For Quick Alerts
ALLOW NOTIFICATIONS  
For Daily Alerts

ಪುರುಷರಲ್ಲಿ ಕಂಡುಬರುವ ‌ಮಹಾಮಾರಿ ಕ್ಯಾನ್ಸರ್‌ನ ಲಕ್ಷಣಗಳೇನು?

By Super
|

ಅತಿಯಾದರೆ ಅಮೃತವೂ ವಿಷ ಎಂಬ ಗಾದೆಯಿದೆ. ಇದು ನಮ್ಮ ದೇಹಕ್ಕೂ ಅನ್ವಯವಾಗುತ್ತದೆ. ನಿಸರ್ಗ ನಮ್ಮ ಶರೀರವನ್ನು ಅತ್ಯಂತ ಕರಾರುವಕ್ಕಾದ ಅನುಪಾತಗಳಲ್ಲಿ ನಿರ್ಮಿಸಿದೆ. ಆದರೆ ಕೆಲವೊಮ್ಮೆ ನಮ್ಮ ಶರೀರದ ಕೆಲವು ಅಂಗಗಳ ಜೀವಕೋಶಗಳು ಅಗತ್ಯಕ್ಕಿಂತಲೂ ಹೆಚ್ಚಾಗಿ ಬೆಳೆದು ಯಾವ ಅಂಗದ ಮೇಲೆ ಬೆಳೆದಿದೆಯೋ ಅದರ ಕಾರ್ಯಕ್ಷಮತೆಯನ್ನು ಕುಂಠಿಸುತ್ತಾ ಹೋಗುತ್ತದೆ. ಶ್ವಾಸಕೋಶ, ಜಠರ, ರಕ್ತ, ಗರ್ಭಕೋಶ ಮೊದಲಾದ ಅಂಗಗಳ ಜೀವಕೋಶಗಳು ಅನವರತವಾಗಿ ಬೆಳೆಯುತ್ತಾ ಹೋಗಿ ಆಯಾ ಅಂಗದ ಕ್ಯಾನ್ಸರ್‌ಗೆ ಕಾರಣವಾಗುತ್ತವೆ.

ರಕ್ತದಲ್ಲಿರುವ ಬಿಳಿರಕ್ತಕಣಗಳು ವಿಪರೀತವಾಗಿ ಬೆಳೆದು ರಕ್ತದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಆದರೆ ಈ ಕ್ಯಾನ್ಸರ್ ಪ್ರಾರಂಭವಾಗುವಾಗ ಗೊತ್ತೇ ಆಗುವುದಿಲ್ಲ. ಒಂದು ವೇಳೆ ನಿಯಂತ್ರಿಸಬಹುದಾದ ಘಟ್ಟಕ್ಕೂ ಬೆಳೆಯುವ ಮುನ್ನವೇ ಕ್ಯಾನ್ಸರ್ ಪತ್ತೆಯಾದರೆ ಸೂಕ್ತ ಚಿಕಿತ್ಸೆಗಳಿಂದ ಈ ಮಹಾಮಾರಿ ರೋಗದ ವಿರುದ್ಧ ಹೋರಾಡಬಹುದು.

ನಿಮ್ಮ ದೇಹವನ್ನು ಕ್ಯಾನ್ಸರ್ ಆವರಿಸುತ್ತಿದೆ ಎಂದು ಕೆಲವು ಸೂಚನೆಗಳಿಂದ ಮುನ್ಸೂಚನೆ ಪಡೆಯಬಹುದು. ಆದರೆ ಹೆಚ್ಚಿನವರು ಈ ತೊಂದರೆ ಇವತ್ತು-ನಾಳೆಯ ಒಳಗೆ ಪರಿಹಾರವಾಗುತ್ತದೆ ಎಂದು ಸಮಾಧಾನ ಪಡಿಸಿಕೊಳ್ಳುತ್ತಾ ವೈದ್ಯರ ಭೇಟಿಯನ್ನು ಮುಂದೆಹಾಕುತ್ತಾ ಹೋಗುವುದರಿಂದ ಬಳಿಕ ಭಾರೀ ದಂಡ ತೆರಬೇಕಾಗುತ್ತದೆ. ಕ್ಯಾನ್ಸರ್ ರೋಗವನ್ನು ನಿರ್ಣಯಿಸುವ 11 ಅಂಶಗಳು

ಸಾಮಾನ್ಯವಾಗಿ ಐವತ್ತು ವರ್ಷ ದಾಟಿದ ಪುರುಷರಿಗೆ ಕ್ಯಾನ್ಸರ್ ಆವರಿಸಿಕೊಳ್ಳುವ ಸಂಭವ ಹೆಚ್ಚಾಗಿದೆ. ದೇಹ ಚಿಕ್ಕಪುಟ್ಟ ತೊಂದರೆಗಳಿಂದ ಪಡುವ ಬವಣೆ ಮುಂದೆ ಬರಬಹುದಾದ ಕ್ಯಾನ್ಸರ್‌ನ ಮುನ್ಸೂಚನೆಯಾಗಿರಬಹುದು. ಪುರುಷರಲ್ಲಿ ಕಂಡುಬರುವ ಇಂತಹ ಕೆಲವು ಪ್ರಮುಖ ಮುನ್ಸೂಚನೆಗಳನ್ನು ಇಲ್ಲಿ ವಿವರಿಸಲಾಗಿದೆ.

