೊಳ್ಳುತ್ತದೆ. ಈ ಬಗೆಯಲ್ಲಿ ನೋವು ಎದೆಯಲ್ಲಿ ಕಾಣಿಸಿಕೊಂಡು, ಭುಜಗಳು ಮತ್ತು ಕಾಲುಗಳವರೆಗೆ ವ್ಯಾಪಿಸುತ್ತದೆ.

ಒತ್ತಡದ ಕಾರಣದಿಂದ

ಒತ್ತಡದ ಕಾರಣದಿಂದ

ಬಹುತೇಕ ಮಂದಿಗೆ ಇದು ತಿಳಿದಿಲ್ಲ. ಒತ್ತಡದ ಕಾರಣವಾಗಿ ನಮಗೆ ಎದೆ ನೋವು ಬರುತ್ತದೆ. ಯಾವಾಗ ನಮ್ಮ ದೇಹದಲ್ಲಿ ಹೃದಯಕ್ಕೆ ಮತ್ತು ಶ್ವಾಸಕೋಶಗಳಿಗೆ ರಕ್ತ ಸರಬರಾಜು ಮಾಡುವ ರಕ್ತ ನಾಳಗಳಲ್ಲಿ ರಕ್ತದೊತ್ತಡ ಅಧಿಕವಾಗುತ್ತದೆಯೋ, ಆಗ ನಮಗೆ ಎದೆ ನೋವು ಕಾಣಿಸಿಕೊಳ್ಳುತ್ತದೆ.

ಆಸಿಡಿಟಿ

ಆಸಿಡಿಟಿ

ಜಿಇಆರ್‌ಡಿ ಅಥವಾ ಗ್ಯಾಸ್ಟ್ರೊಸೊಫಾಜಿಯಲ್ ರಿಫ್ಲಕ್ಸ್ ಕಾಯಿಲೆಯು ಎದೆ ನೋವನ್ನು ಉಂಟು ಮಾಡುತ್ತದೆ. ಆಸಿಡಿಟಿ ಅಥವಾ ಎದೆ ಉರಿ ಎಂಬುದು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿರುತ್ತದೆ. ಇದರ ಜೊತೆಗೆ ಮತ್ತೆ ಮತ್ತೆ ಬರುವ ತೇಗು, ಎದೆ ಭಾರ ಮತ್ತು ಭುಜದ ನೋವು ಸಹ ಕಂಡು ಬರುತ್ತದೆ.

ಶ್ವಾಸಕೋಶದ ಸಮಸ್ಯೆಗಳು

ಶ್ವಾಸಕೋಶದ ಸಮಸ್ಯೆಗಳು

ಇದು ನಮಗೆ ಸ್ವಲ್ಪ ಆಶ್ಚರ್ಯ ತಂದರು ಸತ್ಯ. ಎದೆ ನೋವಿಗೆ ಶ್ವಾಸಕೋಶದ ಸಮಸ್ಯೆಗಳು ಸಹ ಕಾರಣವಾಗುತ್ತವೆ. ಪಲ್ಮನರಿ ಎಂಬಲಿಸಂ ಎಂಬ ಶ್ವಾಸಕೋಶದ ಕಾಯಿಲೆಯು ರಕ್ತ ನಾಳಗಳಲ್ಲಿ ಕಂಡು ಬರುತ್ತದೆ. ಇದು ಶ್ವಾಸಕೋಶದ ಕೋಶಗಳಿಗೆ ರಕ್ತವು ಸಾಗದಂತೆ ತಡೆಯುತ್ತದೆ. ಹೀಗೆ ಇದು ಎದೆ ನೋವನ್ನು ತರುತ್ತದೆ.

ಒತ್ತಡ

ಒತ್ತಡ

ಒತ್ತಡವು ಎದೆ ನೋವಿಗೆ ಕಾರಣವಾಗುವ ಮತ್ತೊಂದು ಸಮಸ್ಯೆಯಾಗಿರುತ್ತದೆ. ನಾವು ಒತ್ತಡಕ್ಕೆ ಒಳಗಾದಾಗ, ನಮ್ಮ ಎದೆ ಬಡಿತವು ಹೆಚ್ಚಾಗುತ್ತದೆ ಮತ್ತು ರಕ್ತದ ಒತ್ತಡವು ಸಹ ಅಧಿಕಗೊಳ್ಳುತ್ತದೆ. ಆಗ ಇದು ತಕ್ಷಣವೇ ಹೃದಯಕ್ಕೆ ಹರಿಯುವ ರಕ್ತದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕೊನೆಗೆ ಎದೆ ನೋವಿನಲ್ಲಿ ಮುಕ್ತಾಯವಾಗುತ್ತದೆ.

ಖಿನ್ನತೆ

ಖಿನ್ನತೆ

ಖಿನ್ನತೆಯು ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ವಿಶೇಷವಾಗಿ ಹೃದಯದ ಮೇಲೆ ಇದು ಕೆಟ್ಟ ಪರಿಣಾಮವನ್ನು ಬೀರುತ್ತದೆ. ನೀವು ಖಿನ್ನತೆಗೊಳಗಾದಾಗ, ನಿಮ್ಮ ಹೃದಯದ ಎದೆ ಬಡಿತವು ಹೆಚ್ಚಾಗುತ್ತದೆ. ಆಗ ನಿಮ್ಮ ಹೃದಯಕ್ಕೆ ರಕ್ತ ಸರಬರಾಜು ಹೆಚ್ಚಾಗುತ್ತದೆ. ಆಗ ನಿಮಗೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಳ್ಳುತ್ತದೆ.

English summary

Causes Of Chest Pain

Chest pain points out to pain felt anywhere in the chest region from the level of your shoulders to the bottom of your ribs. It is a common symptom for people at any age and there are many causes why a chest pain occurs. Here are some of the causes of chest pain. Take a look:
Story first published: Monday, May 11, 2015, 19:32 [IST]
X
Desktop Bottom Promotion