ಮೂತ್ರವಿಸರ್ಜನೆಯ ವೇಳೆ ಉರಿ

ಮೂತ್ರವಿಸರ್ಜನೆಯ ವೇಳೆ ಉರಿ

ಒಂದು ವೇಳೆ ಮೂತ್ರವಿಸರ್ಜಿಸುವಾಗ ತೀವ್ರತರದ ಉರಿ ಅಥವಾ ಬಿಸಿಯಾಗುತ್ತಿರುವಂತೆ ಅನ್ನಿಸಿದರೆ ಪ್ರಾಸ್ಟೇಟ್ ಕ್ಯಾನ್ಸರ್ ಆವರಿಸುತ್ತಿರುವ ಸೂಚನೆಯಾಗಿರಬಹುದು. ಕೇವಲ ಎಳನೀರು ಕುಡಿದರೆ ಉರಿಮೂತ್ರ ಕಡಿಮೆಯಾದರೂ ವೈದ್ಯರಲ್ಲಿ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ಅಂತೆಯೇ ವೀರ್ಯದಲ್ಲಿ ರಕ್ತ ಮಿಶ್ರಣವಾಗಿರುವುದು ಕೂಡ ಪ್ರಾಸ್ಟೇಟ್ ಕ್ಯಾನ್ಸರ್‌ನ ಲಕ್ಷಣವಾಗಿದೆ.

ವೃಷಣಗಳ ಬಣ್ಣದಲ್ಲಿ ಬದಲಾವಣೆ

ವೃಷಣಗಳ ಬಣ್ಣದಲ್ಲಿ ಬದಲಾವಣೆ

ಒಂದು ವೇಳೆ ವೃಷಣಗಳ ಬಣ್ಣ ಅತ್ಯಂತ ಗಾಢವರ್ಣಕ್ಕೆ ತಿರುಗಿದ್ದರೆ ಅಥವಾ ಗಂಟೊಂದು ಒಳಭಾಗದಿಂದ ಹೊರಬರಲು ಯತ್ನಿಸುತ್ತಿರುವಂತೆ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಕಾಣುವುದು ಅವಶ್ಯವಾಗಿದೆ.

ಚರ್ಮದ ಬಣ್ಣದಲ್ಲಿ ಬದಲಾವಣೆ

ಚರ್ಮದ ಬಣ್ಣದಲ್ಲಿ ಬದಲಾವಣೆ

ಸುಮಾರು ಐವತ್ತು ವರ್ಷ ದಾಟಿದ ಪುರುಷರು ಚರ್ಮದ ಕ್ಯಾನ್ಸರ್‌ಗೆ ಹೆಚ್ಚು ತುತ್ತಾಗುತ್ತಾರೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಒಂದು ವೇಳೆ ನಿಮ್ಮ ದೇಹದ ಯಾವುದೇ ಭಾಗದಲ್ಲಿ ಚರ್ಮ ತನ್ನ ಸಹಜ ವರ್ಣವನ್ನು ಕಳೆದುಕೊಂಡಿರುವುದು ಅಥವಾ ಬದಲಾವಣೆಗೊಂಡಿರುವುದು ಕಂಡುಬಂದರೆ ತುರ್ತಾಗಿ ಚರ್ಮವೈದ್ಯರನ್ನು ಕಾಣುವುದು ಅಗತ್ಯ.

ಬಾಯಿಯ ಹುಣ್ಣುಗಳು ಮಾಗದಿರುವುದು

ಬಾಯಿಯ ಹುಣ್ಣುಗಳು ಮಾಗದಿರುವುದು

ಬಾಯಿಯ ಮತ್ತು ಕೆನ್ನೆ, ತುಟಿಗಳ ಒಳಭಾಗದಲ್ಲಿ ಚಿಕ್ಕ ಚಿಕ್ಕ ಹುಣ್ಣುಗಳಾಗಿದ್ದು ಒಣಗಲು ತುಂಬಾ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದಲ್ಲಿ ಅದು ಚಿಂತೆಯ ವಿಷಯವಾಗಿದೆ. ಒಳಭಾಗದ ಹುಣ್ಣುಗಳನ್ನು ಅಗಲಿಸಿ ವಿವರವಾಗಿ ನೋಡಿದಾಗ ಅಲ್ಲಿ ಬಿಳಿಯ, ಕೆಂಪು ಅಥವಾ ನೀಲಿ ಬಣ್ಣ ತೇಪೆ ಹಚ್ಚಿದಂತೆ ಕಾಣಿಸುತ್ತದೆಯೇ ಎಂದು ಗಮನಿಸಿ. ಇದರಲ್ಲಿ ಒಂದಕ್ಕಾದರೂ ಹೌದು ಎಂಬ ಉತ್ತರ ಬಂದರೆ ವೈದ್ಯರನ್ನು ಕಾಣುವುದು ಅನಿವಾರ್ಯವಾಗಿದೆ.

ಅತಿಹೆಚ್ಚಿನ ಕಾಲ ಕೆಮ್ಮು ಕಾಡುವುದು

ಅತಿಹೆಚ್ಚಿನ ಕಾಲ ಕೆಮ್ಮು ಕಾಡುವುದು

ಎಡೆಬಿಡದ ಕೆಮ್ಮು ಯಾವುದೇ ಔಷಧಿಗೂ ಬಗ್ಗದೇ ಕಡಿಮೆಯಾಗದೇ ಇರುವುದು ಸಹಾ ಶ್ವಾಸಕೋಶದ ಕ್ಯಾನ್ಸರ್‌ನ ಆಗಮನದ ಮುನ್ಸೂಚನೆಯಾಗಿದೆ. ತಕ್ಷಣ ವೈದ್ಯರನ್ನು ಕಂಡು ಸೂಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ.

ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು

ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು

ಒಂದು ವೇಳೆ ಮಲವಿಸರ್ಜನೆಯ ಹೊತ್ತಿನಲ್ಲಿ ನೋವಾಗದೇ ಇದ್ದರೂ ರಕ್ತದಿಂದ ಆವರಿಸಿಕೊಂಡಿರುವುದು ಕಂಡುಬಂದರೆ ಕೂಡಲೇ ವೈದ್ಯರನ್ನು ಕಾಣಿ. ಇದು ಪೈಲ್ಸ್ ಅಥವಾ ಮೊಳೆರೋಗದ ಲಕ್ಷಣವಾಗಿದ್ದರೆ ಅದರಲ್ಲಿ ನೋವು ಇರುತ್ತಿತ್ತು. ಯಾವುದಕ್ಕೂ ವೈದ್ಯರಿಂದ ತಪಾಸಣೆಗೊಳಪಡುವುದು ಅವಶ್ಯವಾಗಿದೆ.

ಎಡೆಬಿಡದ ಹೊಟ್ಟೆನೋವು

ಎಡೆಬಿಡದ ಹೊಟ್ಟೆನೋವು

ಕೆಳಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡು ಕಡಿಮೆಯಾಗದೇ ಕಿವುಚಿದಂತೆ ನೋವಾಗುತ್ತಿದ್ದಲ್ಲಿ ವೈದ್ಯರನ್ನು ಕಾಣುವುದು ಅವಶ್ಯವಾಗಿದೆ. ಈ ನೋವು ರಕ್ತದ ಕ್ಯಾನ್ಸರ್, ತಿನಿಸುಗೊಳವೆ (oesophagus), ಯಕೃತ್(liver), ಬಾಡಲಿ (pancreas), ದೊಡ್ಡಕರುಳು ಅಥವಾ ಆಸನದ ಕ್ಯಾನ್ಸರ್ ನ ಮುನ್ಸೂಚನೆಯಾಗಿರಬಹುದು.

ಹತೋಟಿಗೇ ಬಾರದ ಜ್ವರ

ಹತೋಟಿಗೇ ಬಾರದ ಜ್ವರ

ಅತಿ ಹೆಚ್ಚು ಜ್ವರವಿದ್ದು ನಡುಗುತ್ತಿದ್ದರೆ ಮತ್ತು ಯಾವುದೇ ಔಷಧಿಗೆ ಬಗ್ಗದೇ ಇದ್ದರೆ ರಕ್ತದ ಕ್ಯಾನ್ಸರ್ ನ ಲಕ್ಷಣವಿರಬಹುದು. ತಡಮಾಡದೇ ಸೂಕ್ತ ತಪಾಸಣೆಗೊಳಗಾಗುವುದು ಅವಶ್ಯವಾಗಿದೆ.

ನುಂಗಲು ತೊಂದರೆಯಾಗುವುದು

ನುಂಗಲು ತೊಂದರೆಯಾಗುವುದು

ಒಂದು ವೇಳೆ ಆಹಾರವನ್ನು ನುಂಗಲು ತೊಂದರೆಯಾದರೆ, ಗಂಟಲಿನಲ್ಲಿ ನೋವು ಕಾಣಿಸಿಕೊಂಡರೆ ಇದು ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣವೂ ಆಗಿರಬಹುದು. ತಕ್ಷಣ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ.

ರಕ್ತ ಹೆಪ್ಪುಗಟ್ಟುವಲ್ಲಿ ವಿಪರೀತ ದೊಡ್ಡ ಗಂಟಾಗುವುದು

ರಕ್ತ ಹೆಪ್ಪುಗಟ್ಟುವಲ್ಲಿ ವಿಪರೀತ ದೊಡ್ಡ ಗಂಟಾಗುವುದು

ರಕ್ತ ಹೆಪ್ಪುಗಟ್ಟುವಲ್ಲಿ ವಿಪರೀತ ದೊಡ್ಡ ಗಂಟಾಗುವುದು

ಗಾಯವಾದರೆ ರಕ್ತದಲ್ಲಿರುವ ಪ್ಲೇಟ್ ಲೆಟ್ ಎಂಬ ಕೋಶಗಳು ಒಂದಕ್ಕೊಂದು ಬೆಸೆದು ಒಂದು ಗೋಡೆ ಕಟ್ಟಿ ರಕ್ತಸ್ರಾವವಾಗುವುದರಿಂದ ರಕ್ಷಿಸುತ್ತವೆ. ಸಾಮಾನ್ಯವಾಗಿ ಒಂದು ತೆಳ್ಳಗಿನ ಪೊರೆಯಂತೆ ಈ ರಕ್ತದ ಗೋಡೆ ಇರುತ್ತದೆ. ಕ್ರಮೇಣ ಗಾಯ ಒಳಗಿನಿಂದ ಮಾಗಿದ ಬಳಿಕ ಈ ಗೋಡೆ ಒಣಗಿ ಹಪ್ಪಳದಂತೆ ಎದ್ದು ವಿಸರ್ಜಿಸಲ್ಪಡುತ್ತದೆ. ಒಂದು ವೇಳೆ ಈ ಗೋಡೆ ದಪ್ಪನಾಗಿದ್ದು ಉಬ್ಬಿರುವ ಗಂಟಿನಂತೆ ಕಂಡುಬಂದರೆ ಇದು ರಕ್ತ ಕ್ಯಾನ್ಸರ್ ನ ಲಕ್ಷಣವಾಗಿದೆ

ಶೀಘ್ರವಾಗಿ ತೂಕ ಇಳಿಯುವುದು

ಶೀಘ್ರವಾಗಿ ತೂಕ ಇಳಿಯುವುದು

ಒಂದು ವೇಳೆ ನೀಮ್ಮ ತೂಕ ನಿಮ್ಮ ಇಚ್ಛೆಗೆ ವಿರುದ್ಧವಾಗಿ ಶೀಘ್ರವಾಗಿ ಇಳಿಯುತ್ತಿದ್ದಲ್ಲಿ ಕರುಳು ಅಥವಾ ಯಕೃತ್ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು.

ಒತ್ತಡವಿಲ್ಲದಿದ್ದರೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಸುಸ್ತಾಗುವುದು

ಒತ್ತಡವಿಲ್ಲದಿದ್ದರೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಸುಸ್ತಾಗುವುದು

ಒಂದು ವೇಳೆ ಯಾವುದೇ ಒತ್ತಡವಿಲ್ಲದಿದ್ದರೂ ತುಂಬಾ ಸುಸ್ತಾದಂತೆ ಕಂಡುಬರುವುದು ಮತ್ತು ಪದೇ ಪದೇ ಸುಸ್ತಾಗುವುದು ರಕ್ತ ಕ್ಯಾನ್ಸರ್ ಮತ್ತು ದುಗ್ದಗ್ರಂಥಿಗಳ ಕ್ಯಾನ್ಸರ್ (lymphoma) ದ ಸೂಚನೆಗಳಾಗಿರಬಹುದು. ಕೂಡಲೇ ವೈದ್ಯರನ್ನು ಕಂಡು ಸೂಕ್ತ ತಪಾಸಣೆಗೊಳಗಾಗುವುದು ಅವಶ್ಯವಾಗಿದೆ.

English summary

12 Signs Of Cancer In Men

Cancer is one of the most powerful and deadliest diseases. It can be life threatening if not diagnosed and treated early. There are a few signs of cancer you should not choose to ignore. . Hence, it is important that you do not ignore it. Take a look at these signs of cancer in men.
X
Desktop Bottom Promotion